ರಾಜ್ಯ ಜೂನಿಯರ್ ಬಾಲ್‍ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಗೆ ಅವಳಿ ಪ್ರಶಸ್ತಿ

Tuesday, January 31st, 2017
Alwas

ಮೂಡುಬಿದಿರೆ: ಭದ್ರಾವತಿಯಲ್ಲಿ ಭಾನುವಾರ ಮುಕ್ತಾಯಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಹಾಗೂ ಬಾಲಕಿಯರ ತಂಡ 2016-17ನೇ ಸಾಲಿನ ರಾಜ್ಯ ಜೂನಿಯರ್ ಬಾಲ್‍ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕ ಬಾಲ್‍ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಸ್ಪುಟ್ನಿಕ್ ಬಾಲ್‍ ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಭದ್ರಾವತಿಯಲ್ಲಿ ಭಾನುವಾರ ಮುಕ್ತಾಯಗೊಂಡಿತು. ಪಂದ್ಯದಲ್ಲಿ ರಾಜ್ಯ ಜೂನಿಯರ್ ಚಾಂಪಿಯನ್‍ಶಿಪ್‍ನ ಫೈನಲ್‌ನಲ್ಲಿ ಆಳ್ವಾಸ್ ಬಾಲಕರ ತಂಡ ಭಗತ್ ಬಿ.ಬಿ.ಸಿ ನೆಲಮಂಗಲ ತಂಡವನ್ನು 35-20 ಹಾಗೂ 35-22 ಅಂಕಗಳಿಂದ ಸೋಲಿಸಿದರು. ಆಳ್ವಾಸ್ ಬಾಲಕಿಯರ ತಂಡ […]

ದರೋಡೆ ಪ್ರಕರಣ: ಉರ್ವ ಠಾಣಾ ಪೊಲೀಸರಿಂದ ಮೂವರ ಬಂಧನ

Tuesday, January 31st, 2017
Mangalore

ಮಂಗಳೂರು: ಹಲವಾರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಮಂಗಳೂರು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಕಸ್ಬ ಬೆಂಗ್ರೆಯ ಸರ್ಪರಾಜ್, ಮುಹಮ್ಮದ್ ಅವೀಝ್, ಮುಹಮ್ಮದ್ ನಿಜಾಮುದ್ದೀನ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ 4 ಮೊಬೈಲ್ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಉರ್ವ ಠಾಣೆ , ಕದ್ರಿ ಠಾಣೆ, ಬಂದರ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಮತ್ತು ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಈ ಆರೋಪಿಗಳು ಶಾಮೀಲಾಗಿದ್ದರು ಎಂದು ತಿಳಿದುಬಂದಿದೆ.

ಹಾಸನ, ಚನ್ನರಾಯಪಟ್ಟಣ ಆಳ್ವಾಸ್ ನುಡಿಸಿರಿ ಘಟಕದಲ್ಲಿ ಸಾಂಸ್ಕೃತಿಕ ವೈಭವ

Monday, January 30th, 2017
Alvas-NUDISIRI-GATAKA

ಮೂಡುಬಿದಿರೆ: ವಿವಿಧತೆಯಲ್ಲಿ ಏಕತೆಯನ್ನು ಸಾದಿಸಿರುವ ನಮ್ಮ ದೇಶ ಕಲೆ ಸಂಸ್ಕೃತಿಗೆ ವಿಶ್ವದಾತ್ಯಂತ ಪ್ರಸಿದ್ಧಿ. ನಾವು ವಾಸಿಸುವ ಈ ಭೂಮಿ ತಪೋಭೂಮಿ ಇದ್ದಂತೆ. ಇಂತಹ ಭೂಮಿಯಲ್ಲಿ ನೆಲೆಸಿರುವ ನಾವೆಲ್ಲರೂ ಪುಣ್ಯವಂತರು. ಇಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಆಳ್ವಾಸ ನುಡಿಸಿರಿ ವಿರಾಸತ್ ಚನ್ನರಾಯಪಟ್ಟಣ ಘಟಕದ ಅಧ್ಯಕ್ಷ ಶಾಸಕ ಸಿ ಎನ್ ಬಾಲಕೃಷ್ಣ ನುಡಿದರು. ಆಳ್ವಾಸ ನುಡಿಸಿರಿ ವಿರಾಸತ್ ಘಟಕ ಚನ್ನರಾಯಪಟ್ಟಣದಲ್ಲಿ ಶನಿವಾರ ಸರ್ಕಾರಿ ಮಾಧ್ಯಮಿಕ ಶಾಲಾ […]

ಎಸ್. ಎಂ. ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ದೇಶದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಆಗಲಿದೆ: ಜನಾರ್ದನ ಪೂಜಾರಿ

Monday, January 30th, 2017
Janardhana-Poojary

ಮಂಗಳೂರು: ಮಾಜಿ ಸಿಎಂ ಎಸ್. ಎಂ. ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಪಕ್ಷಕ್ಕೆ ಭಾರಿ ನಷ್ಟವಾಗಿದ್ದು, ದೇಶದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಆಗಲಿದೆ ಎಂದು ಕಾಂಗ್ರೆಸ್‌‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಮುಂದೆ ದೊಡ್ಡ ಗಂಡಾಂತರ ಬರಲಿದೆ ಎಂದರು. ಕೃಷ್ಣ ಮುತ್ಸದ್ದಿ, ಸಮಾಧಾನಿ, ಒಳ್ಳೆಯ ಮನುಷ್ಯ, ಇಂತಹ ವ್ಯಕ್ತಿಯನ್ನು ಪಕ್ಷ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ […]

ತುಂಬೆಯಿಂದ ಸರಬರಾಜಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮನಪಾ ನಿರ್ಧಾರ

Monday, January 30th, 2017
MCC

ಮಂಗಳೂರು : ನಗರಕ್ಕೆ ತುಂಬೆಯಿಂದ ಸರಬರಾಜು ಆಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ಎರಡು ಪಕ್ಷದ ಕಾರ್ಪೊರೇಟರ್‌ಗಳು ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿನ್ನೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದರು. ಬಂಟ್ವಾಳ ತಾಲೂಕಿನ 18 ಕಡೆಗಳಲ್ಲಿ ಕಲುಷಿತ ನೀರುಗಳನ್ನು ನೇತ್ರಾವತಿ ನದಿಗೆ ಹರಿದು ಬಿಡಲಾಗುತ್ತದೆ ಎಂದು ಮನಪಾ ಸಭೆಯಲ್ಲಿ ಧ್ವನಿಯೆತ್ತಿದ್ದ ಪ್ರತಿಪಕ್ಷದ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಈ ಆರೋಪಕ್ಕೆ ಉತ್ತರಿಸಿದ ಆಡಳಿತ ಪಕ್ಷ, ಕುಡಿಯಲು ಶುದ್ಧೀಕರಿಸಿದ ನೀರನ್ನೇ ಮಂಗಳೂರಿಗೆ ಪೂರೈಕೆ […]

ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನ ಬಂಧನ

Monday, January 30th, 2017
Thanveer-Khan

ಮಂಗಳೂರು: ನಗರದ ಬಿಜೈ ಕೆಎಟಿಸಿ ಬಸ್ ನಿಲ್ದಾಣದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಒಡಿಸ್ಸಾ ರಾಜ್ಯದ ಬಾಲೆಸರ್ ಜಿಲ್ಲೆಯ ಗೋಲಾ ಪೂಕರ ಚೌಕಿಯ ಲಕ್ಷ್ಮಣಕೋಟ ನಿವಾಸಿ ತನ್ವೀರ್ ಖಾನ್ (21) ಎಂದು ಗುರುತಿಸಲಾಗಿದೆ. ಈತನಿಂದ 437 ಗ್ರಾಂ ಗಾಂಜಾ, 1 ಮೊಬೈಲ್ ಮತ್ತು 250 ರೂ. ಸಹಿತ ಒಟ್ಟು 10,925 ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ […]

ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವು

Monday, January 30th, 2017
Ujjodi

ಮಂಗಳೂರು: ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳೂರಿನ ನಂತೂರು ಬಳಿಯ ಉಜ್ಜೋಡಿಯಲ್ಲಿ ನಡೆದಿದೆ. ವಲೇರಿಯನ್ ಲೋಬೋ(55), ಎಸ್ಮಿ ಲೋಬೋ(51), ಸಂದೀಪ್ (28) ಮೃತಪಟ್ಟವರು. ಕಬ್ಬಿಣದ ಏಣಿಯಿಟ್ಟು ತೆಂಗಿನ ಮರಕ್ಕೇರಿದ್ದಾಗ ಈ ದುರಂತ ಸಂಭವಿಸಿದೆ. ತೆಂಗಿನಮರದಲ್ಲಿದ್ದ ಕಾಳುಮೆಣಸು ಕೀಳಲು ವಲೇರಿಯನ್ ಲೋಬೋ ಮರ ಹತ್ತಿದ್ದರು. ಈ ವೇಳೆ ಸ್ಟೀಲ್ ಏಣಿ ವಿದ್ಯುತ್ ತಂತಿಗೆ ಬಿದ್ದು ಈ ದುರಂತ ಸಂಭವಿಸಿದೆ. ಲೋಬೋ ರಕ್ಷಣೆಗೆ ಧಾವಿಸಿದ ಇಬ್ಬರು ಕೂಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಕಂಬಳದ ಮೇಲಿನ ನಿಷೇಧ ವಿರೋಧಿಸಿ ಬೃಹತ್‌ ಪ್ರತಿಭಟನೆ

Saturday, January 28th, 2017
Kambala-Protest

ಮಂಗಳೂರು : ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲಿನ ನಿಷೇಧ ವಿರೋಧಿಸಿ ಕಡಲ ನಗರಿಯಲ್ಲಿ ಪ್ರತಿಭಟನೆಗಳು ಪ್ರಬಲಗೊಂಡಿವೆ. ಇಂದು ಸಹ ಸಚಿವ ಅಭಯಚಂದ್ರ ಜೈನ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ( ಹಕ್ಕೊತ್ತಾಯ ಜಾಥಾ ) ನಡೆಯಿತು. ನೂರಾರು ಕೋಣಗಳ ಸಮೇತ ಬೀದಿಗಳಿದ ಸಾವಿರಾರು ಸಂಖ್ಯೆಯ ಕಂಬಳ ಪ್ರಿಯರು ಮೂಡಬಿದರೆಯ ಸ್ವರಾಜ್ ಮೈದಾನದಿಂದ ಪ್ರತಿಭಟನೆ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸ್ವರಾಜ್‌ ಮೈದಾನದಿಂದ ಕಡಲಕೆರೆವರೆಗೆ ಸಾಗಲಿದೆ. ಪ್ರತಿಭಟನಾ ಮೆರವಣೆಗೆಯಲ್ಲಿ ಕಂಬಳದ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, […]

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ಏರೋ ಮಾದರಿ ಸ್ಪರ್ಧೆ

Saturday, January 28th, 2017
Air-Show

ಮಂಗಳೂರು: ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ವಿಶಾಲ ದೃಷ್ಟಿಕೋನದಿಂದ ಎರಡು ದಿನಗಳ ಏರೋ ಮಾದರಿ ರಾಷ್ಟ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದ್ದು, ಏರೋಫಿಲಿಯಾ-2017 ವಾರ್ಷಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದೆ. ಏರೊಫಿಲಿಯಾ 2017ರ ಈ ಏರ್ ಶೋ ವನ್ನು ಅಬ್ದುಲ್ಲಾ ಜಸೀಮ್ ನಿರ್ವಹಿಸಿದ್ದಾರೆ. ಏರ್ ಶೋ ಗಣಿತ, ಇತಿಹಾಸ, ಕಲೆ, ವಿನ್ಯಾಸ ಹಾಗೂ ವಿಜ್ಞಾನದಲ್ಲಿ ವೈವಿಧ್ಯಮಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಏರೋಫೀಲಿಯಾ-2017 ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು 1,45,000 […]

ಹೆಜ್ಜೇನು ದಾಳಿಗೆ ತುತ್ತಾಗಿ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವು

Saturday, January 28th, 2017
Kamala

ಮಂಗಳೂರು: ಹೆಜ್ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.8ರಂದು ಉಳಾಯಿಬೆಟ್ಟು ನಿವಾಸಿ ಕಮಲ, ಪಿಲಾರ್ ನಿವಾಸಿ ಶ್ರೀಧರ್, ಪತ್ನಿ ಲೀಲಾವತಿ ಪಿಲಾರ್ ಹಾಗೂ ಲಕ್ಷ್ಮಿ ಎಂಬುವರು ಹೆಜ್ಜೇನು ದಾಳಿಗೆ ತುತ್ತಾಗಿದ್ದರು. ಈ ಪೈಕಿ ಕಮಲ (65) ಹೆಜ್ಜೇನು ದಾಳಿಗೊಳಗಾದ ದಿನವೇ ಮೃತಪಟ್ಟಿದ್ದರು. ಇನ್ನು ಚಿಂತಾಜನಕ ಸ್ಥಿತಿಯಲ್ಲಿದ್ದ ಲೀಲಾವತಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.