ಬೆಲೆ ವಿಮೆ ವ್ಯಾಪ್ತಿಗೆ ಅಡಿಕೆ: ಪ್ರಸ್ತಾವನೆಗೆ ಡಿಸಿ ಸೂಚನೆ

Friday, May 30th, 2014
DC Mangalore

ಮಂಗಳೂರು : ಅಡಿಕೆ ಬೆಲೆಯನ್ನು ತೋಟಗಾರಿಕೆ ಇಲಾಖೆಯ ಮೂಲಕ ಬೆಳೆ ವಿಮೆ ವ್ಯಾಪ್ತಿಗೆ ತರುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮುಂಗಾರು 2014ರ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಅಡಿಕೆ ಅಲ್ಲದೆ, ಕಾಳುಮೆಣಸು, ಕೋಕಾ, ಅನಾನಸು, ಗೇರು ಕೃಷಿಯನ್ನು ಬೆಳೆ ವಿಮಾ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸುವಂತೆ ಅವರು ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ದಕ್ಷಿಣ […]

ದಕ್ಷಿಣ ಕನ್ನಡ – ಉಡುಪಿ ಲೋಕಸಭೆ ಬಿಜೆಪಿಗೆ ಭರ್ಜರಿ ಗೆಲುವು

Friday, May 16th, 2014
Nalin Kumar

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್‌ ಕುಮಾರ್‌ ಕಟೀಲ್‌ ಅವರು 1,43,000 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜನಾರ್ದನ ಪೂಚಾರಿ ಅವರನ್ನು ಸೋಲಿಸಿದ್ದಾರೆ. ನಳೀನ್‌ ಕುಮಾರ್‌ ಕಟೀಲ್‌ ಅವರು 6,42,739 ಮತಗಳನ್ನು ಪಡೆದರೆ. ಜನಾರ್ದನ ಪೂಚಾರಿ ಅವರು 4,99,030 ಮತಗಳನ್ನು ಪಡೆದರು. ದಕ್ಷಿಣಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಅಲೆಗೆ ಭರ್ಜರಿ ಮತಗಳು ಬಿಜೆಪಿ ತೆಕ್ಕೆಗೆ ಬಿದ್ದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲು ಅವರು ಸತತ ಎರಡನೇ ಬಾರಿಗೆ […]

ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ‘ಗ್ಯಾಂಗ್‌’ ರಚನೆ

Wednesday, May 7th, 2014
Mahabala Marla

ಮಂಗಳೂರು : ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಒಂದೊಂದು ‘ಗ್ಯಾಂಗ್‌’ ರಚನೆ ಮಾಡಬೇಕು ಎಂದು ಮೇಯರ್‌ ಮಹಾಬಲ ಮಾರ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸೋಮವಾರದಿಂದ ಗ್ಯಾಂಗ್‌’ ರಚನೆ ನಡೆಯಲಿದೆ. ಮಳೆಗಾಲ ಹತ್ತಿರವಾದ್ದರಿಂದ ತುರ್ತಾಗಿ ತೋಡು, ಚರಂಡಿಗಳ ಕೆಲಸ ಮಾಡಬೇಕು. ಪ್ರತೀ ಪಾಲಿಕೆ ಸದಸ್ಯರು ಆಯಾಯ ವಾರ್ಡ್‌ಗಳಲ್ಲಿ ಮಳೆಗಾಲ ಎದುರಿಸಲು ಸಿದ್ಧತೆ ಮಾಡಬೇಕು ಎಂದು ಅವರು ಹೇಳಿದರು. ತಾಂತ್ರಿಕ ಕಾರಣಗಳನ್ನು ನೀಡಿ ಪಾಲಿಕೆ ಅಧಿಕಾರಿಗಳು […]

ಟಿಪ್ಪರ್‌-ಟ್ರಕ್‌ ಮುಖಾಮುಖೀ ಚಾಲಕರಿಬ್ಬರಿಗೆ ಗಂಭೀರ ಗಾಯ

Tuesday, May 6th, 2014
lorry Accident

ಮಂಗಳೂರು: ಟಿಪ್ಪರ್‌ ಹಾಗೂ ಟ್ರಕ್‌ ಮುಖಾಮುಖೀ ಡಿಕ್ಕಿಯಾಗಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ನಂತೂರು ಸರ್ಕಲ್‌ ಬಳಿ ಮೇ6ರ ಬೆಳಗ್ಗೆ ಸಂಭವಿಸಿದೆ. ಮರಳು ಸಾಗಿಸುತ್ತಿದ್ದ ಟಿಪ್ಪರ್‌ ಮಂಗಳೂರು ಕಡೆಗೆ ಬರುತ್ತಿದ್ದರೆ ಕೊಕೊಕೋಲಾ ಪಾನಿಯಗಳ ಬಾಕ್ಸ್ ತುಂಬಿಸಿದ್ದ ಟ್ರಕ್‌ ಕೇರಳದತ್ತ ಚಲಿಸುತ್ತಿತ್ತು . ಟ್ರಕ್‌ ಚಾಲಕ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಮುಖಾಮುಖೀಯಾಗಿ ಎರಡೂ ವಾಹನಗಳು ರಸ್ತೆಗೆ ಪಲ್ಟಿಯಾಗಲು ಕಾರಣವಾಯಿತು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕರಿಬ್ಬರ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಕಲ್ಲು ಕೋರೆಯಲ್ಲಿ ಭೀಕರ ಸ್ಫೋಟ ಇಬ್ಬರು ಸ್ಥಳದಲ್ಲೇ ಮೃತ, ನಾಲ್ವರಿಗೆ ಗಂಭೀರ ಗಾಯ

Monday, May 5th, 2014
explosion died

ಕಿನ್ನಿಗೋಳಿ : ಕಲ್ಲು ಕೋರೆ ಸಮೀಪದ ಶೆಡ್‌ನ‌ಲ್ಲಿ ರವಿವಾರ ಭೀಕರ ಸ್ಫೋಟ ಸಂಭವಿಸಿದ್ದುದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುಮಾರು 10ಕ್ಕೂ ಹೆಚ್ಚು ಮನೆಗಳು ಛಿದ್ರಗೊಂಡಿವೆ. ಕಿನ್ನಿಗೋಳಿಯ ಐಕಳ ನೆಲ್ಲಿಗುಡ್ಡೆಯ ಕಲ್ಲಿನ ಕೋರೆಯ ಪಕ್ಕದಲ್ಲೇ ಕಾರ್ಮಿಕರ ಶೆಡ್‌ಗಳು ಇದ್ದು ಅವುಗಳಲ್ಲಿ ತಮಿಳುನಾಡು ಸಹಿತ ರಾಜ್ಯದ ವಿವಿಧ ಭಾಗಗಳ 25ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕೆಲವು ಗುಡಿಸಲುಗಳು ಸಿಮೆಂಟ್‌ ಶೀಟ್‌ ಹಾಕಿ ನಿರ್ಮಿಸಿದವು ಹಾಗೂ ಮತ್ತೆ ಕೆಲವು ಪ್ಪಾಸ್ಟಿಕ್‌ ಹೊದೆಸಿದವು. ಶೆಡ್‌ನ‌ಲ್ಲಿ ವಾಸವಾಗಿದ್ದ ತಮಿಳುನಾಡು […]

ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ 21 ಜೋಡಿಗಳ ಸಾಮೂಹಿಕ ವಿವಾಹ

Monday, May 5th, 2014
Rosario Cathedral

ಮಂಗಳೂರು : ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ (ಎಸ್‌.ವಿ.ಪಿ.)ದ 40ನೇ ವರ್ಷದ ಸಾಮೂಹಿಕ ವಿವಾಹ ರವಿವಾರ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ 21 ಜೋಡಿಗಳು ಸತಿ ಪತಿಗಳಾಗಿ ದಾಂಪತ್ಯ ಜೀವನ ಪ್ರವೇಶಿಸಿದರು. ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ ಪರವಾಗಿ ನವ ದಂಪತಿಗಳಿಗೆ ತಲಾ 5 ಸಾವಿರ ರೂ. ಠೇವಣಿ ಪತ್ರ, ಅಡುಗೆ ಸಾಮಗ್ರಿ ಮತ್ತು ಬಟ್ಟೆ ಬರೆ ಸಹಿತ ಒಟ್ಟು 10,000 ರೂ. ಮೌಲ್ಯದ ಉಡುಗೊರೆ ನೀಡಲಾಯಿತು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| […]

ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾ ಸದಸ್ಯರಿಂದ ಪ್ರತಿಭಟನೆ

Friday, May 2nd, 2014
Kranti Sena

ಮಂಗಳೂರು: ನಗರದ ಪಳ್ನೀರ್ ಬಳಿ ಇರುವ ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾದ ಸದಸ್ಯರು ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ರವಾನೆ ಮಾಡಿಸಲು ಹಿಂದೂ ಯುವಕರನ್ನು ಮಲಬಾರ್ ಗೋಲ್ಡ್ ಸಂಸ್ಥೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೆಲವು ದಿನಗಳ ಹಿಂದೆ ಭಾರತ್ ಕ್ರಾಂತಿ ಸೇನಾದ ಸಂಸ್ಥಾಪಕ ಪ್ರಣವಾನಂದ ಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಲಬಾರ್ ಗೋಲ್ಡ್ ಸಂಸ್ಥೆ ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದೆ. ಇದಕ್ಕೆ ಹಿಂದೂ ಯುವಕರನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. […]

ದೆಹಲಿಯಲ್ಲಿ ಬಿಸು ಪರ್ಬ, ತುಳುವಿಗೆ ಸಂವಿಧಾನದ ಮಾನ್ಯತೆಗಾಗಿ ಹೋರಾಟ

Thursday, May 1st, 2014
Delhi Tulu Siri

ನವದೆಹಲಿ: ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಭಾನುವಾರ ದೆಹಲಿಯ ನೆಹರು ಪಾಕರ್್ನಲ್ಲಿ ಸೇರಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ತಮ್ಮ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆತೀರ್ಮಾನಿಸಿದ್ದಾರೆ. ದೆಹಲಿ ತುಳು ಸಿರಿ ಆಯೋಜಿಸಿದ್ದ ‘ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕ ತುಳುವರು ಭಾಗವಹಿಸಿದ್ದರು. ದೆಹಲಿಯಲ್ಲಿ ವಿವಿಧ ವೃತ್ತಿಯಲ್ಲಿರುವ ರಾಜ್ಯದ ಕರಾವಳಿ ಭಾಗಕ್ಕೆ ಸೇರಿದ ಉತ್ಸಾಹಿಗಳು ದೆಹಲಿಯ ಬಿಸಿಲ ಧಗೆಗೆ ಸಡ್ಡು ಹೊಡೆದು `ಪರ್ಬ’ದ ಸಡಗರವನ್ನು ಅನುಭವಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು […]

ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು

Wednesday, April 30th, 2014
construction

ಮಂಗಳೂರು: ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಬ್ಲೂಬೇರಿಸ್ ಕಂಪೆನಿಯ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ದುರ್ಘ‌ಟನೆ ಎಪ್ರಿಲ್‌ 30ರಂದು ಸಂಭವಿಸಿದೆ. ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆಯುತ್ತಿದ್ದು ಮೇಲಿನಿಂದ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಬಾಗಲಕೋಟೆಯ ಕಾಶಿಯಪ್ಪ ಎಂದು ಗುರುತಿಸಲಾಗಿದೆ. ಕಾಶಯಪ್ಪ ಅವರ ಪತ್ನಿ ಮಹಾದೇವಿ ಹಾಗೂ ಸ್ವಾಮಿ ನಾಯಕ್‌ ಎನ್ನುವವರು ಗಾಯಗೊಂಡಿದ್ದು ಅವರಿಗೆ ಸ್ಥಳೀಯ […]

ಕೊಲ್ಲೂರು ಮೂಕಾಂಬಿಕೆಗೆ ರೇಶ್ಮೆ ಸೀರೆ ಸಮರ್ಪಿಸಿದ ರಾಧಿಕಾ ಕುಮಾರ ಸ್ವಾಮಿ

Sunday, April 27th, 2014
Radhika K

ಕೊಲ್ಲೂರು : ಖ್ಯಾತ ನಟಿ, ನಿರ್ಮಾಪಕಿ ರಾಧಿಕಾ ಕುಮಾರ ಸ್ವಾಮಿ ಎ. 25ರಂದು ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ರೇಶ್ಮೆ ಸೀರೆಯನ್ನು ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು. ಬೆಳಗ್ಗಿನ ಜಾವ ಕುಟುಂಬದ ಸದಸ್ಯರೊಡನೆ ಆಗಮಿಸಿದ ರಾಧಿಧಿಕಾ ಅವರನ್ನು ಜೆ.ಡಿ.ಎಸ್‌. ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಕೆ.ಎನ್‌. ಶ್ರೀಕಾಂತ ಅಡಿಗ ಕೊಲ್ಲೂರಿನಲ್ಲಿ ಸ್ವಾಗತಿಸಿದರು.