ಭಾರ್ಗವನಿಗೊಲಿದ ಮಂಗಳಾದೇವಿ : ಸಂಪೂರ್ಣ ಲೇಖನ
Saturday, October 9th, 2010ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಇದೀಗ ನವಿರಾಗಿ ಅಲಂಕರಿಸಿಕೊಂಡು ನಗರಕ್ಕೆ ಶೋಭೆ ತಂದಿದೆ. ಜಾತ್ರಾ ಮಹೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಸಾವಿರಾರು ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದೆ. ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಪರಮ ಪವಿತ್ರ ಭಕ್ತಿಭಾವದಿಂದ ಪರಸ್ಪರ ಬಂಧಿಸಿರುವ ದೇವಸ್ಥಾನದ ಪೌರಾಣಿಕ ಹಿನ್ನೆಲೆ ನಿಜಕ್ಕೂ ರೋಮಾಂಚನಗೊಳಿಸುವಂತಾಗಿದೆ. ಒಂದು ಬಾರಿ, ಸಪ್ತ ಋಷಿಗಳು ಶ್ರೀ ಹರಿಯ ದರ್ಶನ ಪಡೆಯಲೆಂದು ವೈಕುಂಠಕ್ಕೆ ಬಂದಿದ್ದಾಗ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸಪ್ತಋಷಿಗಳನ್ನು ಒಳಹೋಗಲು ಬಿಡದೆ, […]