ಎ.2ರಿಂದ ಉಳ್ಳಾಲ ದರ್ಗಾದಲ್ಲಿ 20ನೇ ಉರೂಸ್‌ ನೇರ್ಚೆ

Thursday, April 2nd, 2015
ullal Uroos

ಉಳ್ಳಾಲ: ಅಸಯ್ಯಿದ್‌ ಮುಹಮ್ಮದ್‌ ಶರೀಫ‌ುಲ್‌ ಮದನಿ (ಖ.ಸಿ.) ತಂಙಳ್‌ ಅವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್‌ ನೇರ್ಚೆ ಕಾರ್ಯಕ್ರಮ ಎ. 2ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್‌ ಉಲಮಾ ವೇದಿಕೆಯಲ್ಲಿ ಜರಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್‌. ಹಂಝ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎ. 2ರಂದು ಪೂರ್ವಾಹ್ನ 11 ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆ ಉಳ್ಳಾಲ ಖಾಝಿ ಅಸ್ಸಯ್ಯದ್‌ ಪಝಲ್‌ ಕೋಯಮ್ಮ ತಂಙಳ್‌ ಅಲ್‌ ಬುಖಾರಿ ನೇತೃತ್ವದಲ್ಲಿ […]

ಬಾಲಕೃಷ್ಣ ಶಿಬಾರ್ಲ ಪ.ಗೋ.ಪ್ರಶಸ್ತಿಗೆ ಆಯ್ಕೆ

Thursday, April 2nd, 2015
Balakrishna Sibarla

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2014 ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ವಿಜಯಕರ್ನಾಟಕ ಪತ್ರಿಕೆಯ ಉಡುಪಿಯ ವರದಿಗಾರ ಬಾಲಕೃಷ್ಣ ಶಿಬಾರ್ಲ ಆಯ್ಕೆಯಾಗಿದ್ದಾರೆ. 2014 ರ ಜುಲೈ 31 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನಕ್ಸಲ್, ಪೊಲೀಸ್ ಮಧ್ಯೆ ನಲುಗಿದವರು ಅವರ ಈ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ 7ರಂದು ಮಂಗಳವಾರ ಬೆಳಗ್ಗೆ 10.45 ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಯು ರೂ.10,001/ […]

ಕೊಂಡೆವೂರಲ್ಲಿ 12 ನೇ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

Wednesday, April 1st, 2015
Kodevooru Bhajane

ಮಂಜೇಶ್ವರ : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 6 ಸೋಮವಾರ ಸೂರ್ಯಾಸ್ತದವರೆಗೆ ನಡೆಯುವ 12 ನೇ ಅಖಂಡ ಭಜನಾ ಸಪ್ತಾಹಕ್ಕೆ ಮಾಣಿಲ ಶ್ರೀ ಧಾಮದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸೂರ್ಯಾಸ್ತಕ್ಕೆ ಸರಿಯಾಗಿ ದೀಪ ಬೆಳಗಿಸಿ ಚಾಲನೆ ನೀಡಿದರು. ಅಲ್ಲದೇ ಪರಮ ಪೂಜ್ಯ ಮಾಣಿಲ ಶ್ರೀಗಳು ಭಜನೆ ಹಾಡುವುದರೊಂದಿಗೆ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಿಲ್ಲೆಯ, ಪರಜಿಲ್ಲೆಯ ಭಕ್ತಾದಿಗಳ ಭಜನಾ ತಂಡಗಳು ಈ ಅಖಂಡ ಭಜನಾ ಸಪ್ತಾಹದಲ್ಲಿ ಪಾಲ್ಗೊಳ್ಳಲಿವೆ […]

‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣ

Wednesday, April 1st, 2015
Human Rights

ಮಂಗಳೂರು: ಅತ್ಯಾಚಾರ,ಅನಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ಮಾನವೀಯ ಮೌಲ್ಯಗಳು ಹಾಗೂ ಮಾನವ ಹಕ್ಕುಗಳನ್ನು ಬಳಸಿಕೊಳ್ಳುವ ರೀತಿ ನೀತಿಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ೦ತ ಅಲೋಶಿಯಸ್ ಕಾಲೇಜಿನ ಮಾಧ್ಯಮ ಮತ್ತು ಸ೦ವಹನ ವಿಭಾಗದ ವಿದ್ಯಾರ್ಥಿಗಳು ‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣವನ್ನು, ಮ೦ಗಳವಾರ ದಿನಾ೦ಕ 31ಮಾರ್ಚ್,2015 ರ೦ದು ಕಾಲೇಜಿನ ಮುಖ್ಯ ಸಭಾ೦ಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಭಾರತೀಯ ಮಾನವ ಹಕ್ಕು ಒಕ್ಕೂಟ (ಸರ್ಕಾರೇತರ ಸ೦ಸ್ಥೆ ) […]

ಪರಿಶಿಷ್ಟರ ಮೇಲೆ 54 ದೌರ್ಜನ್ಯ ಪ್ರಕರಣಗಳು ದಾಖಲು-10.75 ಲಕ್ಷ ಪರಿಹಾರ

Wednesday, April 1st, 2015
DC

ಮಂಗಳೂರು ; ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳವರ ಮೇಲೆ ಜಿಲ್ಲೆಯಲಿ 2014-15ನೇ ಸಾಲಿನಲ್ಲಿ ಒಟ್ಟು 54 ವಿವಿಧ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ.10.75.000/- ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ ಕುಮಾರ್ ಅವರು ತಿಳಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮಂಗಳೂರಿನಲ್ಲಿ 13 ಪ್ರಕರಣಗಳು ದಾಖಲಾಗಿದ್ದು 11 ಪ್ರಕರಣಗಳೆಗೆ ಚಾರ್ಜ್‌ಶೀಟ್ ಆಗಿದೆ, ಬಂಟ್ವಾಳದಲ್ಲಿ 12 ಪ್ರಕರಣ ಇದರಲ್ಲಿ […]

ಶಾಲಾ ಮಕ್ಕಳ ಸುರಕ್ಷತೆಗೆ ಶಾಲಾ ವಾಹನಗಳಿಗೆ ಜಿ.ಪಿ.ಎಸ್.-ಎ.ಬಿ.ಇಬ್ರಾಹಿಂ

Monday, March 30th, 2015
RTA meeting

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತಿರುವ ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ಇತ್ಯಾದಿ ಪ್ರಕರಣಗಳನ್ನು ನಿಯಂತ್ರಿಸುವುದು ಸೇರಿದಂತೆ ಶಾಲಾ ಮಕ್ಕಳ ಹಿತದೃಷ್ಠಿಯಿಂದ ಶಾಲಾ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ನ್ನು ಮುಂದಿನ ಶೈಕ್ಷಣಿಕ ವರ್ಷಾರಂಭದ ಒಳಗಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎಲ್ಲಾ ಶಾಲೆಗಳ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ||ಶರಣಬಸಪ್ಪ […]

ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕ:ವಿಸ್ತರಣೆಗೆ ಒತ್ತಡ : ಸಂಸದ ನಳಿನ್

Monday, March 30th, 2015
Nalin Kumar Kateel

ಮಂಗಳೂರು : ಬಿಪಿಎಲ್ ಕುಟುಂಬಗಳಿಗೆ ಠೇವಣಿ ರಹಿತ ಗ್ಯಾಸ್ ಸಂಪರ್ಕ ನೀಡುವ ವ್ಯವಸ್ಥೆಯನ್ನು ಮುಂದುವರಿಸಲು ತೈಲ ಕಂಪೆನಿಗಳಿಗೆ ಸೂಚಿಸುವುದಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ಯೋಜನೆ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದ್ದು,ಈ ನಿಟ್ಟಿನಲ್ಲಿ ಎಪ್ರಿಲ್ 1 ರ ಬಳಿಕವೂ ವಿಸ್ತರಿಸಲು ಸಂಬಂಧಪಟ್ಟ ತೈಲ ಕಂಪೆನಿಗಳಿಗೆ ತಿಳಿಸುವುದಾಗಿ ಅವರು ಹೇಳಿದರು.ಎಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಧಮೇಂದ್ರ ಪ್ರಧಾನ್ […]

ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಆಟೋ ರಿಕ್ಷಾ ಚಾಲಕರ ದಿನ ಆಚರಣೆ

Monday, March 30th, 2015
Auto drivers day

ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜು ಹಾಗೂ ಅವರ ಪೂರ್ವ ವಿದ್ಯಾರ್ಥಿ ಸಂಘ, ಮಂಗಳೂರಿನಲ್ಲಿ ಆದಿತ್ಯವಾರ, 29 ಮಾರ್ಚ್, 2015 ರಂದು ಆಟೋ ರಿಕ್ಷಾ ಚಾಲಕರ ದಿನವನ್ನು ಕಾಲೇಜಿನ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು 45 ರಿಕ್ಷಾ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಇವರಲ್ಲಿ ಮೂವರು ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು. ಇವರಲ್ಲಿ ಮೋಂತು ಲೋಬೋ ಅವರನ್ನು ಕುಡ್ಲ ಆಟೋ ರಾಜ, ಕೆ. ಮೊಹಮ್ಮದ್ ಅವರನ್ನು ಕುಡ್ಲ ಆಟೋ ಆತ್ಮ ಭಾಂಧವ ಹಾಗೂ ಸುಂದರ್ ಶೆಟ್ಟಿ […]

ಎಪ್ರಿಲ್ 2 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ

Monday, March 30th, 2015
bandavya

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ 2ರಂದು ಗುರುವಾರ ಸಂಜೆ 3.೦೦ ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ ಜರಗಲಿದೆ. ’ಬಾಂಧವ್ಯ’ ಹೆಸರಿನಲ್ಲಿ ಜರಗುವ ಬಹಿರಂಗ ಅಧಿವೇಶನದಲ್ಲಿ, ’ವಿಶ್ವ ಬಂಟರ ಮಾಹಿತಿ ಕೋಶ’ ಮಾಹಿತಿ ಸಂಗ್ರಹಣೆಗೆ ಚಾಲನೆ, ಸಾಧಕರಿಗೆ ಸನ್ಮಾನ, ವಿಕಲ ಚೇತನರಿಗೆ ಸಹಾಯ ಹಸ್ತ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ […]

ನಿವೃತ್ತ ವಿಲೇಜ್‌ ಅಕೌಂಟೆಂಟ್ ವೈ ಸದಾನಂದ ಆಚಾರ್ಯ ನಿಧನ

Monday, March 30th, 2015
Sadananda Acharya

ಮಂಗಳೂರು : ಮೂಲತಃ ಕಾರ್ಕಳ ತಾಲೂಕು ಎಣ್ಣೆಹೊಳೆಯವರಾದ, ಪ್ರಸ್ತುತ ಗುರುಪುರ ಕೈಕಂಬ ನಿವಾಸಿ ವೈ ಸದಾನಂದಆಚಾರ್ಯ (65) ಹೃದಯಾಘಾತದಿಂದ ಮಾ.29ರಂದು ನಿಧನಹೊಂದಿದರು. ವಿಲೇಜ್‌ ಅಕೌಂಟೆಂಟ್ ಆಗಿ ಸೇವಾ ನಿವೃತ್ತಿ ಹೊಂದಿದ್ದಅವರು ಪಡುಪೆರಾರ, ನೀರುಮಾರ್ಗ, ಕಟೀಲು, ಬೆಳ್ತಂಗಡಿ, ಮೂಡಬಿದ್ರಿ, ಬಜ್ಪೆ ಮೊದಲಾದೆಡೆ ಗ್ರಾಮ ಪಂಚಾಯತಿಗಳಲ್ಲಿ ದಕ್ಷತೆಯಿಂದಕಾರ್ಯನಿರ್ವಹಿಸಿದ್ದರು. ಆರಂಭದ ಕೆಲವರ್ಷ ’ನವಭಾರತ’ ಪತ್ರಿಕೆಯಲ್ಲೂ ವೃತ್ತಿಜೀವನ ನಡೆಸಿದ್ದರು. ಸ್ಥಳೀಯ ಹಾಗೂ ಇನ್ನಿತರಸಂಘ ಸಂಸ್ಥೆಗಳಲ್ಲಿ ಸೇವೆಗೈದಿದ್ದಅವರು ಪತ್ನಿ/ ಪುತ್ರ ಹಾಗೂ ಮೂವರು ಪುತ್ರಿಯರನ್ನುಅಗಲಿದ್ದಾರೆ.