ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ, ಕಣ್ಣ್ ಸನ್ನೆ ಮಾಡಿದ್ದ

Thursday, June 29th, 2017
Rashmi Shetty

ಮಂಗಳೂರು :  ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ, ಕಣ್ಣ್ ಸನ್ನೆ ಮಾಡಿದ್ದ . ಆತ ಆಕೆಯನ್ನೇ ಹಿಂಬಾಲಿಸಿದಾಗ  ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದಳು. ರಶ್ಮಿ ಶೆಟ್ಟಿ ಬೌದ್ಧ ಧರ್ಮದ ಬಗ್ಗೆ ಎಂ.ಎ ಮಾಡುತ್ತಿದ್ದಾಳೆ . ಈಕೆಯ ಪೋಸ್ಟನ್ನು ಲೈಕ್ ಮಾಡಿದ ಮಿತ್ರರು , ಮಂಗಳೂರು ಪೊಲೀಸ್ ಕಮಿಷನರ್ ವಿಳಾಸವನ್ನೂ ಟ್ಯಾಗ್ ಮಾಡಿದ್ದಾರೆ. […]

ಕುದ್ಮುಲ್ ರಂಗರಾಯರ ಬದುಕೇ ನಮಗೆ ಪ್ರೇರಣೆ- ವೇದವ್ಯಾಸ ಕಾಮತ್

Thursday, June 29th, 2017
DVK

ಮಂಗಳೂರು :  ದಲಿತನೊಬ್ಬ ಉನ್ನತ ವಿದ್ಯಾಭ್ಯಾಸ ಪಡೆದು, ಉತ್ತಮ ಕೆಲಸ ಗಿಟ್ಟಿಸಿಕೊಂಡು, ಅವನು ಕಾರಿನಲ್ಲಿ ಹೋಗುವಾಗ ಆ ಕಾರಿನಿಂದ ಎದ್ದ ಧೂಳು ತನ್ನ ಹಣೆಗೆ ತಾಗಿದರೆ ಅಂದು ತನ್ನ ಜನ್ಮ ಸಾರ‍್ಥಕ ಎಂದು ಹೇಳಿದ ಕುದ್ಮುಲ್ ರಂಗರಾಯರ ತತ್ವಾದರ‍್ಶಗಳು ನಮಗೆ ಎಂದಿಗೂ ಪ್ರೇರಣೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಗುರುವಾರ ಕುದ್ಮುಲ್ ರಂಗರಾಯರ 158 ನೇ ಜನ್ಮದಿನಾಚರಣೆಯಂದು ಮಂಗಳೂರಿನ ನಂದಿಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸ್ಮಾರಕಕ್ಕೆ ಹೂಗುಚ್ಚ […]

ಡಿಗ್ರೂಪ್ ನೌಕರರ ಸಂಘದ ಅಧ್ಯಕ್ಷರಿಗೆ ಅಭಿನಂದನೆ

Thursday, June 29th, 2017
Franky

ಮಂಗಳೂರು : ರಾಜ್ಯ ಸರಕಾರಿ ಡಿಗ್ರೂಪ್ ನೌಕರರ ಸಂಗದ ಅಧ್ಯಕ್ಷರಾಗಿ ಸತತ 5ನೇ ಬಾರಿಗೆ ಆಯ್ಕೆಯಾದ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಅವರಿಗೆ ಅಭಿನಂದನಾ ಸಮಾರಂಭವನ್ನು ಸಂಘದ ವತಿಯಿಂದ ಜೂನ್ 28 ರಂದು ಸಂಘದ ಸಭಾಭವನದಲ್ಲಿ ಏರ್ಪಡಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ ಜಿಲ್ಲಾಧ್ಯಕ್ಷ ಮಂಗಳೂರು ಪ್ರಕಾಶ್ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್ ಉಮೇಶ್, ಮುಖ್ಯ ಯೋಜನಾಧಿಕಾರಿ ಎಂ.ಎನ್ ನಾಯಕ್, ಸಂಗದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಕುಂದಾಪುರ ತಾ. […]

ಅಮೆರಿಕಾದಲ್ಲಿ ಡಾ. ಹೆಗ್ಗಡೆಯವರಿಂದ ಎಸ್.ಡಿ.ಎಂ. ಐ.ಎಂ.ಡಿ ಯ ಅಂತರರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿ  ಸ್ವೀಕಾರ

Wednesday, June 28th, 2017
Heggade

ಉಜಿರೆ   : ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯ (SDMIMD) ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ  ಇನ್ ಮ್ಯಾನೇಜ್ಮೆಂಟ್ (PGDM) ಕೋರ್ಸಿಗೆ ಅಮೆರಿಕಾದ  ಅಕ್ರೆಡಿಟೇಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್ (ACBSP) ಅವರಿಂದ ಮಾನ್ಯತೆಯ ಪ್ರಶಸ್ತಿ ದೊರಕಿದೆ. ಜೂನ್ 26, ಸೋಮವಾರ  ಅಮೆರಿಕಾದ ಲಾಸ್ ಏಂಜಲೀಸ್ ನ ಅನಹೆಮ್ ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಸಂಸ್ಥೆಯ ನಿರ್ದೇಶಕರಾದ ಡಾ. ಎನ್.ಆರ್. ಪರಶುರಾಮನ್‌ರೊಂದಿಗೆ ಡಾ. ಸ್ಟೀವ್ ಪಾರ್ಸ್ಕೆಲ್, […]

ಹದಿಹರೆಯದ ಮಕ್ಕಳನ್ನು ಪೋಷಕರು ಬಹಳ ಜಾಗರೂಕತೆಯಿಂದ ಪೋಷಿಸಬೇಕು : ರಾಮಕೃಷ್ಣ ರಾವ್

Wednesday, June 28th, 2017
drugs day

ಮಂಗಳೂರು  : ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಾಹ್ಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಕರೆ ನೀಡಿದ್ದಾರೆ. ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಮಾನಸಿಕ ವಿಭಾಗ) ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ […]

ತಾನೊಬ್ಬ ಸರ್ವಧರ್ಮ ಪ್ರೇಮಿ ಎಂದು ರೈ ಬಿಂಬಿಸುವುದು ಓಟಿಗಾಗಿ ಮಾತ್ರ : ಹರಿಕೃಷ್ಣ ಬಂಟ್ವಾಳ

Wednesday, June 28th, 2017
Harikrishna Bantwal

ಮಂಗಳೂರು : ತಾನೊಬ್ಬ ಸರ್ವಧರ್ಮ ಪ್ರೇಮಿ ಎಂದು ಹೇಳುವ ಸಚಿವ ರಮಾನಾಥ ರೈ, ವಾಸ್ತವದಲ್ಲಿ ಹೃದಯದಿಂದ ಯಾರನ್ನೂ ಪ್ರೀತಿಸುವುದಿಲ್ಲ. ಸಾಮರಸ್ಯವನ್ನು ಬಯಸುವುದಿಲ್ಲ. ಒಂದು ವೇಳೆ ಎಲ್ಲರನ್ನೂ ಪ್ರೀತಿಸಿ, ಸಾಮರಸ್ಯ ಬಯಸುವವರಾಗಿದ್ದರೆ ನಾಲ್ಕು ವರ್ಷದ ಅವಧಿಯಲ್ಲಿ ಎಲ್ಲಾ ಧರ್ಮಗಳ ದರ್ಮಗುರುಗಳನ್ನು ಕರೆಸಿ ಸಾಮರಸ್ಯ ಸಭೆ ನಡೆಸುತ್ತಿದ್ದರು. ಆದರೆ ಅವರು ಧರ್ಮಗುರುಗಳ ಬಳಿ ಹೋಗುವುದು ಓಟಿಗಾಗಿ ಮಾತ್ರ ಎಂದು ಸಾಮಾಜಿಕ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ. ಪತ್ರಿಕಾಘೋಷ್ಠಿಯಲ್ಲಿ  ಮಾತನಾಡಿದ  ಬಂಟ್ವಾಳ್ ಮುಸ್ಲಿಮರನ್ನು ಓಲೈಸಲು ಅಧಿಕಾರಿಗಳನ್ನು ಕರೆಯಿಸಿ ತನಗೆ ಬೇಕಾದ ಹಾಗೆ […]

ಉಳ್ಳಾಲ ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಯುವಕರು

Wednesday, June 28th, 2017
Tumkuru

ಉಳ್ಳಾಲ :  ತುಮಕೂರು ಜಿಲ್ಲೆ ಶಿರಾ ತಾಲೂಕಿನ ಇಬ್ಬರು ಯುವಕರು ಉಳ್ಳಾಲ ಕಡಲಕಿನಾರೆಯಲ್ಲಿ ಸ್ನಾನ ಮಾಡುತ್ತಿರುವಾಗ ಅಪ್ಪಳಿಸಿದ ತೆರೆಗೆ ಬುಧವಾರ  ಬೆಳಿಗ್ಗೆ ಸಮುದ್ರ ಪಾಲಾಗಿದ್ದಾರೆ. ಹಯಾಝ್ ಯಾನೆ ಚೋಟು (19) ಹಾಗೂ ಶಾರೂಕ್ (19) ನೀರುಪಾಲಾದ ಯುವಕರು. ಉಳ್ಳಾಲ ದರ್ಗಾಕ್ಕೆ ಬಂದಿದ್ದ ಒಂದೇ ಕುಟುಂಬದ ಹತ್ತು ಮಂದಿ ಬಳಿಕ ಕಡಲ ಕಿನಾರೆಗೆ ತೆರಳಿದ್ದರು. ಅಲ್ಲಿ ಸ್ನಾನ ಮಾಡುತ್ತಿದ್ದಾಗ ಭಾರಿ ಗಾತ್ರದ ತೆರೆಗಳು ಅಪ್ಪಳಿಸಿವೆ. ಅವರಲ್ಲಿ ಈ ಇಬ್ಬರು ಯುವಕರು ತೆರೆಯೊಂದಿಗೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ ಜೀವರಕ್ಷಣೆಗೆ ಒಬ್ಬ ತನ್ನ ತಲೆ […]

ಸಮುದ್ರದಲ್ಲಿನ ಬಂಡೆ ಏರಿ ಸೆಲ್ಫಿ ತೆಗೆಯುತ್ತಿದ್ದ ಯುವಕರು ಬೃಹತ್‌ ಅಲೆಗಳಿಂದ ರಕ್ಷಣೆ

Tuesday, June 27th, 2017
selfi

ಸುರತ್ಕಲ್‌: ಪ್ರವಾಸಕ್ಕೆಂದು ಬಂದಿದ್ದ ತಂಡದ ಇಬ್ಬರು ಸದಸ್ಯರು ಸಮುದ್ರದಲ್ಲಿನ ಬಂಡೆ ಏರಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ನೀರಿನ ಉಬ್ಬರ ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ ಘಟನೆ ಸೋಮವಾರ ಬೆಳಗ್ಗೆ ಇಲ್ಲಿನ ಎನ್‌ಐಟಿಕೆ ಸಮೀಪದ ಕಡಲ ಕಿನಾರೆಯಲ್ಲಿ ಸಂಭವಿಸಿದೆ. ಇದೇ ಸಂದರ್ಭ ಗೃಹರಕ್ಷಕ ದಳದ ಮುಳುಗು ತಜ್ಞರು ಇಲ್ಲಿ ಇದ್ದುದರಿಂದ ಅವರನ್ನು ರಕ್ಷಿಸಲು ಸಾಧ್ಯವಾಯಿತು. ಬೆಂಗಳೂರಿನ ಕೆಆರ್‌ಪುರದಿಂದ ಪ್ರವಾಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಏಳು ಮಂದಿ ಯುವಕರ ಗುಂಪು ಸುರತ್ಕಲ್‌ ಕಡಲ ಕಿನಾರೆಗೆ ಭೇಟಿ ನೀಡಿತ್ತು. ಅಮಾವಸ್ಯೆಯಾಗಿದ್ದರಿಂದ ಕಡಲು […]

ಕೃಷ್ಣಮಠದ ಆವರಣದಲ್ಲಿ ಮುಸ್ಲಿಮರಿಗೆ ನಮಾಝ್ ಸಲ್ಲಿಸಲು ಅವಕಾಶ ನೀಡಿದ್ದು ಸರಿಯಲ್ಲ : ಮುತಾಲಿಕ್

Monday, June 26th, 2017
Muthalik

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಜೂ. 24ರಂದು ಆಯೋಜಿಸಲಾಗಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಶ್ರೀರಾಮಸೇನೆ ಜು.2ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ರೊಂದಿಗೆ ಸೋಮವಾರ ಬೆಳಗ್ಗೆ ಉಡುಪಿಗೆ ಧಾವಿಸಿ ಬಂದು ಚರ್ಚೆ ನಡೆಸಿ ವಿಫಲರಾಗಿದ್ದ ಮುತಾಲಿಕ್, ಅನಂತರ ಸೇನೆಯ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಸಂಜೆ ಸುದ್ದಿಗಾರರಿಗೆ ತಿಳಿಸಿದರು. ಸ್ವಾಮೀಜಿ ಸಮಾಜಕ್ಕೆ ಶ್ರೀಮಠದಲ್ಲಿ ಇಫ್ತಾರ್ […]

50 ಸಾವಿರ ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ : ಕುಮಾರಸ್ವಾಮಿ

Monday, June 26th, 2017
Udupi Kumara swamy

ಉಡುಪಿ : ಬಾಬು ಜಗಜೀವನ್‌ರಾಂ ಮಗಳು  ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಜಾತ್ಯತೀತ ಜನತಾದಳ ವಿಪಕ್ಷಗಳ ಬೆಂಬಲ ನೀಡಲು ನಿರ್ಧರಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ತನಗೆ ಹಾಗೂ ತಂದೆ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಬೆಳಗ್ಗೆ ಕರೆ ಮಾಡಿ ಮಾತನಾಡಿ ಮೀರಾ ಕುಮಾರ್‌ಗೆ ಬೆಂಬಲವನ್ನು ಯಾಚಿಸಿದ್ದು, 17 ಪಕ್ಷಗಳ ಅಭ್ಯರ್ಥಿ ಯಾಗಿರುವ ಅವರಿಗೆ ಪಕ್ಷದ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು. ರಾಜಕಾರಣಕ್ಕೆ ಬರುವವರೆಗೆ (1997) […]