ಬಂಗಲೆಗಳಲ್ಲಿ ಆಳಾಗಿ ದುಡಿಯುವ ಬಂಗಾರದ ಪದಕ ವಿಜೇತೆ

Tuesday, April 7th, 2015
Rishu Mittal

ಖೈಥಾಲ್ : ಬಾಕ್ಸಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಚಿನ್ನದ ಪದಕ ವಿಜೇತೆ ರಿಶು ಮಿತ್ತಲ್ ತನ್ನ ಶಾಲೆಯ ಶುಲ್ಕ ಭರಿಸಲಾಗದೇ ಮನೆಗೆಲಕ್ಕೆ ಹೋಗುತ್ತಿದ್ದಾಳೆ ಎಂಬ ಕರಾಳ ಸತ್ಯ ಬೆಳಕಿಗೆ ಬಂದಿದೆ. 2014ರಲ್ಲಿ ನಡೆದ ಹರಿಯಾಣ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯ 46 ಕೆಜಿ ವಿಭಾಗದಲ್ಲಿ ಆಕೆ ಬಂಗಾರದ ಪದಕವನ್ನು ಗಳಿಸಿದ್ದಳು ಮತ್ತು ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ವಾಲಿಯರ್‌ನಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ ಹರಿಯಾಣಾವನ್ನು ಪ್ರತಿನಿಧಿಸಿದ್ದಳು. 2012 ಮತ್ತು 2013ರಲ್ಲಿ ಕ್ರಮವಾಗಿ ಭಿವಾನಿ ಮತ್ತು ಫರಿದಾಬಾದ್‌ನಲ್ಲಿ ಆಕೆ ಕಂಚಿನ ಪದಕಗಳನ್ನು […]

ಪತ್ರಕರ್ತರು ಮನುಷ್ಯ ಪಂಥಿಯನಾಗಿರಬೇಕು : ವಿ.ಗ. ನಾಯಕ್

Tuesday, April 7th, 2015
Pago15

ಮಂಗಳೂರು : ಕಳೆದ (2015 ನೇ) ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕ ದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಕನ್ನಡದ ಹಿರಿಯ ಸಾಹಿತಿ, ವಿ.ಗ. ನಾಯಕ್, ಪತ್ರಕರ್ತರು ಎಲ್ಲವೂ ಸುಧಾರಣೆಯಾಗಬೇಕು ಎನ್ನುವ ಕಾಳಜಿ ಇರುವವರು. ಸಾಹಿತಿಗಳಂತೆ ಪತ್ರಕರ್ತರು ಧಿಮಾಕು ಹೊಂದಿದವರಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಯಾವುದೇ ತತ್ವ ಸಿದ್ಧಾಂತಗಳಿಗೆ […]

ಕೊಂಕ್ಣಿ ಶಿಕ್ಷಕರ ವಾರ್ಷಿಕ ಸಮಾವೇಶ

Tuesday, April 7th, 2015
Jecinta

ಮಂಗಳೂರು : “ನಾವು ಕೊಂಕಣಿಗರು. ನಮ್ಮ ಮಾತೃಭಾಷೆ ಕೊಂಕಣಿಯನ್ನು ಮಾತನಾಡಲು, ಬರೆಯಲು ಹಿಂಜರಿಯಬಾರದು. ಜಾತಿ ಗಣತಿಯಲ್ಲಿ ಭಾಷೆಯ ಬಗ್ಗೆ ಕೊಂಕಣಿಯನ್ನೇ ಉಲ್ಲೇಖಿಸಬೇಕು.” ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜೆಸಿಂತ ಆಲ್ಪ್ರೆಡ್ ಹೇಳಿದರು. ಇವರು ನಗರದ ಸಿಒಡಿಪಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಂಡ್ ಸೊಭಾಣ್ ಪ್ರಾಯೋಜಿತ ‘ದಿ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ ಶ್ರೇಷ್ಟ ಕೊಂಕಣಿ […]

ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ನವತಿ ಸಂಭ್ರಮ

Tuesday, April 7th, 2015
Navati

ಹರಿದ್ವಾರ: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ 90ನೇ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಪೂರ್ವಾಹ್ನ ಇಲ್ಲಿನ ವ್ಯಾಸಾಶ್ರಮದ ವ್ಯಾಸಮಂದಿರದ ಸನ್ನಿಧಿಯಲ್ಲಿ ವಿಶೇಷ ಸಂಭ್ರಮಾಚರಣೆ ನಡೆಯಿತು. ಸಂಸ್ಥಾನದ ಪ್ರಧಾನ ಶ್ರೀ ವ್ಯಾಸದೇವರಿಗೆ ಮುಂಜಾನೆ ಶ್ರೀ ಕಾಶೀಮಠದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಪಂಚಾಮೃತ, ಪವಮಾನಾಭಿಷೇಕ ನಡೆಯಿತು. ಶ್ರೀಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಿರಿಯ ಶ್ರೀಗಳವರ ಉಪಸ್ಥಿತಿಯಲ್ಲಿ ಸಂಸ್ಥಾನದ ಪಟ್ಟದ ದೇವರುಗಳಿಗೆ ಮಹಾಪೂಜೆಯ ಮಹಾಮಂಗಲಾರತಿ ಬೆಳಗಿದರು. ನವತಿ ನಮನ: ಶ್ರೀಗಳವರ ನವತಿಮಹೋತ್ಸವದ ಅಂಗವಾಗಿ […]

‘ಧ್ವನಿ’ ಲಿಂಗತ್ವ ಅಲ್ಪಸಂಖ್ಯಾತರ ಜಾಗ್ರತಿ ಕಾರ್ಯಕ್ರಮ

Tuesday, April 7th, 2015
dhwani

ಮಂಗಳೂರು: ಲೈ೦ಗಿಕ ಅತ್ಯಾಚಾರ,ತಾರತಮ್ಯದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ನೈತಿಕ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ0ತ ಅಲೋಶಿಯಸ್ ಕಾಲೇಜಿನ ಸ0ವಹನ ಮತ್ತು ಮಾಧ್ಯಮ ವಿಭಾಗದ ವಿಧ್ಯಾರ್ಥಿಗಳು,’ಅರಿವು’ ಯುವಕೇ0ದ್ರ ಬಾ0ಟ್ವಾಳ ಇವರ ಸಹಯೋಗದೊ0ದಿಗೆ ಸೊಮವಾರ ದಿನಾ0ಕ 06,ಎಪ್ರಿಲ್ 2015 ರಂದು ಮಧ್ಯಾನ್ಹ 3.30 ಕ್ಕೆ ‘ಧ್ವನಿ’ ಎ0ಬ ಲಿ0ಗತ್ವ ಅಲ್ಪಸ0ಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಕಾಲೀಜಿನ ಎರಿಕ್ ಮಾತಾಯಿಸ್ ಸಭಾ0ಗಣದಲ್ಲಿ ಹಮ್ಮಿಕೊ೦ಡಿದ್ದರು. ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಶ್ರೀ.ನಾದಮಣಿ […]

ದೇಶದಲ್ಲೇ ಕರ್ನಾಟಕ ಅರ್.ಟಿ.ಸಿ. ನೀಡಿಕೆಯಲ್ಲಿ ಮಾದರಿಯಾಗಿದೆ-ವಿ.ಶ್ರೀನಿವಾಸಪ್ರಸಾದ್

Monday, April 6th, 2015
belthangadi

ಮಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾದರೂ ಇನ್ನೂ ನಮ್ಮ ರೈತರಿಗೆ ತಮ್ಮ ಜಮೀನುಗಳ ಪಹಣಿ (ಆರ್.ಟಿ.ಸಿ.) ಸಮರ್ಪಕವಾಗಿ ಸಿಕ್ಕಿಲ್ಲ, ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕಂದಾಯ ಅದಾಲತ್‌ಗಳನ್ನು ಮಾಡುವ ಮೂಲಕ ರೈತರ ಮನೆಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದ್ದಾರೆ. ಅವರು ಇಂದು ಬೆಳ್ತಂಗಡಿಯಲ್ಲಿ ರೂ.10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪುಟಾಣಿಗಳಿಂದ ಮಹಾವೀರ ಜಯಂತಿ ಆಚರಣೆ

Friday, April 3rd, 2015
Mahaveera Jayanti

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬದವರ ಮಾರ್ಗದರ್ಶನದಂತೆ, ಮಹಾವೀರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ತೀರ್ಥಂಕರರ ಮೂರ್ತಿಯ ಮೆರವಣಿಗೆ ನಂತರ ಅಷ್ಟದ್ರವ್ಯಗಳಿಂದ ಅಭಿಷೇಕ, ಅಷ್ಟವಿಧಾರ್ಚನೆ ಪೂಜೆ ನಡೆದವು. ಸ್ಥಳೀಯ ಮಕ್ಕಳಿಂದ ವಿವಿಧ ಕಾರ‍್ಯಕ್ರಮಗಳು ನಡೆದವು ಕುಮಾರಿ ಲಾವಣ್ಯ, ವಜ್ರಶ್ರೀ, ಸಂಚಿತ ಹಾಡಿದ ಮಹಾವೀರ ಅಷ್ಟಕಕ್ಕೆ ಮಾ. ದರ್ಶನ್ ಹಾಗೂ ಕು. ಪ್ರಾಪ್ತಿ ಕನ್ನಡ ಅರ್ಥಾನುವಾದ ಹೇಳಿದರು, ಕುಮಾರಿ ಸೌಖ್ಯಳಿಂದ ಮಹಾವೀರರ ಬಾಲ್ಯ ಹಾಗೂ ಜೀವನ […]

ಹೆಚ್.ಬಿ.ಎಲ್‌ರಾಯರಿಗೆ ಕಲ್ಕೂರ ಪ್ರಶಸ್ತಿ

Thursday, April 2nd, 2015
HBL

ಮಂಗಳೂರು : ಯಕ್ಷಗಾನ ಸಂಘ, ಸಾಹಿತ್ಯ ಸಂಘ, ಬಿ.ಎಸ್.ಕೆ ಅಸೋಶಿಯೇಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಸಂಘಟನೆ ಇತ್ಯಾದಿ ಹಲವು ಮಜಲುಗಳಲ್ಲಿ ಕಳೆದ ಆರು ದಶಕಗಳಿಂದ ಮುಂಬಯಿ ಮತ್ತು ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸೇವೆ ಸಲ್ಲಿಸುತಾ ಜನಾನುರಾಗಿ ಸರ್ವರಿಗೂ ಮಾನ್ಯರಾದಕರ್ಮಯೋಗಿ ಎಚ್.ಬಿ.ಎಲ್. ರಾಯರಿಗೆ 80 ರ ಹರೆಯದ ಸಂಭ್ರಮಾಚರಣೆಯ ಶುಭಾವಸರದಲ್ಲಿ ಕಲ್ಕೂರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎ.5, ಭಾನುವಾರ ಮುಂಬೈಯಮಾಟುಂಗದಲ್ಲಿಜರಗಲಿರುವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಹಿರಿಯ ಸಾಹಿತಿಡಾ. ವ್ಯಾಸರಾವ್ ನಿಂಜೂರುಪ್ರಶಸ್ತಿ ಪ್ರದಾನ ಮಾಡಲಿರುವರೆಂದು […]

ಬಂಟ್ವಾಳ: ತಾಯಿ, ಮಗು ಹಾಗು ಯವತಿ ಕಾಣೆ

Thursday, April 2nd, 2015
Bantwal Missing

ಬಂಟ್ವಾಳ: ತಾಯಿ ಮತ್ತು ಮಗು ಮನೆಯಿಂದ ಬುಧವಾರ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್‌ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್ ಅವರ ಹೆಂಡತಿ ಆಯಿಷಾ (22) ಮತ್ತು ಒಂದುವರೆ ವರ್ಷದ ಹೆಣ್ಣು ಮಗು ಹೈಫಾ ಫಾತಿಮಾ ರಾತ್ರಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ಮುಂಜಾನೆ ಎದ್ದು ನೋಡುವಾಗ ತಾಯಿ ಮತ್ತು ಮಗು ಕಾಣೆಯಾಗಿದ್ದಾರೆ ಎಮದು ದೂರಿನಲ್ಲಿ ತಿಳಿಸಲಾಗಿದೆ ಇವರ ಸುಳಿವು ಸಿಕ್ಕಿದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ತಿಳಿಸುವಂತೆ ಕೋರಲಾಗಿದೆ. […]

ಶ್ರೀ ಸಂಜೀವ ಶ್ರೀನಿವಾಸ ರಾವ್ ಕಟೀಲು ನಿಧನ

Thursday, April 2nd, 2015
Sanjeeva Srinivasa

ಮುಂಬಯಿ : ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ ಮುಂಬಯಿ ಪ್ರಾಂತ್ಯದ ಮಾಜಿ ಕಾರ್ಯಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ವೈದ್ಯಕೀಯ ಸಲಹಾಗಾರ ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ತುಳು-ಕನ್ನಡಿಗ ವೈದ್ಯಾಧಿಕಾರಿ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಜನಕ, ಸಂಜೀವನಿ ಟ್ರಸ್ಟ್ ಮುಂಬಯಿ ಇದರ ವಿಶ್ವಸ್ಥ ಕಾರ್ಯಾಧ್ಯಕ್ಷ ಕಟೀಲು ಸಂಜೀವ ರಾವ್ (90.) ಅವರು ಕಳೆದ ಬುಧವಾರ ಸಂಜೆ ತಮ್ಮ ಕಟೀಲು ಅಲ್ಲಿನ ಸ್ವನಿವಾಸದಲ್ಲಿ ನಿಧನರಾದರು. ಕಟೀಲು […]