ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಹಿಂದೂ ಯುವ ಸೇನೆ ಪ್ರತಿಭಟನೆ

Friday, January 3rd, 2014
Hindu yuva sene

ಮಂಗಳೂರು: ಹಿಂದೂ ಯುವ ಸೇನೆಯ ವತಿಯಿಂದ ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ದೇರಳಕಟ್ಟೆಯಲ್ಲಿ ನಡೆದ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗಳ ಮೇಲೆ ಗೂಂಡ ಕಾಯ್ದೆಯನ್ನು ಹೇರಿ ಮರಣದಂಡನೆ ಶಿಕ್ಷೆ ವಿಧಿಸಬೇಕು. ದೇರಳಕಟ್ಟೆ ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ […]

ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಟೌನ್ ಹಾಲ್ ಅಡವು

Thursday, January 2nd, 2014
townhall

ಬೆಂಗಳೂರು : ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಬಿಬಿಎಂಪಿ ಟೌನ್ ಹಾಲ್ ಅಡ ಇಡುವುದಕ್ಕೆ ತೀರ್ಮಾನಿಸಿದೆ. ಹಳೆಯ ಸಾಲ ತೀರಿಸುವುದಕ್ಕೆ ಬಿಬಿಎಂಪಿ ಪಾರಂಪರಿಕ ಕಟ್ಟಡವನ್ನು ಅಡ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ನವರು ಟೌನ್‌ಹಾಲ್ ಬದಲಿಗೆ ಬೇರೆ ಕಟ್ಟಡವನ್ನು ಅಡವಿಡುವಂತೆ ಸೂಚನೆ ನೀಡಿದ್ದಾರೆ. ಶೇ. 14 ರಂತೆ ಮುಂಚೆ ಪಡೆದ ಸಾಲದ ಮೊತ್ತ ಬಿಬಿಎಂಪಿಯಲ್ಲಿ 200 ಕೋಟಿ. ರೂ. ಮೀರಿದೆ. ಆ ಸಾಲ ತೀರಿಸುವುದಕ್ಕೆ ಈಗ ಇನ್ನೊಂದು […]

ಜನವರಿ 5ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ‘ತುಳುನಾಡ್ದ ಜಾತ್ರೆ’

Tuesday, December 31st, 2013
odiyoor Tulunadu Jatre

ಮಂಗಳೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಫೆಬ್ರವರಿ 7ರಿಂದ ನಡೆಯಲಿರುವ ‘ತುಳುನಾಡ್ದ ಜಾತ್ರೆ’ ಬಲೇ ತೇರ್ ಒಯಿಪುಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 5ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಜನವರಿ 5ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಜ್ಯೋತಿ ಸರ್ಕಲ್‌ನಿಂದ ‘ತುಳುನಾಡ್ದ ಜಾತ್ರೆ’ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯ ಸಂಚಾಲಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಉದ್ಘಾಟಿಸಲಿದ್ದಾರೆ. ನೆಹರೂ ಮೈದಾನದಲ್ಲಿ ಸಂಜೆ 3.30ಕ್ಕೆ ತುಳುನಾಡ ಜಾತ್ರೆ ಕಾರ್ಯಕ್ರಮವನ್ನು ಉಡುಪಿಯ ಪೇಜಾವರ […]

ಕ್ಯಾಂಪ್ಕೊ ಸಂಸ್ಥಾಪಕರಾದ ವಾರಾಣಾಸಿ ಸುಬ್ರಾಯ ಭಟ್‌ (87)

Friday, December 27th, 2013
Varanasi Subraya Bhat

ಬಂಟ್ವಾಳ: ಕ್ಯಾಂಪ್ಕೊ ಸಂಸ್ಥಾಪಕರಾದ ವಾರಾಣಾಸಿ ಸುಬ್ರಾಯ ಭಟ್‌ (87)ಅವರು ಧೀರ್ಘ‌ ಕಾಲದ ಅನಾರೋಗ್ಯದಿಂದ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ತಮ್ಮ ನಿವಾಸದಲ್ಲಿ ಡಿಸೆಂಬರ್‌ 27 ರಂದು ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯದ ಜಂಟಿ ಉದ್ಯಮವಾಗಿ ಜುಲೈ 11, 1973ರಲ್ಲಿ ಪ್ರಾರಂಭವಾದ ಸಂಸ್ಥೆ ಅಡಿಕೆ ಬೆಳೆಗಾರರ ಪಾಲಿನ ಆಶಾಕಿರಣವಾಯಿತು. ಎರಡು ರಾಜ್ಯಗಳ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡ ಬೆಳವಣಿಗೆಯ ಹಿಂದೆ ಸುಬ್ರಾಯ ಭಟ್‌ ಅವರ ಅಪಾರ ಶ್ರಮವಿತ್ತು. ಸುಬ್ರಾಯ […]

ರಂಗ ಕಲಾವಿದ ಧರ್ಮೇಂದ್ರ ಅಮೀನ್ ನಿಧನ

Tuesday, December 24th, 2013
Dharmendra Amin

ಮಂಜೇಶ್ವರ: ತುಳು ರಂಗಭೂಮಯಲ್ಲಿ 5000ಕ್ಕೂ ಅಧಿಕ ನಾಟಕಗಳ ಪ್ರದರ್ಶನದ ಮೂಲಕ ದೇಶ ವಿದೇಶದಲ್ಲಿ ಪ್ರಖ್ಯಾತಿಗಳಿಸಿದ ಹಾಸ್ಯ ಕಲಾವಿದ ಧರ್ಮೇಂದ್ರ ಅಮೀನ್ (40), ಹೃದಯಾಘಾತದಿಂದ ಮೃತರಾಗಿದ್ದಾರೆ. ಮೃತರು ಪತ್ನಿ ಸ್ಮಿತಾ, ಓರ್ವ ಪುತ್ರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಸೋಮವಾರ ಮಂಗಲ್ಪಾಡಿ ಸಮೀಪದ ಸಿರಿಗೋಳಿಯ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರಾ ಪ್ರಯುಕ್ತ, ಕಿಶೋರ ಡಿ. ಶೆಟ್ಟಿಯವರ “ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ” ಎಂಬ ನಾಟಕ ಪ್ರದರ್ಶನದ ವೇಳೆ ಸುಮಾರು ಮಧ್ಯರಾತ್ರಿ 2 ಗಂಟೆಯ ವೇಳೆಗೆ ನಾಟಕದ ಎರಡನೇ […]

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಿಧನ

Monday, December 23rd, 2013
GS Shivarudrappa

ಬೆಂಗಳೂರು : ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಸೋಮವಾರ ಮಧ್ನಾಹ್ನ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಕೆಲ ಕಾಲದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 12.16ರ ಸುಮಾರಿಗೆ ನಿಧನರಾಗಿದ್ದಾರೆ. ಹಿರಿಯ ಕವಿ, ಲೇಖಕ, ಸಂಶೋಧನೆಕಾರ, ಜನಮೆಚ್ಚಿದ ಕವಿ ಶಿವರುದ್ರಪ್ಪ ಅವರು ಪತ್ನಿಯರಾದ ರುದ್ರಾಣಿ, ಪದ್ಮ ಹಾಗೂ ಪುತ್ರರಾದ ಜಯದೇವ್, ಶಿವಪ್ರಸಾದ್, ಪುತ್ರಿ ಜಯಂತಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ. 1926ರ ಫೆಬ್ರವರಿ 7 ರಂದು ಜನಿಸಿದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಶಿಕಾರಿಪುರದಲ್ಲಿ […]

ಜಾನುವಾರು ವಿಶೇಷ ತಾಂತ್ರಿಕ ಕಾರ್ಯಾಗಾರ

Thursday, December 19th, 2013
Cattle

ಮಂಗಳೂರು : ಕಾರ್ಯಾಗಾರದಲ್ಲಿ ಹೊರಹೊಮ್ಮುವ ವಿಚಾರ,ಸಲಹೆಗಳು ರೈತ ಬಾಂಧವರಿಗೆ ತಲುಪಿಸುವಲ್ಲಿ ಜಿಲ್ಲೆಯ ಪಶುವೈದ್ಯರು ಶ್ರಮಿಸಬೇಕೆಂದು ಶ್ರೀಮತಿ ತುಳಸಿ ಮದ್ದಿನೇನಿ, ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ. ಜಿ.ಪಂ. ಹಾಗೂ ಪ್ರಭಾರ. ಜಿಲ್ಲಾಧಿಕಾರಿಗಳು ದಕ್ಷಿಣಕನ್ನಡ ಜಿಲ್ಲೆ ಇವರು ಪಶುವೈದ್ಯರಿಗೆ ಸೂಚಿಸಿದರು. ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು, ಕರ್ನಾಟಕ ರಾಜ್ಯ ಸರ್ಕಾರಿ ಪಶು ವೈದ್ಯರ ಸಂಘ (ರಿ), ಜಿಲ್ಲಾ ಶಾಖೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಹಾಗೂ ಯುನೈಟೆಡ್ […]

ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅಧಿಕಾರ ಸ್ವೀಕಾರ

Tuesday, December 17th, 2013
Mangalore police commissionaire R. Hitendra

ಮಂಗಳೂರು: ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಪೊಲೀಸ್‌ ಕಮಿಷನರೆಟ್‌ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಕಮಿಷನರ್‌ ಮನೀಶ್‌ ಕರ್ಭೀಕರ್‌ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋಮು ಗಲಭೆ ಸಂಭವಿಸುತ್ತಿರುವ ಬಗ್ಗೆ ಹಾಗೂ ಭೂಗತ ಚಟುವಟಿಕೆಗಳ ಕುರಿತು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು, ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕ್ರಿಮಿನಲ್‌ ಆರೋಪ ಹೊತ್ತ ಕೈದಿಗಳನ್ನು ಈಗಾಗಲೇ ಮೈಸೂರು […]

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪುಣ್ಯತಿಥಿ ಅಂಗವಾಗಿ ‘ಏಕತೆಗಾಗಿ ಓಟ’

Monday, December 16th, 2013
Run for Unity

ಮಂಗಳೂರು :  ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪುಣ್ಯತಿಥಿ ಅಂಗವಾಗಿ ರವಿವಾರ ನಗರದ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ವರೆಗೆ ‘ಏಕತೆಗಾಗಿ ಓಟ’ ಏರ್ಪಡಿಸಲಾಗಿತ್ತು. ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಕರಾವಳಿ ಶಿಕ್ಷಣ ಸಂಸ್ಥೆ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಅವರು  ಏಕತೆಗಾಗಿ ಓಟ ಕ್ಕೆ ಚಾಲನೆ ನೀಡಿದರು. ಗಣೇಶ್‌ ರಾವ್‌, ಮಾತನಾಡಿ ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲು ಯುವ ಜನತೆ ಒಗ್ಗಟ್ಟಾಗಬೇಕು. ಅಬ್ದುಲ್‌ ಕಲಾಂ ಕನಸು ನನಸು ಮಾಡಲು ಕೇವಲ ಯುವಜನತೆಯಿಂದ ಮಾತ್ರ ಸಾಧ್ಯ ಎಂದರು. […]

ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಚಾಲನೆ

Saturday, December 14th, 2013
Kudla kala Mela

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರಾವಳಿ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಡಿ14. ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಯುಕ್ತ ರು ಕಲಾವಿದ ಮಾತಿನಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಕಲೆಯ ಮೂಲಕ ವ್ಯಕ್ತ ಪಡಿಸುತ್ತಾನೆ. ಮನುಷ್ಯ ನೆಮ್ಮದಿಯನ್ನು ಕಾಣಲು ಕಲಾ ಪ್ರಕಾರಗಳನ್ನು ತಿಳಿಯಬೇಕು. ಇಂದಿನ […]