ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ

Saturday, November 27th, 2010
ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ

ಮಂಗಳೂರು: ಅಲ್ಪ ಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಅನ್ಪರ್ ಮಾಣಿಪ್ಪಾಡಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿ ಸಂಘನಿಕೇತನಕ್ಕೆ ಬೇಟಿ ನೀಡಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರು ಆಯೋಜಿಸಿದ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡರು. ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಅಲ್ಪ ಸಂಖ್ಯಾತರಿಗೆ ಅನ್ಯಾಯವಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು. ರಾಜ್ಯ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರ ರಕ್ಷಣೆಗೆ ಸಂಪೂರ್ಣ ಬದ್ದವಾಗಿದೆ. ಅಲ್ಪ ಸಂಖ್ಯಾತರಿಗೆ ಬಿಜೆಪಿ ಮೇಲಿರುವ ಅಪನಂಬಿಕೆಯನ್ನು ಅಧಿಕಾರಿಗಳು ಮನವರಿಕೆ ಮಾಡಬೇಕು ಎಂದರು. ಅಲ್ಪ […]

ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ

Friday, November 26th, 2010
ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ

ಮಂಗಳೂರು :  ಸಾಂವಿಧಾನಿಕ ಚಳುವಳಿ(ಸಾಚ) ಹಾಗೂ ನಮ್ಮ ಟಿ.ವಿ ಜಂಟಿ ಆಶ್ರಯ ದಲ್ಲಿ “ಸಂವಿಧಾನ ಜಾಗೃತಿ ಜಾಥಾ ಮತ್ತು ಸಂವಿಧಾನ ಜಾಗೃತಿ ಸಮಾವೇಶ” ದ ಅಂಗವಾಗಿ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಪುರಭವನದ ವರೆಗೆ  ಜಾಥಾ ನಡೆಯಿತು.  ಈ ಜಾಗೃತಿ ಜಾಥವನ್ನು ಗೃಹ ಕೆಲಸ ಸಹಾಯಕರಾದ ಶ್ರೀಮತಿ  ಸುಮತಿ ಕೋಡಿಕಲ್, ಕೃಷಿಕೂಲಿ ಕಾರ್ಮಿಕರಾದ ಶ್ರೀಮತಿ ಕಾರ್ಮಿನ್ ಡಿ’ಸೋಜಾ, ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ಸುಶೀಲ ಪುಜಾರ್ತಿ  ನೀರುಮಾರ್ಗ ಇವರು ಚಾಲನೆ ನೀಡಿದರು. […]

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೋ. ಎಂ.ಬಿ ಪುರಾಣಿಕರಿಗೆ ಅಭಿನಂದನಾ ಸಮಾರಂಭ

Thursday, November 25th, 2010
ಪ್ರೋ. ಎಂ.ಬಿ ಪುರಾಣಿಕ ಅಭಿನಂದನಾ ಸಮಾರಂಭ

ಮಂಗಳೂರು : ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರ ವೃಂದ ಹಾಗೂ ನಗರದ ಹಲವು ಗಣ್ಯರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೋ. ಎಂ.ಬಿ ಪುರಾಣಿಕರಿಗೆ ಮತ್ತು ಅವರ ಧರ್ಮ ಪತ್ನಿ ಸುನಂದಾ ಪುರಾಣಿಕರಿಗೆ ಅಭಿನಂದನಾ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲು ಇಲ್ಲಿ ನಡೆಯಿತು. ಸಮಾರಂಭದಲ್ಲಿ ಆಶೀರ್ವಚನ ಮಾಡಿದ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಮಾತನಾಡಿ ಸರಸ್ವತಿಯ […]

ಮನುಕುಲವೇ ಕೊಂಡಾಡಬೇಕಾದ ದಾಸ ಸಂತರು ಕನಕದಾಸರು : ಪಾಲೇಮಾರ್

Wednesday, November 24th, 2010
ಕನಕದಾಸ ಜಯಂತಿ

ಮಂಗಳೂರು: ಜಿಲ್ಲಾಡಳಿತ ದ.ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ ಕರಾವಳಿ ಕುರುಬರ ಸಂಘ, ಮಂಗಳೂರು ಇದರ ಆಶ್ರಯದಲ್ಲಿ ಇಂದು ಬೆಳಿಗ್ಗೆ ದಾಸವರೇಣ್ಯ, ದಾರ್ಶನಿಕ ಕವಿ, ಸಂತ ಶ್ರೇಷ್ಠ ಕನಕದಾಸ ಜಯಂತಿಯು ಪುರಭವನದಲ್ಲಿ ನಡೆಯಿತು. ಕನಕದಾಸರ ಭಾವಚಿತ್ರ ಮೆರವಣಿಗೆಯನ್ನು ಶ್ರೀಮತಿ ರಜನಿ ದುಗ್ಗಣ್ಣ, ಮಂಗಳೂರು ಮಹಾನಗರ ಪಾಲಿಕೆ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ  ಮೆರವಣಿಗೆಯು ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟು, ಗಣಪತಿ ಹೈಸ್ಕೂಲ್ ಮಾರ್ಗವಾಗಿ, ಪುರಭವನಕ್ಕೆ ತಲುಪಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೃಷ್ಣ ಜೆ. ಪಾಲೇಮಾರ್, ದ,ಕ […]

ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆ

Tuesday, November 23rd, 2010
ಮಾಸಿಕ ಪಿಂಚಣಿ ಏರಿಕೆಗೆ ಜಿಲ್ಲಾ ಬೀಡಿ ವರ್ಕರ್ಸ್ ಫೇಡರೇಶನ್ ನಿಂದ ಪ್ರತಿಭಟನೆ

ಮಂಗಳೂರು: ಎಸ್.ಕೆ. ಬೀಡಿ ವರ್ಕರ್ಸ್ ಫೇಡರೇಶನ್ (ಎಐಟಿಯುಸಿ) ಇದರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕಾರ್ಮಿಕ ಭವಿಷ್ಯ ನಿಧಿ  ಕಛೇರಿ ಎದುರು ಮಾಸಿಕ ಪಿಂಚಣಿ ರೂ. 1500 ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ ನಡೆಯಿತು. ಬಡ ಅಸಂಘಟಿತ ವಲಯದ ಕಾರ್ಮಿಕರಿಗೆ ಇಂದು ಹಲವಾರು ಯೋಜನೆ ಕಾಯ್ದೆಗಳು ರೂಪಿಸ್ಪಟ್ಟರೂ ಕಾರ್ಯಗತಗೊಂಡಿಲ್ಲ. ಶಾಸಕರು, ಸಂಸದರು, ಅಧಿಕಾರಿಗಳಿಗೆ ಕೈ ತುಂಬಾ ಸಂಬಳ, ಪಿಂಚಣಿ ಆದರೆ ಬಡ ಅಸಂಘಟಿತ ಬೀಡಿ ಕಾರ್ಮಿಕರಿಗೆ ತಿಂಗಳಿಗೆ ಸರಾಸರಿ ರೂ.50/- ಪಿಂಚಣಿ….! ತಿಂಗಳಿಗೊಮ್ಮೆ ಬ್ಯಾಂಕಿಗೆ ಹೋಗಿ ಬರಲು […]

ಕರಾವಳಿ ಪ್ರಾಧಿಕಾರ ಅಧ್ಯಕ್ಷರಿಂದ ರಸ್ತೆ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆ

Tuesday, November 23rd, 2010
ಕರಾವಳಿ ಪ್ರಾಧಿಕಾರ ಅಧ್ಯಕ್ಷರಿಂದ ರಸ್ತೆ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆ

ಮಂಗಳೂರು : ದಕ್ಷಿಣ ಕನ್ನಡ  ಜಿಲ್ಲೆಯ ಹದಗೆಟ್ಟ ನಗರ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿ ಮಾಡಲು ಹಾಗೂ ದೊಡ್ಡ ದೊಡ್ಡ ಹೊಂಡಗಳನ್ನು ನವೆಂಬರ್ 10 ರೊಳಗೆ ಮುಚ್ಚಬೇಕೆಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಿ. ನಾಗರಾಜ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ಗಡುವು ನೀಡಿದ್ದರು. ಈ ಆದೇಶ ಪರಿಪಾಲನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಅಭಿವೃದ್ಧಿ ಕುರಿತ ಸಭೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಲೋಕೋಪಯೋಗಿ, ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು […]

ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮ

Monday, November 22nd, 2010
ಎಡ್ಸ್ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಹಾಗೂ ಡಾ|ಎಂ.ವಿ.ಶೆಟ್ಟಿ ಕಾಲೇಜು ಜಂಟಿ ಆಶ್ರಯದಲ್ಲಿ ಪಾಲಿಕೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ  ವಿಶೇಷ ಜಾಗೃತಿ ಕಾರ್ಯಕ್ರಮವನ್ನು  ಉಪಮೇಯರ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಸ್ತುತ್ಯರ್ಹ, ರೋಗ ರಹಿತ ಭಾರತ ನಿರ್ಮಾಣ ಮಾಡಲು ಮುಂದಾಗೋಣ ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮ.ನ.ಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತ.ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]

ಮಾನವ ಹಕ್ಕುಗಳ ರಕ್ಷಣೆಗೆ ಸರಕಾದಿಂದ ಸರಿಯಾದ ಬೆಂಬಲ ಇಲ್ಲ : ಎಸ್. ಆರ್ ನಾಯಕ್

Saturday, November 20th, 2010
ಎಸ್. ಆರ್ ನಾಯಕ್

ಮಂಗಳೂರು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಇಂದು ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯದಲ್ಲಿ ದೂರುದಾರರ ಅಹವಾಲುಗಳನ್ನು ಸ್ವೀಕರಿಸಿದರು. ಬಲತ್ಕಾರದ ಮದುವೆ, ಭೂ ಹಗರಣ ಹಾಗೂ ಉದ್ಯೋಗದ ಸಮಸ್ಯೆಯ ಮೂರು ಅರ್ಜಿಗಳನ್ನು ಎಸ್.ಆರ್ ನಾಯಕ್ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್ ನಾನು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸ್ವೀಕರಿಸುವುದು, ದ.ಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಸುವ್ಯವಸ್ಥಿತವಾಗಿರುವುದನ್ನು ಸೂಚಿಸುತ್ತಿದೆ ಎಂದರು. 2007 ರಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಆಯೋಗ ಸವಲತ್ತುಗಳಿಲ್ಲದೆ ದೂರುದಾರರ […]

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ

Friday, November 19th, 2010
ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲೆಯ ಕ್ರಿಯಾಶೀಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ವರುಷದ ಹರುಷ 2010 ಶೀರ್ಷಿಕೆಯ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಹಬ್ಬ ಉದ್ಘಾಟನಾ ಸಮಾರಂಭವು ಇಂದು  ಬೆಳಿಗ್ಗೆ ಮಿಲಾಗ್ರೀಸ್ ಪದವಿಪೂರ್ವ ಕಾಲೇಜು ಸಂಕೀರ್ಣ, ಹಂಪನ್ ಕಟ್ಟಾ, ಮಂಗಳೂರು ಇದರ ಆವರಣದಲ್ಲಿ ನಡೆಯಿತು. ಶೈಕ್ಷಣಿಕ ಹಬ್ಬದ ಉದ್ಘಾಟನೆಯನ್ನು ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಇಡಲಾದ ಬೃಹತ್ ಶಿಲ್ಪವನ್ನು ಉದ್ಘಾಟನೆಗೊಳಿಸುವ ಮೂಲಕ ಫಾ. ಡೆನ್ನಿಸ್ ಡೇಸಾ ಆಡಳಿತ ನಿರ್ದೇಶಕರು, ಫಾದರ್ ಮುಲ್ಲರ್ಸ್ ಆಸ್ಪತ್ರೆ ಇವರು ಚಾಲನೆ ನೀಡಿದರು. ಚಿತ್ರಕಲಾ […]

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

Thursday, November 18th, 2010
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

ಮಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ವತಿಯಿಂದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಉದ್ಘಾಟನೆ ಸಮಾರಂಭ ಇಂದು ಬೆಳಿಗ್ಗೆ ಬಾವುಟ ಗುಡ್ಡೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷರು ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಂಥಾಲಯ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ಗಳ ಮೂಲಕ ಜನರಿಗೆ ತಲುಪುವಂತಾಗಬೇಕು, ಆಗ ಗ್ರಾಮೀಣ ಜನರಲ್ಲಿ […]