ಕೋಡ್ಲು ನಿರ್ದೇಶನದ ತುಳು ಚಲನಚಿತ್ರ ’ಏರೆಗ್ಲಾ ಪನೊಡ್ಚಿ’ ಮುಕ್ತಾಯ ಹಂತದಲ್ಲಿ

Sunday, August 2nd, 2015
Eregla Panodchi

ಮಂಗಳೂರು : ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ ’ಏರೆಗ್ಲಾ ಪನೊಡ್ಚಿ’ ಮುಕ್ತಾಯ ಹಂತದಲ್ಲಿದೆ. ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನೆಯನ್ನಾಧರಿಸಿ ಚಿತ್ರಕಥೆ ರಚಿಸಲಾಗಿದ್ದು ಪ್ರತೀ ಸನ್ನಿವೇಶ ಕೂಡಾ ಇಂದಿನ ಕಾಲಕ್ಕೆ ತಕ್ಕುದಾಗಿದೆ. ಮದ್ಯಮ ವರ್ಗದ ಹೆಂಗಸರ ಸುತ್ತ ನಡೆಯುವ ಕತೆ ಇದೆ. ವಠಾರದಲ್ಲಿ ಬಾಡಿಗೆಗೆ ಇರುವ ನಾಲ್ಕು ಸಂಸಾರ. ಹೆಂಗಸರಿಗೆಲ್ಲಾ ಸ್ವಂತ ಮನೆ ಬೇಕೆಂಬ ಆಸೆ. ಆದರೆ ಗಂಡಸರಿಗೆ ಮನೆಯ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ. ಇದೇ ಸಮಯ ವಠಾರಕ್ಕೆ […]

ಜೆ.ಆರ್ ಲೋಬೋ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್‌ಗೆ ಸದಸ್ಯರಾಗಿ ಆಯ್ಕೆ

Sunday, August 2nd, 2015
jr Lobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಮಾನ್ಯ ಶ್ರೀ ಜೆ. ಆರ್ ಲೋಬೋರವರು ರಾಜೀವ್ ಗಾಂಧಿ ಆರೋಗ್ಯ ವಿಜ್ಙಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಸದಸ್ಯರಾಗಿ ಚುನಾಯಿತರಾಗಿರುತ್ತಾರೆಂದು ಎಂ. ಗುರುರಾಜ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಇದಲ್ಲದೆ, ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಮಾನ್ಯ ಶ್ರೀ ಡಾ. ಸಿ.ಎನ್. ಅಶ್ವಥ್‌ನಾರಾಯಣ ಹಾಗೂ ಕೋಲಾರದ ಮಾಲೂರು ಕ್ಷೇತ್ರದ ಶಾಸಕ ಮಾನ್ಯ ಶ್ರೀ ಕೆ.ಎಸ್. ಮಂಜುನಾಥಗೌಡ ಇವರು ನೂತನ ಸದಸ್ಯರಾಗಿ ಆಯ್ಕೆಗೊಂಡಿರುತ್ತಾರೆ.

ನಗರದ ಪೊಲೀಸ್ ಆಯುಕ್ತರಾಗಿ ಎನ್ಎಸ್ ಮೇಘರಿಕ್

Friday, July 31st, 2015
N S Megharikh

ಬೆಂಗಳೂರು : ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಆಯುಕ್ತರನ್ನು ನೇಮಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. ಎಂಎನ್ ರೆಡ್ಡಿ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ. ಎನ್.ಎನ್ ಮೇಘರಿಕ್ ಅವರು ನೂತನ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದೇ. ಹಾಲಿ ಇರುವ ಸ್ಥಾನದಲ್ಲೇ ಮುಂದುವರೆಸಬೇಕು ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಗೊಂದಲಕ್ಕೆ ಬಿದ್ದಿದ್ದ ಸರ್ಕಾರ ಕೊನೆಗೂ ಧೈರ್ಯ ಮಾಡಿ ಹಿರಿಯ ಐಪಿಎಸ್ […]

ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ, ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅಮಾನತು

Friday, July 31st, 2015
Advacate protest

ಮಂಗಳೂರು: ಪೊಲೀಸ್ ಆಯುಕ್ತ ಎಸ್.ಮುರುಗನ್ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರನ್ನು ಇಂದು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ ನ್ಯಾಯವಾದಿ ಉತ್ತಮ್ ರೈ ತಮ್ಮ ಕಕ್ಷಿದಾರನ ಜೊತೆಗೆ ಕೇಸ್ ಸಂಬಂಧಿಸಿ ಠಾಣೆಗೆ ಹೋದಾಗ ನಾಗರಾಜ್ ಅವರು ರೈ ಅವರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ ಹಲ್ಲೆ ಮಾಡಿದ್ದಾಗಿ ದೂರಿದ್ದಾರೆ. ಅದಕ್ಕಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ನೇತೃತ್ವದಲ್ಲಿ ಕದ್ರಿ ಠಾಣೆ ಮುಂದೆ ನ್ಯಾಯವಾದಿಗಳು ಧರಣಿ ನಡೆಸಿ ಇನ್ಸ್ ಪೆಕ್ಟರ್ […]

ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚರ್ಮದ ಆರೈಕೆಯ ಗುಟ್ಟುಗಳ ಮಾಹಿತಿ

Thursday, July 30th, 2015
chethana

ಮಂಗಳೂರು, : ಭಾರತದ ಮುಂಚೂಣಿಯ ಗಿಡಮೂಲಿಕೆಯ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಕಂಪನಿ ದಿ ಹಿಮಾಲಯ ಡ್ರಗ್ ಕಂಪನಿ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪ್ಯೂರ್ ಸ್ಕಿನ್ ಫೇಷಿಯಲ್ ಚಟುವಟಿಕೆಯನ್ನು ನಡೆಸಿತು. ಈ ಕಾರ್ಯಕ್ರಮವನ್ನು ಖ್ಯಾತ ಬ್ಯೂಟಿಷಿಯನ್ ಚೇತನಾ ನಡೆಸಿಕೊಟ್ಟಿದ್ದು ನಿಮ್ಮ ಚರ್ಮವನ್ನು ಮೃದು ಹಾಗೂ ಆಕರ್ಷಕಗೊಳಿಸುವ ವಿವಿಧ ಫೇಷಿಯಲ್ ತಂತ್ರಗಳನ್ನು ನಿರೂಪಿಸಿದರು. ನಿಮ್ಮ ಚರ್ಮದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಎಚ್ಚರಿಕೆ ವಹಿಸುವುದರಿಂದ ವಯಸ್ಸಾಗುವಿಕೆಯ ಪರಿಣಾಮ ಕಡಿಮೆಯಾಗುತ್ತದೆ ಮತ್ತು ನೀವು ಆಕರ್ಷಕವಾಗಿ ಕಾಣುತ್ತೀರಿ. ಚರ್ಮದ ಆರೈಕೆ ಎಂದರೆ […]

ಆಳ್ವಾಸ್ ನಲ್ಲಿ ಪತ್ರಿಕೋದ್ಯಮ ಉಪನ್ಯಾಸ ಕಾರ್ಯಗಾರ

Thursday, July 30th, 2015
ALVAS-VISION

ಮೂಡಬಿದಿರೆ : ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಆಯ್ಕೆಗಳಿಗೆ ಅವಕಾಶವಿದೆ. ಮುದ್ರಣ, ಶ್ರಾವ್ಯ ಮತ್ತು ದೃಶ್ಯ ಮಾಧ್ಯಮಗಳು ಇದಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ ಎಂದು ವಿ4 ಟಿ.ವಿ ವಾಹಿನಿಯ ನಿರೂಪಕಿ ಮಧು ಮೈಲಂಕೋಡಿ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ “ಆಳ್ವಾಸ್ ವಿಷನ್” ಎಂಬ ಪ್ರಾಯೋಗಿಕ ಫೋಟೋ ಜರ್ನಲನ್ನು ಬಿಡುಗಡೆಗೊಳಿಸಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳಿಗೆ ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು. ಪತ್ರಿಕೋದ್ಯಮವನ್ನು ಕೇವಲ ಪಠ್ಯಕ್ಕೆ ಮಾತ್ರ […]

ಆಗಸ್ಟ್ 3 ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೃಹತ್ ಮೆರವಣಿಗೆ

Thursday, July 30th, 2015
Muneer

ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ’ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಜೋಕಟ್ಟೆ […]

ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

Wednesday, July 29th, 2015
rgcy

ಉಜಿರೆ : ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿದ್ದ ಎರಡು ತರಬೇತಿ ಕಾರ್ಯಕ್ರಮಗಳಾದ ಮೋಟಾರ್ ರಿವೈಂಡಿಂಗ್ ಮತ್ತು ದ.ಕ ಜಿಲ್ಲಾ ಪಂಚಾಯತ್ ಪ್ರಯೋಜಕತ್ವದ ಆರ್‌ಜಿಸಿವೈ-ಹೈನುಗಾರಿಕಾ ತರಬೇತಿಗಳ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿಗಳಾದ ರೊ.ಪ್ರತಾಪ್‌ಸಿಂಹ ನಾಯಕ್‌ರವರು ಭಾಗವಹಿಸಿ ಪ್ರಮಾಣ ಪತ್ರಗಳನ್ನು ಶಿಭಿರಾರ್ಥಿಗಳಿಗೆ ವಿತರಿಸುತ್ತಾ ಸ್ವ ಉದ್ಯೋಗದಲ್ಲಿ ಸಂಯಮ, ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸಿ ಎಂದು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜಿತ್ ಕೆ. ರಾಜಣ್ಣವರ್ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕರಾದ ಶ್ರೀ ಅಬ್ರಹಾಂ […]

ದ.ಕ ಜಿಲ್ಲಾ ಯುವಕಾಂಗ್ರೆಸ್ ಕಾರ್ಯಕಾರಿಣಿ ಸಭೆ

Tuesday, July 28th, 2015
MithunRai

ಮಂಗಳೂರು : ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಗೌರವಕ್ಕೆ ತಕ್ಕಂತೆ ಕಾರ್ಯಕ್ರಮ ರೂಪುರೇಷೆ ಮಾಡಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದ ಖಾಲಿ ಇರತಕ್ಕಂತಹ ಪದಾಧಿಕಾರಿಗಳನ್ನು ನೇಮಕ ಮಾಡಲು ಆದೇಶ ನೀಡುವುದು. ಹಾಗು ಮುಂದೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಯುವ ಕಾಂಗ್ರೆಸ್ಸಿಗೆ ಯುವಕರನ್ನು ಸೆಳೆಯುವಂತೆ ಕಾರ‍್ಯಕ್ರಮ ಹಮ್ಮಿಕೊಳ್ಳಲು ರಾಷ್ಟ್ರೀಯ ಯುವ ಕಾರ್ಯದರ್ಶಿ ರವೀಂದ್ರ ದಾಸ್ ತಿಳಿಸಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವಕಾಂಗ್ರೆಸ್ಸಿನ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ಮಾತನ್ನು ಹೇಳಿದರು. ಕರ್ನಾಟಕ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ […]

ಡಾ. ಅಬ್ದುಲ್ ಕಲಾಂ ನಿಧನಕ್ಕೆ ವೀರೇಂದ್ರ ಹೆಗ್ಗಡೆಯವರ ಸಂತಾಪ

Tuesday, July 28th, 2015
Kalam

ಮಂಗಳೂರು : ನಮ್ಮ ರಾಷ್ಟ್ರದ ಮೇರು ವ್ಯಕ್ತಿತ್ವದ ಡಾ. ಅಬ್ದುಲ್ ಕಲಾಂ ಅವರು ಸರ್ವಮಾನ್ಯರು, ಅಜಾತ ಶತ್ರು. ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಹಾಗೂ ವ್ಯರ್ಥವಾಗದಂತೆ ಬದುಕಿದವರು. ಅವರು ಆಯುಷ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡದಲ್ಲದೆ, ಸದುಪಯೋಗ ಪಡಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಆಗಾಗ ಭೇಟಿ ಕೊಡುತ್ತಾ ಕನ್ನಡಿಗರ ಸ್ನೇಹಾಕಾಂಕ್ಷಿಗಳಾಗಿದ್ದರು. ಶ್ರೀ ಕ್ಷೇತ್ರದ ಮೇಲೆ ಅವರಿಗೆ ವಿಶೇಷ ಅಭಿಮಾನ ಹಾಗೂ ಗೌರವನ್ನು ಹೊಂದಿದ್ದರು. ಅವರ ನಿಧನದಿಂದ ಶತಮಾನದ ಶ್ರೇಷ್ಠ ವ್ಯಕ್ತಿಯೋರ್ವ ರನ್ನು […]