ಬಸ್ ನೌಕರರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಒಪ್ಪಿಕೊಂಡಿದೆ : ಐವನ್

Thursday, July 18th, 2013
Bus owners and workers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಐವನ್ ಡಿಸೋಜಾ ಅವರು ಬುಧವಾರ ನಗರದ ವುಡ್ ಲ್ಯಾಂಡ್ಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸುಮಾರು 18 ಬೇಡಿಕೆಗಳನ್ನು ಈಡೇರಿಸಲು ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಬಸ್ಸ್ ಕಾರ್ಮಿಕರು ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಲು ಸಂಬಂಧ […]

ಹೂವಿನ ವ್ಯಾಪಾರಿ ದಂಪತಿಗಳ ಬೈಕಿಗೆ ಟೆಂಪೋ ಡಿಕ್ಕಿ, ಪತ್ನಿ ಸಾವು, ಪತಿ ಗಂಭೀರ

Wednesday, July 17th, 2013
Flower Merchants Killed

ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ. ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

69ರ ಅಜ್ಜಿಯನ್ನು ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿದ ಯುವಕ

Tuesday, July 16th, 2013
Rapist Boy

ಮಂಗಳೂರು: ಅಜ್ಜಿಯ ಬಟ್ಟೆಯನ್ನು ಬಲವಂತದಿಂದ ಬಿಚ್ಚಿಸಿ ವಿವಸ್ತ್ರ ಗೊಳಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸರಿಪಲ್ಲ ನಿವಾಸಿ ಮೇರಿ ಡಿ’ಸೋಜಾ (69)ರ  ಮನೆಗೆ ನುಗ್ಗಿದ  ಚಿಕ್ಕಬಳ್ಳಾ ಪುರ-ಚಿಂತಾಮಣಿ ನಿವಾಸಿ ನಾಗೇಶ(24) ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿ ದಂತೆ ಬೆಲೆಬಾಳುವ ಸೊತ್ತುಗಳನ್ನು ದೋಚಿದ್ದ. ಅಜ್ಜಿಗೆ ಚೂರಿ ತೋರಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಬಳಿಕ ಅಜ್ಜಿ ಕೂಗಿಕೊಂಡರು, ಆಗ ಸರಿಪಲ್ಲದ ಯುವಕರು ಓಡಿಬಂದರು, ಯವಕರನ್ನು ಕಂಡಾಗ ನಾಗೇಶ […]

ಅವರಿಬ್ಬರ ನಡುವಿನ ಸಂಶಯ ಕೊಲೆ ಮಾಡುವ ವರೆಗೆ ಮುಟ್ಟಿತು !

Tuesday, July 16th, 2013
Gangadhar Padubidre

ಮಂಗಳೂರು : ದೂರದರ್ಶನದ (ಡಿ.ಡಿ-1) ವರದಿಗಾರ ಗಂಗಾಧರ್ ಪಡುಬಿದ್ರೆ ತನ್ನ ಪತ್ನಿಯನ್ನು ಹತೈಗೈದ ಘಟನೆ ಸೋಮವಾರ ಸಂಜೆ ಕೋಡಿಕಲ್‌ನ ಜೆ.ಬಿ.ರಸ್ತೆಯ ಮನೆಯೊಂದರಲ್ಲಿ ನಡೆದಿದೆ. ಅರೋಪಿ ಗಂಗಾಧರ್ ಪಡುಬಿದ್ರೆ ದೂರದರ್ಶನದ (ಡಿ.ಡಿ-1) ವರದಿಗಾರರಾಗಿದ್ದರು. ಮತ್ತು ಆಕೆಸ್ಟ್ರಾ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮಮತಾ ಶೆಟ್ಟಿ ( 32) ನಗರದ ಎಸ್.ಡಿ.ಎಮ್ ಕಾಲೇಜಿನ ಶಿಕ್ಷಕಿ ಯಾಗಿದ್ದರು. ಕೊಲೆಯಾದ ಮಮತಾ ಎಳವೆಯಲ್ಲಿಯೇ  ಹೆತ್ತವರನ್ನು ಕಳೆದುಕೊಂಡು  ಹಾಸ್ಟೆಲ್‌ನಲ್ಲಿದ್ದಳು. ಅಲ್ಲಿಂದ ಮಮತಾಳನ್ನು ಕರೆತಂದ ಗಂಗಾಧರ ಪಡುಬಿದ್ರಿ ಆಕೆಗೆ ಶಿಕ್ಷಣ ಕೊಡಿಸಿದ್ದ, ಆಕೆ ಕಾನೂನು […]

ಪಾವಂಜೆ ಯಲ್ಲಿ ತುಳುನಾಡ ಕೃಷಿ ಜನಪದೋತ್ಸವ

Monday, July 15th, 2013
tulunad krishi

ಮಂಗಳೂರು : ಪಾವಂಜೆ ಶ್ರೀ ಜನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಅಯೋಜಿಸಲಾದ  ತುಳುನಾಡ ಕೃಷಿ ಜನಪದೋತ್ಸವದ ಉದ್ಘಾಟನೆಯನ್ನು ಶನಿವಾರ ಉದ್ಯಮಿ ರಘುನಾಥ ಸೋಮಯಾಜಿ ಅವರು ನೆರವೇರಿಸಿದರು. ಪಾವಂಜೆ ಯಲ್ಲಿ ಎರಡು ದಿನಗಳ ಕಾಲ ನಡೆಯುವ  4ನೇ ವರ್ಷದ ಜನಪದೋತ್ಸವದ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮಣ್ಣಿನ ಹಾಗೂ ಕೆಸರಿನ ಬಗ್ಗೆ ಯುವಜನರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಸಮಾಜ ಕಟ್ಟಲು ಕೆಸರುಗದ್ದೆ ಪ್ರೇರಣೆಕೊಡುತ್ತದೆ ಎಂದು ಸೋಮಯಾಜಿ ತಿಳಿಸಿದರು. ಕೊಯ್‌ಕುಡೆ ಹರಿಪಾದೆಯ […]

ಮಣಿಪಾಲ ರಿಕ್ಷಾದಲ್ಲಿ ಗ್ಯಾಂಗ್ ರೇಪ್ ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Monday, July 15th, 2013
Gang Rapist

ಉಡುಪಿ: ಜೂನ್ 20ರ ರಾತ್ರಿ ನಡೆದ ಮಣಿಪಾಲ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಾದ ಯೋಗೀಶ, ಹರಿಪ್ರಸಾದ್ ಮತ್ತು ಆನಂದ ನನ್ನು ಶಿವಮೊಗ್ಗ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸೋಮವಾರ ಬೆಳಗ್ಗೆ ಆರೋಪಿಗಳನ್ನು  ಉಡುಪಿಯ ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 29ರ ತನಕ ವಿಸ್ತರಿಸಿದರು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದೆಯೆಂದು ತನಿಖಾಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಯೋಗೀಶ ಮತ್ತು ಹರಿಪ್ರಸಾದ್ ನ ಸೋದರರಾದ ಹರೀಂದ್ರ […]

ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ : ಶ್ರುತಿ

Saturday, July 13th, 2013
Shruthi

ಬೆಂಗಳೂರು: ವಿಷಾಹಾರ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶ್ರುತಿ ಶುಕ್ರವಾರ (ಜು.12) ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ನಿನ್ನೆ ರಾತ್ರಿಯಿಂದ ಎಲ್ಲರನ್ನೂ ಕಾಯಿಸಿದ್ದಕ್ಕೆ ಮೊದಲು ನಾನು ಕ್ಷಮೆ ಕೇಳುತ್ತೇನೆ. ರಾತ್ರಿ 8 ಗಂಟೆ ಹೊತ್ತಿಗಾದರೂ ನಿಮ್ಮೊಂದಿಗೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ತುಂಬಾ ಆಯಾಸವಾಗಿತ್ತು ಸಾಧ್ಯವಾಗಲಿಲ್ಲ ಎಂದು  ಹೇಳಿದರು. ಆತ್ಮಹತ್ಯೆ ಯತ್ನ ವದಂತಿಗೆ ಪ್ರತಿಕ್ರಿಯಿಸಿರುವ ಸ್ಯಾಂಡಲ್‌ವುಡ್ ನಟಿ ಶೃತಿ, ಇದು ಕೇವಲ ವದಂತಿ ಅಷ್ಟೇ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ ಎಂದು ಹೇಳುವ […]

ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು, ಆತ್ಮಹತ್ಯೆ ಮಾಡಿದ ಸುಪರ್ ಮಾರ್ಕೆಟ್ ಉದ್ಯೋಗಿ

Saturday, July 13th, 2013
Bantwala Murder

ಬಂಟ್ವಾಳ : ಸುಪರ್ ಮಾರ್ಕೆಟ್ ಉದ್ಯೋಗಿಯೊಬ್ಬ  ತನ್ನ ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿಯ ಕೊಡಾಜೆ ಪಂತ್ತಡ್ಕ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಡಾಜೆ ಪಂತಡ್ಕ ನಿವಾಸಿ ಅಬ್ದುಲ್ ಹಮೀದ್ ಎಂಬಾತನೇ ಈ ಕೃತ್ಯ ವೆಸಗಿ, ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕತ್ತಿಯಿಂದ ಹಲ್ಲೆಗೀಡಾಗಿ ತೀವ್ರ ಗಾಯಗಳಾಗಿರುವ ಹಮೀದ್ ಪತ್ನಿ ಅಸ್ಮಾ(28) ಹಾಗೂ ತಾಯಿ ಮರಿಯಮ್ಮ(55) ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು […]

ಯೋಜನೆಗಳ ಪ್ರಗತಿ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ; ಕೆಡಿಪಿ ಸಭೆಯಲ್ಲಿ ರಮಾನಾಥ ರೈ

Friday, July 12th, 2013
KDP review meeting

ಮಂಗಳೂರು: ದ.ಕ. ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆ ಗುರುವಾರ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪ್ರಗತಿ ತೀರಾ ಕಡಿಮೆಯಾಗಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ವಸತಿಗಳು ಬಡವರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಾಗುವ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ರಾಜ್ಯ ಅರಣ್ಯ, ಪರಿಸರ ಖಾತೆ ಮತ್ತು ದ. ಕ.ಜಿಲ್ಲಾ ಉಸ್ತುವಾರಿ ಸಚಿವಬಿ. ರಮಾನಾಥ ರೈ ಎಚ್ಚರಿಸಿದ್ದಾರೆ. ರಾಜೀವ ಗಾಂಧಿ […]

ಕಾಂಗ್ರೆಸ್ಸ್ ನಲ್ಲಿ 17 ಕ್ರಿಮಿನಲ್ ಶಾಸಕರು, ಸಿದ್ದರಾಮಯ್ಯ ಸರಕಾರಕ್ಕೆ ಬಹುಮತದ ಚಿಂತೆ

Thursday, July 11th, 2013
siddhramaiha

ಬೆಂಗಳೂರು : ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಶಾಸಕರ ಅಪರಾಧ ಸಾಬೀತಾಗಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೆ ಗುರಿಯಾದ ಸಂಸದ ಮತ್ತು ಶಾಸಕ ತನ್ನ ಸದಸ್ಯತ್ವ ಕಳೆದುಕೊಳ್ಳುತ್ತಾನೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಜು.10ರಂದು ಐತಿಹಾಸಿಕ ತೀರ್ಪು ನೀಡಿದೆ. ಆಡಳಿತಾರೂಢ ಕಾಂಗ್ರೆಸ್ ಅತೀ ಹೆಚ್ಚು ಕ್ರಿಮಿನಲ್ ಶಾಸಕರನ್ನು ಹೊಂದಿದೆ. ಕಾಂಗ್ರೆಸ್ಸಿನ ಒಟ್ಟು 17 ಶಾಸಕರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ, ಬಿಜೆಪಿಯಿಂದ 9 ಮತ್ತು ಜೆಡಿಎಸ್ ನಿಂದ 6 ಶಾಸಕರ ವಿರುದ್ದ  ಕ್ರಿಮಿನಲ್  ಮೊಕದ್ದಮೆ ಇದೆ. ಇವರ ಆರೋಪ ಸಾಬೀತಾಗಿ […]