ಆಟೋ ದರ : ರಿಕ್ಷಾ ಚಾಲಕರ ಸಂಘದ ಪ್ರತಿಭಟನೆ

Wednesday, February 18th, 2015
Auto Protest

ಮಂಗಳೂರು : ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕನಿಷ್ಟ ಮೀಟರ್ ದರವನ್ನು 20 ರೂಪಾಯಿಗೆ ಇಳಿಸಿರುವ ಜಿಲ್ಲಾಧಿಕಾರಿಗಳ ನಿರ್ಧಾರದಿಂದ ಆಟೋ ಚಾಲಕ ತೊಂದರೆಯಾಗಿದೆ. ಆಟೋ ದರವನ್ನು 20 ರಿಂದ 25 ಕ್ಕೆ ಏರಿಸಬೇಕೆಂದು ಒತ್ತಾಯಿಸಿ ಸಿಐಟಿಯು ನೇತೃತ್ವದ ರಿಕ್ಷಾ ಚಾಲಕರ ಸಂಘ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಗೇಟಿನ ಮುಂಬಾಗ ಪ್ರತಿಭಟನೆ ನಡೆಸಿತು. ತೈಲ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಿದ್ದರೂ ಬಿಡಿ ಭಾಗ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಅಲ್ಲದೆ ಹೋಟೇಲು ಚಾ, ತಿಂಡಿಗಳ ಬೆಲೆಯಲ್ಲಿಯೂ ಇಳಿಮುಖವಾಗಿಲ್ಲ, […]

ಎಲ್ಲೆಡೆ ಭಕ್ತಿ ಸಂಭ್ರಮದ ಮಹಾಶಿವರಾತ್ರಿ ಆಚರಣೆ

Tuesday, February 17th, 2015
Shivaratri

ಮಂಗಳೂರು: ಶಿವರಾತ್ರಿ ಪ್ರಯುಕ್ತ ಶಿವ ದೇವಾಲಯದಲ್ಲಿ ಮಂಗಳವಾರ ಮುಂಜಾನೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಷೇಕ, ಅರ್ಚನೆಗಳನ್ನು ಮಾಡಿದರು. ಮಹಾಶಿವರಾತ್ರಿಯು ಹಿಂದೂ ಕ್ಯಾಲೆಂಡರ್ ಪ್ರಕಾರ ಪಾಲ್ಗುಣ ಮಾಸದ ೧೪ ನೇ ದಿನ ಬರುತ್ತದೆ. ಈ ದಿನ ಭಕ್ತಾಧಿಗಳು ರಾತ್ರಿ ಹಗಲು ಭಕ್ತಿ ಶ್ರಧ್ದೆಯಿಂದ ಶಿವನ ಅರಾಧನೆಯಲ್ಲಿ ತೊಡಗುತ್ತಾರೆ. ಪುರಾಣಗಳಲ್ಲಿ ಮಹಾಶಿವರಾತ್ರಿಯನ್ನು ಶಿವನು ಪಾರ್ವತಿಯನ್ನು ವರಿಸಿದ ಮಹಾದಿನ ಎಂದು ಉಲ್ಲೇಖಿಸಲಾಗಿದೆ. ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಭಕ್ತಾಧಿಗಳು ಉಪಾವಾಸ, ವೃತಗಳಲ್ಲಿ ತೊಡಗಿ ಶಿವನ ಧ್ಯಾನ ಮಾಡುತ್ತಾರೆ. ಮಂಗಳೂರಿನ […]

ಕಟೀಲು ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥ ಸಮರ್ಪಣೆ

Tuesday, February 10th, 2015
Kateel Chariot

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥವನ್ನು ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಹಾಗೂ ಆನುವಂಶಿಕ ಮೊಕ್ತೇಸರರಿಗೆ ರವಿವಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿ, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರ ಮನಸ್ಸು ಶ್ರೀಮಂತವಾಗಿರುವುದರಿಂದ ಇಲ್ಲಿನ ದೇವಾಲಯಗಳೂ ಶ್ರೀಮಂತವಾಗಿವೆ ಎಂದರು. ಭಕ್ತರ ದೇಣಿಗೆಯಿಂದ ಕಟೀಲು ದೇವಿಗೆ ಚಿನ್ನದ ರಥ ಸಮರ್ಪಣೆಯಾಗಿದೆ. ನಮ್ಮ ಮನಸ್ಸು ಕೂಡ ಸ್ವರ್ಣದಂತೆ ಶ್ರೀಮಂತವಾಗಲಿ ಎಂದು ಕೇಂದ್ರ […]

ಪಣಂಬೂರು ಮೀನಕಳೀಯದಲ್ಲಿ ವಿವಾಹಿತೆ ಮಹಿಳೆಯ ಕೊಲೆ

Tuesday, January 13th, 2015
meenakaliya murder

ಮಂಗಳೂರು : ವಿವಾಹಿತೆ ಮಹಿಳೆಯೊಬ್ಬರನ್ನು ಬಚ್ಚಲು ಮನೆಯಲ್ಲಿ ಬರ್ಬರವಾಗಿ ಹತ್ಯೆಮಾಡಲಾಗಿದ್ದು ಮೃತಳನ್ನು ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕೆ ಕಲ್ಪನ(25) ಎಂದು ಗುರುತಿಸಲಾಗಿದೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳೀಯ ಎಂಬಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಪಾಳಿಯಲ್ಲಿ ಗಂಡ ಕೆಲಸಕ್ಕೆ ಹೋಗಿದ್ದು ಮಂಗಳವಾರ ಬೆಳಗ್ಗೆ ಮನೆಗೆ ವಾಪಾಸು ಬಂದಾಗ ಕೊಲೆ ಕೃತ್ಯ ಬಯಲಾಗಿದೆ. ಆಕೆಯ ತಲೆಗೆ ಕಲ್ಲನ್ನು ಎತ್ತಿ ಹಾಕಿ ಈ ಕೃತ್ಯ ನಡೆಸಲಾಗಿದೆ. ರಾಜೇಶ್ ಮತ್ತು ಕಲ್ಪನ ಉತ್ತರ ಪ್ರದೆಶ ಮೂಲದಾವರಾಗಿದ್ದು, ಕೆಲ […]

ಕದ್ರಿ ದೇವಸ್ಥಾನದ ಭಾಗೀರಥಿ ತೀರ್ಥ ವಿನಾಶದ ಅಂಚಿನಲ್ಲಿ

Monday, January 5th, 2015
Kadri Bhagirathi

ಮಂಗಳೂರು : ಇಲ್ಲಿ ಕದ್ರಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಎನ್ನುವುದು ಹೊಸತೂ ಅಲ್ಲ. ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಪುರಾಣ ಕಾಲದಲ್ಲಿ ಕದಳೀಯ ವನದಲ್ಲಿ ದೇವರನ್ನು ಒಲಿಸಲು ಋಷಿ, ಮುನಿಗಳು ಘೋರ ತಪಸ್ಸನ್ನು ಮಾಡಿದ್ದರು, ಅದಕ್ಕಾಗಿ ಕದಿಳೀಯ ವನ ಕಾಲಾಂತರದಲ್ಲಿ ಕದ್ರಿ ಎಂದು ಜನರ ಮಾತಿನಲ್ಲಿ ಹೇಳಲು ಪ್ರಾರಂಭವಾಯಿತು. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ ಎನ್ನುವುದು ಮಂಗಳೂರಿಗೆ ಹೆಮ್ಮೆಯ ಸಂಗತಿ. ಅದಕ್ಕೆ ಅನೇಕ ಸಾಕ್ಷಾಧಾರಗಳು ಇವೆ. ಅದನ್ನು ವಿವರಿಸುವ ಮೊದಲು ನಿಮಗೆ ಗೊತ್ತಿಲ್ಲದೆ ಈ […]

ರವೂಫ್ ನತ್ತ ಪೊಲೀಸ್ ಇಲಾಖೆ ಗಮನಹರಿಸಲಿ…

Saturday, January 3rd, 2015
Traffic Rauf

ಮಂಗಳೂರು : ಯಾರಿಗೆ ಏನು ಆಗಬೇಕು ಎಂದು ಮನಸ್ಸಿರತ್ತೋ ಅದೇ ಆಗುತ್ತಾ ಹೋದರೆ ದೇಶದಲ್ಲಿ ಬಡವ, ಶ್ರೀಮಂತ ಅಥವಾ ವಿದ್ಯಾವಂತ, ಅವಿದ್ಯಾವಂತ, ನಿರುದ್ಯೋಗಿ, ಉದ್ಯೋಗಿ ಎನ್ನುವ ವಿಂಗಡನೆನೆ ಇರುತ್ತಿರಲಿಲ್ಲ. ಆದರೆ ಭಗವಂತನ ಮನಸ್ಸಿನಲ್ಲಿ ಹೇಗೆ ಇದೆಯೋ ಪ್ರಪಂಚ ಹಾಗೇ ನಡೆಯುತ್ತದೆ. ನಾಸ್ತಿಕರು ಇದನ್ನು ಒಪ್ಪುತ್ತಾರೋ ಬಿಡ್ತಾರೋ ಅದು ಬೇರೆ ವಿಷಯ. ಆದರೆ ಜೆ. ಅಬ್ದುಲ್ ರವೂಫ್ ಎಂಬ 42 ವರ್ಷದ ವ್ಯಕ್ತಿಯನ್ನು ನೀವು ಸರಿಯಾಗಿ ಗಮನಿಸಿದರೆ ಭಗವಂತ ಇವರ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕರುಣೆ ತೋರಬೇಕು ಎಂದು […]

ಹಿಂದೂ ವಿರೋಧಿ ರಾಜ್ಯ ಸರಕಾರದಿಂದ ಮಠಮಂದಿರದ ವಶ : ವಿಶ್ವೇಶತೀರ್ಥ ಸ್ವಾಮೀಜಿ

Friday, January 2nd, 2015
VHP protest

ಮಂಗಳೂರು: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮಂಗಳೂರು ಆಶ್ರಯದಲ್ಲಿ ‘ಹಿಂದೂ ವಿರೋಧಿ ರಾಜ್ಯ ಸರಕಾರ’ ಎಂದು ಆರೋಪಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ದ. ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ್ ಬೃಹತ್‌ ಪ್ರತಿಭಟನೆ ನಡೆಯಿತು. ಇದಕ್ಕೂ ಮುನ್ನ ಶರವು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನ ಮೆರವಣಿಗೆ ನಡೆಯಿತು. ಧಾರ್ಮಿಕ ಸ್ವಾತಂತ್ರವನ್ನು ಅಪಹರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಠಮಂದಿರದ ಕುರಿತು ಮಸೂದೆ ರೂಪಿಸಲು ಹೊರಟಿರುವ ಕಾಂಗ್ರೆಸ್‌ ಸರಕಾರ ತತ್‌ಕ್ಷಣವೇ ಅದನ್ನು ವಾಪಾಸು ಪಡೆಯಬೇಕು. ಅಲ್ಲಿ ವರೆಗೆ ನಮ್ಮ ಹೋರಾಟ […]

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ 90ನೇ ಹುಟ್ಟುಹಬ್ಬ ಆಚರಣೆ

Friday, December 26th, 2014
Atal BJP

ಮಂಗಳೂರು : ಮಾಜಿ ಪ್ರಧಾನಿ ಸನ್ಯಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 90ನೇ ಜನ್ಮದಿನ ಹಾಗೂ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತರತ್ನ ಪುರಸ್ಕಾರವನ್ನು ಕೇಂದ್ರ ಸರಕಾರ ನೀಡಿದ ಬಗ್ಗೆ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಂಭ್ರಮವನ್ನು ಗುರುವಾರ ಆಚರಿಸಲಾಯಿತು. ಇದರ ಪ್ರಯುಕ್ತ ಪಕ್ಷದ 35 ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ರವರು ಅಟಲ್ ಬಿಹಾರಿ ವಾಜಪೇಯಿಯವರ ಜೀವನ, ಅವರ ತ್ಯಾಗ ಮತ್ತು ಆದರ್ಶದ ಬಗ್ಗೆ […]

ಯುವ ಕಾಂಗ್ರೆಸ್ ವತಿಯಿಂದ ಸೋನಿಯಾಗಾಂಧಿಯವರ 68ನೇ ಹುಟ್ಟು ಹಬ್ಬ ಆಚರಣೆ

Wednesday, December 10th, 2014
ಯುವ ಕಾಂಗ್ರೆಸ್ ವತಿಯಿಂದ ಸೋನಿಯಾಗಾಂಧಿಯವರ 68ನೇ ಹುಟ್ಟು ಹಬ್ಬ ಆಚರಣೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಶ್ರೀಮತಿ ಸೋನಿಯಾಗಾಂಧಿಯವರ 68ನೇ ಹುಟ್ಟು ಹಬ್ಬದ ಪ್ರಯುಕ್ತ ಡಾ. ಗಿರಿಧರ ರಾವ್ ಸಂಜೀವಿನಿ ಬಾಯಿ ವಾತ್ಸಲ್ಯಧಾಮ ಕೊಡಿಯಾಲ್ ಬೈಲು ಇಲ್ಲಿನ ವೃದ್ಧಾಶ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರಿಗೆ ಮಧ್ಯಾಹ್ನದ ಭೋಜನ ಹಾಗೂ ಸಿಹಿತಿಂಡಿ ವಿತರಿಸಲಾಯಿತು. ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೋನಿಯಾಗಾಂಧಿಯವರ ಹುಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭ […]

ವಿದ್ಯಾನಗರ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ ಗುರುವಂದನೆ, ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭೆ

Thursday, December 4th, 2014
vidyanagara

ಮಂಗಳೂರು : ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ವಿದ್ಯಾನಗರದ ಶ್ರೀ ಮಲರಾಯ ಮಿತ್ರಮಂಡಳಿ ಆಶ್ರಯದಲ್ಲಿ 33ನೇ ವರುಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾನಗರದ ಶ್ರೀ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ 10ನೇ ವರುಷದ ಶಬರಿಮಲೆ ಯಾತ್ರೆ ಪ್ರಯುಕ್ತ ವಿದ್ಯಾನಗರ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ ಗುರುವಂದನೆ, ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭೆ ಸಭಾ ಕಾರ್ಯಕ್ರಮ, ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾನಗರದ ಮಲರಾಯ ಮಿತ್ರಮಂಡಳಿ ವಠಾರದಲ್ಲಿ ಭಾನುವಾರ ನಡೆಯಿತು. ಈ ಭೂಮಿ ಹುಟ್ಟಿದಾಗಲೇ ನಮ್ಮ […]