ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಕೆಡ್ಡಸ ಕೂಟ

Thursday, February 11th, 2016
tulu world

ಬದಿಯಡ್ಕ: ಆಧುನಿಕ ವಿಚಾರ ಧಾರೆಗಳಿಗೆ ಮಾರುಹೋದ ಪರಿಣಾಮ ಯುವ ಸಮೂಹ ಪ್ರಾಚೀನ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ತುಳುವಳಿಕೆಯ ಕೊರತೆ ಎದುರಿಸುತ್ತಿದೆ.ಯುವ ಸಮೂಹಕ್ಕೆ ತುಳುನಾಡಿನ ಸಾಂಸ್ಕೃತಿಕತೆಯ ಅರಿವನ್ನು ಮೂಡಿಸುವಲ್ಲಿ ಕೆಡ್ಡಸ ಆಚರಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ .ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲಲಿ ನಡೆದ ಕೆಡ್ಡಸ ಕೂಟ ಕಾರ್ಯಕ್ರಮವನ್ನು ಕೆಡ್ಡಸದ ವಿಶೇಷತೆಯಾದ ನವ ಧಾನ್ಯಗಳ ಮಿಶ್ರಣ ನನ್ನೇರಿಯನ್ನು ವಿತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಯುವ […]

ಮೂರು ದೋಣಿ,ನೂರು ಮರಳು ಗೋಣಿ ವಶಕ್ಕೆ-ಇಬ್ಬರು ಹೊಳೆಯಲ್ಲಿ ಪರಾರಿ

Thursday, February 11th, 2016
Kumble Sand

ಕುಂಬಳೆ: ಮೊಗ್ರಾಲ್ ಕಡವತ್ತಿನಲ್ಲಿ ಅನಧಿಕೃತವಾಗಿ ಮರಳು ಸಾಗಾಟದ ಬಗ್ಗೆ ಪತ್ತೆಹಚ್ಚುವ ಕಾರ್ಯಾಚರಣೆಗೆ ಕಂದಾಯ ಅಧಿಕಾರಿಗಳು ಮಂಗಳವಾರ ರಾತ್ರಿ ಮಿಂಚಿನ ಧಾಳಿ ನಡೆಸಿದ್ದು ಅಧಿಕಾರಿಗಳನ್ನು ಕಂಡು ಇಬ್ಬರು ಮರಳು ಸಾಗಾಟದಾರರು ಹೊಳೆಗೆ ಹಾರಿ ತಪ್ಪಿಸಿಕೊಂಡ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಮಂಜೇಶ್ವರ ತಹಶೀಲ್ದಾರ್ ಕೆ.ಶಶಿಧರ ಶೆಟ್ಟಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಕಡವಿಗೆ ಧಾಳಿ ನಡೆಸಿದರು.ಧಾಳಿಯ ವೇಳೆ ಮರಳು ಸಂಗ್ರಹಿಸುತ್ತಿದ್ದ ಇಬ್ಬರು ಹೊಳೆಗೆ ಹಾರಿ ಪರಾರಿಯಾಗಿದ್ದು,100 ಗೋಣಿಚೀಲಗಳಲ್ಲಿ ಸಂಗ್ರಹಿಸಲಾಗಿದ್ದ ಮರಳು ಹಾಗೂ ಮರಳು ಸಂಗ್ರಹಕ್ಕೆ ಬಳಸಿದ ಮೂರು ನಾಡ ದೋಣಿಗಳನ್ನು […]

ಮುಜುಂಗಾವು ವಿದ್ಯಾಪೀಠದ ವರ್ಧಂತ್ಯುತ್ಸವ ಸಂಪನ್ನ

Thursday, February 11th, 2016
mujungavu Bharati Vidya pita

ಕುಂಬಳೆ: ಮಕ್ಕಳೆಂದರೆ ಪ್ರಕೃತಿಯ ಕೊಡುಗೆ, ಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಡಾ.ಶಾರದಾ ಜಯಗೋವಿಂದ ಅಭಿಪ್ರಾಯಪಟ್ಟರು. ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವೇದ ಗಣಿತಕ್ಕೂ ಈ ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕನಸುಗಳಿಗೆ ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳು ಬಾಣದಂತೆ, ಹೂಡುವವನಿಗೆ ಗುರಿಯನ್ನು ತಲಪಿಸುವ ಜವಾಬ್ದಾರಿಯೂ […]

ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ಪದವಿ

Thursday, February 11th, 2016
shyam bhat

ಕುಂಬಳೆ: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕ ಮಧ್ಯಯನಮ್ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಗೆ ಸಮಾನವಾದ ‘ವಿದ್ಯಾವಾರಿಧಿ ಪದವಿಯನ್ನು ಮುರಳೀ ಶ್ಯಾಮ ಪಡೆದಿದ್ದಾರೆ. ಅವರು ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ. ಮುರಳೀ ಶ್ಯಾಮ್ ಪ್ರೊ.ರಾಧಾಕಾಂತ ಠಾಕೂರ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇವರು ಪೆರಡಾಲ […]

ಗರ್ಭಿಣಿಯರ ಸ್ಕ್ಯಾನಿಂಗ್: 5ವರ್ಷಗಳ ದಾಖಲೆ ಪರಿಶೀಲನೆಗೆ ಸಿಇಓ ಸೂಚನೆ

Tuesday, February 9th, 2016
scaning

ಮ೦ಗಳೂರು : ಕಳೆದ 5ವರ್ಷಗಳಲ್ಲಿ ಜಿಲ್ಲೆಯ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ನಡೆದಿರುವ ಗರ್ಭಿಣಿಯರಿಗೆ ಸಂಬಂಧಪಟ್ಟ ಎಲ್ಲಾ ಸ್ಕ್ಯಾನಿಂಗ್‌ಗಳ ದಾಖಲೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದ್ದಾರೆ. ಜನನ ಪೂರ್ವ ಲಿಂಗ ನಿರ್ಣಯ- ನಿರ್ಬಂಧ ಮತ್ತು ದುರ್ಬಳಕೆ ತಡೆ ಕಾಯಿದೆಗೆ(ಪಿಸಿ & ಪಿಎನ್‌ಡಿಟಿ) ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ, ಬಗ್ಗೆ ಸರಿಪಡಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ […]

ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

Tuesday, February 9th, 2016
beediWorker

ಮಂಗಳೂರು : ಎಐಟಿಯುಸಿ, ಸಿಐಟಿಯು, ಬಿಎಂಎಸ್, ಎಚ್ಎಂಎಸ್ ಹಾಗೂ ಬೀಡಿ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ಕಾರ್ಮಿಕ ವಿರೋಧಿ ಹಾಗೂ ಅವೈಜ್ಞಾನಿಕ ತಂಬಾಕು ವಿರೋಧಿ ನೀತಿಯನ್ನು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು . ದೇಶದ 13 ದಶಲಕ್ಷ ಮಂದಿ ಕಾರ್ಮಿಕ ವಿರೋಧಿ ನೀತಿಯಿಂದ ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ದೇಶಾದ್ಯಂತ ಹಮ್ಮಿಕೊಂಡು ದೆಹಲಿ ಚಲೋ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸಿಐಟಿಯು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ದೇಶದಲ್ಲಿ 30 […]

ಶಾಲಾ ಪರಿಸರದಲ್ಲಿ ಮದ್ಯ ಮಾರಾಟ-ಓರ್ವನ ಸೆರೆ

Tuesday, February 9th, 2016
liquor chandrahasa 48

ಉಪ್ಪಳ: ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಲಭಿಸಿದ ದೂರಿನ ಮೇರೆಗೆ ಅಬಕಾರಿ ಪೋಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟದ ಮೂಲ ಸೂತ್ರದಾರನಾದ ಓರ್ವನನ್ನು ಬಂಧಿಸುವಲಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪಳ ಪಚ್ಲಂಪಾರೆಯ ಚಂದ್ರಹಾಸ(48)ಬಂಧಿತ ಆರೋಪಿ.ಈತನಿಂದ 180 ಮಿಲ್ಲಿಯ 48 ಮದ್ಯ ಬಾಟಲಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಬಕೇಟ್ ನಲ್ಲಿ ತುಂಬಿಸಿ ಮದ್ಯ ಮಾರಾಟ ಮಾಡುತ್ತಿರುವ ಮಧ್ಯೆ ಆರೋಪಿಯನ್ನು ಚಾಣಾಕ್ಷತನದಿಂದ ಸೆರೆಹಿಡಿಯಲಾಗಿದೆ.ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಸಲಾಗುತ್ತಿದೆಯೆಂಬ ಊರವರ ನಿರಂತರ ದೂರಿನ ಪರಿಣಾಮ […]

ಭಗವಾನ್ ನಿತ್ಯಾನಂದರ ಧೀ:ಶಕ್ತಿಯ ಕ್ಷೇತ್ರ ಕೊಂಡೆವೂರು-ಮಾಣಿಲ ಶ್ರೀಗಳು

Tuesday, February 9th, 2016
kondevooru

ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಾನುವಾರ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದರ 13ನೇ ಪ್ರತಿಷ್ಠಾ ವರ್ಧಂತಿ ಅಂಗವಾಗಿ ತ್ರಿಕಾಲ ಪೂಜೆ, ದುರ್ಗಾ ಹೋಮ, ದುರ್ಗಾ ನಮಸ್ಕಾರ ಪೂಜೆ, ಗಾಯತ್ರೀ ಹವನ ಮುಂತಾದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಗವಾನ್ ನಿತ್ಯಾನಂದರು ಓಡಾಡಿದ ಅವರ ಧೀ:ಶಕ್ತಿಯ ಈ […]

ಕೊಲೆಯತ್ನ : ಆರು ಮಂದಿ ಆರೋಪಿಗಳ ಬಂಧನ

Tuesday, February 9th, 2016
6accused

ಮಂಗಳೂರು: ಮಸೀದಿಯೊಂದರ ವಿಷಯಕ್ಕೆ ಸಂಬಂದಿಸಿ ಯುವಕನೋರ್ವನ ಕೊಲೆಗೆ ಯತ್ನಿಸಿದ ಆರು ಮಂದಿ ಆರೋಪಿಗಳ ತಂಡವೊಂದನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಾಪ್ರಿಗುಡ್ಡೆ ನಿವಾಸಿ ಸಿ.ಅಬ್ದುಲ್ ಹಮೀದ್ (20), ಅತ್ತಾವರ ನಿವಾಸಿ ಎಂ.ಇಸ್ಮಾಯಿಲ್ ರಿಹಾನ್ (20), ಬೋಳಾರ ನಿವಾಸಿ ಉನೀಝ್ ಅಹಮ್ಮದ್ (20), ಅತ್ತಾವರ ನಿವಾಸಿ ಶಾಬಾನ್ ಮಿಷಾಬ್ (23), ಕುದ್ರೋಳಿ ನಿವಾಸಿ ನೌಫಲ್ (20) ಮತ್ತು ಕಾಸರಗೋಡಿನ ನಿವಾಸಿ ಸೊಹೈಲ್ ಎಂ.ಪಿ. ಬಂದಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮೊಹಮ್ಮದ್ ಫೈಝಿಲ್ ಮತ್ತು ಆತನ ತಂದೆ ಹಾಗೂ ಆರೋಪಿ […]

ಕುಂಬಳೆ ಪೊಲೀಸರಿಂದ ಗಾಂಜಾ ಸಹಿತ ವ್ಯಕ್ತಿಯ ಬಂಧನ

Tuesday, February 9th, 2016
Sharath Kumar

ಕುಂಬಳೆ: 470 ಗ್ರಾಂ ಗಾಂಜಾ ಸಹಿತ ಸುಳ್ಯ ಕಾಂತಮಂಗಿಲದ ದೇವರಾಯ ಎಂಬವರ ಪುತ್ರ ಶರತ್ ಕುಮಾರ್(54)ನನ್ನು ಶಿರಿಯಾ ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಕುಂಬಳೆ ಸಿ.ಐ ಅನೂಪ್ ಕುಮಾರ್ ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ಶರತ್ ಕುಮಾರನನ್ನು ವಶಕ್ಕೆ ತೆಗೆಯಲಾಯಿತು.ಬಳಿಕ ನಡೆಸಿದ ತಪಾಸಣೆಯಲ್ಲಿ 470 ಗ್ರಾಂ ಗಾಂಜಾ,700 ರೂ.ನಗದು ಪತ್ತೆಹಚ್ಚಲಾಗಿದೆ.ಈ ಹಿನ್ನೆಲೆಯಲ್ಲಿ ಬಂಧಿಸಿ ದೂರು ದಾಖಲಿಸಲಾಗಿದ್ದು ಶರತ್ ಕುಮಾರ್ ನ ವಿರುದ್ದ ಸುಳ್ಯ ಠಾಣೆಯಲ್ಲಿ 2011 ರಲ್ಲಿ ಗಾಂಜಾ ಸಾಗಾಟ ಆರೋಪದ ದೂರು ದಾಖಲಿಸಲಾಗಿತ್ತೆಂದು ತಿಳಿದುಬಂದಿದೆ.