ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದೆ : ಶ್ರೀಧರ ಶೆಟ್ಟಿ

Friday, September 18th, 2015
Bunts Ganeshotsava

ಮಂಗಳೂರು : ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ ಶೆಟ್ಟಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಧ್ವಜಾರೋಹಣ ನೆರವೇರಿಸಿದ ಬ್ರಿ.ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ […]

‘ದಬಕ್ ದಬಾ ಐಸಾ’ ತುಳು ಚಿತ್ರಕ್ಕೆ ಮುಹೂರ್ತ

Wednesday, September 16th, 2015
dabak daba isa

ಮಂಗಳೂರು: ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಾರಂಭಗೈದರು. ತುಳುವಿನಲ್ಲೀಗ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿದೆ. ಚಿತ್ರ ನಿರ್ಮಿಸುವವರು ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಿದರೆ ಮಾತ್ರ ಪ್ರೇಕ್ಷಕರು ಸ್ವೀಕರಿಸುತ್ತಾರೆ. ಹೀಗಾಗಿ […]

ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್‌ಗೆ ದೇವಪ್ರಸಾದ್ ಪುನರೂರು ಸ್ಪರ್ಧೆ

Monday, September 14th, 2015
Devaprasad punaruru

ಮೂಲ್ಕಿ : ಈ ಯುವಕನಿಗೆ ಛಲವಿದೆ. ಏನನ್ನಾದರೂ ಸಾಧಿಸಬೇಕೆಂಬ ತುಡಿತವಿದೆ. ಮನಸ್ಸು ಮಾಡಿ ಜವಾಬ್ದಾರಿ ಕೊಟ್ಟರೆ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಪದಾಧಿಕಾರಿಯಾಗಿ ಪಕ್ಷವನ್ನು ಅಧಿಕಾರದತ್ತ ಮುನ್ನಡೆಸುವ ಸಾಮರ್ಥ್ಯ ಇದೆ. ಎಲ್ಲಕ್ಕಿಂತ ಅನುಭವಿ ತಂದೆಯ ನೆರಳಿದೆ. ಅಂತಹ ಸುಂದರಾಂಗ, ಕೆಚ್ಚೆದೆಯ ದೇವಪ್ರಸಾದ್ ಪುನರೂರು ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು, ಆದರೆ ಅದು ರಾಜಕೀಯ ನಡೆಯಲ್ಲ. ದೇವಪ್ರಸಾದ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಸಾಹಿತ್ಯ ಪರಿಷತ್‌ಗೆ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿರುವ […]

ಚಂದ್ರಶೇಖರ ಸ್ವಾಮಿಯನ್ನು ನಂಬಿ ಶಾಸಕನಾಗುವ ಕನಸು ಕಾಣುತ್ತಿರುವ ದೇವಿಪ್ರಸಾದ!

Monday, September 14th, 2015
DeviPrasad

ಉಡುಪಿ : ಬೆಂಗಳೂರಿನ ವಾಸ್ತು ತಜ್ಙ, ಅಂತರಾಷ್ಟ್ರೀಯ ಜ್ಯೋತಿಷಿ ಮೂಲ್ಕಿಯ ಚಂದ್ರಶೇಖರ್ ಸ್ವಾಮೀಜಿಯ ಕೈ ಹಿಡಿದು ಶಾಸಕನಾಗುವ ಕನಸು ಕಾಣುತ್ತಿರುವ ಬೆಳಪು ದೇವಿಪ್ರಸಾದ್ ಶೆಟ್ಟಿಯ ನಡೆ ನಿಜಕ್ಕೂ ಫಲಪ್ರದವಾಗಿಯೇ ಬಿಡುತ್ತದೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಸಚಿವ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸುವುದು ಸಂಶಯವಾಗಿರುವ ನಿಟ್ಟಿನಲ್ಲಿ ದೇವಿಪ್ರಸಾದ್ ಶೆಟ್ಟಿಯ ನಡೆ ಕುತೂಹಲಕಾರಿಯಾಗಿದೆ. ಚಂದ್ರಶೇಖರ್ ಸ್ವಾಮಿಜಿ, ಗುರೂಜಿ ಎಂದು ಹೀಗೆ ಕರೆಸಿಕೊಳ್ಳುತ್ತಾ ಬೆಂಗಳೂರಿನ ಅಷ್ಟೂ ರಾಜಕಾರಣಿಗಳ ಡಾರ್ಲಿಂಗ್ ಆಗಿರುವ ಚಂದ್ರಶೇಖರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ […]

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ಥಳಾಂತರ ಎಂಬ 40 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೇಕಿದೆಯೇ

Monday, September 14th, 2015
Dc Complex

ಮಂಗಳೂರು : ಯಾರಾದರೂ ಒಬ್ಬ ನಾಗರಿಕ ಬಂದು ನಿಮ್ಮ ಬಳಿ ದಯವಿಟ್ಟು ಜಿಲ್ಲಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಹೊರಗೆ ಎಲ್ಲಿಯಾದರೂ ದೂರ ಶಿಫ್ಟ್ ಮಾಡಿಬಿಡಿ. ನಮಗೆ ಇಲ್ಲಿ ಬರಲು ತುಂಬಾ ಕಷ್ಟವಾಗುತ್ತದೆ ಎಂದು ಬರೆದು ಕೊಟ್ಟಿದ್ದಾನಾ ಅಥವಾ ಮಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಗೆ ಬಂದರೆ ಹೆಜ್ಜೆಗಳ ಅಂತರದಲ್ಲಿ ಸಿಗುವ ಅಷ್ಟೂ ಕಚೇರಿಗಳನ್ನು ತೆಗೆದು ಬೇರೆಡೆ ಹಾಕಿದರೆ ಅದಕ್ಕಿಂತ ಬೇರೆ ಉಪಕಾರ ಇಲ್ಲ ಎಂದು ಮಂಗಳೂರಿನ ನಾಗರಿಕನಿಗೆ ಅನಿಸುತ್ತಿದೆಯಾ? ಅಥವಾ ಪುತ್ತೂರು, ಬೆಳ್ತಂಗಡಿ, ಸುಳ್ಯ ದ ಜನರಿಗೆ […]

ಬಂಟ ಕ್ರೀಡೋತ್ಸವ ಉದ್ಘಾಟನೆ

Sunday, September 13th, 2015
Bunts Sports

ಮಂಗಳೂರು: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಶ್ರೀ ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲಿನಲ್ಲಿರುವ ಶ್ರೀ ರಾಮಕೃಷ್ಣ ಕಾಲೇಜಿನ ಆವರಣದಲ್ಲಿ ಬಂಟಕ್ರೀಡೋತ್ಸವ ಭಾನುವಾರ ಜರಗಿತು. ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು. ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಅವರು ಮಾತನಾಡಿ, ಕ್ರೀಡೆಯಿಂದ ಆರೋಗ್ಯ […]

ಬಂಟ್ಸ್ ಹಾಸ್ಟೆಲ್: ಶ್ರೀ ಗಣೇಶೋತ್ಸವದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

Saturday, August 29th, 2015
Bunts Ganeshotsava

ಮಂಗಳೂರು: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 17 ರಿಂದ 19 ರವರೆಗೆ 12 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದ್ದು ಇದರ ಮಹಾಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆ.26ರಂದು ಬುಧವಾರ ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಜರಗಿತು. ಉದ್ಯಮಿ ಜಗನ್ನಾಥ ನಾಕ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಯುವ ಉದ್ಯಮಿ ನಿತಿನ್‌ಶೆಟ್ಟಿ ಗಣೇಶೋತ್ಸವ ಕಚೇರಿಯ ಉದ್ಘಾಟನೆ ನೆರವೇರಿಸಿದರು. ಸೆ.12ರಿಂದ 19 ರವರೆಗೆ ಬಂಟ್ಸ್ ಹಾಸ್ಟೆಲ್‌ನ […]

ಅತ್ತಾವರದಲ್ಲಿ ಆಟೋ ಚಾಲಕನ ಕೈ ಕಡಿದ ಪ್ರಕರಣ : ಮಹತ್ವದ ದಾಖಲೆ ಪತ್ತೆ ಹಚ್ಚಿದ ಪೊಲೀಸರು

Thursday, August 27th, 2015
Driver Attack

ಮಂಗಳೂರು : ಅತ್ತಾವರದಲ್ಲಿ ಆಗಸ್ಟ್ 24 ರಂದು ಮುಸ್ಲಿಂ ಯುವಕನನ್ನು ಬಟ್ಟೆ ಬಿಚ್ಚಿಸಿ ಅರೆನಗ್ನ ಗೊಳಿಸಿ ಥಳಿಸಿದ ಎರಡು ದಿನದ ಬಳಿಕ ಅದೇ ಸ್ಥಳದಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಯಯಧಗಳಿಂದ ಕೈ ಮತ್ತು ಬೆನ್ನಿಗೆ ಕಡಿದು ಪರಾರಿಯಾದ ಘಟನೆ ಆಗಸ್ಟ್ 26 ರಾತ್ರಿ 10.45ರ ವೇಳೆಗೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಪಾಣೆಮಂಗಳೂರು ಸಮೀಪದ ನಂದಾವರದ ನಿವಾಸಿ ಗುರುದತ್ತ್ 35 ಎಂದು ಗುರುತಿಸಲಾಗಿದೆ. ಮೂವರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದು ಆಟೋ ಸ್ಟ್ಯಾಂಡಿನಲ್ಲಿ ಕುಳಿತಿದ್ದ ಅಮಾಯಕನ್ನು ತಲವಾರಿನಿಂದ […]

ಅತ್ತಾವರ ಘಟನೆ ಪೊಲೀಸರನ್ನು ಆರೋಪ ಮಾಡುವುದು ಸರಿಯಲ್ಲ – ಮುರುಗನ್‌

Thursday, August 27th, 2015
6muruga

ಮಂಗಳೂರು : ಅತ್ತಾವರದಲ್ಲಿ ಆ. 24 ರಂದು ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಯುವಕ ಶಾಕಿರ್‌ನನ್ನು ಅರೆ ನಗ್ನಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, ಅವರಿಗೆ ಸೆ. 7 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಸ್ತುತ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎಸ್‌. ಮುರುಗನ್‌ ಆ. 26 ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಪ್ರತಿ ದೂರುಗಳೆರಡರ […]

ಬಿ.ಬಿ.ಎಂ.ಪಿ.ಬಿಜೆಪಿ ಗೆಲುವು – ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸಂಭ್ರಮಾಚರಣೆ

Wednesday, August 26th, 2015
bbmp

ಮಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.)ಯ ಚುನಾವಣೆಯಲ್ಲಿ, ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಮಂಗಳವಾರ ಆಚರಿಸಿದರು. ರಾಜ್ಯಉಪಾಧ್ಯಕ್ಷರು ಸುಲೋಚನಾ ಜಿ.ಕೆ.ಭಟ್ ,ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಉಪಾಧ್ಯಕ್ಷರು ಸುರೇಶ್‌ಚಂದ್ರ ಶೆಟ್ಟಿ, ನಿತಿನ್ ಕುಮಾರ್, ಮಂಗಳೂರು ನಗರ ದಕ್ಷಿಣ ಮಂಡಲ ರವಿಶಂಕರ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು ವೇದವ್ಯಾಸ್ ಕಾಮತ್ ,ಭಾಸ್ಕರ್ ಚಂದ್ರ ಶೆಟ್ಟಿ, ಸತೀಶ್ ಪ್ರಭು,ಶ್ರೀನಿವಾಸ್ ಶೇಟ್, ಶ್ರೀಮತಿ ಕಾತ್ಯಾಯನಿ ಸೀತಾರಾಮ್ , ಶ್ರೀಮತಿ ರೂಪಾ […]