`ನಿರ್ಮಲ ಮಂಗಳೂರು ಅಭಿಯಾನಕ್ಕೆ’ ಶಾಸಕ ಜೆ.ಆರ್.ಲೊಬೋ ಅವರಿಂದ ಚಾಲನೆ

Thursday, August 22nd, 2013
Green Mangalore

ಮಂಗಳೂರು : ಶಿವಭಾಗ್ ಪಬ್ಲಿಕ್ ವೆಲ್ಫೆರ್ ಸೊಸೈಟಿ ವತಿಯಿಂದ ಮಂಗಳೂರು ಕ್ಲೀನ್ ಆಂಡ್ ಗ್ರೀನ್ ಕ್ಯಾಂಪೇನ್ ಕಾರ್ಯಕ್ರಮವಾದ `ನಿರ್ಮಲ ಮಂಗಳೂರು ಅಭಿಯಾನಕ್ಕೆ ಗುರುವಾರ ಶಾಸಕ ಜೆ.ಆರ್.ಲೊಬೋ ಚಾಲನೆ ನೀಡಿದರು. ಬಳಿಕ ಮಾತನಾಡಿದ ಲೊಬೋ ಮನೆ, ಅಂಗಳ ಹಾಗೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳಬೇಕು. ಪ್ಲಾಸ್ಟಿಕ್ ಅಂತಹ ತಾಜ್ಯಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಜೈವಿಕ ತಾಜ್ಯಗಳನ್ನು ರಸಗೊಬ್ಬರಗಳಾಗಿ ಪರಿವರ್ತಿಸಬಹುದು. ಇದರಿಂದ ಪಚ್ಚನಾಡಿಯಲ್ಲಿ ಶೇಖರಣೆಯಾಗುವ ಕಸಗಳ ರಾಶಿಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಮಾಡಬಹುದು. ಸಾರ್ವಜನಿಕರ ಸಹಕಾರದಿಂದ ಮಾತ್ರ ನಗರವನ್ನು […]

ರೈತರ ಸಮಸ್ಯೆಗಳನ್ನು ಅವಲೋಕನ ಮಾಡಲು ಸೆ.25ರಂದು ಶಿವಮೊಗ್ಗದಲ್ಲಿ ಸಭೆ

Thursday, August 22nd, 2013
Nagaraja shetty

ಮಂಗಳೂರು :  ರಾಜ್ಯದಲ್ಲಿ ನಿರಂತರವಾಗಿ  ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಮದ್ದು ಸಿಂಪಡಿಸಲು ಸಾಧ್ಯವಾಗದೇ ಇದ್ದು ಸುಮಾರು ೫೦% ರಷ್ಟು ಕೊಳೆರೋಗ ತಗುಲಿದ್ದು, ಬೆಳೆದ ಅಡಿಕೆಗಳು ಉದುರಿ ಹೊಗಿವೆ. ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ರೈತರ ನಷ್ಟಕ್ಕೆ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಬಿಜೆಪಿ ಚುನಾವಣೆ ಸಮಿತಿ ಅಧ್ಯಕ್ಷ ನಾಗರಾಜ್ ಶೆಟ್ಟಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ, ಈಶ್ವರಪ್ಪ, ಹಾಗೂ […]

ದೇಶದಲ್ಲೆಡೆ ಸಹೋದರ ಭಾಂಧವ್ಯದ ರಕ್ಷಾ ಬಂಧನ ಆಚರಣೆ

Tuesday, August 20th, 2013
raksha-bandhan

ಮಂಗಳೂರು ;  ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ. ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು […]

ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಇಂದು ಸಮುದ್ರ ಪೂಜೆ ಆಚರಣೆ

Tuesday, August 20th, 2013
Karwar to get captive port soon

ಮಂಗಳೂರು :  ಇಂದು ಶ್ರೀ ಶ್ರೀ ಶ್ರೀ ಪೂಜಾ ಸಂಧ್ಯಾನಾಥ ಜಿ. ಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ದೇವರ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಆಶ್ರಯದಲ್ಲಿ ನಡೆಯಿತು . ದೇವರ ವಿಧಿವಿಧಾನಗಳ ಬಳಿಕ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆಯನ್ನು ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಸಿದರು. ನಂತರ ಸಮುದ್ರಕ್ಕೆ ತೆಂಗಿನಕಾಯಿ, ಹೂವು ಸಮರ್ಪಸಿದರು. ಊರಿನ ಬಾಂಧವರೆಲ್ಲರೂ ಹಾಲೆರೆದು ಸಮುದ್ರ ದೇವತೆಯನ್ನು ನೆನೆದು ಪೂಜಿಸಿದರು. ಅಧ್ಯಕ್ಷರಾಗಿ ಶಾಸಕ […]

ಇ.ಎಸ್.ಐ. ಆಸ್ಪತ್ರೆಗೆ ಸಂಭಂಧಟ್ಟ ಬೇಡಿಕೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ

Tuesday, August 20th, 2013
Indefinite hunger strike begins demanding end to ESI Hospital problems

ಮಂಗಳೂರು :  ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಘಟಕ ಪ್ರಧಾನ ಕಾರ್‍ಯದರ್ಶಿ ಸುದತ್ತ ಜೈನ್ ಶಿರ್ತಾಡಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ವ್ಯಾಪ್ತಿಗೆ ಇ.ಎಸ್.ಐ.ಸಿ. ಸೌಲಭ್ಯ  ಒದಗಿಸುವಂತೆ ಅಗ್ರಹಿಸಿ ಹಾಗೂ ಕದ್ರಿಯ ಇ.ಎಸ್.ಐ. ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳುವಂತೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಿಂದ ಪಾದಯಾತ್ರೆಯಲ್ಲಿ ಸಾಗಿ ಕದ್ರಿ ಶಿವಭಾಗ್‌ನ ಇ.ಎಸ್.ಐ. ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಇಂದು ಅನೇಕರು ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ […]

ಸೆಪ್ಟಂಬರ್ 6 ರಂದು “ಪಾರು ಐ ಲವ್ ಯು” ಚಲನಚಿತ್ರ ತೆರೆಗೆ

Tuesday, August 20th, 2013
Paru-I Love You film

ಮಂಗಳೂರು : ಜಗತ್ ಜ್ಯೋತಿ ಮೂವಿ ಮೇಕರ್‍ಸ್ ಲಾಂಛನದಲ್ಲಿ ನಿರ್ಮಾಣಗೊಂಡ “ಪಾರು ಐ ಲವ್ ಯು” ಸಿನಿಮಾವು ಇದೇ ಬರುವ ತಿಂಗಳು ಸೆ.6 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ರಂಜನ್ ರವರು ಸೋಮವಾರ ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಈ ಚಿತ್ರ ತಾನು ನಟಿಸಿರುವ ಮೊದಲ ಸಿನಿಮಾವಾಗಿದೆ. ನಾವೂ ಪ್ರತಿಯೊಂದು ಜಿಲ್ಲೆಗಳಿಗೂ ಹೋಗಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ.  ಸಿನಿಮಾದ ಮಾಹಿತಿಯು ಇನ್ನೂ ಮಂಗಳೂರಿನ ಜನತೆಗೆ ತಲುಪಿಲ್ಲ  ಈ ಹಿನ್ನೆಲೆಯಲ್ಲಿ ಪ್ರಚಾರ  […]

ಮಂಗಳೂರಿನ ನೆಹರೂ ಮೈದಾನಿನಲ್ಲಿ 67ನೇ ಸ್ವಾತಂತ್ರ್ಯೊತ್ಸವ ಆಚರಣೆ

Thursday, August 15th, 2013
independence-day

ಮಂಗಳೂರು : ಆಗಸ್ಟ್ 15 ಇಂದು ನಗರದ ನೆಹರೂ ಮೈದಾನದಲ್ಲ್ಲಿ 67ನೇ ಸ್ವಾತಂತ್ರ್ಯೊತ್ಸವ ಸಮಾರಂಭವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ರಮನಾಥ ರೈಯವರು ಧ್ವಜರೋಹನವನ್ನು ನೆರವೇರಿಸಿದರು. ನಂತರ ಮಾತಾಡಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 67 ವರ್ಷಗಳಾದವು, ಮಹಾತ್ಮಗಾಂಧಿ ಹಾಗೂ ಹಲವಾರು ಮಹನೀಯರು ಅಹಿಂಸ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುಧ್ದ ಹೋರಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯ ನಾಯಕರಿಗೆ ಮತ್ತು ಪ್ರಜೆಗಳಿಗೆ ಸತ್ಯ, ಅಹಿಂಸೆ ಮತ್ತು ಶಾಂತಿಸಹಿಸ್ಣುತೆಗಳೇ ತಾರಕಮಂತ್ರಗಳಾಗಿದ್ದವು […]

ಕರಾವಳಿ ಜಿಲ್ಲೆಯಾದ್ಯಂತ ಭಕ್ತಾದಿಗಳಿಂದ ಸಂಭ್ರಮೋಲ್ಲಾಸದ ನಾಗರಮಂಚಮಿ ಆಚರಣೆ

Monday, August 12th, 2013
Nagara panchami Kudupu Temple

ಮಂಗಳೂರು : ಸನಾತನ ಸಂಸ್ಕೃತಿಯಂತೆ ನಾಗರಮಂಚಮಿ ಹಬ್ಬವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ನಾಗರಪಂಚಮಿಯು ಮನೆ ಮನೆಗಳಲ್ಲಿ, ಪ್ರಕೃತಿಯ ಮಡಿಲ ಬನಗಳಲ್ಲಿ, ದೇವಾಲಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ತಿಂಗಳಿನ ಉಜ್ವಲ ಪಕ್ಷದ ಐದನೆಯ ದಿನವು ನಾಗರಪಂಚಮಿಯ ದಿನವಾಗಿದೆ. ಈ ಹಬ್ಬವನ್ನು ನಾಡಿನ ಜನರು ಭಕ್ತಿಯಿಂದ ಆಚರಿಸುತ್ತಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಜನರು ಸರ್ಪದೇವರಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ. ನಾಗರಪಂಚಮಿಯ ದಿನದಂದು ಭಕ್ತಾಧಿಗಳಿಲ್ಲರೂ ಬೆಳಿಗ್ಗೆ ಎದ್ದು ನಾಗನಗುಡಿಗೆ ಹೋಗಿ ಸಿಯಾಳಭಿಷೇಕ […]

ಆಮ್ ಆದ್ಮಿ ಪಕ್ಷದ ವತಿಯಿಂದ ಕೇಂದ್ರ ಸರಕಾರದ ರಾಜಕೀಯ ನೀತಿಯನ್ನು ವಿರೋಧಿಸಿ ಪ್ರತಿಭಟನೆ

Saturday, August 10th, 2013
Dc-office

ಮಂಗಳೂರು : ಆಮ್ ಆದ್ಮಿ ಪಕ್ಷವು ಮಾಹಿತಿ ಹಕ್ಕು ಕಾಯ್ದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವ ಕೇಂದ್ರ ಸರಕಾರದ ನೀತಿಯನ್ನು  ವಿರೋಧಿಸಿ  ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ರಾಜಕೀಯ ಪಕ್ಷಗಳು  ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡುತ್ತಿವೆ. ಈ ಪ್ರಕ್ರಿಯೆ ಎಲ್ಲಾ  ಹಗರಣಗಳಿಗೆ ಕಾರಣವಾಗಿದೆ. ಆದ್ದರಿಂದ ರಾಜಕೀಯ ಪಕ್ಷಗಳ ದುಡ್ಡಿನ ಸಂಗ್ರಹ ವಿವರ ಮತ್ತು ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುವುದು ಅಗತ್ಯವಾಗಿದೆ  ಎಂದು ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಆಮ್ ಆದ್ಮಿ […]

ತುಳುನಾಡಿನ ಉದಯಕ್ಕೆ ಹೋರಾಟಕ್ಕೂ ಸಿದ್ಧ – ಒಡಿಯೂರು ಶ್ರೀ

Friday, August 9th, 2013
odiyooru Tulu Nadu

ವಿಟ್ಲ : ತುಳು ಭಾಷೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತುಳುನಾಡು, ತುಳು ಭಾಷೆ ಉಳಿವಿಗಾಗಿ ನಾವು ಒಟ್ಟಾಗಿ ಹೋರಾಡಬೇಕು. ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು; ತುಳುವರು. ತುಳು ಮಾತನಾಡುವಾಗ ನಮ್ಮಲ್ಲಿ ಆತ್ಮೀಯತೆ ಉಕ್ಕಿ ಬರುವುದರೊಂದಿಗೆ ಪ್ರತಿಯೊಂದು ಶಬ್ದದ ಹಿಂದೆಯೂ ಪ್ರೀತಿಯ ಸೆಳೆ ಇದೆ. ಈ ನಿಟ್ಟಿನಲ್ಲಿ ತುಳು ಒರಿಪು ಕೇಂದ್ರ ಸ್ಥಾಪಿಸುವ ಇರಾದೆ ಇದೆ. ತುಳು ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಇದೆ. ತುಳುನಾಡಿನಲ್ಲಿ ಯಾರೆಲ್ಲ ಇದ್ದಾರೆಯೋ ಅವರೆಲ್ಲರೂ ತುಳುವರೇ. […]