ಗಡಿಯಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ-ರಾ.ಹೆದ್ದಾರಿ ತಡೆ-ಬಂಧನ

Saturday, February 6th, 2016
KRV

ಮಂಜೇಶ್ವರ: ಅಖಂಡ ಕರ್ನಾಟಕದ ಸಮಗ್ರ ಕನ್ನಡಾಭಿಮಾನಕ್ಕೆ ಚ್ಯುತಿಯಾಗುವುದನ್ನು ಸಹಿಸಲಾಗದು. ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲಾಗುತ್ತಿರುವ ವಂಚನಾ ರಾಜಕೀಯದ ಮಿತಿ ಇದೀಗ ಕಟ್ಟೆಯೊಡೆದಿದ್ದು, ಯಾವ ಬೆಲೆ ತೆತ್ತಾದರೂ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯವನ್ನೆದುರಿಸಲು ಸಿದ್ದರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣ ಗೌಡ ಬಣ)ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲ.ಅನಿಲ್ ದಾಸ್ ಗುಡುಗಿದರು. ಕೇರಳ ಸರಕಾರದ ನೂತನ ಮಲೆಯಾಳ ಭಾಷಾ ಮಸೂದೆಯನ್ನು ವಿರೋಧಿಸಿ, ಕಾಸರಗೋಡಿನ ಕನ್ನಡಿಗರ ಹಕ್ಕು ಸಂರಕ್ಷಣೆಯ ದೃಷ್ಟಿಯಿಂದ ಶನಿವಾರ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ […]

ಶ್ರೀಮದ್ಬಾಗವತಾ ಸಫ್ತಾಹ ಯಜ್ಞ ಆರಂಭ

Friday, February 5th, 2016
Sreemad Bhagavata

ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲೊಂದಾದ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ 4ನೇ ಶ್ರೀಮದ್ಬಾಗವತ ಸಪ್ತಾಹ ಯಜ್ಞಕ್ಕೆ ಗುರುವಾರ ಸಂಜೆ ವಿದ್ಯುಕ್ತ ಚಾಲನೆ ನೀಡಲಾಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೊಳಿಸಿ ಯಜ್ಞಾರಂಭಕ್ಕೆ ಚಾಲನೆ ನೀಡಿದರು.ಬಳಿಕ ಶ್ರೀಮದ್ಭಾಗವತ ಮಹಾತ್ಮ್ಯೆಯ ಬಗ್ಗೆ ಬ್ರಹ್ಮಶ್ರೀ ವಟ್ಟಪ್ಪರಂಬ ಉಣ್ಣಿಕೃಷ್ಣನ್ ನಂಬೂದಿರಿ ಹಾಗೂ ಬ್ರಹ್ಮಶ್ರೀ ಪುತ್ತೂರು ಕೇಕಣಾಜೆ ಕೇಶವ ಭಟ್ ರಿಂದ ಪ್ರವಚನ,ವಿವರಣೆಗಳು ನಡೆದವು.ಕಾರ್ಯಕ್ರಮಕ್ಕೂ ಮೊದಲು ಕುಂಬಳೆ ಶ್ರೀ ಅಯ್ಯಪ್ಪ ಕ್ಷೇತ್ರ ಪರಿಸರದಿಂದ ಆಚಾರ್ಯರಿಗೆ ಭವ್ಯ ಸ್ವಾಗತ ನೀಡಿ […]

ಮಂಜೇಶ್ವರದಲ್ಲಿ ಜೈವ ಕೃಷಿ ಯೋಜನೆ : ಜಿ.ಪಂ.ತಂಡ ಭಟಿ

Friday, February 5th, 2016
Javika

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿನ ಪಾವೂರು ಬಾಚಳಿಕೆ ಬಂಗಳೆ ಪ್ರದೇಶದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ವಿನೂತನ ಜೈವಕೃಷಿ ಯೋಜನೆಯನ್ನು ಜ್ಯಾರಿಗೊಳಿಸಲು ನಿಧರಿಸಿದ್ದು ಪ್ರಸ್ತುತ ಸ್ಥಳಕ್ಕೆ ಜಿಲ್ಲಾ ಪಂಚಾಯತು ಹಾಗೂ ಕಂದಾಯ ಅಧಿಕಾರಿಗಳ ನಿಯೋಗ ಭಟಿ ನೀಡಿತು. ಕಾಸರಗೋಡು ಜಿಲ್ಲಾ ಪಂಚಾಯತಿನ ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಸಂಪೂರ್ಣವಾದ ಜೈವಕೃಷಿ ಯನ್ನೊಳಗೊಂಡ ಭತ್ತದ ಕೃಷಿ, ತರಕಾರಿ ಕೃಷಿಯನ್ನು ಅಳವಡಿಸಿ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಸುಮಾರು 11.6 ಎಕರೆ ವಿಸ್ತಿರ್ಣದ ಸ್ಥಳವನ್ನು ಇದಕ್ಕಾಗಿ ಬಳಸಲಾಗುವುದು. ಕೃಷಿ ಸಂಘಗಳು, ಪಾಡಶೇಕರ […]

ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣಾ ಸಮಾರಂಭ

Friday, February 5th, 2016
Kollangana

ಬದಿಯಡ್ಕ: ಬ್ರಹ್ಮಶ್ರೀ ತಂತ್ರ ವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯ ಕೊಲ್ಲಂಗಾನ ಅವರ ೧೨ನೇ ಸಂಸ್ಮರಣಾ ಸಮಾರಂಭವು ಮಂಗಳವಾರ ರಾತ್ರಿ ನೀರ್ಚಾಲು ಬಳಿಯ ಕೊಲ್ಲಂಗಾನ ಶ್ರೀನಿಲಯದಲ್ಲಿ ಜರಗಿತು. ಯಕ್ಷಗಾನ ಕಲಾವಿದ ರವಿ ಅಲೆವೂರಾಯ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಸಹಿತ ಹಲವಾರು ಮಂದಿ ಪ್ರಮುಖರು ಭಾಗವಹಿಸಿದ್ದರು. ಇದೇ ವೇಳೆ ಬ್ರಹ್ಮಶ್ರೀ ವೇದಮೂರ್ತಿ ಚಂದ್ರಶೇಖರ ಭಟ್ ಕುರೋಮೂಲೆ ಕರೋಪಾಡಿ ಅವರನ್ನು ಗೌರವಿಸಲಾಯಿತು.

ಧಾರ್ಮಿಕ ನಂಬಿಕೆಗೆ ಚ್ಯುತಿ ಬಾರದಂತೆ ಛತ್ರಪಳ್ಳಂ ನವೀಕರಣ-ಪಂ.ಅಧ್ಯಕ್ಷರು

Friday, February 5th, 2016
Arikkadi

ಕುಂಬಳೆ: ಆರಿಕ್ಕಾಡಿ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಚರಿತ್ರೆಗೆ ಸಂಬಂಧಪಟ್ಟ ಛತ್ರಂಪಳ್ಳವನ್ನು ನವೀಕರಿಸಲು ತೀರ್ಮಾನಿಸಲಾಗಿದೆ. ಕುಂಬಳೆ ಪಂಚಾಯತಿನ ಅಧೀನತೆಯಲ್ಲಿ ಶಾಸಕ ಪಿ.ಬಿ.ಅಬ್ದುಲ್ಲ ರಝಾಕ್‌ಕ ಮುಖಾಂತರ ಕೇರಳ ಸರಕಾರಕ್ಕೆ ಸಮರ್ಪಿಸಿದ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿದೆ. ಆರಿಕ್ಕಾಡಿ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಈ ಸರೋವರ ಕ್ಷೇತ್ರಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಲು ಕುಂಬಳೆ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಸೂಚಿಸಿದ್ದಾರೆ. ಧಾರ್ಮಿಕ ನಂಬಿಕೆಯುಳ್ಳ ಛತ್ರಂಪಳ್ಳ ಅನೇಕ […]

ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Friday, February 5th, 2016
Chigurupade Temple

ಮಂಜೇಶ್ವರ : ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರವರಿ 11ನೇ ಗುರುವಾರ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಬೆಳಿಗ್ಗೆ ಗಂಟೆ 7ರಿಂದ ಉಷಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಏಕಾದಶರುದ್ರಾಭಿಷೇಕ, ಮಧ್ಯಾಹ್ನ12ರಿಂದ ಮಹಾಪೂಜೆ, ಶ್ರೀದೇವರಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಗಂಟೆ ೮ಕ್ಕೆ ರಂಗಪೂಜೆ ,9ರಿಂದ ಭೂತಬಲಿ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಲಿದೆ. […]

ಮಂಜೇಶ್ವರ ತೀಯಾ ಸಮಾಜದ ಸಭಾ ಭವನದ ಉದ್ಘಾಟನೆ

Friday, February 5th, 2016
Tiya Bhavan

ಮಂಜೇಶ್ವರ : ಉದ್ಯಾವರ ಮಾಡದಲ್ಲಿ ನಿರ್ಮಾಣಗೊಂಡ ತೀಯಾ ಸಮಾಜದ ನೂತನ ಸಭಾ ಭವನದ ಉದ್ಘಾಟನೆಯನ್ನು ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ತಂತ್ರಿಯವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಂಜು ಭಂಡಾರಿ ಉದ್ಯಾವರ ಮಾಡ, ಡಾ.ಎಂ.ಜಯಪಾಲ ಶೆಟ್ಟಿ, ಖ್ಯಾತ ಉದ್ಯಮಿ ರೋಹಿದಾಸ್ ಬಂಗೇರ, ಎಂ.ದಯಾನಂದ ಕನಿಲ,ಶ್ರೀಭಗವತಿ ಕ್ಷೇತ್ರ ಉದ್ಯಾವರದ ಕೃಷ್ಣಪ್ಪ ಬೆಂಗರೆ, ಧಾರ್ಮಿಕ ನೇತಾರ […]

ಬದಿಯಡ್ಕ-ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ಅನುದಾನ

Wednesday, February 3rd, 2016
DD

ಬದಿಯಡ್ಕ: ಕಾಸರಗೋಡು ಜಿಲ್ಲೆಯ ಅನೇಕ ಜನರು ಅನಾದಿ ಕಾಲದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾಗಿದ್ದಾರೆ. ಹಾಗಾಗಿ ಕಾಸರಗೋಡು ಜಿಲ್ಲೆಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಸೋಮವಾರ ಬದಿಯಡ್ಕ ಸಮೀಪದ ಮುನಿಯೂರಿನ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಲಭಿಸಿದ ಅನುದಾನ ರೂಪಾಯಿ 5 ಲಕ್ಷ ಮೌಲ್ಯದ ಡಿಡಿಯನ್ನು ಶ್ರೀ ಕ್ಷೇತ್ರದ ಮೊಕ್ತೇಸರ ಗೋಪಾಲಕೃಷ್ಣ ನಡುವಂತಿಲ್ಲಾಯ ಮುನಿಯೂರು ಅವರಿಗೆ […]

ಕಾನತ್ತೂರು ಅರಣ್ಯದಲ್ಲಿ ಮಾವೋವಾದಿ ವದಂತಿ

Wednesday, February 3rd, 2016
Kerla Naxalas

ಮುಳ್ಳೇರಿಯಾ: ಕಾರಡ್ಕ ಅರಣ್ಯ ವಲಯಕ್ಕೆ ಒಳಪಟ್ಟ ಕಾನತ್ತೂರು ಅರಣ್ಯದಲ್ಲಿ ಮಾವೋವಾದಿಗಳಿರುವ ಬಗ್ಗೆ ದಟ್ಟ ವದಂತಿಗಳು ಹಬ್ಬಿದ್ದು, ಆದರೆ ಪೋಲೀಸ್ ಇಲಾಖೆ ಖಚಿತಪಡಿಸಿಲ್ಲ. ಇತ್ತೀಚೆಗೆ ಕಾನತ್ತೂರಿನ ಅರಣ್ಯದಂಚಿನ ಮನೆಗೆ ತಲಪಿದ್ದ ಮಹಿಳೆಯೋರ್ವೆ ಕೇರಳ,ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಮಾವೋವಾದಿ ನಿಗ್ರಹ ಪಡೆಗೆ ಬೇಕಾಗಿದ್ದ ಮುಂಚೂಣಿಯ ನಾಯಕಿ ಇರಬಹುದೆಂದು ಸಂಶಯಿಸಲಾಗಿದೆ.ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿ ಅರಣ್ಯದೊಳಗೆ ಇತ್ತೀಚೆಗೆ ಸೌದೆಗೆ ತೆರಳಿದ್ದ ಕೆಲವು ಮಹಿಳೆಯರು ಕಾಡೊಳಗೆ ಅಪರಿಚಿತರನ್ನು ಕಂಡಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾವೋವಾದಿಗಳು ಇರಬಹುದೆಂದು ಸಂಶಯಿಸಲಾಗಿದ್ದರೂ ಪೋಲೀಸ್ ಇಲಾಖೆ ಇನ್ನೂ ದೃಢಪಡಿಸಿಲ್ಲ.ಕಾನತ್ತೂರು,ಕೊಟ್ಟಂಗುಳಿ,ಅಡೂರು,ಪಾಂಡಿ ಮೂಲಕ […]

ಕತ್ತಿಯಿಂದ ಕಡಿದು ಅಣ್ಣನ ಕೊಲೆ: ತಮ್ಮ ನ್ಯಾಯಲಯಕ್ಕೆ ಹಾಜರು

Wednesday, February 3rd, 2016
Chandrahasa

ಬದಿಯಡ್ಕ: ಕತ್ತಿಯಿಂದ ಕಡಿದು ಅಣ್ಣನನ್ನು ತಮ್ಮ ಕೊಲೆಗೈದ ಪ್ರಕರಣ ನಡೆದಿದ್ದು ಆರೋಪಿಯನ್ನು ಬದಿಯಡ್ಕ ಪೋಲಿಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ. ಮುಂಡಿತ್ತಡ್ಕ ಸಮೀಪದ ಸರಳಿ ಕೊರಗಪ್ಪ ಪೂಜಾರಿಯವರ ಪುತ್ರ ವಾಸುದೇವ(35) ಕೊಲೆಗೀಡಾದ ದುರ್ದೈವಿ. ಆರೋಪಿಯಾದ ಇವರ ಸಹೋದರ ಚಂದ್ರಹಾಸ(28)ನನ್ನು ಮನೆ ಬಳಿಯ ಕಾಡಿನಿಂದ ಊರವರ ಸಹಾಯದೊಂದಿಗೆ ಬದಿಯಡ್ಕ ಪೋಲಿಸರು ಬಂಧಿಸಿ ಕೊಲೆಗೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಸಿ.ಐ ತನಿಖೆ ನಡೆಸುತ್ತಿದ್ದಾರೆ. ತರವಾಡು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವಾಸುದೇವ 7.15 ರ ವೇಳೆಗೆ ಮನೆಗೆ ತೆರಳಿದಾಗ […]