ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಸುಮಿತ್ರಾ ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಗೌಡ

Monday, June 29th, 2015
panjikallu ZP

ಬಂಟ್ವಾಳ: ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಯೋಗೀಶ್ ಕುಲಾಲ್ ಕೈಲಾರು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ, ಆಡಳಿತಾಧಿಕಾರಿಗಳು, 16 ಸದಸ್ಯರು ಹಾಗೂ ಮೂಡುನಡುಗೋಡು ಗ್ರಾಮದ ಅಧ್ಯಕ್ಷ ಹರೀಶ್ ಗಟ್ಟಿ, ಕಾರ್ಯದಶರ್ಿ ಸಂತೋಷ್ ಕುಮಾರ್, ಪ್ರಮುಖರಾದ ದಿನೇಶ್ ಭಂಡಾರಿ, ಕರುಣೇಂದ್ರ ಪೂಜಾರಿ, ಪ್ರಕಾಶ್ ಅಂಚನ್, ಮೋಹನ್ದಾಸ್ ಪಂಜಿಕಲ್ಲು, ಪ್ರವೀಣ. ಡಿ, ಹರೀಶ್ ಕುಲಾಲ್, ಲೋಕನಾಥ ಪೂಜಾರಿ, ಯೋಗೀಶ್ ಕುಲಾಲ್, ನಾಗೇಶ್ ಕುಜಿಲಬೆಟ್ಟು, ಕೆ.ಎನ್. ಶೇಖರ್, […]

ದಕ್ಷಿಣ ವಲಯ ಕಾಂಗ್ರೆಸ್ ಸಮಿತಿಯ ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ

Monday, June 29th, 2015
lober

ಮಂಗಳೂರು : ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಹಾಗು 48 ನೇ ಮತ್ತು 49 ನೇ ಕಾಂಗ್ರೆಸ್ ವಾರ್ಡ್ ಸಮಿತಿಯ ಸಹಯೋಗದೊಂದಿಗೆ ಕಪಿತಾನಿಯೊ ಶಾಲೆಯಲ್ಲಿ ಭಾನುವಾರ ನಡೆದ ಮೂರನೆ ಉಚಿತ ವೈದ್ಯಕೀಯ ಶಿಬಿರದಲ್ಲಿ ಎರಡು ವಾರ್ಡಿನಿಂದ ಸುಮಾರು 400ಕ್ಕು ಮಿಕ್ಕಿ ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದರು. ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶಾಸಕರು, ಜನ ಸೇವೆಯ ಮೂಲಕ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡಿನಲ್ಲಿ ಇಂತಹ ಹಲವರು […]

ಒಂದು ಕೋಟಿ ಸಾಲ ತೀರಿಸದ ಪೂಜಾ ಗಾಂಧಿ, ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

Saturday, June 27th, 2015
pooja Gandhi

ಬೆಂಗಳೂರು : ನಟಿ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ಸಾಲ ತೀರಿಸದ ಆರೋಪ ಕೇಳಿಬಂದಿದೆ. ‘ಅಭಿನೇತ್ರಿ’ ಚಿತ್ರದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ, ಆ ಸಿನಿಮಾ ಕಂಪ್ಲೀಟ್ ಮಾಡುವುದಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಆಕೆಯ ತಂದೆ ಪವನ್ ಗಾಂಧಿ, ಡಾ.ಸುನೀಲ್ ಶರ್ಮಾ ಅವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು. ‘ ಅಭಿನೇತ್ರಿ’ ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಿ ಬಂದ ಹಣದಲ್ಲಿ ಸಾಲ ತೀರಿಸುವುದಾಗಿ ಹೇಳಿದ್ದ ಪೂಜಾ ಗಾಂಧಿ ಈವರೆಗೂ ಹಣ ಹಿಂದಿರುಗಿಸಿಲ್ಲ […]

ಪ್ರಾಕೃತಿಕ ವಿಕೋಪ : ಸಚಿವ ರೈ ಯವರಿಮದ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ

Saturday, June 27th, 2015
Rai Cheque

ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ 11 ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ.ರೋಡ್ ನ ಕಚೇರಿಯಲ್ಲಿ ಶನಿವಾರ ವಿತರಿಸಿದರು. ಪೆರಾಜೆ ಗ್ರಾಮದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಗಿ ಮೃತಪಟ್ಟ ಆನಂದ ಗೌಡ ರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 1.5 ಲಕ್ಷ ಸೇರಿದಂತೆ ಪ್ರಾಕೃತಿಕ ವಿಕೋಪದ ಹಾನಿಗೆ ಸಂಭವಿಸಿ ಪೆರಾಜೆ, […]

ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ

Friday, June 26th, 2015
Malekudiya

ಮಂಗಳೂರು : ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಲೆಕುಡಿಯ ಜನಾಂಗದವರ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 4 ಹಾಗೂ ಉಳಿದ ತಾಲೂಕುಗಳಲ್ಲಿ ತಲಾ ಒಂದೊಂದು ಮಲೆಕುಡಿಯ ಜನಾಂಗದವರು […]

ಲೋಕ ಕಲ್ಯಾಣಾರ್ಥ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸೀಯಾಳಾಭಿಷೇಕ

Tuesday, June 23rd, 2015
Siyala

ಮಂಗಳೂರು : ಶ್ರೀ ಕ್ಷೇತ್ರಕದ್ರಿಯ ಮಂಜುನಾಥ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೀಯಾಳಾಭಿಷೇಕ ನಡೆಸಲಾಯ್ತು. ಶ್ರೀ ಎ.ಜೆ. ಶೆಟ್ಟಿ ನೇತೃತ್ವದಲ್ಲಿ ಹಾಗೂ ಎಸ್. ಪ್ರದೀಪಕುಮಾರಕಲ್ಕೂರ ಮಾರ್ಗದರ್ಶನದಲ್ಲಿ ಭಕ್ತಾದಿಗಳು ಸಮರ್ಪಿಸಿದ ಸಾವಿರಾರು ಎಳನೀರುಗಳಿಂದ ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯಐವನ್‌ಡಸೋಜಾ, ಕರ್ನಾಟಕ ಮುಜರಾಯಿಇಲಾಖೆಯರಾಜ್ಯ ಸದಸ್ಯರುಗಳಾದ ಜಗನ್ನಿವಾಸರಾವ್ ಪುತ್ತೂರು ಹಾಗೂ ಪದ್ಮನಾಭಕೋಟ್ಯಾನ್‌ ಅಲ್ಲದೆ ಕಾರ್ಪೊರೇಟರ್‌ಗಳಾದ ಅಶೋಕ್‌ಡಿ.ಕೆ., ಶಶಿಧರ ಹೆಗ್ಡೆ ಮತ್ತುಉದ್ಯಮಿರತ್ನಾಕರಜೈನ್, ಸುಂದರ ಶೆಟ್ಟಿ, ತುಳು ಸಾಹಿತ್ಯಅಕಾಡೆಮಿ ಸದಸ್ಯರಾದ ಮೋಹನ ಕೊಪ್ಪಳ, ದಿನೇಶ್‌ದೇವಾಡಿಗ, ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ. […]

ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ಗೆ ಪ್ರಶಸ್ತಿ

Tuesday, June 23rd, 2015
Rotract club

ಪುತ್ತೂರು : ರೋಟರ‍್ಯಾಕ್ಟ್ ಸಂಸ್ಥೆಯ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ಮಂಗಳೂರು ರೋಟರ‍್ಯಾಕ್ಟ್ ಕ್ಲಬ್ ಸಿಟಿ ಸಂಸ್ಥೆ ಆಶ್ರಯದಲ್ಲಿ ಭಾನುವಾರ ನಗರದ ಹೋಟೆಲ್ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ಜರಗಿದ ರೋ! ಶಾಂತರಾಮ್ ವಾಮಂಜೂರು ಸ್ಮಾರಕ ರೋಟರ‍್ಯಾಕ್ಟ್ ಜಿಲ್ಲಾ 3180ರ ಅಂತರ್ ರೋಟರ‍್ಯಾಕ್ಟ್ ಕ್ಲಬ್ ರಸಪ್ರಶ್ನೆ ಸ್ಪರ್ಧಾ ಕೂಟದಲ್ಲಿ ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರಾದ ರೋ! ರಜಕ್ ಪ್ರಥಮ ಸ್ಥಾನ ಪಡೆದು ಪ್ರತಿಷ್ಟಿತ ರೋಟರ‍್ಯಾಕ್ಟ್ ಪ್ರಶಸ್ತಿ ಪುರಸ್ಕೃತರಾದರು. ಸುಭ್ರಮಣ್ಯ ರೋಟರ‍್ಯಾಕ್ಟ್ ಕ್ಲಬ್ ಸಂಸ್ಥೆಯ ಸದಸ್ಯರಾದ ರೋ! ಗಣೇಶ್ ದ್ವಿತೀಯ […]

ಬಂಟ್ವಾಳ: ಶಾಲೆಗೆ ಹೋದವಳು ಮನೆಗೆ ಬಾರದೆ ನಾಪತ್ತೆ

Tuesday, June 23rd, 2015
Ayesha

ಬಂಟ್ವಾಳ: ಶಾಲೆಗೆ ಹೋದ ಮಾರಿಪಳ್ಳದ ವಿದ್ಯಾರ್ಥಿನಿಯೊರ್ವಳು ಕಾಣೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಸಹದುದ್ದಿನ್ ಅವರ ತಂಗಿ ಆಯಿಷಾ 18 ಕಾಣೆಯಾಗಿರುವ ವಿದ್ಯಾರ್ಥಿ. ಮಂಗಳೂರು ಪಳ್ನೀರ್‌ನಲ್ಲಿ ಹಿದಾಯತ್ ಪೌಂಡೇಸನ್‌ನ ಅರೇಬಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಳು. ಜೂನ್ 20 ರಂದು 8 ಗಂಟೆಗೆ ಮನೆಯಿಂದ ಶಾಲೆಗೆ ಹೋದವಳು ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಆಯಿಷಾಳ ಚಿಕ್ಕಪ್ಪ ಪೋನ್ ಮಾಡಿದಾಗ ಮನೆಗೆ ಬರುತ್ತಿದ್ದೇನೆ ಎಮದು ಹೇಳಿದವಳು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು […]

ವಿಶ್ವಯೋಗ ದಿನದ ಪ್ರಯುಕ್ತ ನಲ್ಕೆಮಾರು ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Monday, June 22nd, 2015
World Yoga Day

ಬಂಟ್ವಾಳ : ತಾಲೂಕು ಮೂಡುನಡುಗೋಡು ಗ್ರಾಮ, ಕರೆಂಕಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಅಮ್ಟಾಡಿ ಯುವಕ ಮಂಡಲದ ಸಹಕಾರದಲ್ಲಿ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಈ ತಿಂಗಳ ಕಾರ್ಯಕ್ರಮವು ಅಮ್ಟಾಡಿ ಗ್ರಾಮದ ನಲ್ಕೆಮಾರು ಶಾಲೆಯಲ್ಲಿ ನಡೆಯಿತು. ಶಾಲೆಯಲ್ಲಿ ಮೇಜು, ಬೆಂಚು, ಬಾಗಿಲಿನ ದುರಸ್ತಿ , ಮಕ್ಕಳಿಗೆ ಕೈ ತೊಳೆಯಲು ನಳ್ಳಿಗಳ ವ್ಯವಸ್ಥೆ , ತರಕಾರಿ ಮತ್ತು ಇತರ ಸಸಿಗಳನ್ನು ನೆಟ್ಟು ಶಾಲಾ ಕೃಷಿಗೆ ಅಭಿವೃದ್ಧಿ , ಶಾಲಾ ಸುತ್ತಮುತ್ತಲು ಸ್ವಚ್ಛತೆ , ಬಯಲು ರಂಗಮಂದಿರದ […]

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಏಕಾಹ ಭಜನೆ

Saturday, June 20th, 2015
Billawara Bhajane

ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಇಂದಿಲ್ಲಿ ನಿರಂತರ 24 ತಾಸುಗಳ ಭಜನಾ ಕಾರ್ಯಕ್ರಮವನ್ನು ಸಾಂತಕ್ರೂಜ್ ಪೂರ್ವದ ಅಸೋಸಿಯೇಶನ್ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸನ್ನಿಧಿಯಲ್ಲಿ ನಡೆಸಿತು. ಇಂದಿಲ್ಲಿ ಶನಿವಾರ ಮುಂಜಾನೆ ಸುರ್ಯೋದಯದ 6.04 ರ ವೇಳೆಗೆ ಏಕಾಹ ಭಜನಾ ಕಾರ್ಯಕ್ರಮಕ್ಕೆ ಸಮಾಜ ಸೇವಕ ವಾಮನ ಪೂಜಾರಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಶ್ರೀ ಧನಂಜಯ ಶಾಂತಿ ಉಳ್ಳೂರು ಮತ್ತು ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ […]