ಹಿಂದೂ ವಿರೋಧಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಪ್ರತಿಭಟನೆ.

Monday, October 18th, 2010
ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: ಹಿಂದೂ ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ತೆರವುಗೊಳಿಸುವುದು ಮತ್ತು ದೇವಸ್ಥಾನಗಳ ಸರಕಾರೀಕರಣವನ್ನು ಮಾಡಿ ಹಿಂದೂಗಳ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯ ಎದುರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು. ದೇವಸ್ಥಾನಗಳು, ದೈವಸ್ಥಾನಗಳು ಧರ್ಮದ ಬೆನ್ನೆಲುಬು, ಧರ್ಮ ಇದ್ದಲ್ಲಿ ದೇಶ ಇರಬಹುದು. ದೇಶ ಉತ್ತಮ ಸ್ಥಿತಿಯಲ್ಲಿರಬೇಕಾದರೆ ಧರ್ಮಾಚರಣೆಯನ್ನು ಗೌರವಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಲಕ್ಷ್ಮೀಶ ಕಬಲಡ್ಕ ಪ್ರತಿಭಟನಾ ಭಾಷಣದಲ್ಲಿ ಹೇಳಿದರು. ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ದೈವ, […]

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ಉದ್ಭವ

Monday, October 18th, 2010
ತಲಕಾವೇರಿ

ಮಡಿಕೇರಿ : ಸೋಮವಾರ ಮುಂಜಾನೆ 3.11ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಪಾರ ಭಕ್ತವೃಂದಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ನೆರೆದ ಭಕ್ತರಿಗೆ ದರ್ಶನವಿತ್ತಳು.  ಭಕ್ತರ ಉದ್ಘೋಷ, ಮುಗಿಲು ಮುಟ್ಟಿದ ಮಂತ್ರಘೋಷ ದೊಂದಿಗೆ ತಲಕಾವೇರಿಯಲ್ಲಿ ತಿರ್ಥೂದ್ಭವವಾಯಿತು. ನೆರೆದ ಭಕ್ತವೃಂದ ಸ್ನಾನಕೊಳದ ಸಮೀಪ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು.  ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು. ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳದಿಂದ […]

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ

Monday, October 18th, 2010
ಮೈಸೂರು ದಸರಾ

ಮೈಸೂರು : 400 ವರ್ಷಗಳ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ  ಭಾನುವಾರ ಮಧ್ಯಾಹ್ನ 1.45 ಕ್ಕೆ  ಶುಭ ಕುಂಭ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು .  750 ಕಿ.ಗ್ರಾಂ. ತೂಕದ ಬಂಗಾರದ ಅಂಬಾರಿಯಲ್ಲಿದ್ದ ದೇವಿ ಚಾಮುಂಡೇಶ್ವರಿಗೆ ಹಸಿರು ಶಾಲು ಹೊದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಪುಷ್ಪ ಸಮರ್ಪಣೆ ಮಾಡಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅಂಬಾರಿ ಹೊತ್ತಿದ್ದ ಬಲರಾಮ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಬಲರಾಮನ ಹಿಂದೆ ಸುಂದರವಾಗಿ ಅಲಂಕೃತಗೊಂಡ ಆನೆಗಳು ಜಂಬೂ ಸವಾರಿಯಲ್ಲಿ […]

ಮಂಗಳೂರು ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ.

Saturday, October 16th, 2010
ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ

ಮಂಗಳೂರು: ನಗರದ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಇಂದು ಬೆಳಿಗ್ಗೆ ಇಲಾಖೆಯ ತುಪಾಕಿಗಳಿಗೆ ಮತ್ತು ವಾಹನಗಳಿಗೆ ಆಯುಧ ಪೂಜೆಯನ್ನು ಮಾಡಲಾಯಿತು. ಐಜಿಪಿ ಅಲೋಕ್ ಮೋಹನ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ ಸುಬ್ರಹ್ಮಣ್ಯೇಶ್ವರ ರಾವ್ ಆಯುಧ ಪೂಜೆಯಲ್ಲಿ ಭಾಗವಹಿಸಿದ್ದರು. ಎಡಬಿಡದೆ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ವಾಹನಗಳು, ಪೊಲೀಸರ ಹೆಗಲೇರುತ್ತಿದ್ದ ತುಪಾಕಿಗಳು ಇಂದು ಸ್ವಚ್ಚವಾಗಿ ಸುಂದರವಾಗಿ ಅಲಂಕರಿಸಲ್ಪಟ್ಟಿದ್ದವು ಪೂಜೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಐದು ಸಾವಿರ ವರ್ಷಗಳ ಭವ್ಯ ಪರಂಪರೆಯ ಆಯುಧಪೂಜೆ ಆಚರಣೆ .

Saturday, October 16th, 2010
ಆಯುಧಪೂಜೆ.

ಮಂಗಳೂರು: ನಾಗರೀಕ ಸಂಸ್ಕೃತಿ ಆರಂಭವಾದಂದಿನಿಂದ ಜನರು ತಾವು ಉಪಯೋಗಿಸುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದರು ಎಂದು ಅನೇಕ ಮೂಲಗಳಿಂದ ನಾವು ಈಗ ತಿಳಿಯಬಹುದಾಗಿದೆ. ಸುಮಾರು 5000 ವರ್ಷಗಳ ಹಿಂದೆ ಪಾಂಡವರು 12 ವರ್ಷಗಳ ವನವಾಸವನ್ನು ಮುಗಿಸಿ, ಅಜ್ಞಾತವಾಸದ ಕೊನೆಯ ದಿನದಲ್ಲಿ ಉತ್ತರ ಗೋಗ್ರಹಣದ ಕದನದಲ್ಲಿ ಆಯುಧಗಳನ್ನು ಪೂಜಿಸಿ ಕೌರವರೊಂದಿಗೆ ಯುದ್ಧ ನಡೆಸಿದರು ಎನ್ನುವ ದಾಖಲೆಗಳು ಮಹಾಭಾರತದ ಪುಟಗಳಲ್ಲಿ ಕಾಣಸಿಗುತ್ತದೆ. ಬ್ರಹನ್ನಳೆಯಾದ ಅರ್ಜುನ ವಿರಾಟ ನಗರದ ರಾಜಕುಮಾರ ಉತ್ತರ ಕುಮಾರನೊಂದಿಗೆ ಬನ್ನಿ ಮಂಟಪದಿಂದ ಆಯುಧಗಳನ್ನು ಪೂಜಿಸಿ ಯುದ್ಧಕ್ಕೆ ಹೊರಟು ಕೌರವರನ್ನು […]

ಅಂಧರ ಚಲನ ವಲನ ತರಬೇತಿ ಕೇಂದ್ರದ ದಶಮಾನೋತ್ಸವ ಉದ್ಘಾಟನೆ.

Friday, October 15th, 2010
ಅಂಧರ ತರಬೇತಿ ಕೇಂದ್ರದ ದಶಮಾನೋತ್ಸವ ಉದ್ಘಾಟನೆ

ಮಂಗಳೂರು: ನಗರದ ಅತ್ತಾವರದ ಎನ್.ಜಿ ರಸ್ತೆಯಲ್ಲಿರುವ ಅಂಧರ ಚಲನ ವಲನ ತರಬೇತಿ ಕೇಂದ್ರದ ದಶಮಾನೋತ್ಸವದ ಅಂಗವಾಗಿ ನಡೆದ ಅಂಧರ ಮರು ಸಾಮರ್ಥ್ಯ ಪರೀಕ್ಷೆಯ ತರಬೇತಿ ಪತ್ರಗಳನ್ನು ಇಂದು ಬೆಳಿಗ್ಗೆ ವಿತರಿಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಕೆ.ಎನ್ ವಿಜಯ ಪ್ರಕಾಶ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು, ಪರಿಶುದ್ಧ ಮನಸ್ಸು ಹಾಗೂ ನಿರ್ಮಲ ಹೃದಯಿಗಳು ಯಾವತ್ತೂ ಅಂಧರಲ್ಲ.  ಅವರ ಬಲಹೀನ ಸಾಮರ್ಥ್ಯವನ್ನು ಹೆಚ್ಚಿಸಬೇಕಾದರೆ ಶಕ್ತರು ಉತ್ತಮ ಮನಸ್ಸಿನವರಾಗಿರಬೇಕು, ಅಂಗಹೀನರನ್ನು ತಾತ್ಸಾರದಿಂದ ನೋಡದೆ ಎಲ್ಲರಂತೆ ನೋಡಿಕೊಳ್ಳಬೇಕು ಎಂದು ಉದ್ಘಾಟನೆ […]

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟನೆ.

Friday, October 15th, 2010
ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟ

ಮಂಗಳೂರು: ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ದ.ಕ. ಜಿಲ್ಲೆ ಹಾಗೂ ಗಣಪತಿ ಸಂಯುಕ್ತ ಅನುದಾನಿತ ಪ.ಪೂ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಹಾಗೂ ಬಾಲಿಕಿಯರ ಕಬ್ಬಡಿ ಪಂದ್ಯಾವಳಿಯನ್ನು ಇಂದು ಬೆಳಿಗ್ಗೆ 9 ಗಂಟೆಗೆ ನೆಹರೂ ಮೈದಾನದಲ್ಲಿ ಅಮೆಚೂರ್ ಕಬ್ಬಡಿ ಫೆಡರೇಶನ್ ಆಫ್ ಇಂಡಿಯಾದ ಬಿ. ರತ್ನಾಕರ ಪುತ್ರನ್ ಉದ್ಘಾಟಿಸಿದರು. ಉದ್ಘಾಟನಾ ಬಳಿಕ ಮಾತನಾಡಿದ ರತ್ನಾಕರ ಪುತ್ರನ್ ಕ್ರೀಡೆಗಳು ಯುವಶಕ್ತಿಯನ್ನು ಒಂದು ಗೂಡಿಸುವ ಒಂದು ಸಮರ್ಥ ವೇದಿಕೆ, ಕ್ರೀಡೆಯಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ […]

ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ ರಾಜೀನಾಮೆ

Friday, October 15th, 2010
ಎಂ.ಸಿ.ಅಶ್ವತ್ಥ

ಬೆಂಗಳೂರು : ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಅಶ್ವತ್ಥ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಚನ್ನಪಟ್ಟಣ ಶಾಸಕ ಎಂ.ಸಿ.ಅಶ್ವತ್ಥ ಗುರುವಾರ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ತಮಿಳುನಾಡು ಪ್ರವಾಸದಲ್ಲಿದ್ದೆ. ಹಾಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರಿಂದ ತನಗೆ ಯಾವುದೇ ತೊಂದರೆ ಇಲ್ಲ. ಇದೀಗ ನನ್ನ ವೈಯಕ್ತಿಕ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಅ.11ರಂದು ನಡೆದ ವಿಶ್ವಾಸಮತ ಯಾಚನೆಗಾಗಲಿ, ಅ.14ರಂದು ನಡೆದು […]

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು101 ಪದಕಗಳು

Thursday, October 14th, 2010
ಸೈನಾ ನೆಹ್ವಾಲ್

ನವದೆಹಲಿ : ದೆಹಲಿಯಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಭರ್ಜರಿ 38 ಸ್ವರ್ಣ ಪದಕ, 27ಬೆಳ್ಳಿ, 36 ಕಂಚು ಒಟ್ಟು101  ಪದಕ ಗೆದ್ದುಕೊಳ್ಳುವ ಮೂಲಕ ಆತಿಥೇಯ ಭಾರತ ತಂಡವು ನೂತನ ಇತಿಹಾಸ ರಚಿಸಿದೆ. ಕಾಮನ್ ವೆಲ್ತ್ ಗೇಮ್ಸ್ ನ ಕೊನೆಯ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಿಂಗಲ್ಸ್ ವಿಭಾಗದಲ್ಲಿ ಜಯಗಳಿಸಿ ಭಾರತವನ್ನು ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆರುವಂತೆ ಮಾಡಿದರು. 2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 22 ಚಿನ್ನಗಳನ್ನು […]

ನಮ್ಮವರು ಹಳೆಮೈಸೂರು ಸಂಪ್ರದಾಯದ “ಮೈಸೂರು ದಸರಾ ಬೊಂಬೆ ಪ್ರದರ್ಶನ”

Thursday, October 14th, 2010
ಮೈಸೂರು ದಸರಾ ಬೊಂಬೆ ಪ್ರದರ್ಶನ

ಮಂಗಳೂರು:  ಮಂಗಳೂರುವಾಸಿ –  ಹಳೆಮೈಸೂರು ವಿಪ್ರ ಕೂಟವು ಹದಿನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಮ್ಮವರು  ಸಂಘಟನೆಯ ಹೆಸರಿನಲ್ಲಿ ಸ್ಥಾಪನೆಯಾಯಿತು.  ಇಲ್ಲಿಗೆ ಮೈಸೂರು, ಚಾಮರಾಜಪೇಟೆ, ತುಮುಕೂರು, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಕೋಲಾರ ಮುಂತಾದ ಕಡೆಗಳಿಂದ ದ.ಕ ಜಿಲ್ಲೆಗೆ ಉದ್ಯೋಗಕ್ಕಾಗಿ ಬಂದು ಇಲ್ಲೇ ನೆಲೆ ನಿಂತು ಹಳೇ ಮೈಸೂರಿನ ಸಾಂಸ್ಕೃತಿಕ ಆಚಾರ ವಿಚಾರ, ಪದ್ದತಿ-ಪರಂಪರೆಗಳು, ಹಾಗೂ ಮೂಲ ಸಂಸ್ಕೃತಿಯನ್ನು ಉಳಿಸಿ, ಹೊಸ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಈ ಸಂಘಟನೆ ಸ್ಥಾಪನೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ “ಬೊಂಬೆ ಕೂಡಿಸುವ” ಪದ್ಧತಿಯು ಸುಮಾರು […]