ಮುಂದುವರಿದ ನೋಟಿನ ಪರದಾಟ, ನಿರಾಸೆ, ಪಿಕ್‌ಪಾಕೆಟ್

Monday, November 14th, 2016
Bank rush

ಕುಂಬಳೆ: ದೇಶದಲ್ಲಿ 500 ಮತ್ತು 1000 ರೂ.ಗಳ ಮುಖಬೆಲೆ ನೋಟುಗಳನ್ನು ಹಿಂತೆದುಕೊಂಡಂದಿನಿಂದ ಜನ ಸಾಮಾನ್ಯರ ಪರದಾಟ ಹೆಚ್ಚಾಗಿದೆ. ಮೂಲೆ ಮೂಲೆಗಳಲಲ್ಲಿಯೂ ಇದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿದೆ. ಕುಂಬಳೆ, ಉಪ್ಪಳ, ಬಂದ್ಯೋಡು ಶಾಖೆಗಳಿರುವ ಎಲ್ಲಾ ಬ್ಯಾಂಕುಗಳಲ್ಲಿ ಶುಕ್ರವಾರವೂ ಜನಸಾಮಾನ್ಯರು ತಮ್ಮಲ್ಲಿರುವ ನೋಟಿನ ಬದಲಾವಣಿಗಾಗಿ ಭಾರೀ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ಕಾಯುತ್ತಿರುವುದು ಕಂಡು ಬಂತು. ಕುಂಬಳೆ, ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಅಂಚೆಕಛೇರಿಯಲ್ಲಿಯೂ 2000 ರೂ. ನೋಟು ಲಭ್ಯವಿತ್ತು. ಮೂರು ದಿನಗಳಿಂದ ಚಿಲ್ಲರೆಗಳಿಲ್ಲದೆ ಪರದಾಡುತ್ತಿದ್ದ ಜನರು ಶನಿವಾರವೂ ಬ್ಯಾಂಕುಗಳಲ್ಲಿ ಮಾರುದ್ದ ಸರತಿ ಸಾಲಿನಲ್ಲಿ ನಿಲ್ಲಲಾಗದೆ ನಿರಾಸೆ ಅನುಭವಿಸಿದರು. […]

‘ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಬಹುಮುಖ್ಯವಾದುದು’

Monday, November 14th, 2016
Yakshagana

ಪೆರ್ಲ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಯಕ್ಷ್ಷಗಾನದ ಕೊಡುಗೆ ಬಹಳಷ್ಟಿದೆ. ಇಂದಿಗೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಯಕ್ಷಗಾನದಷ್ಟು ಸಮರ್ಥವಾಗಿ ದುಡಿಸಿಕೊಳ್ಳುವ ಕಲೆ ಮತ್ತೊಂದಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಪಕಳಕುಂಜ ಶ್ಯಾಮ ಭಟ್ ಅಭಿಪ್ರಾಪಟ್ಟಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ’ಭಾಷೆ ಮತ್ತು ಯಕ್ಷಗಾನ’ ಎಂಬ ವಿಷಯದಲ್ಲಿ ಅವರು ವಿಶೇಷೋಪನ್ಯಾಸ ನೀಡಿ ಮಾತನಾಡಿದರು. ಭಾಷೆ […]

ನೈತಿಕತೆಯಿದ್ದರೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ: ಜನಾರ್ದನ ಪೂಜಾರಿ

Saturday, November 12th, 2016
Janardana poojary

  ಮಂಗಳೂರು: ಸಿಎಂ ಅವರೇ, ನಿಮಗೆ ನೈತಿಕತೆಯಿದ್ದರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಂಜೆಯೊಳಗೆ ಸಚಿವ ಸಂಪುಟದಿಂದ ವಜಾ ಮಾಡಿ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಸಿಎಂ ಅವರೇ ತನ್ವೀರ್ ಸೇಠ್‌ ರಾಜೀನಾಮೆ ತೆಗೆದುಕೊಳ್ಳಲು ಆಗದಿದ್ದರೆ. ಅದನ್ನು ಜನತೆಯ ಮುಂದೆ ನೀವು ದುರ್ಬಲಾಗಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ. ಈಗ ನೀವು ನಿದ್ದೆ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಜನರೇ […]

ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ: ಖಾದರ್

Saturday, November 12th, 2016
Khadar

ಮಂಗಳೂರು: ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತನ್ವೀರ್ ಸೇಠ್‌ರಿಂದ ಪಕ್ಷ ಹಾಗೂ ಮುಖ್ಯಮಂತ್ರಿಗಳು ವಿವರ ಕೇಳಿದ್ದಾರೆ ಎಂದರು. ದೇರಳಕಟ್ಟೆ ಸಮೀಪದ ಕುತ್ತಾರ್ನಲ್ಲಿ ನಿನ್ನೆ ರಾತ್ರಿ ನಡೆದ ರಾಜಮೋಹನ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳ ಬಂಧನವಾಗಬೇಕು. ಪೊಲೀಸ್ ಆಯುಕ್ತರೇ ಹೆಚ್ಚು ಮುತುವರ್ಜಿಯಿಂದ ಪ್ರಕರಣ ಬೇಧಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ […]

ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು: ಸುಲೋಚನಾ ಜಿ.ಕೆ.ಭಟ್

Saturday, November 12th, 2016
bjp-mahila-morcha-

ಮಂಗಳೂರು: ನೈತಿಕ ಮೌಲ್ಯವನ್ನು ಎತ್ತಿ ಹಿಡಿಯಬೇಕಾದ ಶಿಕ್ಷಣ ಸಚಿವರು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಯುವತಿಯೋರ್ವಳ ಅರೆನಗ್ನ ಚಿತ್ರ ವೀಕ್ಷಿಸುವ ಮೂಲಕ ಸಮಾಜವೇ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಅವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಯವರೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಆಗ್ರಹಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆನಗ್ನ ಚಿತ್ರಗಳ ವೀಕ್ಷಣೆಯಲ್ಲಿ ಮಗ್ನವಾಗಿದ್ದ ಸೇಠ್ ಅವರು ಪರೋಕ್ಷವಾಗಿ ಟಿಪ್ಪು ಜಯಂತಿಗೆ […]

ಕರ್ನಾಟಕ ಉಚ್ಛ ನ್ಯಾಯಾಲಯದ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಬೇಕೆಂದು ಒತ್ತಾಯಿಸಿ ವಕೀಲರ ಸಂಘದಿಂದ ಪ್ರತಿಭಟನೆ

Saturday, November 12th, 2016
Mangaluru-bar-association

ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಬೇಕೆಂದು ಒತ್ತಾಯಿಸಿ ಮಂಗಳೂರು ವಕೀಲರ ಸಂಘದ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಕೋರ್ಟ್‌ ಆವರಣದಿಂದ ಪ್ರತಿಭಟನಾ ಜಾಥಾ ನಡೆಸಲಾಯಿತು. ನಗರದ ವಿವಿಧ ಬಡಾವಣೆಗಳಲ್ಲಿ ಸಾಗಿದ ಈ ಜಾಥಾದಲ್ಲಿ ಜಿಲ್ಲೆಗೆ ಸಂಚಾರಿ ಪೀಠ ನೀಡುವಂತೆ ಘೋಷಣೆ ಕೂಗಲಾಯಿತು. ಈ ಪ್ರತಿಭಟನಾ ಜಾಥಾಕ್ಕೆ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಾಥ್‌ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. […]

ಟಿಪ್ಪು ಸುಲ್ತಾನ್‌ ಜನ್ಮದಿನ ಆಚರಣೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮ ಆಗಿದೆ: ರಮಾನಾಥ ರೈ

Friday, November 11th, 2016
Tippu Jayanthi

ಮಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ ಸೇನಾನಿ ಟಿಪ್ಪು ಸುಲ್ತಾನ್‌ ಅವರ ಜನ್ಮದಿನ ಆಚರಣೆ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮವೂ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ದೇಶದ ಇತಿಹಾಸವನ್ನು ಅವಲೋಕಿಸಿದಾಗ ಬ್ರಿಟಿಷರ […]

ಬಜರಂಗದಳದ ಕಾರ್ಯಕರ್ತನ ಕೊಲೆಗೆ ಯತ್ನ

Friday, November 11th, 2016
rss-activist

ಮಂಗಳೂರು: ತಲವಾರಿನಿಂದ ಕಡಿದು ಬಜರಂಗದಳದ ಕಾರ್ಯಕರ್ತನ ಕೊಲೆಗೆ ಯತ್ನ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರ್ ಎಂಬಲ್ಲಿ ನಡೆದಿದೆ. ಅಂಬ್ಲಮೊಗರು ನಿವಾಸಿ ರಾಮ್ ಮೋಹನ್(32) ಕೊಲೆ ಯತ್ನಕ್ಕೆ ಒಳಗಾದವರು. ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳಿಂದ ತಲವಾರು ದಾಳಿ ನಡೆಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಮೋಹನ್‌ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯನ್ನು ಸಚಿವ ಯು.ಟಿ.ಖಾದರ್‌ ಖಂಡಿಸಿ ಬೆಂಗಳೂರಿನಿಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಂಗಳೂರು ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿ, ದುಷ್ಕರ್ಮಿಗಳನ್ನು ಪತ್ತೆಹಚ್ಚುವಂತೆ ಸೂಚಿಸಿದ್ದಾರೆ.

ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ: ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ

Friday, November 11th, 2016
alvas-chitrasiri

ಮಂಗಳೂರು: ಒಬ್ಬ ಚಿತ್ರ ಕಲಾವಿದ ಬಣ್ಣ ಮತ್ತು ರೇಖೆಗಳ ಮೂಲಕ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ಶಕ್ತಿಯನ್ನು ಹೊಂದಿದ್ದಾನೆ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ […]

ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದ ಖೈದಿ ಮುಸ್ತಾಫಾ ಜೈಲಿನಲ್ಲಿ ಕೊಲೆ

Friday, November 11th, 2016
Mustafa-kavoor-

ಮೂಡಬಿದಿರೆ: ಕಳೆದ ವರ್ಷ ಅಕ್ಟೋಬರ್‌ 9ರಂದು ಸಂಭವಿಸಿದ ಮೂಡಬಿದಿರೆಯ ಹೂವಿನ ವ್ಯಾಪಾರಿ ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಖೈದಿಯಾಗಿ ಮೈಸೂರು ಜೈಲಿನಲ್ಲಿದ್ದ ಮಂಗಳೂರು ಕಾವೂರು ಶಾಂತಿ ನಗರದ ಮುಸ್ತಾಫಾ (29) ನನ್ನು ಗುರುವಾರ ಜೈಲಿನಲ್ಲಿ ಕೊಲೆ ಮಾಡಲಾಗಿದೆ. ಅದೇ ಜೈಲಿನಲ್ಲಿ ಖೈದಿಯಾಗಿದ್ದ ಮೂಡಬಿದಿರೆ ಸಮೀಪದ ಪಡುಮಾರ್ನಾಡು ಬನ್ನಡ್ಕದ ಬಾಂಬೆ ಕಿರಣ್‌ ಶೆಟ್ಟಿ ಗುರುವಾರ ಬೆಳಿಗ್ಗೆ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಪ್ರಶಾಂತ್‌ ಕೊಲೆ ಆರೋಪಿಗಳ ಪೈಕಿ ಒಬ್ಬನಾದ ಮುಸ್ತಫಾ ಮೈಸೂರು ಜೈಲಿನಲ್ಲಿದ್ದ. ಕಿರಣ್‌ […]