ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಾಂತ್ವನ ಯಾತ್ರೆ ’ಬದುಕು ಬೇಸಾಯ’
Sunday, August 2nd, 2015ಮಂಗಳೂರು : ರಾಜ್ಯದ ವಿವಿದೆಡೆ ರೈತರ ಅತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ರೈತರಲ್ಲಿ ಬದುಕುವ ಧೈರ್ಯ ತುಂಬಲು ಆಗಸ್ಟ್ 3ರಿಂದ ರಾಜ್ಯದಲ್ಲಿ ’ಬದುಕು ಬೇಸಾಯ’ ಎಂಬ ಹೆಸರನಲ್ಲಿ ರೈತರ ಸಾಂತ್ವನ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ರೈತರ ಮನ: ಪರಿವರ್ತನೆ ಮಾಡಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಯನ್ನು ಮೆಟ್ಟಿ ನಿಂತರೆ ಬದುಕು ಹಸನಾಗುತ್ತದೆ ಎನ್ನುವ ಜಾಗೃತಿಯನ್ನು ವಿವರಿಸುವುದು ಯಾತ್ರೆಯ ಉದ್ದೇಶ. ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು […]