ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

Saturday, August 21st, 2010
ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಗಿರುವ ಆವಾಂತರಕ್ಕೆ ಇಂದು ಬೆಳಿಗ್ಗೆ 9.30ರ ಹೊತ್ತಿಗೆ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿ ವಿಷಾದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರನ್ನು ಎತ್ತಂಗಡಿ ಮಾಡಿದ ನಂತರ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿರುವ  ಅವರು ಶೌಚಾಲಯ, ಆಹಾರ ಪೂರೈಕೆ ವ್ಯವಸ್ಥೆ, ಅದರ ಗುಣಮಟ್ಟ, ಭೋಜನಾಲಯ ಮುಂತಾದ ಎಲ್ಲಾ ವಿಭಾಗಗಳನ್ನೂ ಖುದ್ದಾಗಿ ಪರಿಶೀಲನೆ ನಡೆಸಿದರು. ನಿರಾಶ್ರಿತರ ಕೇಂದ್ರದ ಪ್ರತಿಯೊಂದು ಕೊಠಡಿಗೂ ಪ್ರವೇಶಿಸಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ  ಯಡಿಯೂರಪ್ಪ, ಇಲ್ಲಿ […]

ಶುಭಾಶಯ

Saturday, August 21st, 2010
ಶುಭಾಶಯ

ನಿಮ್ಮ ಆಪ್ತರಿಗೆ, ಗೆಳೆಯರಿಗೆ, ಹಿತೈಷಿಗಳಿಗೆ ಶುಭಾಶಯ ನೀಡಲು ಇದು ಸೂಕ್ತ ಕಾಲ ಹುಟ್ಟುಹಬ್ಬ, ಅಭಿನಂದನೆ, ವರ್ಷಾಚರಣೆ, ಮದುವೆ, ಶುಭಾಷಿತಕ್ಕೆ ಇಲ್ಲಿದೆ ಅವಕಾಶ!

ವೈವಾಹಿಕ ಅಂಕಣ

Saturday, August 21st, 2010
ವೈವಾಹಿಕ ಅಂಕಣ

ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಲು ಇಲ್ಲಿದೆ ವೇದಿಕೆ

ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

Saturday, August 21st, 2010
ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

ಮಂಗಳೂರು : ಸವೋಚ್ಚ ನ್ಯಾಯಾಲಯವು 2009 ರಲ್ಲಿ ಜಾರಿಗೊಳಿಸಿರುವ ಆದೇಶದಂತೆ. ದ.ಕ. ಜಿಲ್ಲೆಯಲ್ಲಿರುವ 641 ಕ್ಕೂ ಹೆಚ್ಚು ಹಿಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಅನಧೀಕೃತ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ತೆರವುಗೊಳಿಸಲು ನೋಟೀಸು ಜಾರಿಮಾಡಿದೆ. ಆ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಶಾಖೆ ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ನೂರು ವರ್ಷಗಳಿಗೂ ಇತಿಹಾಸವಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅನಧಿಕೃತ ಎಂದು ಕಂದಾಯ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತ ನೋಟೀಸು ಜಾರಿ ಮಾಡಿರುವುದು […]

ಹಾಸ್ಯ ಸನ್ನಿವೇಶ

Saturday, August 21st, 2010
ಹಾಸ್ಯ ಸನ್ನಿವೇಶ

ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

Saturday, August 21st, 2010
ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

ಮಂಗಳೂರು : ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆಯ ಬಗ್ಗೆ ಮರಳು ಗುತ್ತಿಗೆದಾರರು, ಹೊಯಿಗೆ ದೋಣಿ ಮಾಲೀಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲೀಕರ ಜಂಟಿ ಕ್ರಿಯಾ ಸಮಿತಿಯು ಇಂದು ಜಿಲ್ಲಾಧಿಕಾರಿಯ ಜೊತೆ ಸಂಜೆ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ ನಡೆಸಿತು. ಮರಳು ಅಕ್ರಮವಾಗಿ ಕೇರಳಕ್ಕೆ ಸಾಗಿಸುವುದನ್ನು ಕಡಿಮೆ ಮಾಡಲು ಜಿ.ಪಿ.ಎಸ್ ಅಳವಡಿಸುವುದರ ಬಗ್ಗೆ ಜಿಲ್ಲಾಧಿಕಾರಿಯವರು ಈಗಾಗಲೇ ಚರ್ಚೆ ನಡೆಸಿದ್ದು, ಮರಳು ಸಾಗಾಟದ ಲಾರಿಗೆ ಬದಲಾದ ಬಣ್ಣ, ಬೋನೇಟ್ ಗೆ ಡೈಮಂಡ್ ವೈಟ್, ಬಂಪರ್ ಗೆ […]

ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

Saturday, August 21st, 2010
ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ,  ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗುವ ಮೂಲಕ ರೆಡ್ಡಿ ಸಹೋದರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಿರು ಸಾಗಾಟ ರಫ್ತು ಪರ್ಮಿಟ್ ರದ್ದು ಮಾಡಿರುವುದಾಗಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿ ಸಲ್ಲಿಕೆಯಾಗುವವರೆಗೂ ಈ ತಡೆಯಾಜ್ಞೆ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ […]

ಏರ್‌ ಇಂಡಿಯಾ ದುರಂತ

Saturday, August 21st, 2010
ಏರ್‌ ಇಂಡಿಯಾ ದುರಂತ

ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 158 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುಬೈಯಿಂದ ಮಂಗಳೂರಿಗೆ ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ

Saturday, August 21st, 2010
ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ

ಮಂಗಳೂರು :  ಎಂ.ಎಸ್ ಸತ್ಯು ಅವರ ಇಜ್ಜೋಡು ಚಲನಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ನ್ಯೂಚಿತ್ರ ಚಿತ್ರಮಂದಿರದಲ್ಲಿ ನಡೆಯಿತು. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜ್ ನ ಪ್ರೊಫೆಸರ್ ಟಿ. ಎಸ್. ಶಿವಶಂಕರ್ ಮೂರ್ತಿ, ಇಂತಹ ಸಿನಿಮಾಗಳನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಪ್ರೋತ್ಸಾಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಮೂಡಿ ಬರಲಿ, ಅಂತಃಕರಣದ ಭಾವನೆಗಳನ್ನು ಪರಿವರ್ತನೆ ಮೂಲಕ ಜನರಿಗೆ ತಿಳಿಸಿ ಜನರಲ್ಲಿ ಕ್ರಾಂತಿಯನ್ನುಂಟು ಮಾಡುವ ಕೆಲಸವನ್ನು ಎಂ.ಎಸ್ ಸತ್ಯು ಅವರು ಮಾಡಿದ್ದಾರೆ […]

ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

Saturday, August 21st, 2010
ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

ಮಂಗಳೂರು : 14ನೇ ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್ ಕುರಿತು ಇಂದು ಬೆಳಗ್ಗೆ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ||ಜೆಸ್ಸಿ ಮರಿಯಾ ಡಿ ಸೋಜಾ, ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಶರಣ್ಯ ಮಹೇಶ್ ಜುಲೈ 19 ರಿಂದ 25 ರವರೆಗೆ ಚೈನೀಸ್ ತೈಪೇ ಯಲ್ಲಿ ನಡೆದ 14ನೇ ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧಾಕೂಟದಲ್ಲಿ 15 ಕ್ಕಿಂತಲೂ ಹೆಚ್ಚು ದೇಶಗಳು ಭಾಗವಹಿಸಿದ್ದವು. […]