ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಪೋಷಕರು ,ಶಿಕ್ಷಕರು ಸಹಕರಿಸಬೇಕು-ಎ.ಬಿ.ಇಬ್ರಾಹಿಂ

Thursday, February 6th, 2014
dc Ibrahim

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆಯಾಗಿದ್ದರೂ ಸಹ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಮಾಣ ಅತ್ಯಂತ ಕಳವಳಕಾರಿಯಾಗಿದ್ದು ಫಲಿತಾಂಶ ಪ್ರಮಾಣ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಪೋಷಕರು/ಶಿಕ್ಷಕರು ಸಹಕರಿಸುವಂತೆ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆ ಸಾಕ್ಷರತೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.ನೈರ್ಮಲ್ಯದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಹಾಗೂ ರಾಷ್ಟ್ರ ಮಟ್ಟದಲ್ಲಿ […]

ಅಪರಿಚಿತ ಕಿಡಿಗೇಡಿಗಳ ತಂಡದಿಂದ ಉಳ್ಳಾಲ ಪರಿಸರದಲ್ಲಿ ದಾಂಧಲೆ

Wednesday, February 5th, 2014
Ullala area

ಉಳ್ಳಾಲ: ಅಪರಿಚಿತ ಕಿಡಿಗೇಡಿಗಳ ತಂಡವೊಂದು ಉಳ್ಳಾಲ ಪರಿಸರದಲ್ಲಿ ದಾಂಧಲೆ ಎಬ್ಬಿಸಿ ಹಲವು ಮನೆಗಳು, ವಾಹನಗಳು ಮತ್ತು ಬೋಟ್ ಗಳಿಗೆ ಹಾನಿಗೊಂಡಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ. ದಾಂಧಲೆಯಿಂದಾಗಿ ವಾರಿಜ, ಧರ್ಮಾವತಿ ಮತ್ತು ಶಾಂತವತಿ ಎಂಬವರ ಮೂರು ಮನೆಗಳು ಹಾನಿಗೊಂಡಿದೆ. ಆಕ್ರಮಣಕಾರರು ಕಾರು ಮತ್ತು ಬೈಕ್ ನ್ನೂ ಹಾನಿಗೊಳಿಸಿದ್ದಾರೆ. ಚಾಮುಂಡೇಶ್ವರಿ ಮತ್ತು ಕಾಂತಿ ಎಂಟರ್ ಪ್ರೈಸಸ್ ಗೆ ಸೇರಿದ ಎರಡು ಬೋಟ್ ಗಳನ್ನೂ ಹಾನಿಗೊಳಿಸಿದ್ದಾರೆ. ಹಾನಿಗೊಳಗಾದ ಮನೆಯವರು ಎಚ್ಚೆತ್ತು ಕೊಂಡಾಗ ಕಿಡಿಗೇಡಿಗಳ ತಂಡ ಪರಾರಿಯಾಯಿತು. ಉಳ್ಳಾಲ ಪರಿಸರದವರು […]

ಸುರತ್ಕಲ್ ನಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ರೌಡಿಯ ಕೊಲೆ

Tuesday, February 4th, 2014
Prakash Murder

ಮಂಗಳೂರು : ರೌಡಿ ಶೀಟರ್ ಹಾಗೂ ಕೊಲೆ ಪ್ರಕರಣದ ಆರೋಪಿ ಪ್ರಕಾಶ್ (26) ಎಂಬಾತನನ್ನು ನಗರದ ಹೊರವಲಯದ ಸುರತ್ಕಲ್ ಪರಿಸರದಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರಕಾಶ್ ಜೋಕಟ್ಟೆಯ ಶಿವರಾಜ್ ಕೊಲೆ ಪ್ರಕರಣದ ಆರೋಪಿ ಯಾಗಿದ್ದು, ಶಿವರಾಜ್ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಹಿಂದೆ ಜಾಮೀನು ಪಡೆದಿದ್ದ. ಈತ ಪಣಂಬೂರು ಠಾಣೆಯಲ್ಲಿ ನೋಂದಣಿಗೆ ಸಹಿ ಮಾಡಲು ತನ್ನ ತಂದೆಯ ಜತೆ ಉಡುಪಿಯಿಂದ ಪಣಂಬೂರು ಠಾಣೆಗೆ ಆಗಮಿಸಿ ವಾಪಾಸಾಗುವ ಸಂದರ್ಭದಲ್ಲಿ ಸುರತ್ಕಲ್ ನ […]

ನಿತ್ಯಾನಂದ ನಮ್ಮ ಕುಟುಂಬದ ಆನಂದವನ್ನೇ ಕೊಂದ,

Saturday, February 1st, 2014
nithyananda

ಬೆಂಗಳೂರು: ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವಾಲಯ, ಹೀಗೆ ನಾನು ಅಲೆಯದ ಜಾಗವಿಲ್ಲ. ಮಾಡಿಕೊಳ್ಳದ ಮನವಿಗಳಿಲ್ಲ. ಆದರೆ ಒಬ್ಬರೂ ಕಿಂಚಿತ್ತು ಸಹಾಯ ಮಾಡಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ನೀವಾದರೂ ದಯವಿಟ್ಟು ನನ್ನ ಮಗನನ್ನು ನನಗೆ ಮರಳಿ ಕೊಡಿಸುತ್ತೀರಾ?ಇದ್ದೊಬ್ಬ ಮಗ ಜೈಲಿನಲ್ಲಿರುವಾಗ ನಾನಾದರೂ ಹೇಗೆ ನೆಮ್ಮದಿಯಿಂದಿರಲಿ? ಮಗನನ್ನು ಉಳಿಸಿಕೊಳ್ಳಲು ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಈ ದೇಶದಲ್ಲಿ ಒಬ್ಬ ಸಾಮಾನ್ಯ ತಾಯಿಯ ನೋವಿಗೆ ಬೆಲೆ ಎಲ್ಲಿದೆ ಹೇಳಿ? ಸಿದ್ದರಾಮಯ್ಯನವರೇ, ನಾನು ಮೈಸೂರಿನವಳು. ನನ್ನ ಮಗನಾದ ವಿನಯ್ ಭಾರದ್ವಾಜ್ ಅಮೆರಿಕದಲ್ಲಿ ಶಿಕ್ಷೆಗೆ […]

ಬಿಗ್ ಬಜಾರ್ ಗೋದಾಮಿಗೆ ಬೆಂಕಿ, 30 ಕೋಟಿ ನಷ್ಟ

Saturday, February 1st, 2014
Bigbazar godown

ಬೆಂಗಳೂರು : ಬಿಗ್ ಬಜಾರ್ ಗ್ರೂಪ್‍ನ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 30 ಕೋಟಿ ನಷ್ಟ ಉಂಟಾಗಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 220ಕ್ಕೂ ಹೆಚ್ಚು ಸಿಬ್ಬಂದಿ ಹೊರಗೋಡಿ ಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. 12 ಅಗ್ನಿ ಶಾಮಕ ದಳದ ವಾಹನಗಳು ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಆನೇಕಲ್ ಪಟ್ಟಣದ ಇಂಡ್ಲವಾಡಿ ಕ್ರಾಸ್‍ನಲ್ಲಿರುವ ಬಿಗ್ ಬಜಾರ್ ಗ್ರೂಪ್‍ಗೆ ಸೇರಿದ ಫೀಚರ್ ಸಪ್ಲೈ ಗೋದಾಮಿನಲ್ಲಿ ಗುರುವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಶಾರ್ಟ್ […]

ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ ಸಮಾಪನ

Friday, January 31st, 2014
attur church

ಕಾರ್ಕಳ: ಉಡುಪಿ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್‌ ಲೋಬೊ ಅವರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ‘ಕ್ರಿಸ್ತಕೇಂದ್ರಿತ ಕುಟುಂಬ: ವಿಶ್ವಾಸದ ತೊಟ್ಟಿಲು’ ಎಂಬ ಸಂದೇಶದೊಂದಿಗೆ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ 5.30ರ ಕೊನೆಯ ದಿವ್ಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು. ಗುರುವಾರ ದೇವಮಾತೆಯ ಬಲಿಪೂಜೆಯ ಬಳಿಕ ಮಾತನಾಡಿದ ಅವರು, ಕುಟುಂಬಗಳು ಸಮಾಜದ, ನಾಡಿನ ಹಾಗೂ ವಿಶ್ವದ ಬುನಾದಿ. ಅದುದರಿಂದ ನಮ್ಮ ಕುಟುಂಬಗಳು ಪಿತ, ಸುತ ಮತ್ತು ಪವಿತ್ರಾತ್ಮದ ದೈವಿಕ ಕುಟುಂಬದಂತೆ. ಏಸು […]

ಸೈಂಟ್ ಆ್ಯನ್ಸ್ ಸಮೂಹ ಸಂಸ್ಥೆ ಮುಲ್ಕಿ ವತಿಯಿಂದ ಗಣರಾಜ್ಯೊತ್ಸವ ಆಚರಣೆ

Thursday, January 30th, 2014
Mulki st.ann's

ಮುಲ್ಕಿ: ಸೈಂಟ್ ಆ್ಯನ್ಸ್ ಸಮೂಹ ಸಂಸ್ಥೆ ಮುಲ್ಕಿ ಹಾಗೂ ಭಾರತ ಕ್ರೈಸ್ತ  ಚರ್ಚುಗಳ ಮಹಾ ಒಕ್ಕೂಟ ಹಳೆಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-1-2018 ರಂದು ಸೈಂಟ್ ಆ್ಯನ್ಸ್  ಕಾಲೇಜು ಆಫ್ ನರ್ಸಿಂಗ್ ಸಭಾಂಗಣ ಮುಲ್ಕಿಯಲ್ಲಿ ಗಣರಾಜ್ಯೊತ್ಸವ 2014 ರ ಪ್ರಯುಕ್ತ ಅಂತರ್ ಕಾಲೇಜು ಗಣರಾಜ್ಯೊತ್ಸವ ಸಂಗೀತ ಸ್ವರ್ಧೆ ಮತ್ತು ಮಧ್ಯವರ್ಜನಾ ಕಾರ್ಯಕ್ರಮವನ್ನು ರೈಟ್ ರೆವೆ. ಡಾ. ಸಿಲ್. ಪುಟರ್ಾಡೋ ವಿಶ್ರಾಂತ ಬಿಷಪ್ ಸಿ.ಎಸ್.ಐ ರವರು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೇನಿಯಲ್ ದೇವರಾಜ್ ದಕ್ಷಿಣ ಭಾರತ ಕ್ರೈಸ್ತ ಚರ್ಚುಗಳ ಮಹಾ ಒಕ್ಕೂಟ […]

ಉಜಿರೆ ರುಡ್ ಸೆಟ್ ನಲ್ಲಿ ಮೆನ್ಸ್ ಪಾರ್ಲರ್ ಮೆನೇಜ್ ಮೆಂಟ್ ತರಬೇತಿಯ ಸಮಾರೋಪ ಸಮಾರಂಭ

Saturday, January 25th, 2014
Rudset

ಉಜಿರೆ : ಕಳೆದ 30 ದಿನಗಳಿಂದ ರುಡ್ ಸೆಟ್  ಸಂಸ್ಥೆಯಲ್ಲಿ ನಡೆಯುತ್ತಿದ್ದ ಮೆನ್ಸ್ ಪಾರ್ಲರ್  ಮೆನೇಜ್ ಮೆಂಟ್  ತರಬೇತಿಯ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಬಾರ್ಡ್, ಪ್ರಾದೇಶಿಕ ಕಛೇರಿ, ಬೆಂಗಳೂರು ಇದರ ಉಪ ಮಹಾ ಪ್ರಭಂಧಕರಾದ ಶ್ರೀ ಟಿ. ರಮೇಶ್ರವರು ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತ್ತಾ ಜೀವನದಲ್ಲಿ ಗುರಿಯನ್ನು ಸಾದಿಸಬೇಕಾದರೆ ಆತ್ಮವಿಸ್ವಾಸ ಮತ್ತು ಪರಿಶ್ರಮ ಬಹಳ ಮುಖ್ಯ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ನಬಾರ್ಡ್, ವೃತ್ತ ಕಛೇರಿ, ಮಂಗಳೂರು ಇದರ […]

ಹ್ಯಾಪಿ ಬರ್ತಡೇ ಅಜಯ್ ರಾವ್

Friday, January 24th, 2014
Ajay-Rao

ಬೆಂಗಳೂರುಃ  ಇಂದು ನಟ ಅಜಯ್ ರಾವ್ ಹುಟ್ಟು ಹಬ್ಬ.ಸ್ಯಾಂಡಲ್ ವುಡ್ ನ ಅತ್ಯಂತ ಮುದ್ದಾದ ನಟರಲ್ಲಿ ಅಜಯ್ ಕೃಷ್ಣ ರಾವ್ ಒಬ್ಬರು. ಹೆಚ್ಚಾಗಿ ಜನಕ್ಕೆ ತಿಳಿದಿರುವುದು ಅಜಯ್ ರಾವ್ ಹೆಸರಲ್ಲಿ.ಇವರು ತಮ್ಮ ಹೋಂಬ್ಯಾನರ್ ಆರಂಭ ಮಾಡುತ್ತಿದ್ದಾರೆ. ಅದನ್ನು ಇಂದು ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಲಾಂಚ್ ಮಾಡುತ್ತಿದ್ದಾರೆ. ಈ ಬ್ಯಾನರಿನ ಅಡಿಯಲ್ಲಿ ನಿರ್ಮಿತವಾಗುವ ಚಿತ್ರಗಳ ಬಗ್ಗೆ ತಿಳಿಸುತ್ತಾರೆ. ಜನವರಿ 24 ಅಂದರೆ ಇಂದು ಅವರ ಜನ್ಮದಿನ. ಅಜಯ್ ಬಹು ನಿರೀಕ್ಷಿತ,ಬೃಹತ್ ಕನಸಾದ ಶ್ರೀ […]

ಸುನಂದಾ ಸಾವಿನ ತನಿಖೆ ಕ್ರೈಮ್ ಬ್ರಾಂಚ್ ಪೊಲೀಸರಿಗೆ

Friday, January 24th, 2014
Sunanda-Pushkar

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಒಳಗೊಂಡ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪ್ರಕರಣನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಸುನಂದಾ ಸಾವಿನ ತನಿಖೆ ನಡೆಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕರಣದ ಹತ್ಯೆ ಅಥವಾ ಆತ್ಮಹತ್ಯೆಯ ವಿವಿಧ ಕೋನಗಳನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಔಷಧಿಯ ಅತಿಸೇವನೆಯಿಂದ ವಿಷಕಾರಿಯಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ತರೂರ್ ಜತೆ […]