ಬಲ್ಲಾಳ್ ಬಾಗ್ ಶೂಟೌಟ್ ಆರು ಮಂದಿ ಆರೋಪಿಗಳ ಬಂಧನ

Wednesday, August 7th, 2013
Ballalbagh-shoot-out

ಮಂಗಳೂರು :  ನಗರದ – ಮಣ್ಣಗುಡ್ಡ  ರಸ್ತೆಯಲ್ಲಿ  ಆಗಸ್ಟ್ 2 ರಂದು ಉದ್ಯಮಿಯ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆನ್ನು  ಬರ್ಕೆ ಪೊಲೀಸರು  ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಸೂರಿಂಜೆಯ ನಿತೀಷ್‌ಕುಮಾರ್ ಯಾನೆ ಲಿಂತು(20), ಸತೀಷ್ ಯಾನೆ ಸಚ್ಚು (28) ಮರೋಳಿಯ ದೀಕ್ಷಿತ್ ಯಾನೆ ದಿಕ್ಷ್(26), ಬಜ್ಪೆಯ ಪದ್ಮ ರಾಜ್ ಯಾನೆ ಪದ್ದು(24), ಸೋಮೇಶ್ವರದ ಚೋನಿಯ ಯಾನೆ ಕೇಶವ (23)ಮತ್ತು ಕಂಕನಾಡಿಯ ಅನಿಲ್ (30) ಬಂಧಿತ ಆರೋಪಿಗಳಾ ಗಿದ್ದಾರೆ.  ಇವರು ಈ ಹಿಂದೆ ಹಲವಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು , ನಿತೀಶ್‌ […]

ಜೆಪ್ಪು ಮೋರ್ಗನ್ಸ್‌ಗೇಟ್ ರೈಲ್ವೆ ಸೇತುವೆ ಬಳಿ ಯುವಕನ ಮೃತ ದೇಹ ಪತ್ತೆ

Tuesday, August 6th, 2013
Youth dead

ಮಂಗಳೂರು : ಜೆಪ್ಪು ಮೋರ್ಗನ್ಸ್‌ಗೇಟ್ ಸಮೀಪದ ರೈಲ್ವೆ ಸೇತುವೆ ಬಳಿ ಮಂಗಳವಾರ ಯುವಕನೊಬ್ಬನ ಮೃತ ದೇಹ  ಪತ್ತೆಯಾಗಿದ್ದು . ಮೃತ ವ್ಯಕ್ತಿಯನ್ನು ಶಾಂತಿಗುಡ್ಡೆ ನಿವಾಸಿ ವಿಕ್ರಾಂತ್ ಶೆಟ್ಟಿ (27) ಎಂದು ಗುರುತಿಸಲಾಗಿದೆ. ಸೋಮವಾರ ಸುಮಾರು 11 ಗಂಟೆ ಸುಮಾರಿಗೆ ಜ್ಯೋತಿ ಸಮೀಪದ ರಿಕ್ರಿಯೇಶನ್ಸ್ ಕ್ಲಬ್ ನಿಂದ ಶಾಂತಿಗುಡ್ಡೆಯ ತನ್ನ ನಿವಾಸಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ  ಬಂದ ದುಷ್ಕರ್ಮಿಗಳ ತಂಡವೊಂದು ವಿಕ್ರಾಂತ್ ಶೆಟ್ಟಿಯ ವಾಹನಕ್ಕೆ ಡಿಕ್ಕಿ ಹೊಡೆಸಿ  ವಿಕ್ರಾಂತ್ ಶೆಟ್ಟಿ ಮೇಲೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ […]

ವಿಜಯ ಬ್ಯಾಂಕ್ ನ ಮಾಜಿ ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ ನಿಧನ

Sunday, August 4th, 2013
bb shetty

ಮಂಗಳೂರು: ವಿಜಯ ಬ್ಯಾಂಕ್ ನ ಮಾಜಿ ಅಧ್ಯಕ್ಷ  ಮತ್ತು ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ (77) ಅವರು ಜುಲೈ 2 ಶುಕ್ರವಾರ ಮಧ್ಯರಾತ್ರಿ ನಿಧನರಾದರು. ಬಿ.ಬಿ. ಶೆಟ್ಟಿ ಅವರು ಪತ್ನಿ ಕಲಾವತಿ ಸಹೋದರ ಸುಬ್ಬಯ್ಯ ಶೆಟ್ಟಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಿ.ಬಿ. ಶೆಟ್ಟಿ ಅವರು 1975ರ ಡಿಸೆಂಬರ್ ನಲ್ಲಿ ಆಡಳಿತ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಶೆಟ್ಟಿ ಅವರು ವಿಜಯ್ ಬ್ಯಾಂಕ್ ಗೆ ಸೇರಿದ್ದರು.  1992ರಿಂದ 1996ರ ತನಕ ವಿಜಯ ಬ್ಯಾಂಕ್ ನ ಆಡಳಿತ ನಿರ್ದೇಶಕರಾಗಿದ್ದರು. 1984ರ […]

ಅರಣ್ಯ ರಕ್ಷಣೆ ದೃಷ್ಟಿಕೋನ ವಿಸ್ತಾರವಾಗಲಿ: ರಮಾನಾಥ ರೈ

Sunday, August 4th, 2013
Laksha Vruksha

ಮಂಗಳೂರು : ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವ ಹೊಣೆ ಪ್ರತಿಯೊಬ್ಬರದ್ದು. ಪರಿಸರವಿಲ್ಲದೆ ಜೀವರಾಶಿ ಇಲ್ಲ ಎಂಬ ಸತ್ಯವನ್ನು ಅರಿತು ಮರಗಿಡಗಳನ್ನು ಬೆಳೆಸುವ ಹೊಣೆ ಎಲ್ಲರದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರು ಹೇಳಿದರು. ಅವರು ನಗರದ ಪುರಭವನದಲ್ಲಿ ಜುಲೈ3, ಶನಿವಾರ ಆಯೋಜಿಸಲಾದ ರಾಜ್ಯ ಮಟ್ಟದ ‘ಲಕ್ಷ ವೃಕ್ಷ’ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಸರ ಸಂರಕ್ಷಣೆ, ಅರಣ್ಯ ನಿರ್ಮಾಣ ಕೇವಲ ಅರಣ್ಯ ಇಲಾಖೆಯ ಹೊಣೆಯಲ್ಲ; ಜನರಲ್ಲಿ […]

ಪತ್ರಕರ್ತರ ಸಂಘ ಮತ್ತು ಅರಣ್ಯ ಸಂರಕ್ಷಣಾ ಇಲಾಖೆ ಕದ್ರಿ ಪಾರ್ಕ್ ನಲ್ಲಿ ವನಮಹೋತ್ಸವ

Saturday, August 3rd, 2013
vanamahostava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಅರಣ್ಯ ಸಂರಕ್ಷಣಾ ಇಲಾಖೆ ವತಿಯಿಂದ ನಗರದಕದ್ರಿ ಪಾರ್ಕ್ ನಲ್ಲಿ ಆಗಸ್ಟ್2 ರಂದು ಗಿಡ ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಗಿಡನೆಟ್ಟು ನೀರೆರೆಯುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿ ಲಕ್ಷವೃಕ್ಷ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದ್ದು, ಮಂಗಳೂರಿನಲ್ಲಿ ನಾಳೆ ಚಾಲನೆ ನೀಡಲಾಗುವುದು. ಇದು ರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಿರದೆ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಬೇಕಾಗಿದೆ.  ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಾ ಸಂಘದವರು ಜೊತೆಗೂಡಿ ಕೆಲಸ ಮಾಡಬೇಕಾಗಿದೆ. […]

ನನ್ನ ಬಳಿ ಯಾವುದೇ ದಾಖಲೆಗಳಿರಲಿಲ್ಲ : ಬಂಟ್ವಾಳ ಠಾಣಾಧಿಕಾರಿ ಮಹೇಶ್ ಪ್ರಸಾದ್

Friday, August 2nd, 2013
Mahesh Prasad

ಮಂಗಳೂರು :  ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ  ಮಹಿಳೆಯೊಬ್ಬರು ವರಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ 2008 ರಲ್ಲಿ ದಾಖಲಾಗಿತ್ತು. ಅಂದಿನ ಠಾಣಾಧಿಕಾರಿಯಾಗಿರುವ ವಿನಾಯಕ ಬಿಲ್ಲವ ಪ್ರಕರಣದ ತನಿಕೆ ನಡೆಸಿ ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣವು 2008 ರಿಂದ ಬಂಟ್ವಾಳ ನ್ಯಾಯಾಲಯದಲ್ಲಿ ಎರಡು ವರ್ಷಗಳ ಕಾಲ ತನಿಖೆಯಲ್ಲಿತ್ತು. ನಂತರ 2010 ರಲ್ಲಿ ಪ್ರಕರಣವನ್ನು ಮಂಗಳೂರು ನ್ಯಾಯಾಲಕ್ಕೆ ವರ್ಗಾಯಿಸಲಾಯಿತು. ಅಂದಿನ ಠಾಣಾಧಿಕಾರಿ ವಿನಾಯಕ ಬಿಲ್ಲವ ಸಂಬಂಧಪಟ್ಟ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ. […]

ಶೀಘ್ರವೇ ತುಳು ರಾಜ್ಯದ ಅಧಿಕೃತ ಭಾಷೆಯಾಗಲಿದೆ ; ಉಮಾಶ್ರೀ

Thursday, August 1st, 2013
Tulu Language

ಬೆಂಗಳೂರು : ಕರ್ನಾಟಕ ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದೆನಿಸಲು ತುಳು ಭಾಷೆಗೆ ಎಲ್ಲಾ ಅರ್ಹತೆ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸುಮಾರು 70 ಲಕ್ಷ ಜನರು(2001 ರ ಜನಗಣತಿಯಂತೆ) ಮಾತನಾಡುವ ತುಳು ಭಾಷೆ ಸಾಹಿತ್ಯಿಕವಾಗಿ ಸಮೃದ್ಧವಾಗಿದೆ ಎಂದು ಉಮಾಶ್ರೀ ಸದನಕ್ಕೆ ವಿವರಿಸಿದರು. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆಗೊಳಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿದೆ. ಕಳೆದ ತಿಂಗಳು ಈ […]

ಡಿ.ಸಿ. ಆಪೀಸ್ ಬಳಿ ಎ.ಬಿ.ವಿ.ಪಿ.ಯಿಂದ ಸಿ.ಇ.ಟಿ. ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

Wednesday, July 31st, 2013
Abvp protest

ಮಂಗಳೂರು : ಸಿ.ಇ.ಟಿ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷದಿಂದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ಕಾಲೇಜು ಚುಣಾವಣೆ ನಿಷೇಧ ಕ್ರಮದ ವಿರುದ್ದ ಎ.ಬಿ.ವಿ.ಪಿ. ಜುಲೈ 31 ರಂದು ರಾಜ್ಯದ್ಯಾಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಅದರ ಅಂಗವಾಗಿನಗರದ ಡಿ.ಸಿ. ಆಫೀಸ್ ಬಳಿಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ.ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಮಾತನಾಡಿ ಸುಪ್ರಿಂಕೋರ್ಟ್ ಸಿ.ಇ.ಟಿ ಪ್ರವೇಶಾತಿಯನ್ನು ಜುಲೈ […]

ವೇಣೂರು ಪಂಚಾಯತ್ ನ ಮಾಜಿ ಅಧ್ಯಕ್ಷ ಎರ್ಮೋಡಿ ಗುಣಪಾಲ್ ಜೈನ್ ನಿಧನ

Wednesday, July 31st, 2013
Yermodi Gunapal Jain

ಬೆಳ್ತಂಗಡಿ  :  ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ -ಬೆಳ್ತಂಗಡಿ ದಾರಿಯಲ್ಲಿ ಪೆರಿಂಜೆಯ ಹೊಸಂಗಡಿ ಗ್ರಾಪಂ ಕಚೇರಿಯ ಬಳಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೈನ ಸಮಾಜದ ಮುಖಂಡ ಎರ್ಮೋಡಿ ಗುಣಪಾಲ್ ಜೈನ್(64) ಮೃತ ಪಟ್ಟಿದ್ದಾರೆ. ಮೂಡುಬಿದಿರೆಯ ಮನೆಯಿಂದ ವೇಣೂರಿಗೆ ಬರುತ್ತಿದ್ದ ಗುಣಪಾಲ್ ಜೈನ್‌ರ ಇನ್ನೋವಾ ಕಾರಿಗೆ ಹೊಸಂಗಡಿ ಪಂಚಾಯತ್ ಬಳಿ ಬೆಳ್ತಂಗಡಿಯಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ  ಕಾರು ಸುಮಾರು 50 ಮೀಟರ್‌ಗಳಷ್ಟು ತಳ್ಳಲ್ಪಟ್ಟ ಸಂಪೂರ್ಣ ನಜ್ಜುಗುಜ್ಜಾಗಿದೆ. ತಲೆಗೆ ಗಂಭೀರ ಗಾಯಗೊಂಡಿದ್ದ ಗುಣಪಾಲ್ ಜೈನ್‌ರನ್ನು ಕೂಡಲೇ ಆಸ್ಪತ್ರೆಗೆ […]

ನಿಡ್ಡೋಡಿಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳನ್ನು ಚಪ್ಪಲಿ ಹಾಗೂ ಹಿಡಿಸೂಡಿ ಹಿಡಿದು ಓಡಿಸಿದ ಸ್ಟಳೀಯರು

Tuesday, July 30th, 2013
Niddodi villagers

ಮಂಗಳೂರು: ನಿಡ್ಡೋಡಿಯಲ್ಲಿ ಬೃಹತ್ ಮಟ್ಟದ ಉಷ್ಣವಿದ್ಯುತ್ ಸ್ಥಾವರದ ಉದ್ದೇಶಿತ  ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸೋಮವಾರ ಬೆಳಿಗ್ಗೆ  ಹೋಗಿದ್ದರು. ಸ್ಥಾವರ ಸ್ಥಾಪನೆಯ ಬಗ್ಗೆ ಜನರಿಗೆ ವಿವರಿಸಲು ಹೋಗಿದ್ದ ಕಾಂಗ್ರೆಸ್ ನ ಪ್ರತಿನಿಧಿಗಳನ್ನು  ಚಪ್ಪಲಿ ಹಾಗೂ ಹಿಡಿಸೂಡಿಯನ್ನು ಹಿಡಿದು ಹಿಂದಕ್ಕೆ ಓಡಿಸಿದ ಘಟನೆ ಸೋಮವಾರ ನಡೆಯಿತು. 500ಕ್ಕೂ ಹೆಚ್ಚು ಸ್ಥಳೀಯರು ಸೇರಿ ಬಂದು ಕಾಂಗ್ರೆಸ್ ಪ್ರತಿನಿಧಿಗಳಿಗೆ ದಿಗ್ಭಂದನ ಹಾಕಿ ಘೇರಾವ್ ಹಾಕಿದರು. ಯಾವುದೇ ಪ್ರತಿನಿಧಿಗಳು ಇಲ್ಲಿಗೆ ಬಂದು ವಿವರಣೆ ನೀಡುವುದನ್ನು ನಾವು ಬಯಸುವುದಿಲ್ಲ. ನಿಮ್ಮ ನಾಯಕ ಅಥವಾ ಶಾಸಕನನ್ನು ಇಲ್ಲಿಗೆ ಕಳುಹಿಸಿ. ಅವರಿಗೆ ನಮ್ಮ ಸಮಸ್ಯೆಗಳನ್ನು […]