ಉಡುಪಿ ಮಾಜಿ ಶಾಸಕ ರಘುಪತಿ ಭಟ್ನ್ ನ ಎರಡನೇ ಮದುವೆ !

Thursday, October 10th, 2013
Raghupathi

ಉಡುಪಿ: ಉಡುಪಿ ಮಾಜಿ ಶಾಸಕ ರಘುಪತಿ ಭಟ್ ನಿನ್ನೆ ಎರಡನೇ ಮದುವೆಯಾಗುವುದರ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಘುಪತಿ ಭಟ್ ಅವರ ಮೊದಲ ಪತ್ನಿ ಪದ್ಮಪ್ರಿಯ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದರಿಂದ ದಾಂಪತ್ಯ ಜೀವನವನ್ನು ಮಿಸ್ ಮಾಡಿ ಕೊಂಡಿದ್ದ ರಘುಪತಿ ಭಟ್ ಇದೀಗ ಶಿಲ್ಪಾ ಶಾಸ್ತ್ರಿ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ. ಪದ್ಮಪ್ರಿಯ 2008ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಆತ್ಮಹತ್ಯೆಯಿಂದಾಗಿ ಅನೇಕ ಅನುಮಾನದ ಹುತ್ತಗಳು ಬೆಳೆದಿ ದ್ದವು. ಹೀಗಾಗಿ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ನೆರೆವೇರಿಸದ ಮಹಿಳಾ ಅರ್ಚಕರು

Monday, October 7th, 2013
widows pooja

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಇಬ್ಬರು ವಿಧವೆಯರಿಂದ ಕುದ್ರೋಳಿ ಕ್ಷೇತ್ರದಲ್ಲಿ  ಪೂಜೆ ಮಾಡಿಸುವುದರೊಂದಿಗೆ ಅರ್ಚಕರನ್ನಾಗಿ ನೇಮಕ ಮಾಡಿಸಿದರು. ಮಹಿಳೆಯರಾದ ಇಂದಿರಾ ಶಾಂತಿ(ಬಂಟ್ವಾಳ ಮೂಡ ಬಿ.ಸಿ.ರೋಡ್ ನವರು) ಲಕ್ಷ್ಮೀ ಶಾಂತಿ(ಪುತ್ತೂರಿನ ಬನ್ನೂರು ಗ್ರಾಮದವರು) ಇವರನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದೊಳಕ್ಕೆ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕುದ್ರೋಳಿ ಕ್ಷೇತ್ರದಲ್ಲಿರುವ  ನಾರಾಯಣಗುರು ಮೂರ್ತಿಗೆ, ಶನೀಶ್ವರ, ಮಹಾಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಗೋಕರ್ಣನಾಥ ದೇವರ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸುವುದರೊಂದಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಶ್ವತ್ಥಮರದ […]

ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವ

Saturday, October 5th, 2013
Mangalore-Dasara

ಮಂಗಳೂರು : ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯನ್ನು ಶನಿವಾರ  ಭಕ್ತ ಸಮೂಹದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾರದ ಮಾತೆಯನ್ನು ವಾದ್ಯ, ಚಂಡೆ, ವಾದಗದೊಂದಿಗೆ ಹುಲಿವೇಷದ ನೃತ್ಯದ ಜೊತೆ ಜೊತೆಯಲ್ಲಿ ಮೆರವಣಿಗೆಯಲ್ಲಿ ದೇವಳಕ್ಕೆ ಸುತ್ತ ಪ್ರದಕ್ಷಿಣಿ ಹಾಕಲಾಯಿತು. ಬಳಿಕ ಸಕಲ ವಿಧಿವಿಧಾನಗಳನ್ನು ಅನುಸರಿಸಿ ಮಾತೆ ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ನಗರದ ಖ್ಯಾತ ಉದ್ಯಮಿ […]

ಬೇಕರಿಯಲ್ಲಿ ಕೆಲಸ ಮಾಡುತಿದ್ದ ಓರ್ವ ಹುಡುಗಿ ಹಾಗೂ ಇಬ್ಬರು ಗಂಡು ಮಕ್ಕಳ ವಶ

Thursday, October 3rd, 2013
Child Labor

ಮಂಗಳೂರು : ಸಿಹಿತಿಂಡಿ ಬೇಕರಿಯಲ್ಲಿ ಕೆಲಸ ಮಾಡುತಿದ್ದ ಓರ್ವ ಹುಡುಗಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ದೂರಿನ ಮೇರೆಗೆ ಬಾಲಕಾರ್ಮಿಕ ಇಲಾಖೆ ಅಕ್ಟೋಬರ್ 3, ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕೊಂಡಿದೆ. ಕೋಡಿಕಲ್ ಸುಂಕದಕಟ್ಟೆ ಎಂಬಲ್ಲಿ ಕೇರಳ ಮೂಲದ ರವಿ.ಟಿ. ಎಂಬವರು ನಡೆಸುತ್ತಿದ್ದ ಬೇಕರಿ ಯೊಂದರಲ್ಲಿ ಬಾಲಕಾರ್ಮಿಕರಾಗಿ ಈ ಮೂವರು ಮಕ್ಕಳು ದುಡಿಸುತ್ತಿದ್ದರು. ಗ್ರಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಆನಂದ ಮೂರ್ತಿಯವರಿಂದ ಮಾಹಿತಿ ಪಡೆದ ಬಾಲಕಾರ್ಮಿಕ ಇಲಾಖೆ ಇಂದು […]

ನಗರದ ಪುರಭವನದಲ್ಲಿ ಗಾಂಧಿಜಯಂತಿ ಆಚರಣೆ

Wednesday, October 2nd, 2013
Gandhi Jayanthi

ಮಂಗಳೂರು : ಭಾರತ ಸೇವಾದಳ ದ.ಕ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಗಾಂಧಿಜಯಂತಿಯನ್ನು ಆಚರಿಸಲಾಯಿತು. ಭಾರತ ಸೇವಾದಳದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಗಾಂಧೀಜಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧಿ ಕೇವಲ ಭಾರತದ ಪಿತಾಮಹ ಮಾತ್ರವಲ್ಲ, ಅವರು ವಿಶ್ವದ ಪಿತಾಮಹ ಎಂದೆನಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಬ್ಯಾರಿಸ್ಟರ್ ಪದವಿಯನ್ನು ಪಡೆದ ಗಾಂಧೀ ಸ್ವಾತಂತ್ರ್ಯ ಹೋರಾಟದ ನೆಲೆಯಲ್ಲಿ ಯುವಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ವೈಯಕ್ತಿಕ ಸಾಧನೆಯ ಜೊತೆಗೆ ನಮ್ಮ ನಾಡಿನ […]

ಗಾಂಧೀಜಿ ಪ್ರಪಂಚದಾದ್ಯಂತ ಇನ್ನೂ ಜೀವಂತವಾಗಿದ್ದಾರೆ : ಬಿ‌ಎ.ಮೊಯ್ದಿನ್

Wednesday, October 2nd, 2013
Congress Office Gandhi Jayanti

ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ( ಅ. 2) ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಬಿ‌ಎ.ಮೊಯ್ದಿನ್  ಮಾತನಾಡಿ  ಯುವಕರಿಗೆ ಗಾಂಧೀಜಿ ತತ್ವಗಳನ್ನು ತಿಳಿಸುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಬೇಕು. ಯುವಕರಲ್ಲಿ ಸಹನಾಶೀಲತೆ ಸೃಷ್ಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ.  ಸ್ವದೇಶಿ ಕಾರ್ಯಕ್ರಮದ ಆಂದೋಲನದ ಮೂಲಕ ಅಹಿಂಸೆಯನ್ನು ಭೋಧಿಸಿದ್ದರೂ ಹಾಗಾಗಿ ಗಾಂಧಿ ತತ್ವಗಳು ಇಂದಿಗೂ ಅಮರವಾಗಿದೆ ಎಂದು ಅವರು ಹೇಳಿದರು. ಗಾಂಧಿ ಬ್ರಿಟಿಷರ […]

ಹಿರಿಯರನ್ನು ಗೌರವಿಸಿ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ

Wednesday, October 2nd, 2013
Senior Citizens day

ಮಂಗಳೂರು : ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಗೌರವಿಸಿ ಕುಟುಂಬದೊಂದಿರಿಸಿ ಪೋಷಿಸಬೇಕು. ಆದರೆ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸತ್ತಿರುವುದು   ದುರ್ದೈವ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಬಿ. ರಮಾನಾಥ ರೈ ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಬಜ್ಜೋಡಿಯ  ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯಲ್ಲಿ  ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ-2013 ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದು […]

ನೌಶಿದಾ ಅಪಹರಣ ಕಟ್ಟುಕಥೆ : ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ

Tuesday, October 1st, 2013
Noushida Kidnap

ಪುತ್ತೂರು : ಮಾಡಾವು ಕೈಕಂಬ ನಿವಾಸಿ ನೌಶಿದಾಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದೇನೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಅಪಹರಣದ ನಾಟಕ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಉಂಟುಮಾಡಿ ಪುತ್ತೂರಿನಲ್ಲಿ ಕೋಮು ದ್ವೆಶದ ಪರಿಸ್ಥಿತಿ ಉಂಟಾಗಿತ್ತು ಎಂದು ಅವರು ಹೇಳಿದರು. ನೌಶಿದಾ ತನ್ನನ್ನು ಅಪಹರಣ ಮಾಡಲಾಗಿದೆ ಎಂಬ ಕಟ್ಟುಕಥೆಯಿಂದ ಪುತ್ತೂರಿನಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ನಡೆದಿತ್ತು. ಮುಂದೆ ಇಂತಹ ನಕಲಿ ಪ್ರಕರಣಗಳು ನಡೆಯಬಾರದು. ಈ ರೀತಿಯ ಮೋಸಗಳನ್ನು […]

ಸ್ಟೇಟ್ ಬ್ಯಾಂಕ್ ಬಳಿ ಓಮ್ನಿ ಕಾರಿಗೆ ಸಾರ್ಟ್ ಸರ್ಕ್ಯೂಟ್ ; ತಪ್ಪಿದ ಅನಾಹುತ

Wednesday, September 25th, 2013
Car-fair

ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್  ಬಳಿ ಇರುವ ಹ್ಯಾಮಿಲ್ಟನ್ ಕಟ್ಟಡದ ಮುಂಬಾಗದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಸಾರ್ಟ್ ಮಾಡುವಾಗ ಸಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಸಂಜೆ 3.30ಕ್ಕೆ ನಡೆದಿದೆ. KA 19 N 9475 ನಂಬರಿನ ಓಮ್ನಿ ಕಾರಿನಲ್ಲಿ ಕಾರಿನ ಮಾಲಿಕ ಮಹಮ್ಮದ್ ಪೈಗಂಬರ್ ರವರು ಕಂಕನಾಡಿಯಿಂದ ಮಂಗಳೂರಿನ ಹ್ಯಾಮಿಲ್ಟನ್ ಕಟ್ಟಡದ ವಕೀಲರಲ್ಲಿಗೆ ನೋಟರಿಗಾಗಿ ಬಂದಿದ್ದರು ಕಾರಿನ ಎಲ್ ಪಿಜಿ ಮುಗಿಯುವ ಹಂತದಲ್ಲಿದ್ದುದರಿಂದ ಮೂರು ಲೀಟರ್ ಪೆಟ್ರೋಲ್ ತುಂಬಿಸಿದ್ದರು. ನೋಟರಿ ಮುಗಿಸಿ ವಾಪಾಸಾಗುವಾಗ ಅವರ […]

ಕರಾವಳಿಯಲ್ಲಿ ಓಡಲು ಸಿದ್ಧವಾಗಿದೆ ಕೊಂಚಾಡಿಯ ‘ರಿಕ್ಷಾ ಡ್ರೈವರ್’

Saturday, September 21st, 2013
Rikshw driver Tulu Movie

ಮಂಗಳೂರು : ನಮ್ಮ ದೇಶದಲ್ಲಿ ಪ್ರತ್ಯೇಕವಾಗಿ ನಮ್ಮ ತುಳುನಾಡಿನಲ್ಲಿ ಸಂಚಾರ (ಸಾರಿಗೆ) ವ್ಯವಸ್ಥೆಯಡಿ ಯಾವ ಸಂದರ್ಭಗಳಲ್ಲೂ, ಯವ ಸಮಯಗಳಲ್ಲೂ ಸಿಗುವ ಒಂದೇ ಒಂದು ಸೌಕರ್ಯ ಅಂದರೆ ಅದು “ಆಟೋ ರಿಕ್ಷಾ”. ದಿನವಿಡೀ ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ದುಡಿದು ದಾರಿಯುದ್ದಕ್ಕೂ ಸಾರ್ವಜನಿಕರಿಗೆ ರಕ್ಷಣೆಯಾಗಿ ನಿಲ್ಲುವುದು ಇದೇ ರಿಕ್ಷಾ ಡ್ರೈವರ್ ಗಳು. “ರಿಕ್ಷಾ ಡ್ರೈವರ್ ” ಶೀರ್ಷಿಕೆ ಯಲ್ಲೇ ಇದು ಸಾಮಾನ್ಯ ರಿಕ್ಷಾ ಡ್ರೈವರ್ ನ ಬದುಕಿನ ಕಥೆಯೆಂದು ಪ್ರತಿಯೊಬ್ಬರಲ್ಲೂ ಮೂಡಿಬರುವ ಭಾವನೆ . ಹೌದು ,ಈ ಚಿತ್ರ ಕೂಡ […]