ಪಿಎ ಕಾಲೇಜಿನಲ್ಲಿ ಕಲ್ಲುತೂರಾಟ ಲಾಠಿಚಾರ್ಜ್

Friday, March 21st, 2014
pa collage

ಮಂಗಳೂರು : ಪಿಎ ಕಾಲೇಜಿನಲ್ಲಿ ಕಳೆದ ಐದಾರು ದಿನಗಳಿಂದ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಗುರುವಾರ ತಾರಕಕ್ಕೇರಿತ್ತು. ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಕಾಲೇಜು ಆಡಳಿತ ಮಂಡಳಿ ಕೊನೆಗೆ ಪೊಲೀಸರನ್ನು ಕರೆಸಿಕೊಂಡು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿಸಿದ ಪ್ರಸಂಗ ನಡೆಯಿತು. ಮಾ.15ರಿಂದ ಕಾಲೇಜಿನ ಮೂಲ ಸೌಕರ್ಯ ಕೊರತೆ, ಕಳಪೆ ಆಹಾರ ನೀಡಿಕೆ, ಬೌದ್ಧಿಕ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಿರತರಾಗಿದ್ದಾರೆ. ಗುರುವಾರ ಪಾಠ ಪ್ರವಚನಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದರು. ಮಾ.19ರೊಳಗೆ ಸೂಕ್ತ ವ್ಯವಸ್ಥೆ […]

ಸೈಕಲ್ ಬಿಟ್ಟು ಕೈ ಹಿಡಿದ ಸಿ.ಪಿ ಯೋಗೀಶ್ವರ್

Wednesday, March 19th, 2014
Yogeshwar

ಬೆಂಗಳೂರು : ಸಿ..ಪಿ ಯೋಗೀಶ್ವರ್ ಅವರು ಮತ್ತೊಮ್ಮೆ ಪಕ್ಷಾಂತರ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಏಕೈಕ ಶಾಸಕ ಮಂಗಳವಾರದಂದು ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಸಿ.ಪಿ ಯೋಗೀಶ್ವರ್ ಅವರು ಸಮಾಜವಾದಿ ಪಕ್ಷ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್, ಮುಂತಾದ ನಾಯಕರು ಉಪಸ್ಥಿತರಿದ್ದರು. ಕಳೆದ ಆಗಸ್ಟಿನಲ್ಲಿ ಚನ್ನಪಟ್ಟಣದಲ್ಲಿ ನಡೆದಿದ್ದ ಸಮಾಜವಾದಿ ಪಕ್ಷದ ಬೆಂಬಲಿಗರ ಸಭೆಯಲ್ಲಿ […]

ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ

Tuesday, March 18th, 2014
Anil Zha

ಬೆಂಗಳೂರು : ಮತದಾನದ ಅವಧಿ ವಿಸ್ತರಣೆ ಮಾಡಲು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದ್ದು, ರಾಜ್ಯದ 28 ಲೋಕಾಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಬೇಸಿಗೆ ಹಿನ್ನಲೆಯಲ್ಲಿ ಮತದಾನದ ಅವಧಿಯನ್ನು ಹೆಚ್ಚಿಸಲು ಮನವಿಗಳು ಬಂದಿದ್ದವು. ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಒಪ್ಪಿಗೆ ನೀಡಿದ್ದು, ಏ.17 ರಂದು […]

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ : ಜನಾರ್ಧನ ಪೂಜಾರಿ

Monday, March 17th, 2014
B Janardhana Poojary

ಮಂಗಳೂರು : ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತಾಧಿಕಾರಿಗಳು ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರಿ ಅಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಲಿಕೆ ಆಡಳಿತಾಧಿಕಾರಿಗಳು ಈಗಾಗಲೇ ಆಸ್ತಿ ತೆರಿಗೆಯನ್ನು ಶೇ. 15ರಷ್ಟು ಏರಿಕೆ […]

ದುರ್ಗಾಂಬಿಕಾ ಜಾತ್ರೆಯಲ್ಲಿ ಅರೆಬೆತ್ತಲೆಯ ಬೇವಿನ ಉಡುಗೆ ಸೇವೆ, ಕೋಣನ ವಧೆ

Thursday, March 13th, 2014
Dhavangere Durgambika Temple

ದಾವಣಗೆರೆ: ಜಿಲ್ಲಾಡಳಿತದ ಕಟ್ಟು­ನಿಟ್ಟಿನ ಕ್ರಮದ ನಡುವೆಯೂ ನಗರದ ದುರ್ಗಾಂಬಿಕಾ ಜಾತ್ರೆಯಲ್ಲಿ ಅರೆಬೆತ್ತಲೆಯ ಬೇವಿನ ಉಡುಗೆ ಸೇವೆ ಮಂಗಳವಾರ ಮಧ್ಯರಾತ್ರಿಯಿಂದ ಬುಧ­ವಾರ ದಿನಪೂರ್ತಿ ನಿರಾತಂಕವಾಗಿ ನಡೆಯಿತು. ಜಾತ್ರೆ ಅಂಗವಾಗಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿತ್ತು. ಸ್ಥಳದಲ್ಲಿ ರಾತ್ರಿ­ಯಿಡೀ ಪೊಲೀಸರು ಕೋಣನ ವಧೆ ಮಾಡದಂತೆ ಎಚ್ಚರ ವಹಿಸಿದ್ದರು. ಅದರ ನಡುವೆಯೂ ದೇಗುಲದ ಹೊರ ವಲಯದಲ್ಲಿ ಮಧ್ಯರಾತ್ರಿ ಕೆಲವರು ಕೋಣನ ವಧೆ ಮಾಡಿ ಅಂಬೇಡ್ಕರ್‌ ವೃತ್ತದ ಮನೆಯೊಂದರಲ್ಲಿ ತಲೆ ಹಾಗೂ ಕಾಲುಗಳನ್ನು ಇಟ್ಟಿದ್ದರು. ಅದನ್ನು ದೇಗುಲದ ಸುತ್ತ ಪ್ರದಕ್ಷಿಣೆಗೆ ತರುವ ಮಾಹಿತಿ […]

ಕಿಡ್ನಿಗಳ ವೈಪಲ್ಯದಿಂದ ನರಳುತ್ತಿರುವ 8 ವರ್ಷದ ಬಾಲಕನಿಗೆ ಸಹಾಯಮಾಡಿ

Wednesday, March 12th, 2014
Rashan

ಮಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಕೊಡಿಯಾಲದಲ್ಲಿ ವಾಸವಾಗಿರುವ ಪುರುಷೋತ್ತಮ ಹಾಗೂ ಭವ್ಯಶ್ರೀ ದಂಪತಿಯ ಮಗನಾದ 8 ವರುಷ ಪ್ರಾಯದ ರೋಶನ್ ಎರಡೂ ಕಿಡ್ನಿಗಳು ವಿಫಲವಾಗಿದೆ. ಊರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಲಿಲ್ಲ. ಇದೀಗ ಫಾದರ್ಮುಲ್ಲಾರ್ ಆಸ್ಪತ್ರೆ ಕಂಕನಾಡಿ- ಮಂಗಳೂರು ಇಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎರಡೂ ಕಿಡ್ನಿಗಳ ಕಸಿಗಾಗಿ ಸುಮಾರು 6 ಲಕ್ಷ ರೂ. ವೆಚ್ಚವಾಗಲಿದೆ. ಇದಲ್ಲದೇ ಡಯಾಲಿಸಿಸ್ಗಾಗಿ ಮಾಸಿಕ 25 ಸಾವಿರ ರೂ. ವೆಚ್ಚವಾಗಲಿದೆ ಮತ್ತು ವಾರಕ್ಕೆ ಮೂರು […]

ಮಲೇಷ್ಯಾ ವಿಮಾನದ ಕುರುಹು ಪತ್ತೆ

Wednesday, March 12th, 2014
Malaysian-plane

ಕೌಲಾಲಂಪುರ: ನಾಲ್ಕು ದಿನದ ಹಿಂದೆ ಜಲಸಮಾಧಿಯಾಗಿದ್ದ ಮಲೇಷ್ಯಾ ವಿಮಾನದ ಗುರುತು ಪತ್ತೆಯಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಕೋಲಲಂಪೂರ್‌ನಿಂದ ಚೀನಾದ ಬೀಜಿಂಗ್‌ನತ್ತ ಹೋರಟಿದ್ದ ವಿಮಾನ ಸೇನಾ ರಡಾರ್‌ನಲ್ಲಿ ಮಲಾಕ್ಕಾ ಬಳಿ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ. ಮಲೆಷ್ಯಾ ವಿಮಾನ ಶೋಧಕ್ಕೆ 10 ಉಪಗ್ರಹಗಳ ಬಳಕೆ ಮಾಡಲಾಗಿದ್ದು, 20 ವಿಮಾನಗಳು ಹಾಗೂ 40 ಹೆಚ್ಚು ಹಡಗುಗಳಿಂದ ಶೋಧ ಕಾರ್ಯ ಮುಂದುವರೆಸಲಾಗಿದೆ. ಮಲೇಷಿಯಾ ಮತ್ತು ಚೀನಾ ವಿಯಟ್ನಾಂ ಸರ್ಕಾರ ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಮಲೈಷ್ಯಾದಿಂದ […]

ಬಾಂಗ್ಲಾದೇಶಿ ಕಳ್ಳ ನುಸುಳುಕಾರರನ್ನು ದೇಶದಿಂದ ಓಡಿಸಿ : ವಿಶ್ವ ಹಿಂದು ಪರಿಷತ್, ಬಜರಂಗದಳ

Wednesday, February 26th, 2014
Bajranga Dal

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರ ಭಾರತಕ್ಕೆ ನುಸುಳುತ್ತಿದ್ದಾರೆ. ಈ ದೇಶದ ಅರ್ಥವ್ಯವಸ್ಥೆ ಹಾಗೂ ಆತಂರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿಯನ್ನು ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ. ಒಂದೆಡೆ ಈ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತಂದೊಡ್ಡಿದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರ, ಸಂಪತ್ತನ್ನು ಲೂಟಿಮಾಡುವುದು ಈ ಕೃತ್ಯಗಳಿಂದ […]

ವಿಜಕುಮಾರ ಶೆಟ್ಟರು ಮೊದಲು ರಾಜೀನಾಮೆ ನೀಡಲಿ : ಮಾಜಿ ಮೇಯರ್ ಅಶ್ರಫ್

Saturday, February 15th, 2014
Ashraf

ಮಂಗಳೂರು : ಎತ್ತಿನ ಹೊಳೆ ಯೋಜನೆ ಎಂಬ ಬೇರೆಯದೇ ಹೆಸರಿನಲ್ಲಿ ನೇತ್ರವತಿ ತಿರುವು ಯೋಜನೆಯನ್ನು ಜಾರಿಗೆ ತರಲು ಹೋರಟಿರುವುದು ದ.ಕ. ಜಿಲ್ಲೆಯ ಜನತೆಯ ಮೇಲೆ ಎಳೆಯುತ್ತಿರುವ ಬರೆಯಾಗಿದೆ. ಭವಿಷ್ಯದ ಸಂಕಷ್ಟವನ್ನು ಅರಿತು ಜಿಲ್ಲೆಯ ಜನತೆ ಎತ್ತಿನ ಹೊಳೆ ತಿರುವು ಯೋಜನೆ ವಿರುದ್ಧ ಹೋರಾಟಕ್ಕಿಳಿಯಬೇಕಿದೆ. ಈ ಯೋಜನೆ ವಿರೋಧಿಸಿ ನಡೆಯುವ ಹೋರಾಟದಲ್ಲಿ ನಾನು ಸಕ್ರಿಯನಾಗುತ್ತಿದ್ದೇನೆ. ಮಾಜಿ ಶಾಸಕ ವಿಜಯಕುಮಾರ ಶೆಟ್ಟರು ಎತ್ತಿನಹೊಳೆ ಯೋಜನೆ ತಡೆಯಲಾಗದ ನಮ್ಮ ಜಿಲ್ಲೆಯ ನಾಲ್ವರೂ ಸಚಿವರು ರಾಜೀನಾಮೆ ನೀಡಿ ಹೋರಾಟಕ್ಕಿಳಿಯಬೇಕು ಎಂದು ಮಾಜಿ ಮೇಯರ್ […]

`ಬರ್ಕೆ’ತುಳು ಚಿತ್ರ 14.02.2014 ರಂದು ತುಳುನಾಡಿನಾದ್ಯಂತ ಬಿಡುಗಡೆ.

Friday, February 14th, 2014
Barke

ಮಂಗಳೂರು: ಬರ್ಕೆ ಚಿತ್ರದ ಹೆಸರೆ ಹೇಳುವಂತೆ ಈ ಚಿತ್ರ ತುಳುನಾಡಿನ ಒಂದು ಭೂಗತ ಸಾಮ್ರಾಜ್ಯವನ್ನು ಅನಾವರಣಗೊಳಿಸುತ್ತದೆ, ಈ ಭೂಗತ ಸಾಮ್ರಾಜ್ಯದ ಹುಲಿಗಳು ತಮ್ಮ ಬದುಕನ್ನು ಬದಲಿಸಲು ಪ್ರಯತ್ನಿಸುವ ಇಂದು ಬೀಗ್ ಗೇಮ್ ಆ ಸಾಮ್ರಾಜ್ಯದ ನಿಜವಾದ ಹುಲಿ ಘರ್ಜನೆಯ ಪರಿಚಯವನ್ನು ಮಾಡಿಕೋಡುತ್ತದೆ. ಆ ಸಾಮ್ರಾಜ್ಯದ ಹೊರಾತಾಗಿ ನಮ್ಮಲ್ಲರ ಪ್ರೀತಿ ಈ ಹೃದಯ ಸಾಮ್ರಾಜ್ಯ, ಅದಕ್ಕಾಗಿ ಈ ಹುಲಿಗಳ ಸಾಮ್ರಾಜ್ಯದಲ್ಲಿ ತನ್ನ ಪ್ರೀತಿಗಾಗಿ ಬಂದ ಹುಡಿಗಿಯೋಬ್ಬಳು ತನ್ನ ಹೃದಯ ಸಾಮ್ರಾಜ್ಯವನ್ನು ಪಡೆಯುತ್ತಾಳೆ ಅಥವಾ ಆ ಸಾಮ್ರಾಜ್ಯದ ನಿಜವಾದ ಹುಲಿ […]