‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಕದ್ರಿ ಪಾರ್ಕ್‌ನಲ್ಲಿ ಚಾಲನೆ

Saturday, November 26th, 2016
wine fest

ಮಂಗಳೂರು : ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಸರಕಾರದ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಆಶ್ರಯದಲ್ಲಿ ಆರೋಗ್ಯಕರ ವೈನ್ ಬಳಕೆಗೆ ಉತ್ತೇಜನ ಮತ್ತು ಅರಿವು ಮೂಡಿಸುವ ಸಲುವಾಗಿ ನಗರದ ಕದ್ರಿ ಪಾರ್ಕ್‌ನಲ್ಲಿ ನ.28ರವರೆಗೆ ಬೆಳಗ್ಗೆ 11ರಿಂದ 9 ಗಂಟೆಯವರೆಗೆ ಆಯೋಜಿಸಿರುವ ‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಶನಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ದ್ರಾಕ್ಷಾರಸ ಆರೋಗ್ಯಕ್ಕೆ ಹಿತಕಾರಿ ಮಾತ್ರವಲ್ಲದೆ, ಔಷದಿಯ ಗುಣವನ್ನು ಇದು ಹೊಂದಿದೆ […]

ಕಂಬಳ ನಿಷೇಧ ತುಳುನಾಡಿನ ಜನತೆಯ ಆತ್ಮಾಭಿಮಾನವನ್ನು ಪ್ರಶ್ನಿಸುವಂತಾಗಿದೆ : ಯೋಗೀಶ್ ಶೆಟ್ಟಿ

Saturday, November 26th, 2016
trv kambala

ಮಂಗಳೂರು: ಕಂಬಳ ನಿಷೇಧ ಕುರಿತಂತೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(ಪೆಟಾ) ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಕ್ರೀಡೆಗೆ ಮಧ್ಯಂತರ ತಡೆ ನೀಡಿರುವುದು ತುಳುನಾಡಿನ ಜನತೆಯ ಆತ್ಮಾಭಿಮಾನವನ್ನು ಪ್ರಶ್ನಿಸುವಂತಾಗಿದೆ. ಕಂಬಳ ತುಳುನಾಡಿನ ಸಂಸ್ಕೃತಿಯ ಒಂದು ಭಾಗವೇ ಆಗಿದ್ದು, ಯಾವುದೇ ಕಾರಣಕ್ಕೂ ಈ ಕ್ರೀಡೆ ನಿಲ್ಲಬಾರದು. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ವಿತಂಡವಾದ ಒಪ್ಪುವಂಥದಲ್ಲ ಎಂದು ತುಳುನಾಡು ರಕ್ಷಣಾ ವೇದಿಕೆಯ  ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಾಣಿದಯಾ ಸಂಘದವರಿಗೆ ಎತ್ತು, ಕೋಣ, ಇತರ […]

ಗೋವಿನ ರಕ್ಷಣೆ ಆದರೆ ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘ ಬೆಳೆಯುತ್ತದೆ: ಪ್ರಭಾಕರ ಭಟ್

Saturday, November 26th, 2016
Bantwal

ಬಂಟ್ವಾಳ: ಹಸು ದೇಶದ ಸಂಸ್ಖೃತಿಯನ್ನು , ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ ಮತ್ತು ಜನರ ಆರೋಗ್ಯವನ್ನು ವೃದ್ದಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ನೂತನ ಸಾಂದ್ರ ಶೀತಲೀಕರಣ ಘಟಕ (ಬಿ.ಎಂ.ಸಿ.) ಕ್ಷೀರವಾರಿಧಿ ಉದ್ಘಾಟಿಸಿ ಮಾತನಾಡಿದರು. ಜನರ ಬದುಕಿಗೆ ಬೇಕಾದ ಕಾರ್ಯವನ್ನು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಮಾಡಿದೆ. ಗೋವಿನ ಬಗ್ಗೆ ಎಲ್ಲಾ ಜನರಿಗೆ ಪ್ರೀತಿ ಬರಬೇಕು. ಗೋವಿನ […]

ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಗುಲಾಬಿ ಹೂ ಹಾಗೂ ಸಿಹಿ ತಿಂಡಿ ನೀಡಿ ಅಭಿನಂದನೆ

Saturday, November 26th, 2016
Bank officer

ಮಂಗಳೂರು: ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಪಡಿಸಿದ ಬಳಿಕ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಬ್ಯಾಂಕ್ ಸಿಬಂದಿ ಮೇಲೆ ಒತ್ತಡ ಹೆಚ್ಚಿದೆ. ಅವರ ಸೇವೆಯನ್ನು ಗುರುತಿಸಿ ಮಂಗಳೂರಿನ ಶಿವಗೌರಿ ಟ್ರಸ್ಟ್‌ನ ಟ್ರಸ್ಟಿ ಎ. ಬದರಿನಾಥ ಕಾಮತ್ ಬ್ಯಾಂಕ್‌ಗಳಿಗೆ ತೆರಳಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಗುಲಾಬಿ ಹೂ ಹಾಗೂ ಸಿಹಿ ತಿಂಡಿ ನೀಡಿ ಅಭಿನಂದಿಸಿದರು. ಕೇಂದ್ರ ಸರ್ಕಾರವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ […]

ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಪೋಷಕರು ಶಾಲೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ

Saturday, November 26th, 2016
School bund

ಪುತ್ತೂರು: ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಪೋಷಕರು ಶಾಲೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇಲ್ಲಿನ ತೆಗ್ಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇದೀಗ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ಆರೋಪಿಸಿ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು. ಶಿಕ್ಷಕರ ಕೊರತೆ ಬಗ್ಗೆ […]

“ಆಕ್ರೋಶ್‌ ದಿವಸ್‌” ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟನೆಯಷ್ಟೇ: ಕಾಂಗ್ರೆಸ್‌

Saturday, November 26th, 2016
congress

ಬೆಂಗಳೂರು: ಹಳೆ ನೋಟುಗಳ ನಿಷೇಧದ ವಿರುದ್ಧ ನ.28ರಂದು ಭಾರತ ಬಂದ್‌ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇದು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಯಷ್ಟೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಜೆಡಿಎಸ್‌ ಈ ಪ್ರತಿಭಟನೆಯಿಂದ ದೂರವಿರಲಿದ್ದು, ರಾಜ್ಯದಲ್ಲಿ ಎಡಪಕ್ಷಗಳ ಪ್ರಾಬಲ್ಯ ಇಲ್ಲದಿರುವುದರಿಂದ ಪ್ರತಿಭಟನೆಯು ಬಂದ್‌ನಂತಹ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿಲ್ಲ. ಇನ್ನು ಬಿಜೆಪಿ ಸಹಜವಾಗಿಯೇ ಈ ದಿನ ತಟಸ್ಥವಾಗಿರಲಿದೆ. ಕೇಂದ್ರ ಸರ್ಕಾರದ 500 ಮತ್ತು 1,000 ಮುಖಬೆಲೆ ನೋಟು ಚಲಾವಣೆ ಹಿಂಪಡೆದ ನಿರ್ಧಾರ ಖಂಡಿಸಿ ವಿಪಕ್ಷಗಳು […]

ಕ್ಯಾಂಪ್ಕೋ ಸಂಸ್ಥೆಯಿಂದ ಪ್ರಥಮ ಹಂತದ ಅಡಿಕೆ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು

Saturday, November 26th, 2016
CAMPCO exports

ಮಂಗಳೂರು: ಚೀನಾದಲ್ಲಿ ಅಡಿಕೆಯ ಮೌತ್ ಪ್ರೆಶ್‌ರನ್ನು ಬಹಳ ಜನಪ್ರಿಯವಾಗಿ ಅಭಿವೃದ್ಧಿಪಡಿಸಿದ ಕಿಂಗ್ ಆಫ್ ಟೇಸ್ಟ್‌ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರ ಜೊತೆ ನಡೆಸಿದ ಮಾತುಕತೆ ಪ್ರಕಾರ ಕ್ಯಾಂಪ್ಕೋ ಸಂಸ್ಥೆ ಪ್ರಥಮ ಹಂತದ ಅಡಿಕೆಯನ್ನು ಪುತ್ತೂರಿನಿಂದ ರಪ್ತು ಮಾಡಿದೆ. ಶಿವಮೊಗ್ಗ, ಪುತ್ತೂರು ಹಾಗೂ ಕೊಯಂಬತ್ತೂರು ಪ್ರದೇಶದ ಆಯ್ದ ಅಡಿಕೆಯನ್ನು ಪುತ್ತೂರಿನಲ್ಲಿ ಸಂಸ್ಕರಣಗೊಳಿಸಿದ್ದು, ಭಾರತ ಸರ್ಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢೀಕರಣಗೊಂಡ ಈ ಉತ್ಪನ್ನಗಳನ್ನು ಚೆನೈ ಬಂದರಿನ ಮೂಲಕ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು […]

ಧರ್ಮಸ್ಥಳ: ಹೆಗ್ಗಡೆಯವರ 69ನೆ ವರ್ಷದ ಜನ್ಮ ದಿನಾಚರಣೆ

Friday, November 25th, 2016
veerendra heggade

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 69ನೆ ವರ್ಷದ ಜನ್ಮ ದಿನಾಚರಣೆಯನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ಸರಳವಾಗಿ ಆಚರಿಸಲಾಯಿತು. ಊರ-ಪರವೂರ ಅಭಿಮಾನಿಗಳು ಬಂದು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ಜಿಲ್ಲಾ ಕೃಷಿಕ ಸಮಾಜದ ಆಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಮಂಗಳೂರಿನ ಕೆ. ರಾಜವರ್ಮ ಬಳ್ಳಾಲ್, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ. ರಾಜೇಂದ್ರ ಶೆಟ್ಟಿ ಮೊದಲಾದ ಗಣ್ಯರು […]

‘ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಸಿಪಿಐ ಪ್ರತಿಭಟನಾ ಪ್ರದರ್ಶನ

Friday, November 25th, 2016
cpi

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ಸಿಪಿಐ ರಾಷ್ಟ್ರೀಯ ಕರೆಯಂತೆ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ‘ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಎಂಬ ಪ್ರತಿಭಟನಾ ಪ್ರದರ್ಶನ ನಡೆಯಿತು. 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳ ರದ್ದತಿಯ ನಂತರ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದೆ. ಜನಸಾಮಾನ್ಯರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೇಂದ್ರದ ಸರಕಾರದ ಈ ಕ್ರಮವನ್ನು ವಿರೋಧಿಸುವುದಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಕುಕ್ಯಾನ್ […]

ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮ: ಇಬ್ಬರು ಉಗ್ರರು ಬಲಿ

Friday, November 25th, 2016
Bandipora

ಹೊಸದಿಲ್ಲಿ : ಉತ್ತರ ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದಿರುವ ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮನಾಗಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳು ಬಂಡಿಪೋರಾ ಸಮೀಪ ಮನೆಯೊಂದರಲ್ಲಿ ಅಡಗಿಕೊಂಡಿರುವ ಉಗ್ರರ ಇನ್ನಂದು ಗುಂಪಿನ ವಿರುದ್ಧ ಗುಂಡಿನ ಕಾಳಗದಲ್ಲಿ ನಿರತವಾಗಿವೆ. ಬಂಡಿಪೋರಾ ಜಿಲ್ಲೆಯ ನಯೀದ್‌ಖಾ ಎಂಬಲ್ಲಿನ ತೋಪೊಂದರಲ್ಲಿ ಉಗ್ರರು ಅಡಗಿಕುಳಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ತೋಪನ್ನು ಸುತ್ತುವರಿದು ಗುಂಡಿನ ಕಾಳಗಕ್ಕೆ ತೊಡಗಿಕೊಂಡರು. ಉಗ್ರರೊಂದಿಗೆ ಕಾದಾಟದಲ್ಲಿ 13ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಸೈನಿಕನೊಬ್ಬ […]