ಉಡುಪಿಯಲ್ಲಿ ಅರ್ಧ ಕುಸಿದ ರಾಯಲ್ ಮಹಲ್‌ ಕಟ್ಟಡ, ಓರ್ವ ಮಹಿಳೆ ಗಾಯ

Friday, September 18th, 2020
Royal Mahal

ಉಡುಪಿ:  ಚಿತ್ತರಂಜನ್ ಸರ್ಕಲ್ ನಲ್ಲಿರುವ ಹಳೆಯ ಬಹು ಮಹಡಿ ಕಟ್ಟಡದ ಭಾಗವೊಂದು ಧರೆಗುರುಳಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ. ಚಿತ್ತರಂಜನ್ ಸರ್ಕಲ್ ನಲ್ಲಿರುವ ರಾಯಲ್ ಮಹಲ್‌ ಕಟ್ಟಡವಾಗಿದ್ದು, ಇದು ಉಡುಪಿ ನಗರದ ಹಳೇಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಹಳೆಯ ಕಟ್ಟಡದಲ್ಲಿ ಹೋಟೆಲ್, ಬೇಕರಿ, ಭಾರತೀಯ ಜನೌಷಧಿ ಕೇಂದ್ರ, ಚಿಪ್ಸ್ ಅಂಗಡಿ ಸೇರಿದಂತೆ ಐದಾರು ಅಂಗಡಿಗಳಿದ್ದವು. ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಜನರು ಕಟ್ಟಡದಿಂದ ದೂರ ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ […]

ಪೆಟ್ರೋಲ್ ಸುರಿದು ದೇವಸ್ಥಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

Friday, September 18th, 2020
gangolli sucide

ಗಂಗೊಳ್ಳಿ : ಗಂಗೊಳ್ಳಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ಯುವಕನೋರ್ವ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಯುವಕ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ದೇವರು ಮೈಮೇಲೆ ಬರುತ್ತಿದ್ದರೂ ಸಮುದಾಯದ ದೇವಸ್ಥಾನದಲ್ಲಿ ಪಾತ್ರಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ರಾಘವೇಂದ್ರ ಖಾರ್ವಿ,  ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಮೃತರು ಎಂದು ಗುರುತಿಸಲಾಗಿದೆ. ಈ ಸಂದರ್ಭ ರಕ್ಷಿಸಲು ಹೋಗಿ ಗಾಯಗೊಂಡವರನ್ನು […]

ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಕೊರೊನಾ ದೃಢ

Friday, September 18th, 2020
umanath kotian

ಮಂಗಳೂರು: ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ದೇವರ ಅನುಗ್ರಹ ಹಾಗೂ ನಿಮ್ಮ ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಗುಣಮುಖವಾಗಿ ನಿಮ್ಮ ಸೇವೆ ಮಾಡಲು ಹಾಜರಾಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾಗುವ ನಾಲ್ಕನೇ ಶಾಸಕರಾಗಿದ್ದಾರೆ. ಇದಕ್ಕೆ ಮೊದಲು ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಂಗಾರ ಅವರಿಗೂ […]

ಅರಿಷ್ಟ ದೋಷ ಪರಿಹರಿಸುವ ತಂತ್ರ

Friday, September 18th, 2020
drusti

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಅರಿಷ್ಟ ದೋಷಗಳು ಅಥವಾ ದಾರಿದ್ರ್ಯ ಸ್ವರೂಪದ ಸಮಸ್ಯೆಗಳು ಮನೆಯಲ್ಲಿ ಆವರಿಸಿರುತ್ತದೆ. ಇವುಗಳೆಲ್ಲವೂ ಸಹ ನಿಮ್ಮ ವ್ಯವಸ್ಥಿತ ಜೀವನವನ್ನು ಹಾನಿ ಮಾಡಬಹುದು ಹಾಗೂ ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇಂತಹ ದೋಷಗಳು ನಿಮ್ಮ ಶತ್ರು ವರ್ಗದಿಂದ ಹಾಗೂ ನಿಮ್ಮ ಸುತ್ತಲೂ ಇರುವ ವಿಷವರ್ತುಲದಂತಿರುವ ಕೆಟ್ಟ ಜನಗಳ ದೃಷ್ಟಿಯಿಂದ ಬರಬಹುದಾದ ಸಾಧ್ಯತೆ ಇರುತ್ತದೆ ಇದನ್ನು ನಿವಾರಣೆ ಮಾಡಲು ತಾವು […]

ದಿನ ಭವಿಷ್ಯ : ಯಾವುದೇ ಅಡೆತಡೆಯಿಲ್ಲದೆ ಕೆಲಸ ಕಾರ್ಯದಲ್ಲಿ ಜಯ ಸಂಪಾದನೆ ಆಗಲಿದೆ

Friday, September 18th, 2020
anjaneya

ಶ್ರೀ ಆಂಜನೇಯಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕುಟುಂಬದಲ್ಲಿನ ನಿರುದ್ಯೋಗ ಸಮಸ್ಯೆಗಳು ಬೇಸರ ತರಿಸಬಹುದು. ಅವಕಾಶಗಳು ನಿಮ್ಮ ಮುಂದೆ ಇದ್ದರು ಅದನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ. ಕೆಲವು ನಿಂದನೆ ಮಾತುಗಳಿಗೆ ಬೆಲೆ ಕೊಡದೆ ಇರುವುದು ಉತ್ತಮ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಯಾವುದೇ […]

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಕಟೌಟ್ ತೆರವುಗೊಳಿಸಲು ಸೂಚನೆ

Thursday, September 17th, 2020
banner

ಮಂಗಳೂರು: ಸಾರ್ವಜನಿಕರಿಂದ ಅನೇಕ ದೂರುಗಳು ಬಂದ  ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾದ ವಿವಿಧ ಫ್ಲೆಕ್ಸ್, ಬ್ಯಾನರನ್ನು ತೆರವುಗೊಳಿಸುವಂತೆ  ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ವಿನಂತಿಸಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾದ ವಿವಿಧ ಖಾಸಗಿ ಮತ್ತು ಸಾರ್ವಜನಿಕ ಸಂಬಂಧಿತ ಅನಧಿಕೃತ ಕಟೌಟ್, ಫ್ಲೆಕ್ಸ್ ಗಳನ್ನು ಮುಂದಿನ ಮೂರು ದಿನಗಳೊಳಗಾಗಿ ತೆರವುಗೊಳಿಸುವಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್ ಅಳವಡಿಕೆಗೆ ಮಂಗಳೂರು ಮಹಾನಗರ ಪಾಲಿಕೆಯ ಅನುಮತಿ ಕಡ್ಡಾಯವಾಗಿದೆ. ಈ ಸೂಚನೆ ತಪ್ಪಿದಲ್ಲಿ ಮಹಾನಗರ ಪಾಲಿಕೆಯಿಂದಲೇ ಫ್ಲೆಕ್ಸ್ ತೆರವು […]

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಪಕೋಡ ಮಾರಿ ಆಚರಿಸಿದ ಎನ್ಎಸ್ ಯುಐ

Thursday, September 17th, 2020
nsui

ಮಂಗಳೂರು: ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಎನ್ಎಸ್ ಯುಐ ಸದಸ್ಯರು  ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಪಕೋಡ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಎನ್ಎಸ್ಯುಐ ದ‌.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ,  ವರ್ಷಕ್ಕೆ 12 ಕೋಟಿ‌ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ, ವರ್ಷಕ್ಕೆ 2.50 ಕೋಟಿ ಉದ್ಯೋಗ ನಷ್ಟ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಅವೈಜ್ಞಾನಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ವಿದ್ಯಾರ್ಥಿಗಳನ್ನು, ಕೃಷಿಕರನ್ನು, ಬಡವರನ್ನು ಬೀದಿಗೆ […]

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲಾ ಕಾಲೇಜು ಸಮೀಪ ತಂಬಾಕು ಮಾರಾಟ – ಕಠಿಣ ಕ್ರಮ

Thursday, September 17th, 2020
tobaco

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ, ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು. ಅವರು ಮಂಗಳವಾರ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನಗಳು ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ ಕೊರೆತ, ಜಿಲ್ಲಾಧಿಕಾರಿ ಭೇಟಿ

Thursday, September 17th, 2020
Kamagari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಕೊರೆತ  ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆಂತಕ ಮನೆ ಮಾಡಿದೆ. ಕಡಲ ಕೊರೆತ ಸಮಸ್ಯೆಯ ಹಾನಿ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗನೆ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಸಿಇಓ ಕಪಿಲ್ ಮೋಹನ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲೆಯ ವಿವಿದೆಡೆ ಕಡಲಕೊರೆತ ನಿಯಂತ್ರಣಕ್ಕೆ ನಡೆಯುತ್ತಿರುವ ವಿವಿಧ […]

ಮಂಗಳೂರು: ಹಣವಿಲ್ಲದೆ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಗೆ ಹಣಕಾಸಿನ ನೆರವು ಬಂದರೂ ಆತನನ್ನು ಉಳಿಸಲಾಗಲಿಲ್ಲ

Thursday, September 17th, 2020
geetha

ಮಂಗಳೂರು: ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಹಣಕಾಸಿನ ನೆರವು  ಬಂದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು  ಪತ್ನಿ ಕಣ್ಣೀರಿಟ್ಟಿದ್ದಾರೆ. ಹಣವಿಲ್ಲದೆ ನಗರದ ಯೆನೆಪೋಯ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಯನ್ನು ಮೊದಲು ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ಒಪ್ಪಲಿಲ್ಲ ಬಳಿಕ,  ತಮ್ಮ ಪತಿಯನ್ನು ಉಳಿಸಲು ಹಣಕಾಸಿನ ನೆರವು ನೀಡಿ ಎಂದು ಮಹಿಳೆಯೋರ್ವರು ವೀಡಿಯೋ ಮೂಲಕ ಮಾಡಿದ ಮನವಿಗೆ ಒಂದೇ ದಿನ 14 ಲಕ್ಷ ರೂ. ನೆರವು ಹರಿದು ಬಂದಿದೆ. ಆದರೆ ಕೊನೆಯ ಕ್ಷಣದವರೆಗೆ ಹೋರಾಡಿದರೂ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ […]