ಚಿತ್ರ ವಿಮರ್ಶೆ : ‘ಒರಿಯನ್ ತೂಂಡ ಒರಿಯಗಾಪುಜಿ’

Saturday, May 16th, 2015
oriyan thoonda oriyagapuji

ಮಂಗಳೂರು : ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಕ್ಷೈಮಾಕ್ಸ್. ಪ್ರೇಕ್ಷಕ ಈ ಕೊಲೆ ಯಾಕಾಯಿತಪ್ಪಾ ಎಂದು ಯೋಚಿಸುವಷ್ಟರಲ್ಲಿ ನಿಮಗೆ ಕಾಮಿಡಿಗಳ ವರಸೆ ತುಸು ರಿಲ್ಯಾಕ್ಸ್ ಮಾಡಿಬಿಡುತ್ತದೆ. ‘ಒರಿಯನ್ ತೂಂಡ ಒರಿಯಗಾಪುಜಿ’ ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಮೂಡಿ ಬಂದ ಮೊದಲ ತುಳು ಚಲನಚಿತ್ರ. ಕಥೆ-ಚಿತ್ರಕಥೆ-ಸಾಹಿತ್ಯ-ಗೀತಾರಚನೆ-ರಾಗ ಸಂಯೋಜನೆಯನ್ನು ಎ.ಗಂಗಾಧರ ಶೆಟ್ಟಿ ಅಳಕೆ […]

ಖಂಡಿಗೆ : ಪಾವಂಜೆ ನಂದಿನಿ ಸುದೆಟ್ ಮೀನ್ ಪತ್ತುನ ಸಾಮೂಹಿಕ ಜಾತ್ರೆ

Saturday, May 16th, 2015
kandevu Fish festival

ಮಂಗಳೂರು : ಸುರತ್ಕಲ್ ಸಮೀಪದ ಚೆಳೈರುವಿನ ಖಂಡಿಗೆ ಜಾತ್ರೆಯಲ್ಲಿ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಸಾಮೂಹಿಕ ಜಾತ್ರೆಯು ಶುಕ್ರವಾರ ಮೇ 15 ರಂದು ನಡೆಯಿತು. ಈ ಸಂಪ್ರದಾಯ ಶಾಸ್ತ್ರೋಕ್ತವಾಗಿ ನೆರವೇರಿದ್ದು ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು. ಚೇಳೈರು ಗ್ರಾಮದ ಧರ್ಮರಸು ಕ್ಷೇತ್ರದ ಖಂಡೇವು ನೇಮೋತ್ಸವದ ಮುಕ್ತಾಯದ ಹಂತವಾಗಿ, ಈ ಸಂಪ್ರದಾಯ ನಡೆ ದಿದ್ದು, ವಿಶೇಷ ಪ್ರಾರ್ಥನೆಯೊಂದಿಗೆ ಪ್ರಸಾದವನ್ನು ಪಾವಂಜೆ ನಂದಿನಿ ನದಿಗೆ ಹಾಕಿ ಕದೋನಿ ಬಿಟ್ಟ ಬಳಿಕ ನಂದಿನಿ ನದಿಯಲ್ಲಿ ಮೀನು ಹಿಡಿಯಬಹುದು. ಮುಂಜಾನೆಯಿಂದ […]

ಮಂಗಳೂರು ಮತ್ತು ಉಡುಪಿಯಲ್ಲಿ ‘ಒರಿಯನ್ ತೂಂಡ ಒರಿಯಗಾಪುಜಿ’ ಏಕಕಾಲದಲ್ಲಿ ತುಳು ಚಲನಚಿತ್ರದ ಬಿಡುಗಡೆ

Saturday, May 16th, 2015
Oriyan Thoond Oriyagapuji

ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು. ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ತುಳು ಭಾಷೆಯೆನ್ನುವುದು ನಮ್ಮ ಮಾತೃ ಭಾಷೆ, ತುಳು ಸಂಸ್ಕೃತಿ ಎನ್ನುವುದು ನಮ್ಮ ಮನೆ ಇದ್ದ ಹಾಗೆ. ಅದನ್ನು ಉಳಿಸಲು ನಿರ್ಮಾಪಕರು ‘ಒರಿಯನ್ ತೂಂಡ ಒರಿಯಗಾಪುಜಿ ತುಳು ಚಲನಚಿತ್ರದ ಮೂಲಕ ಪ್ರಯತ್ನ […]

ಗೋಳ್ತಮಜಲು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

Saturday, May 16th, 2015
jcb

ಮಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕದಲ್ಲಿ ನಾಗರೀಕರು ಚರಂಡಿ ಸ್ವಚ್ಛಗೊಳಿಸಲು ಬಂದ ಜೆಸಿಬಿಯ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಡೆದ ಘಟನೆ ನಡೆದಿದೆ. ನಾಗರೀಕರು 5 ವರ್ಷಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿ ಚರಂಡಿ ಸ್ವಚ್ಛಗೊಳಿಸಲು ಆಗ್ರಹಿಸಿದ್ದರೂ ಸ್ಪಂದಿಸದೆ ಇದೀಗ ಚುನಾವಣಾ ಅಧಿಸೂಚನೆ ಪ್ರಕಟವಾದ ನಂತರ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿರುವ ಗ್ರಾಮ ಪಂಚಾಯತ್ ನಡೆಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಚುನಾವಣಾ ನೀತಿ […]

‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರ ಮಂಗಳೂರು ಮತ್ತು ಉಡುಪಿಯಲ್ಲಿ ಮೇ 15ರಂದು ಬಿಡುಗಡೆ

Thursday, May 14th, 2015
oriyan thoonda oriyagapuji

ಮಂಗಳೂರು :‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆಸಮಾರಂಭದ ಪತ್ರಿಕಾಗೋಷ್ಟಿಯು ಇಂದು( ಗುರುವಾರ ಮೇ14) ಮಂಗಳೂರಿನ ಮೋತಿಮಹಲ್ ಹೊಟೇಲಿನಲ್ಲಿ ನಡೆಯಿತು. ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಚಲನಚಿತ್ರದ ನಿರ್ಮಾಪಕ ಬಿ.ಅಶೋಕ್ ಕುಮಾರ್, ಎ. ಗಂಗಾಧರಶೆಟ್ಟಿ, ನಿರ್ದೇಶಕ ಹ.ಸೂ ರಾಜಶೇಖರ್, ನಾಯಕ ನಟ ಅರ್ಜುನ್ ಕಾಪಿಕಾಡ್ ಮಾತನಾಡಿದರು. ಚಿತ್ರವು ಮೊದಲ ಹಂತದಲ್ಲಿ ಮಂಗಳೂರು ಮತ್ತು ಉಡುಪಿಯ ಐದು ಚಿತ್ರಮಂದಿರಗಳಲ್ಲಿ ಮೇ 15ರಂದು ಬಿಡುಗಡೆಯಾಗಲಿದೆ. ಮಂಗಳೂರಿನಲ್ಲಿ ಸೆಂಟ್ರಲ್ ಟಾಕೀಸ್, ಬಿಗ್ ಸಿನೆಮಾ, ಸಿನಿ ಪಾಲಿಸ್, ಪಿ.ವಿ.ಆರ್. ಹಾಗೂ ಉಡುಪಿಯ ಆಶೀರ್ವಾದ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು […]

ಹಿಂದೂ ದೇವಸ್ಥಾನಗಳಲ್ಲಿನ ಭಕ್ತರ ಬಂಗಾರ ಸರಕಾರ ಮುಟ್ಟಬಾರದು

Monday, May 11th, 2015
Sanatana

ಮಂಗಳೂರು: ಹಿಂದೂ ದೇವಸ್ಥಾನಗಳಲ್ಲಿನ ಬಂಗಾರ ಬ್ಯಾಂಕ್‌ಗಳಲ್ಲಿಡುವ ಹಾಗೂ ಯೋಗದಿಂದ ಓಂ ತೆಗೆಯುವ ಸರಕಾರದ ಪ್ರಸ್ತಾಪ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು. ಸನಾತನ ಸಂಸ್ಥೆಯ ಸಂಗೀತಾ ಪ್ರಭು ಮಾತನಾಡಿ, ಸರಕಾರ ದೇವಸ್ಥಾನಗಳ ಬಂಗಾರವನ್ನು ಬ್ಯಾಂಕ್‌ಗಳಲ್ಲಿಡುವ ಪ್ರಸ್ತಾವ ಕೈಬಿಡಬೇಕು ಎಂದರು. ರಾಷ್ಟ್ರೀಯ ಹಿಂದೂ ಆಂದೋಲನದ ವಿವೇಕ ಪೈ ಮಾತನಾಡಿ, ದೇವಸ್ಥಾನಗಳಲ್ಲಿನ ಧನವನ್ನು ಭಕ್ತರು ಧರ್ಮಕಾರ್ಯಕ್ಕಾಗಿ ನೀಡಿರುತ್ತಾರೆ. ಇದರ ಬಳಕೆ ಅಭಿವೃದ್ಧಿಗೆ ಅಲ್ಲ, ಹಿಂದೂ ಧರ್ಮದ ಪ್ರಸಾರಕ್ಕೆ. ಸರಕಾರ ದೇವಸ್ಥಾನಗಳಲ್ಲಿನ ಬಂಗಾರ ತೆಗೆದುಕೊಳ್ಳಲು ನಿರ್ಧರಿಸಿದಲ್ಲಿ […]

ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ

Saturday, May 9th, 2015
choudeshwari

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಶುಕ್ರವಾರ ಮಂಗಳದೇವಿ ಮಂಕಿ ಸ್ಟಾಂಡ್‌ನಲ್ಲಿರುವ ಶ್ರಿ ರಾಮಲಿಂಗ ಚೌಡೇಶ್ವರಿದೇವಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಭಕ್ತಾದಿಗಳು ಸೇವೆಸಲ್ಲಿಸುವ ಈ ಕ್ಷೇತ್ರದಲ್ಲಿ ಸಮುದಾಯ ಭವನದ ಆಗತ್ಯತೆಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿ, ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಶೀಘ್ರದಲ್ಲಿ ನೀಡುವ ಭರವಸೆ ವ್ಯಕ್ತಪಡಿಸಿದರು.

ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ

Wednesday, May 6th, 2015
Zp Rally

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ಸ್ವಚ್ಛಭಾರತ್ ಅಭಿಯಾನದಡಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗ್ರಾಮ ಪಂಚಾಯತ್‌ಗಳಲ್ಲಿ ನಡೆಸುವ […]

ಅಬಕಾರಿ ತೆರಿಗೆ : ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿ

Tuesday, May 5th, 2015
excise revenue

ಮಂಗಳೂರು : 2014-15 ಸಾಲಿನ ಅಬಕಾರಿ ಸಂಗ್ರಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು ಸಮಾರು 1388 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಜಾರ್ಜ್ ಪಿಂಟೋ ಮಾಹಿತಿ ನೀಡಿದರು. 2014-15 ರ ಸಾಲಿಗೆ 28,50,000 ಮದ್ಯದ ಪೆಟ್ಟಿಗೆಯನ್ನು ಮಧ್ಯ ಮಾರಾಟದ ಗುರಿಯನ್ನು ನಿಗದಿಪಡಿಸಲಾಗಿದ್ದು, ಶೇಕಡಾ 90.53 ಸಾಧನೆ ಮಾಡಲಾಗಿದ್ದು, ಈ ಮೂಲಕ ಸುಮಾರು 973 ಕೋಟಿ ರೂಪಾಯಿಗಳ ಸಂಗ್ರಹಿಸಲಾಗಿದೆ ಎಂದು ಜಾರ್ಜ್ ಮಂಗಳವಾರ ನಡೆದ ಪತ್ರಿಕಾಗೋಷ್ಟಿ ಯಲ್ಲಿ ವಿವರಣೆ ನೀಡಿದ್ದಾರೆ. […]

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಂಕಿಯೊಂದಿಗೆ ಆಟ (ತೂಟೆದಾರ ಸೇವೆ)

Wednesday, April 22nd, 2015
kateelu tutedara

ಕಟೀಲು : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಕೊನೆಯದಿನ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯುತ್ತದೆ. ತೂಟೆ ಎಂದರೆ ತೆಂಗಿನ ಗರಿಗಳಿಂದ ಮಾಡಿದ ಕಟ್ಟು. ಅದನ್ನು ಉರಿಸಿ ಒಬ್ಬರ ಮೇಲೊಬ್ಬರು ಎಸೆಯುವುದು ಇದಕ್ಕೆ ತೂಟೆದಾರ ಎನ್ನುತ್ತಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುವುದು ತಲ ತಲಾಂತರದಿಂದ ನಡೆದು ಬಂದ ಪದ್ದತಿ. ಅಜಾರು ಸಮೀಪದ ಜಲಕದ ಕಟ್ಟೆಯಲ್ಲಿ ಸ್ಥಾನ ಮುಗಿಸಿ ಬಂದು ಅಜಾರಿನಲ್ಲಿ […]