ನೋಡಬಹುದಾದ ”ಮದುವೆ ಮನೆ”

Sunday, November 27th, 2011
Ganesh Shruda Arya

ಬೆಂಗಳೂರು : ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಚೊಚ್ಚಲ ನಿರ್ದೇಶನದಲ್ಲಿಯೇ ಸದಭಿರುಚಿಯ ಉತ್ತಮ ಚಿತ್ರವೊಂದನ್ನು ಪ್ರೆಕ್ಷಕರಿಗೆ ನೀಡಿದ್ದಾರೆ. ಸೋಲಿನ ಸೆರಗಲ್ಲಿ ತೇಲಾಡುತಿದ್ದ ಗಣೇಶ್‌ಗೆ ಇಂತಹ ಚಿತ್ರವೊಂದರ ಅಗತ್ಯವಿತ್ತು. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಈ ಚಿತ್ರ ಯಶಷ್ವಿಯಾಗಿದೆ. ಚಿತ್ರದ ನಾಯಕಿ ಸುಮಾಳನ್ನು (ಶ್ರದ್ಧಾ ಆರ್ಯ) ಚಿತ್ರದ ನಾಯಕ ಸೂರಜ್ (ಗಣೇಶ್) ಅನಿರೀಕ್ಷಿತ ಸಂದರ್ಭದಲ್ಲಿ ಭೇಟಿಯಾಗುತ್ತಾನೆ. ಸುಮಾಳಿಗೆ ಮದುವೆ ಗೊತ್ತಾಗಿರುತ್ತದೆ. ಮದುವೆಯಾಗುವವನು ಎಸಿಪಿ ದುಷ್ಯಂತ್ (ಚಿರಂತ್). ಆದರೆ ಮದುವೆ ಮನೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ […]

ಪುರಾಣ ಕತೆಯನ್ನು ನೆನಪಿಸುವ ಯೋಗರಾಜ

Thursday, August 4th, 2011
ಪುರಾಣ ಕತೆಯನ್ನು ನೆನಪಿಸುವ ಯೋಗರಾಜ

ಬೆಂಗಳೂರು : ಮನಶ್ಯಾಸ್ತ್ರದ ಪದವೀಧರನಾದ ಯೋಗರಾಜ (ನವೀನ್‌ ಕೃಷ್ಣ) ಜ್ಯೋತಿಷ್ಯ ಮತ್ತು ಲಂಡನ್‌ನಲ್ಲಿ ವ್ಯಾಸಂಗ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಿಹಿ (ನೀತು) ಇವರಿಬ್ಬರ ಪ್ರೇಮಕತೆಯ ‘ಯೋಗರಾಜ’ ಪುರಾಣ ಕತೆಯ ಸನ್ನಿವೇಷವನ್ನು ನೆನೆಪಿಸುತ್ತದೆ. ಯೋಗರಾಜ ಮತ್ತು ಸಿಹಿ ಭೇಟಿ ಮಾಡಿ ಪರಿಚಯವಾಗುತ್ತದೆ. ಕಾಲಾನಂತರದಲ್ಲಿ ಯೋಗರಾಜನಿಗೆ ಅವಳಲ್ಲಿ ಮನಸ್ಸಾಗುತ್ತದೆ. ಓರ್ವ ಅನಾಥೆಯಾಗಿರುವ ಸಿಹಿಯಲ್ಲಿ ತನ್ನ ಮನದಾಳದ ಮಾತುಗಳನ್ನು ಯೋಗರಾಜ ಹೇಳಿಕೊಳ್ಳುತ್ತಾನೆ. ಆದರೆ ಅವಳಿಂದ ಒಪ್ಪಿಗೆಯ ಮಾತು ಕೇಳಬೇಕೆನ್ನುವಷ್ಟರಲ್ಲಿ ಅಪಘಾತವೊಂದರಲ್ಲಿ ಯೋಗರಾಜ ಸಾವಿಗೀಡಾಗುತ್ತಾನೆ. ಅವನ ಪ್ರಾಣವನ್ನು ತೆಗೆದುಕೊಂಡು ಹೋಗಲು ಯಮರಾಜ ಬಂದಾಗ, […]

ಪ್ರೇಕ್ಷಕನಿಗೆ ಒಗ್ಗದ ‘ಮಲ್ಲಿಕಾರ್ಜುನ’

Thursday, July 14th, 2011
Mallikarjuna/ಮಲ್ಲಿಕಾರ್ಜುನ

ಬೆಂಗಳೂರು : ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿರುವ ‘ಮಲ್ಲಿಕಾರ್ಜುನ’ ಹತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ ‘ತವಸಿ’ ಚಿತ್ರದ ರಿಮೇಕ್. ಸಂಭಾಷಣೆಯಿಂದ ಹಿಡಿದು ಎಲ್ಲವನ್ನೂ ಆ ಚಿತ್ರದಿಂದಲೇ ಯಥಾವತ್ತಾಗಿ ತೆಗೆಯಲಾಗಿದೆ. ನಿರ್ದೇಶಕ ಮುರಳಿ ಮೋಹನ್ ಕೂಡ ಮಾಡಿರುವುದು ಅದೇ ನಕಲು. ಹಳ್ಳಿಯ ಪಾಳೇಗಾರರ ವೈಷಮ್ಯದ ಕಥೆ ಹೊಂದಿರುವ ‘ಮಲ್ಲಿಕಾರ್ಜುನ’ದಲ್ಲಿ ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಚಿತ್ರಗಳಲ್ಲಿ ಕಂಡುಬರುವ ಮೆರುಗು ಇಲ್ಲಿ ಕಿಂಚಿತ್ತೂ ಇಲ್ಲ. ಹಳೆಯ […]

ಚೆನ್ನಮ್ಮ ಐಪಿಎಸ್ ವಿಮರ್ಶೆ

Wednesday, July 6th, 2011
Chennamma IPS/ಚೆನ್ನಮ್ಮ ಐಪಿಎಸ್

“ನಾನು ಖಾಕಿ ಹಾಕಿರೋದು ಶೋಕಿಗಲ್ಲ…ಗನ್ ಹಿಡಿದಿರೋದು ಅಲಂಕಾರಕ್ಕಲ್ಲ…ಅನ್ಯಾಯಕ್ಕೆ ಹಳ್ಳತೋಡಿ ಸಮಾಧಿ ಕಟ್ಟೋಕೆ…ನ್ಯಾಯದ ಬಾವುಟ ಹಾರಿಸೋಕೆ…” ಎಂದು ಚೆನ್ನಮ್ಮ ಅಬ್ಬರಿಸಿದರೆ ಸಾಕು ಎದುರಾಳಿಗಳ ಚಡ್ಡಿ ಒದ್ದೆಮುದ್ದೆಯಾಗುತ್ತದೆ. ಸಾಹಸ ಪ್ರಿಯರಿಗೆ ಚಿತ್ರಮಂದಿರದಲ್ಲೇ ದೀಪಾವಳಿ. ಚೆನ್ನಮ್ಮ ಐಪಿಎಸ್ ಚಿತ್ರದಹೈಲೈಟ್‌ಗಳು ಒಂದೆರಡಲ್ಲ. ಅದಿಯಿಂದ ಅಂತ್ಯದವರೆಗೂ ಜಯಹೇ ಜಯ ಜಯ ಜಯಹೇ. ಚೆನ್ನಮ್ಮ ಫಸ್ಟ್ ವಾರ್ನ್ ಮಾಡ್ತಾರೆ. ಬದಲಾದರೆ ಸಂತೋಷ. ಇಲ್ಲಾಂದ್ರೆ ವಾರ್. ಸತ್ತರೂ ಸಂತೋಷ…ಬದುಕಾ ಸಾವಾ? ನೀನೆ ಡಿಸೈಟ್ ಮಾಡು ಎನ್ನುತ್ತಿದ್ದರೆ ರೌಡಿಗಳು ಮನಸ್ಸಿನಲ್ಲೇ ಜನಗಣ ಮನ ಜಪಿಸುತ್ತಾರೆ.ರಫ್ ಅಂಡ್ ಟಫ್ ಪೊಲೀಸ್ […]

ಎಂದಿರನ್’ ಚಿತ್ರವಿಮರ್ಶೆ

Tuesday, October 5th, 2010
Endiran

ಮಂಗಳೂರು : ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟನ್ನು ಹಾಕಿ ನಿರ್ದೇಶಕ ಶಂಕರ್  ‘ಎಂದಿರನ್’ ಚಿತ್ರ ನಿರ್ಮಿಸಿದ್ದಾರೆ. ‘ಎಂದಿರನ್’ ಚಿತ್ರದ ಒಟ್ಟು ಬಜೆಟ್ 162 ಕೋಟಿ ರೂಪಾಯಿಗಳು. ದೇಶಿಯ ಚಿತ್ರಗಳಲ್ಲಿ ಇಷ್ಟೊಂದು ಹಣ ಹಾಕಿದ ಚಿತ್ರ ಇದೇ ಮೊದಲು.  ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ಅದ್ಬುತ ಸ್ಟಂಟ್ ಹಾಗೂ ಸಂಭಾಷಣೆಗಳು ಚಿತ್ರದ ಹೈಲೈಟ್ಸ್. ಮೂರೂ ಭಾಷೆಗಳಲ್ಲಿ ಬಿಡುಗಡೆ ಗೊಂಡಿದೆ ಹಿಂದಿಯಲ್ಲಿ ‘ರೊಬೊಟ್’, ತಮಿಳಿನಲ್ಲಿ ‘ಎಂದಿರನ್’ ಮತ್ತು ತೆಲುಗಿನಲ್ಲಿ ‘ರೊಬೊ’.  ರಜನಿಕಾಂತ್, ಡ್ಯಾನಿ, ಐಶ್ವರ್ಯಾ ರೈ ಮುಖ್ಯ ಪಾತ್ರಗಳಲ್ಲಿರುವ ಈ ಚಿತ್ರವನ್ನು ದುಡ್ಡು […]

ಕಾಲ್ಗೆಜ್ಜೆ ಚಿತ್ರ ವಿಮರ್ಶೆ

Saturday, August 21st, 2010
ಕಾಲ್ಗೆಜ್ಜೆ ಚಿತ್ರ ವಿಮರ್ಶೆ

ಬೆಂಗಳೂರು : ಕಾಲ್ಗೆಜ್ಜೆ  ದ್ವನಿ ಸುರುಳಿ  ಜನರನ್ನು  ಮೋಡಿ ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದು ಇದರ ಗುಟ್ಟು. ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ.  ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ . ಚಿತ್ರದ […]