ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರನ್ನೆ ಗುರಿಯಿಟ್ಟು ಹಲ್ಲೆ ನಡೆಸಲಾಗುತ್ತಿದೆ : ಪಿ.ವಿ. ಮೋಹನ್

Friday, June 16th, 2017
PV Mohan

ಮಂಗಳೂರು : ಕಲ್ಲಡ್ಕ ಚೂರಿ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚಿ ಜನರನ್ನು ಭಾವನಾತ್ಮಕವಾಗಿ ಉನ್ಮಾದಿಸಿ ಉಭಯ ಜಿಲ್ಲೆಗಳಲ್ಲಿ ಕೋಮು ಬೆಂಕಿ ಹಾಕಿ, ಶಾಂತಿ ಕೆದಡಿಸಿ ಸರಕಾರದ ಹೆಸರನ್ನು ಕೆಡಿಸುವ ಪ್ರಯತ್ನವನ್ನೂ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಮಾಡುತ್ತಿದೆ.  ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರನ್ನೆ ಗುರಿಯಿಟ್ಟು ಬೆದರಿಸಿ, ಹಲ್ಲೆ ನಡೆಸಿ ಅವರನ್ನು ಗಲಭೆಗಳಿಗೆ ಆರ್.ಎಸ್.ಎಸ್.ನ ಬೆಂಬಲಿಗರು ಪ್ರಚೋದಿಸುತ್ತಿದ್ದಾರೆ.  ಇದಕ್ಕೆ ಕುಮಕ್ಕು ನೀಡುತ್ತಿರುವ ಸೂತ್ರಧಾರಿಗಳನ್ನು ಮೀನ ಮೇಷ ಮಾಡದೆ ಕೂಡಲೇ ಬಂಧಿಸಬೇಕೆಂದು ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ಪತ್ರಿಕಾ […]

ಶ್ರೀಲಂಕಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾದ ಭಾರತ ಹಿಂದೂ ಸಂಘಟನೆಗಳು

Thursday, June 15th, 2017
sachidanandan

ಗೋವಾ : “ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಶೇ. 30 ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.15 ಕ್ಕೆ ಅಂದರೆ ಕೇವಲ 20 ಲಕ್ಷಕ್ಕೆ ಬಂದಿದೆ. ಮತಾಂತರವಾಗಲು ಹಿಂದೂಗಳ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳಿಗೆ ನ್ಯಾಯ ನೀಡಲು ಭಾರತದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಳತ್ವ ವಹಿಸುವುದು ಅವಶ್ಯವಾಗಿದೆ”, ಎಂದು ಭಾವನಾತ್ಮಕ ಕರೆಯನ್ನು ಶ್ರೀಲಂಕಾದ 76 ವರ್ಷದ ಮರವನಪುಲಾವೂ ಸಚ್ಚಿದಾನಂದನ್ […]

ಎಂಡೋ ಸಂತ್ರಸ್ತರಿಗೆ ಆದ್ಯತೆಯಲ್ಲಿ ಸೌಲಭ್ಯಗಳ ಮಂಜೂರು: ಡಿಸಿ ಸೂಚನೆ

Thursday, June 15th, 2017
endosulfan

ಮಂಗಳೂರು  :  ಎಂಡೋಸಲ್ಫಾನ್ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಆದ್ಯತೆಯಲ್ಲಿ ಮಂಜೂರುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಗುರುವಾರ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಕಾರ್ಯನಿರ್ವಾಹಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿ ಎಂಡೋ ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರು ವಿವಿಧ ಫಲಾನುಭವಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ತ್ವರಿತಗತಿಯಲ್ಲಿ ಮಂಜೂರು ಮಾಡಬೇಕು. ಅಗತ್ಯ […]

ರಾಷ್ಟ್ರೀಯ ಯೋಗ ಒಲಿಂಪಿಯಡ್‍ಗೆ ಆಳ್ವಾಸ್‍ನ ಚೈತ್ರಾ ಆಯ್ಕೆ

Thursday, June 15th, 2017
Chaitra

ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಇಲಾಖೆ ವತಿಯಿಂದ ದೆಹಲಿಯಲ್ಲಿ ಜೂನ್ 18ರಿಂದ 20ವರೆಗೆ ನಡೆಯಲಿರುವ ರಾಷ್ಟ್ರೀಯ ಯೋಗ ಒಲಿಂಪಿಯಡ್‍ಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಬೆಳಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಉತ್ತಮ ಸಾಧನೆ ಮಾಡಿದರೆ, ಮುಂದೆ ನಡೆಯುವ ಏಷ್ಯನ್ ಯೋಗ ಒಲಿಂಪಿಯಡ್‍ಗೆ ಅರ್ಹತೆ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಆಯ್ಕೆ ಸಮಿತಿ ನಡೆಸಿದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಚೈತ್ರಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, 14 ವರ್ಷದ ವಯೋಮಿತಿ ವಿಭಾಗದಲ್ಲಿ ರಾಜ್ಯದಿಂದ ಆಯ್ಕೆಯಾದ ಮೂವರು ಯೋಗಪಟುಗಳಲ್ಲಿ ಚೈತ್ರಾ ಕೂಡ […]

ಬಿಜೆಪಿಯ ನಾಯಕರೂ ಮಕ್ಕಳಿಗೆ ಪುಸ್ತಕ, ಕೊಡೆ ನೀಡಲಿ – ಪ್ರತಿಭಾ ಕುಳಾಯಿ

Thursday, June 15th, 2017
Pratibha Kulai

ಮಂಗಳೂರು:  ಶಾಸಕ ಮೊಯ್ದಿನ್ ಬಾವ ಕೇವಲ ಪ್ರಚಾರಕ್ಕಾಗಿ ಹುಟ್ಟುಹಬ್ಬದ ದಿನದಂದು ತಮ್ಮ ಭಾವಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನು ತಮ್ಮ ಕ್ಷೇತ್ರದ ಮಕ್ಕಳಿಗೆ ವಿತರಿಸಿದ್ದಾರೆ ಎಂದು ಪ್ರತಿಪಕ್ಷಗಳು ಮಾಡಿದ ಪ್ರತಿಭಟನೆಗೆ ಉತ್ತರವಾಗಿ ಬಿಜೆಪಿ ನಾಯಕರೂ ಇದರಿಂದ ಹೊರತಾಗಿಲ್ಲ ಎಂದು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಬಿಜೆಪಿ ನಾಯಕರಾದ ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿ ತಮ್ಮ ಭಾವಚಿತ್ರವಿರುವ ಪುಸ್ತಕಗಳನ್ನು ವಿತರಿಸಿದ್ದಾರೆ. ಇದಕ್ಕೆ ಬಿಜೆಪಿಗರು ಏನಂತಾರೆ ಎಂದು ಪ್ರಶ್ನಿಸಿದ್ದಾರೆ. ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿಯವರು […]

ಮೀಸಲು ಅರಣ್ಯದಿಂದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ನಾಲ್ವರ ಬಂಧನ

Wednesday, June 14th, 2017
RF

ಬಂಟ್ವಾಳ: ಅಕ್ರಮವಾಗಿ ಸಾಗುವನಿ ಮರದ ದಿಮ್ಮಿಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಟ್ವಾಳ ಅರಣ್ಯ ಇಲಾಖೆಯವರು ಬಂಧಿಸಿದ ಘಟನೆ ಅನಂತಾಡಿಯಲ್ಲಿ ಬುಧವಾರ ನಡೆದಿದೆ. ಬಂಧಿತರನ್ನು ಸಜೀಪ ನಿವಾಸಿ ಅಶೋಕ, ಅನಂತಾಡಿ ಕೊಂಬಿಲ ನಿವಾಸಿಗಳಾದ ದಿನೇಶ, ರಾಜೇಶ ಮತ್ತು ರಾಮಕೃಷ್ಣ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಆನಂತಾಡಿ ಗ್ರಾಮದ ಅನಂತಾಡಿ ವೀರಕಂಭ ರಸ್ತೆಯ ಕೊಂಬಿಲ ಎಂಬಲ್ಲಿ ಅಕ್ರಮವಾಗಿ ಇಲ್ಲಿನ ಮೀಸಲು ಅರಣ್ಯದಿಂದ ಕಡಿದು ಒಮ್ನಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ವಲಯ ಅರಣ್ಯಾಧಿಕಾರಿ […]

ನಕಲಿ ಎಂಡೋ ಸಂತ್ರಸ್ತ ಎಂದು ಹೇಳಿದ ವಸಂತ ಬಂಗೇರ ವಿರುದ್ಧ ದೂರು ನೀಡಲು ನಿರ್ಧಾರ

Wednesday, June 14th, 2017
Sridhar Gowda

ಮಂಗಳೂರು: ನನ್ನನ್ನು ನಕಲಿ ಎಂಡೋ ಸಂತ್ರಸ್ತ ಎಂದು ಹೇಳುವ ಮೂಲಕ ಶಾಸಕ ಅಪಮಾನ ಮಾಡಿದ್ದಾರೆ. ಸರ್ಕಾರದ ತಜ್ಞ ವೈದ್ಯರೇ ಅಧಿಕೃತವಾಗಿ ನನ್ನನ್ನು ಎಂಡೋ ಸಂತ್ರಸ್ತನೆಂದು ಘೋಷಿಸಿದ ಮೇಲೂ ಶಾಸಕರು ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ  ನೊಂದಿದ್ದು, ಕಾನೂನು ರೀತಿಯ ಹೋರಾಟಕ್ಕೂ ನಿರ್ಧರಿಸಿದ್ದೇನೆ. ಅಲ್ಲದೆ ಕಾನತ್ತೂರ್ ಕ್ಷೇತ್ರಕ್ಕೂ ಸತ್ಯಪ್ರಮಾಣಕ್ಕಾಗಿ ಆಹ್ವಾನಿಸುತ್ತಿದ್ದೇನೆ ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹೇಳಿದರು. ವಿಧಾನಸಭೆಯಲ್ಲಿ ಎಂಡೋ ಸಂತ್ರಸ್ತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ವಸಂತ […]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಪ್ತ ಸಹಾಯಕ ಕುಕ್ಕೆ ಭೇಟಿ

Tuesday, June 13th, 2017
kukke Subrahmanya

ಸುಬ್ರಹ್ಮಣ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಪ್ತ ಸಹಾಯಕ ಶಕುಂತ್ ಆಪ್ಟೆ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಇವರೊಂದಿಗೆ ಪುಣೆಯ ಸಾಂಗ್ಲಿಯ ಲೋಕಸಭಾ ಸದಸ್ಯ ಸಂಜಯ್ ರಾಮಚಂದ್ರ ಪಾಟಿಲ್ ಹಾಗೂ ಜ್ಯೋತಿ ಸಂಜಯ್ ಪಾಟೀಲ್ ಮತ್ತು ಮಂಜುಶ್ರೀ ಆಗಮಿಸಿದ್ದರು. ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಆಪ್ಟೆ ಮತ್ತು ಸಂಜಯ್ ಪಾಟೀಲ್ ಮಹಾಪೂಜೆಗೆ ಸಂಕಲ್ಪ ನೆರವೇರಿಸಿದರು. ವೇದಮೂರ್ತಿ ಮಧುಸೂಧನ ಕಲ್ಲೂರಾಯ ಸಂಕಲ್ಪ ವಿದಿ ವಿಧಾನ ನೆರವೇರಿಸಿದರು. ಬಳಿಕ ಆಪ್ಟೆ ಅವರು ಮಹಾಪೂಜೆ ಸೇವೆ ನೆರವೇರಿಸಿದರು. ಅಲ್ಲದೆ […]

ಈಮೇಲ್ ಮೂಲಕ ಉಳ್ಳಾಲದ ಮಹಿಳೆಗೆ 21 ಲಕ್ಷ ವಂಚನೆ

Tuesday, June 13th, 2017
Email

ಮಂಗಳೂರು: ಉಳ್ಳಾಲದ ಮಹಿಳೆಯೋರ್ವಳಿಗೆ ವಿದೇಶಿ ಕರೆನ್ಸಿ ಗಿಫ್ಟ್ ಕಳುಹಿಸುವ ಆಮಿಷವೊಡ್ಡಿ 21 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವದೆಹಲಿಯ ಲಾಲ್ ತಾನ್ ಮಾವಿಯಾ (34) ಮತ್ತು ಮಣಿಪುರದ ಕೂಫ್ ಬೊಯಿ (32) ಬಂಧಿತರು. ಆರೋಪಿಗಳಿಬ್ಬರು ವಾಯ್ಲೆಟ್ ಡಿಸೋಜ ಎಂಬುವರಿಗೆ ರಾಯಲ್ ಬ್ಯಾಂಕ್ ಸ್ಕಾಟ್‌ಲ್ಯಾಂಡ್ ನವದೆಹಲಿಯ ಹೆಸರಿನಲ್ಲಿ ವಿದೇಶಿ ಕರೆನ್ಸಿ ಗಿಫ್ಟ್ ನೀಡಲಾಗುವುದೆಂದು ಮೊದಲು ಈಮೇಲ್ ಸಂದೇಶ ಕಳುಹಿಸಿದ್ದರು. ಆಗ ಮಹಿಳೆಯಿಂದ 21,58,200 ರೂ. ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು […]

ಪ್ರಮುಖ ಪ್ರಕರಣಗಳನ್ನು ಬಯಲಿಗೆಳೆಯಲು ಸಾರ್ವಜನಿಕರ ಸಹಕಾರ ಸ್ಮರಣೀಯ : ಚಂದ್ರಶೇಖರ್

Monday, June 12th, 2017
CPC

ಮಂಗಳೂರು : ನಿರ್ಗಮನ ಕಮಿಷನರ್ ಚಂದ್ರಶೇಖರ್  ಅಧಿಕಾರ ಹಸ್ತಾಂತರಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ನನಗೆ ಅಪರಿಚಿತ ಪ್ರದೇಶವಾದರೂ ಕಳೆದ ಒಂದುವರೆ ವರ್ಷದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಈ ಸಮಯದಲ್ಲಿ ಅನೇಕ ಮಂದಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ ಎಂದು ಹೇಳಿದರು. ಅಧಿಕಾರ ಹಸ್ತಾಂತರಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸೇವೆ ಸಲ್ಲಿಸಿರುವುದು ನನ್ನ ವೃತ್ತಿ ಜೀವನದ ಸ್ಮರಣೀಯ ಮತ್ತು ಸಂತೋಷದ ಸಂಗತಿಯಾಗಿದೆ. ಕೆಲವು ಪ್ರಮುಖ ಪ್ರಕರಣಗಳನ್ನು ಬಯಲಿಗೆಳೆಯಲು ಮಾಧ್ಯಮ […]