ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ

Tuesday, January 10th, 2017
bsnl protest

ಬಂಟ್ವಾಳ: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕಸ್ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾರ್ಮಿಕರು ಜನವರಿ 12ರಿಂದ ಮಂಗಳೂರು ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗ ಅನಿರ್ದಿಷ್ಠಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ […]

ಚಿನ್ನದ ಪದಕ ಗೆದ್ದ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್‌‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು

Monday, January 9th, 2017
alvas-national-athletics

ಮಂಗಳೂರು: ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ಮುಕ್ತಾಯಗೊಂಡ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್‌‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು 2 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದ ಅಥ್ಲೆಟಿಕ್ಸ್‌‌ನ 19ವರ್ಷ ವಯೋಮಿತಿಯ ಶಾಟ್‍ಪುಟ್ ಬಾಲಕರ ವಿಭಾಗದಲ್ಲಿ ಆಳ್ವಾಸ್ ಆಶಿಶ್ ಬಲೋಟ್ಯ 17.32 ಮೀ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇತ್ತ ಬಾಲಕಿಯರ ವಿಭಾಗದ ಜಾವಲಿನ್ ಎಸೆತ ವಿಭಾಗದಲ್ಲಿ ಆಳ್ವಾಸ್‍ನ ರುಂಜುನ್ ಪೆಗು 43.26 ಮೀ. ದೂರ ಎಸೆದು ಚಿನ್ನದ ಪದಕವನ್ನು […]

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಸಾವು

Monday, January 9th, 2017
jayanti-baliga

ಮಂಗಳೂರು: ಕಳೆದ ವರ್ಷ ಹತ್ಯೆಗೀಡಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಲಕ್ಷ್ಮೀ ಬಾಳಿಗ (82) ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2016 ರ ಮಾರ್ಚ್‌ನಲ್ಲಿ ವಿನಾಯಕ ಬಾಳಿಗ ಅವರ ಹತ್ಯೆಯಾಗಿತ್ತು. ಪುತ್ರನ ಹತ್ಯೆಯಾದ ನಂತರ ಖಿನ್ನತೆಗೆ ಒಳಗಾಗಿದ್ದ ಅವರು ಇಂದು ಮುಂಜಾನೆ ತೀವ್ರ ಅಸೌಖ್ಯದಿಂದ ಕುಸಿದು ಬಿದ್ದಿದ್ದರು. ಅವರನ್ನು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ನಿಧನರಾಗಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀ ಬಾಳಿಗ ಅವರ ಪಾರ್ಥಿವ […]

ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಬಂಧಿಸುವಂತೆ ಉಡುಪಿ ವೈದ್ಯಕೀಯ ಸಂಘದ ಧರಣಿ

Saturday, January 7th, 2017
doctor's protest

ಉಡುಪಿ : ಕರ್ತವ್ಯ ನಿರತ ವೈದ್ಯರ ಮೇಲೆ ಶಿರಸಿಯಲ್ಲಿ ಹಲ್ಲೆ ನಡೆಸಿದ ಉತ್ತಕ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯು ಶನಿವಾರ ಹೊರರೋಗಿ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಿ ಉಡುಪಿ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು. ಸಂಸದ ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಕಾನೂನು ಬಾಹಿರ ವಾಗಿ, ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಕಾನೂನನ್ನು ಕಾಪಾಡುವವರೆ ಕಾನೂನು ಕೈಗೆತ್ತಿಕೊಂಡಿರುವುದರಿಂದ ಸರಕಾರ ಕೂಡಲೇ ಅವರನ್ನು ಬಂಧಿಸಿ ಶಿಕ್ಷೆಗೆ […]

ಜಾಗೃತಿ ವಾಹನ ಕಾರ್ಯಾಚರಣೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ

Saturday, January 7th, 2017
Ramanatha-rai

ಮಂಗಳೂರು: ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ಜನ ಜಾಗೃತಿ ಕೂಡಾ ಪರಿಣಾಮಕಾರಿ ಕ್ರಮ ಎಂದರಿತ ಮಂಗಳೂರು ಪೊಲೀಸ್ ಕಮಿಷನರೇಟ್, ಸಿಮೀತ ವ್ಯಾಪ್ತಿಯಲ್ಲಿ ಜಾಗೃತಿ ವಾಹನ ಕಾರ್ಯಾಚರಣೆಯನ್ನು ಆಯೋಜಿಸಿದೆ. ಜಾಗೃತಿ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ ಮಾತನಾಡಿ, ಅಪರಾಧಗಳನ್ನು ತಡೆಯುವಲ್ಲಿ ಜನತೆಯ ಪಾತ್ರವೂ ಮಹತ್ತರವಾಗಿದೆ. ಯಾರೋ ಫೋನ್ ಮಾಡಿ ಬ್ಯಾಂಕ್ ಖಾತೆಯ ವಿವರ ಕೇಳಿದಾಕ್ಷಣ ಕೊಟ್ಟು ಬಿಡುವುದಲ್ಲ. ನೇರ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಬೇಕು. ನಕಲಿ ಕರೆಗಳ […]

ಪಶ್ಚಿಮ ವಲಯ ಐಜಿಪಿಯಾಗಿದ್ದ ಜೆ.ಅರುಣ್ ಚಕ್ರವರ್ತಿ ಅವರಿಂದ ಅಧಿಕಾರ ವಹಿಸಿಕೊಂಡ ಹರಿಶೇಖರನ್

Saturday, January 7th, 2017
Harishekaran

ಮಂಗಳೂರು: ಪಶ್ಚಿಮ ವಲಯದ ಪೊಲೀಸ್‌ ಮಹಾನಿರ್ದೇಶಕರಾಗಿ ಪಿ. ಹರಿಶೇಖರನ್ ಇಂದು ಅಧಿಕಾರ ವಹಿಸಿಕೊಂಡರು. ಪಶ್ಚಿಮ ವಲಯ ಐಜಿಪಿಯಾಗಿದ್ದ ಜೆ.ಅರುಣ್ ಚಕ್ರವರ್ತಿ ಅವರಿಂದ ಹರಿಶೇಖರನ್ ಅಧಿಕಾರ ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ವೀರಪ್ಪನ್ ಕಾರ್ಯಾಚರಣೆ, ನಕ್ಸಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ಆದ್ದರಿಂದ ಸವಾಲುಗಳು ತನಗೆ ಹೊಸತಲ್ಲ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ತನ್ನ ಉದ್ದೇಶ. ತನ್ನಿಂದ ಉತ್ತಮ ಸೇವೆಯನ್ನು ಜನ ಪಡೆದುಕೊಳ್ಳುವಂತೆ ಈ ಹುದ್ದೆಯ ಸದುಪಯೋಗವಾಗಬೇಕೆಂದರು. ಕರಾವಳಿಗಿರುವ ಭಯೋತ್ಪಾದನೆ ಸಂಪರ್ಕ ಕುರಿತು ಅಧ್ಯಯನ ಮಾಡಿ, ಕರಾವಳಿ ಕಾವಲು […]

ಕರಾವಳಿ ಜಿಲ್ಲೆಯಲ್ಲಿ ಕೋಮುಸಾಮರಸ್ಯಕ್ಕೆ ಸಾಕ್ಷಿಯಾದ ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆ

Saturday, January 7th, 2017
Ullala

ಮಂಗಳೂರು: ಕೋಮು ಗಲಭೆಯಿಂದಲೇ ಸುದ್ದಿಯಲ್ಲಿರುವ ಕರಾವಳಿ ಜಿಲ್ಲೆ ಇದೀಗ ಕೋಮುಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೌದು, ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಭಕ್ತರಿಗೆ ತಂಪುಪಾನೀಯ ಪೂರೈಸಿದರು. ಉಳ್ಳಾಲದ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟಿನಿಂದ ಕ್ಷೇತ್ರದವರೆಗೆ ಹಸಿರುವಾಣಿ ಹೊರೆಕಾಣಿಕೆ ವೈಭವದ ಮೆರವಣಿಗೆ ನಡೆಯಿತು. ಈ ವೇಳೆ ಮೆರವಣಿಗೆಯನ್ನು ಮಾಸ್ತಿಕಟ್ಟೆಯಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು. ಜೊತೆಗೆ ತಂಪುಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ […]

ವಾಹನಗಳ ಹೊಗೆ ಪರೀಕ್ಷಣಾ ಸಂಚಾರಿ ವಾಹನಕ್ಕೆ ರಮಾನಾಥ ರೈ ಚಾಲನೆ

Saturday, January 7th, 2017
Ramanatha Rai

ಮಂಗಳೂರು: ವಾಹನಗಳ ಹೊಗೆ ಪರೀಕ್ಷಣಾ ಸಂಚಾರಿ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಶೇ.60 ರಷ್ಟು ಮಾಲಿನ್ಯ ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಆಗುತ್ತಿದೆ. ಹಳೆಯ ವಾಹನಗಳನ್ನು ಹೆಚ್ಚಾಗಿ ಬಳಸುವುದು ಕೂಡ ಒಂದು ಕಾರಣ. ಪ್ರತಿಯೊಬ್ಬರಲ್ಲಿ ಮಾಲಿನ್ಯದಿಂದಾಗುವ ಅಪಾಯದ ಅರಿವು ಉಂಟಾಗಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯಕ್ರಮಗಳ ಜೊತೆಗೆ ಜನತೆಯೂ ಸಹಕಾರವೂ ಅಗತ್ಯವಿದೆ. ಹಾಗಾಗಿ ಈ ಬಾರಿ ಜಿಲ್ಲೆಯ ಅರಣ್ಯ ಭಾಗದ ಸುಮಾರು 2 […]

ಪ್ರಭಾತ್ ಚಿತ್ರ ಮಂದಿರದಲ್ಲಿ ಗುಡ್ಡೆದ ಭೂತ ತುಳು ಸಿನಿಮಾ ಬಿಡುಗಡೆ

Friday, January 6th, 2017
guddeda bhootha

ಮಂಗಳೂರು : ಸಂದೀಪ್ ಪಣಿಯೂರು ನಿರ್ದೇಶನದ ಹಾರರ್ ತುಳು ಚಲನ ಚಿತ್ರ ‘ಗುಡ್ಡೆದ ಭೂತ’ ಶುಕ್ರವಾರ ನಗರದ ಪ್ರಭಾತ್ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿತು. ಚಲನ ಚಿತ್ರ ನಿರ್ದೇಶಕ, ಸಾಹಿತಿ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ದೀಪ ಬೆಳಗಿಸುವ ಮೂಲಕ ‘ಗುಡ್ಡೆದ ಭೂತ’ ಚಲನ ಚಿತ್ರವನ್ನು ಬಿಡುಗಡೆಗೊಳಿಸಿದರು. ಕರಾವಳಿ ಸಿನಿಮಾ ಪ್ರೇಕ್ಷಕರು ಹಾಸ್ಯ ಪ್ರಧಾನ ಚಿತ್ರಗಳಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಇದರ ಜತೆಯಲ್ಲಿ ಹೊಸ ಪ್ರತಿಭೆಗಳು ಮಾಡುವ ಚಿತ್ರಗಳಿಗೂ ತುಳುವರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಚಿತ್ರ ನಿರ್ದೇಶಕ ವಿಜಯ […]

ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿ :ಕೃಷ್ಣ ಜೆ. ಪಾಲೇಮಾರ್

Friday, January 6th, 2017
palemar

ಮಂಗಳೂರು: ಮಹಾನಗರ ಪಾಲಿಕೆಯ 27 ವಾರ್ಡ್‌‌ಗಳಲ್ಲಿ ಕೈಗೊಂಡ ಕುಡಿಯುವ ನೀರಿನ ವೈಜ್ಞಾನಿಕ ತಪಾಸಣೆ ಸಂದರ್ಭ ಕೋಲಿಫಾರಂ ಮತ್ತು ಫೀಕಲ್ ಕೋಲಿಫಾರಂ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ನೀರು ಸಂಪೂರ್ಣ ಮಲೀನಗೊಂಡಿದೆ. ಇದಕ್ಕೆ ಕಾರಣರಾದವರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಒತ್ತಾಯಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿ. ಆದರೆ […]