ಕೃಷಿಗೆ ಆದ್ಯತೆ ನೀಡಿ-ಪಿ.ಶಿವಶಂಕರ್
Wednesday, April 6th, 2011ಮಂಗಳೂರು : ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಜಿಲ್ಲಾ ಸಾಲ ಯೋಜನೆ 2011-12 ರಲ್ಲಿ ಹೆಚ್ಚಿನ ಅನುದಾನವನ್ನು ನಿಗಧಿಪಡಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶ್ರೀ ಪಿ.ಶಿವಶಂಕರ್ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರಿಗೆ ಕರೆ ನೀಡಿದ್ದಾರೆ. ಅವರು ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ 2011-12 ನೇ ಸಾಲಿನ ಜಿಲ್ಲಾ ಬ್ಯಾಂಕಿಂಗ್ ಸಾಲಯೋಜನೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 2010-11 ನೇ ಸಾಲಿನಲ್ಲಿ […]