ಡಾ. ಅಬ್ದುಲ್ ಕಲಾಂ ನಿಧನಕ್ಕೆ ವೀರೇಂದ್ರ ಹೆಗ್ಗಡೆಯವರ ಸಂತಾಪ

Tuesday, July 28th, 2015
Kalam

ಮಂಗಳೂರು : ನಮ್ಮ ರಾಷ್ಟ್ರದ ಮೇರು ವ್ಯಕ್ತಿತ್ವದ ಡಾ. ಅಬ್ದುಲ್ ಕಲಾಂ ಅವರು ಸರ್ವಮಾನ್ಯರು, ಅಜಾತ ಶತ್ರು. ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಹಾಗೂ ವ್ಯರ್ಥವಾಗದಂತೆ ಬದುಕಿದವರು. ಅವರು ಆಯುಷ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡದಲ್ಲದೆ, ಸದುಪಯೋಗ ಪಡಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಆಗಾಗ ಭೇಟಿ ಕೊಡುತ್ತಾ ಕನ್ನಡಿಗರ ಸ್ನೇಹಾಕಾಂಕ್ಷಿಗಳಾಗಿದ್ದರು. ಶ್ರೀ ಕ್ಷೇತ್ರದ ಮೇಲೆ ಅವರಿಗೆ ವಿಶೇಷ ಅಭಿಮಾನ ಹಾಗೂ ಗೌರವನ್ನು ಹೊಂದಿದ್ದರು. ಅವರ ನಿಧನದಿಂದ ಶತಮಾನದ ಶ್ರೇಷ್ಠ ವ್ಯಕ್ತಿಯೋರ್ವ ರನ್ನು […]

ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ 75 ದಿನಕ್ಕೆ

Tuesday, July 28th, 2015
Oriyan Toonda Oriyagapuji

ಮಂಗಳೂರು : ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ ತನ್ನ ಪ್ರದರ್ಶನದ 75ನೇ ದಿನವನ್ನು ಮಂಗಳೂರಿನ ನ್ಯೂಚಿತ್ರಾ ಟಾಕೀಸಿನಲ್ಲಿ ಜುಲೈ 28ರಂದು ಪೂರೈಸಲಿದೆ. ತುಳು ಚಿತ್ರಗಳಲ್ಲಿ ಕೌಟುಂಬಿಕ, ಹಾಸ್ಯಮಯ ಸನ್ನಿವೇಶಗಳೊಂಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಾ ನೂರನೇ ದಿನದತ್ತ ಮುನ್ನುಗ್ಗತ್ತಿದ್ದು ತುಳುನಾಡಿನಾದ್ಯಂತ ಮನೆಮಾತಾಗಿದೆ. ಇದು ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ಮೂಡಿಬಂದ ಚೊಚ್ಚಲ ತುಳು ಚಿತ್ರ. ‘ಒರಿಯನ್ ತೂಂಡ ಒರಿಯಗಾಪುಜಿ’ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಯಶಶ್ವೀ ಪ್ರದರ್ಶನ ನೀಡಿದೆ. ಪ್ರಸ್ತುತ ಸುಳ್ಯದ […]

ಮಾತೃಸಂಘದಿಂದ ಗ್ರಾ.ಪಂ.ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸದಸ್ಯರಿಗೆ ಅಭಿನಂದನೆ

Monday, July 20th, 2015
Bunts

ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘ ದ.ಕ. ವತಿಯಿಂದ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗ್ರಾಮಪಂಚಾಯತ್‌ಗಳಿಗೆ ಇತ್ತೀಚೆಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸಮಾಜದ ಸದಸ್ಯರಿಗೆ ಅಭಿನಂದನಾ ಸಮಾರಂಭ ರವಿವಾರ ಬಂಟ್ಸ್‌ ಹಾಸ್ಟೆಲ್‌ನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ಜರಗಿತು. ಕರ್ನಾಟಕದ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀ ಜಯಪ್ರಕಾಶ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಮ್ಮ ಮೇಲಿರುವ ಹೊಣೆಗಾರಿಕೆ ಅರಿತುಕೊಂಡು ಜನರ ನಿರೀಕ್ಷೆಗಳಿಗೆ ಪೂರಕ […]

ಮತ್ತಷ್ಟು ಬಿರುಸುಗೊಂಡ ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ವಿರೋಧಿ ಹೋರಾಟ

Monday, July 20th, 2015
pipe line

ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಹಮ್ಮಿಕೊಂಡ ದ.ಕ. ಜಿಲ್ಲೆಯ 17 ಗ್ರಾಮಗಳ ಸಂತ್ರಸ್ತರ ಐಎಸ್‌ಪಿಆರ್‌ಎಲ್ ಪೈಪ್ ಲೈನ್ ವಿರೋಧಿ ಹೋರಾಟದ ಸಭೆಯ ಸುರತ್ಕಲ್‌ನ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗ್ರೆಗೋರಿ ಪತ್ರಾವೋ ಮತ್ತು ಮುನೀರ್ ಕಾಟಿಪಳ್ಳ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೆಎಐಡಿಬಿಯು ಪೈಪ್‌ಲೈನ್ ಸಂತ್ರಸ್ತರಿಗೆ ಹಿಂದೆ ಘೋಷಿಸಿದ ಪರಿಹಾರ ಮೊತ್ತದ ಶೇ 40 ರಷ್ಟು ಹೆಚ್ಚುವರಿ ಮಾಡಿ ನಾಲ್ಕು ಪಟ್ಟು ಹೆಚ್ಚು ಮಾಡಲಾಗಿದೆ ಎಂದು ಸಂತ್ರಸ್ತರನ್ನು ದಾರಿ […]

ಬಲ್ಮಠ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿದ ಅಟೆಂಡರ್

Friday, July 17th, 2015
Balmatta attender

ಮಂಗಳೂರು : ಬಲ್ಮಠ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಬಸ್‌ಪಾಸ್ ಮಾಡಿಸುವ ಸಲುವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ಬಸ್‌ಪಾಸ್ ಮಾಡದೆ, ಹಣವನ್ನು ವಾಪಾಸು ನೀಡದೆ ವಂಚಿಸಿರುವ ಕಾಲೇಜಿನ ಅಟೆಂಡರ್ ರತ್ನಾಕರವರ ವಿರುದ್ಧ ಇಂದು ವಿದ್ಯಾರ್ಥಿನಿಯರು ದಿಗ್ಬಂಧಿಸಿ ಪ್ರತಿಭಟಿಸಿದರು. ವಿದ್ಯಾರ್ಥಿನಿಯರು ಕಾಲೇಜಿನ ಅಟೆಂಡರ್ ವಂಚನೆ ಮಾಡುವ ಉದ್ದೇಶದಿಂದ ಸುಮಾರು 19 ವಿದ್ಯಾರ್ಥಿನಿಯರಿಂದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆದು ಅಲ್ಲದೇ ಕರ್ತವ್ಯದ ವೇಳೆ ಪಾನಮತ್ತರಾಗಿರುತ್ತಾರೆ. ಹಾಗಾಗಿ ಕೂಡಲೇ ಹಣ ಹಿಂದಿರುಗಿಸಬೇಕು. ಮತ್ತು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಪಟ್ಟುಹಿಡಿದರು. ಕಾಲೇಜಿನ […]

ಪುರಾಣ ವಾಚನದಿಂದ ಧರ್ಮ ಜಾಗೃತಿ : ನಾರಾಯಣ ಭಾಗವತ

Friday, July 17th, 2015
Balipa Narayana bHagavatha

ಧರ್ಮಸ್ಥಳ : ಯಕ್ಷಗಾನಕ್ಕೆ ಮತ್ತು ಪುರಾಣಗಳಿಗೆ ಅವಿನಾಭಾವ ಸಂಬಂಧವಿದೆ. ಯಕ್ಷಗಾನಕ್ಕೆ ಪುರಾಣಗಳೇ ಆಕರವಾಗಿದ್ದು ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ ಪ್ರತಿವರ್ಷ ಎರಡು ತಿಂಗಳ ಕಾಲ ಪುರಾಣ ವಾಚನ – ಪ್ರವಚನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದಾಗಿ ಧರ್ಮ, ಶಾಸ್ತ್ರ ಮತ್ತು ಪುರಾಣಗಳಲ್ಲಿ ಜನರಿಗೆ ಆಸಕ್ತಿ ಉಂಟಾಗಿ ಧರ್ಮ ಜಾಗೃತಿಯಾಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಬಲಿಪ ನಾರಾಯಣ ಭಾಗವತರು ಹೇಳಿದರು. ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಗುರುವಾರ ತೊರವೆ ರಾಮಾಯಣ ಮಹಾಕಾವ್ಯದ ವಾಚನ – ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು […]

ಸಿಎ. ಪರೀಕ್ಷೆಯಲ್ಲಿ ಯಶಸ್ಸು ದಾಖಲಿಸಿದ ಮಂಗಳೂರಿನ ಶ್ವೇತಾ ಶೆಣೈ

Friday, July 17th, 2015
Swetha shenoy

ಮಂಗಳೂರು: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನವದೆಹಲಿ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ್ದ ಲೆಕ್ಕ ಪರಿಶೋಧಕರ ಪರೀಕ್ಷೆಯಲ್ಲಿ ಮಂಗಳೂರಿನ ಹೆಚ್. ಶ್ವೇತಾ ಶೆಣೈ ಉತೀರ್ಣರಾಗುವ ಮೂಲಕ ಯಶಸ್ಸಿನ ಸಾಧನೆ ದಾಖಲಿಸಿದ್ದಾರೆ. ಅವರು ಮಂಗಳೂರಿನ ಕೆನರಾ ಹೈಸ್ಕೂಲ್ ಉರ್ವಾ ಹಾಗೂ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇಲ್ಲಿನ ಖ್ಯಾತ ಲೆಕ್ಕಪರಿಶೋಧಕ ಮುಂಡ್ಕೂರು ಜಗನ್ನಾಥ ಕಾಮತ್ ಅವರಲ್ಲಿ ತರಬೇತಿ ಪಡೆದಿರುವ ಶ್ವೇತಾ ಕೊಂಚಾಡಿ ನಿವಾಸಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉದ್ಯೋಗಿಯಾಗಿರುವ ಹೆಚ್. ಶಿವರಾಯ ಶೆಣೈ […]

ವಿಶೇಷ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ

Friday, July 17th, 2015
Seminar for special children

ಮಂಗಳೂರು : ದ.ಕ.ಜಿ.ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು ಉತ್ತರ ವಲಯ ಮತ್ತು ಸ್ಕಂದ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ರೋಟರಿ ಕ್ಲಬ್ ನಾರ್ತ್ ಗಾಂಧಿನಗರ ಇವರ ಸಹಯೋಗದಲ್ಲಿ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಭಾನುವಾರ ರೋಟರಿ ಬಾಲಭವನ ಗಾಂಧಿನಗರ ಇಲ್ಲಿ ವಿಶೇಷ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಏರ್ಪಡಿಸಲಾಯಿತು. ಈ ಶಿಬಿರದಲ್ಲಿ ಕಾರ್ಪೊರೇಟರ್ ಶ್ರೀಮತಿ ಜಯಂತಿ ಆಚಾರ್, ಶ್ರೀಮತಿ ರಾಜಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳೂರು ಉತ್ತರವಲಯ, ಸಮನ್ವಯಾಧಿಕಾರಿಗಳಾದ […]

ಕೌಶಲ್ಯವನ್ನು ಪಡೆದ ಶಿಕ್ಷಕರು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬಲ್ಲರು : ಸಿಪ್ರಿಯನ್

Friday, July 17th, 2015
Konkani teachers training

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಡಯಟ್ ಸಹಕಾರದಲ್ಲಿ ಕೊಂಕಣಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಭಾನುವಾರ ನಗರದ ಡಯಟ್ ಸಭಾಂಗಣದಲ್ಲಿ ಆಯೋಜಿಸಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೇರೊ ಕೊಂಕಣಿ ಕಲಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುವ ಶಿಕ್ಷಕರಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕೌಶಲ್ಯವನ್ನು ಪಡೆದ ಶಿಕ್ಷಕರು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬಲ್ಲರು. ಅಗತ್ಯ ಬಿದ್ದರೆ ವಲಯವಾರು ತರಬೇತಿಗಳನ್ನು ಆಯೋಜಿಸಲು ಡಯಟ್ ಸಹಕಾರ ನೀಡುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ […]

ಸಾಮಾಜಿಕ ಹೋರಾಟಗಾರ ಕೆ. ಸದಾನಂದ ನಾಯಕ್ ಇಂದಾಜೆ ನಿಧನ

Friday, July 17th, 2015
sadananda Nayak indaje

ಪುತ್ತೂರು: ಪ್ರಗತಿಪರ ಕೃಷಿಕ, ಶೈಕ್ಷಣಿಕ ತಜ್ಞ, ಸಾಮಾಜಿಕ ಹೋರಾಟಗಾರ, ಸಮಾಜ ಸೇವಕ ಪುತ್ತೂರಿನ ಸುಳ್ಯಪದವು ಕನ್ನಡ್ಕ ನಿವಾಸಿ ಕೆ. ಸದಾನಂದ ನಾಯಕ್ ಇಂದಾಜೆ (80) ಇಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸದಾ ಹಾಸ್ಯಪ್ರವೃತ್ತಿಯಿಂದ ಕೂಡಿರುವ ಸದಾನಂದ ನಾಯಕ್ ಅವರು, ಜಿಎಸ್‌ಬಿ ಸಮಾಜದಲ್ಲಿ ‘ಸದ್ ಮಾಮ್’ ಎಂದು ಖ್ಯಾತಿ ಪಡೆದಿದ್ದರು. ಸುಳ್ಯಪದವಿನ ಸರ್ವೋಧಯ ಪ್ರೌಢಶಾಲೆ, ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಸಂಚಾಲಕರಾಗಿ ಹಳ್ಳಿಯೊಂದರಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರು. ಹಲವು ಸಂಘ ಸಂಸ್ಥೆಗಳಿಗೆ ದೇಣಿಗೆ […]