ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ರೇಪ್, ಆನಂದ ಶಿವಮೊಗ್ಗ ಜೈಲಿಗೆ

Friday, July 5th, 2013
Ananda poojary

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ  ರೇಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಆನಂದನ ಐದು ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಕಾರಣ ಶುಕ್ರವಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಹರಿಪ್ರಸಾದ್ ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೀಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರತಾ ಕಾರಣಗಳಿಂದಾಗಿ ಆನಂದನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ತುಂಬಿ ಹರಿದ ನೇತ್ರಾವತಿ ನದಿ, ತಟದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಸಮಾಧಿ

Friday, July 5th, 2013
Kallapu Rain

ಮಂಗಳೂರು : ಸತತವಾಗಿ ಸುರಿದ ಮಳೆಯಿಂದಾಗಿ ಉಳ್ಳಾಲ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ನೇತ್ರಾವತಿ ತಟದಲ್ಲಿ ಕೃತಕ ನೆರೆಯಿಂದ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಕಲ್ಲಾಪು ಪಟ್ಲ, ಆಡಂಕುದ್ರು, ಜಪ್ಪಿನಮೊಗರು, ಉಳ್ಳಾಲ ಮಾರ್ಗತಲೆ, ಕಕ್ಕೆತೋಟ, ಉಳ್ಳಾಲ ಉಳಿಯ, ಉಳ್ಳಾಲ ಹೊಗೆ, ಅಂಬ್ಲಿಮೊಗರು ಗ್ರಾಮದ ಕೋಟ್ರಗುತ್ತು, ಮದಕ, ಗಟ್ಟಿಕುದ್ರು, ದೋಟ, ಅಡು, ಪೆಂರ್ಗಾಬ್‌, ಹರೇಕಳ ಗ್ರಾಮದ ಡೇರಿಕಟ್ಟೆ, ಬೈತಾರ್‌, ಪಾವೂರು ಕಡವು, ಪಾವೂರು ಗ್ರಾಮದ ಇನೋಳಿ ಕೆಳಗಿನ ಕೆರೆ, ಗಾಡಿಗದ್ದೆ, […]

ನಗರದಲ್ಲೊಂದು ಮಳೆಯಿಂದ ರಕ್ಷಣೆಗೆ ಮೋಡರ್ನ್ ಬೈಕ್

Thursday, July 4th, 2013
Mangalore Modern Bike

ಮಂಗಳೂರು : ನಗರದ ಬಂದರು ಬದ್ರಿಯಾ ಕಾಲೇಜಿನ ಸಮೀಪ ವಿರುವ ಅಶೋಕ ಆಟೊ ವರ್ಕ್ಸ್ ನಲ್ಲಿ  ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಪೂರ್ಣೇಶ್ ತನ್ನ ಹಿರೋ ಹೊಂಡ ಬೈಕನ್ನು ಮಳೆಯಲ್ಲಿ ರೈನ್ ಕೋಟ್ ರಹಿತವಾಗಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ದಗೊಳಿಸಿದ್ದಾರೆ. 2001 ಮಾಡೆಲಿನ ಹಿರೋ ಹೊಂಡಾ ಕಂಪನಿಯ ಬೈಕನ್ನು ಸುಮಾರು 4 ಸಾವಿರ ವೆಚ್ಚದಲ್ಲಿ ಕಾರಿನಂತೆ ಬೈಕಿನ ಎದುರಿಗೆ ಗಾಜು, ಮೇಲ್ಚಾವಣಿ ನಿರ್ಮಿಸಿ ಹೊಸ ಮಾದರಿಯ ಪ್ರಯೋಗ ನಡೆಸಿದ್ದಾರೆ. ಕೇವಲ 5 ಬೋಳ್ಟ್ ಗಳನ್ನು ಅಳವಡಿಸಿ ಈ ಹೊಸ ಪ್ರಯೋಗ […]

ಉಕ್ಕಿ ಹರಿದ ಬಜ್ಪೆ ಮರವೂರು ಡ್ಯಾಂ ಅಪಾಯದಲ್ಲಿ ಸಿಲುಕಿದ್ದವರ ರಕ್ಷಣೆ

Thursday, July 4th, 2013
maravoor dam

ಮಂಗಳೂರು: ನಿರಂತರವಾಗಿ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಬಜ್ಪೆ ಮರವೂರು ಸೇತುವೆಯ ಬಳಿ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಮೇಲಿನಿಂದ ನೀರು ಉಕ್ಕಿ ಹರಿಯುತ್ತಿದ್ದು, ಇದೇ ಪ್ರದೇಶದ ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ವೆಟೆಂಡ್ ಡ್ಯಾಂ ನಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದಿಂದ ಹೆಚ್ಚುವರಿ ನೀರು ಹರಿಯುತ್ತಿದ್ದರೂ ಡ್ಯಾಂನಿಂದ ನೀರನ್ನು ಹೊರಬಿಡುತ್ತಿಲ್ಲ ಎಂದು ಗ್ರಾಮಸ್ಥರುಆರೋಪಿಸಿದ್ದಾರೆ. ಇದೊಂದು ಪ್ರಾಕೃತಿಕ […]

ಮಣಿಪಾಲ ಅತ್ಯಾಚಾರ ಆರೋಪಿ ಹರಿಪ್ರಸಾದ್ ಮತ್ತು ಸಹೋದರರಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ

Wednesday, July 3rd, 2013
Udupi Rape

ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಪ್ರಸಾದ್ ನ ಇಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶೆಯಾಗಿರುವ ನಾಗಜ್ಯೋತಿಯವರು ಆರೋಪಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಜೈಲಿನಲ್ಲಿ ಹರಿಪ್ರಸಾದ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವ ಕಾರಣಕ್ಕೆ ಭದ್ರತಾ ಕಾರಣಗಳಿಗಾಗಿ ಆತನನ್ನು ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಯೋಗೀಶ ಮತ್ತು ಹರಿಪ್ರಸಾದ್ ಸೋದರರಾದ ಬಾಲಚಂದ್ರ ಮತ್ತು ಹರೀಂದ್ರ ನನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೂ ಜುಲೈ 15ರ ತನಕ ನ್ಯಾಯಾಂಗ […]

ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರ ಕತ್ತು ಕೊಯ್ದ ಕೊಲೆ

Wednesday, July 3rd, 2013
Shamsid Uda

ಬೆಂಗಳೂರು : ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಅವರ ಕಚೇರಿಯಲ್ಲೇ ಕತ್ತು ಕೊಯ್ದ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಟ್ಯಾನರಿ ರಸ್ತೆಯ ಈದ್ಗಾ ಕಾಂಪ್ಲೆಕ್ಸ್ ನಲ್ಲಿಯ ಕ್ರೆಡಿಟ್ ಕೋ ಆಪರೇಟಿವ್ ಕಚೇರಿಯಲ್ಲಿಯೇ ಶಂಷಿಲ್ ಉದಾ (63) ಕೊಲೆಯಾದ ದುರ್ದೈವಿ. ಬುಧವಾರ ಬೆಳಗ್ಗೆ ಶಂಷಿಲ್ ಅವರನ್ನು  ಕೊಲೆ ಮಾಡಲಾಗಿದೆ. ಪ್ರತಿದಿನ ಶಂಷಿಲ್ 8.30ಕ್ಕೆ ಸೊಸೈಟಿಗೆ ಆಗಮಿಸುತ್ತಿದ್ದರು. ಬುಧವಾರ ಸಹ ಅವರು ಕಚೇರಿಗೆ […]

ಶೈನ್ ಸಿಟಿ ಪ್ರೊಡಕ್ಷನ್ ರವರ್ ಚೊಚ್ಚಲ ಕನ್ನಡ ಚಲನಚಿತ್ರ ‘ಚೆಲ್ಲಾಪಿಲ್ಲಿ’ ಜುಲೈ 5ರಂದು ಬೆಳ್ಳಿ ತೆರೆಗೆ

Tuesday, July 2nd, 2013
Chella Pilli

ಮಂಗಳೂರು: ಶೈನ್ ಸಿಟಿ ಪ್ರೊಡಕ್ಷನ್ ಮಂಗಳೂರು ನಿರ್ಮಾಣದ ಚೊಚ್ಚಲ ಕನ್ನಡ ಚಲನಚಿತ್ರ ‘ಚೆಲ್ಲಾಪಿಲ್ಲಿ’ ಜುಲೈ 5ರಂದು ರಾಜ್ಯಾದ್ಯಂತ ಬೆಳ್ಳಿ ತೆರೆಯಲ್ಲಿ ಬಿಡುಗಡೆ ಗೊಳ್ಳಲಿದೆ  ಎಂದು ಚಿತ್ರದ ನಿರ್ದೇಶಕ ಸಾಯಿಕೃಷ್ಣ ಇಂದು ಸಿಟಿ ಸೆಂಟರಿನ ಸಿನಿಪೊಲಿಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚಿತ್ರ ಸುಮಾರು 2.5 ಕೋಟಿ ವೆಚ್ಚದಲ್ಲಿ ಶೈನ್ ಸಿಟಿ ಪ್ರೊಡಕ್ಷನ್ ಮಂಗಳೂರು ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿದೆ. 2.20 ನಿಮಿಷ ನಿರಂತರ ಹಾಸ್ಯ ಸನ್ನಿವೇಷಗಳಿವೆ  ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ, ಐಶ್ವರ್ಯನಾಗ್ ಹಾಗೂ ಶೋಭಾರಾಜ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಸಾಯಿಕೃಷ್ಣ ವಿವರಿಸಿದರು. ಎಂ.ಎಸ್.ಉಮೇಶ್, ನವೀನ್ […]

ಮಣಿಪಾಲ ಅತ್ಯಾಚಾರದ ಆರೋಪಿಗಳ ಡಿಎನ್ಎ ಪರೀಕ್ಷೆಗೆ ನ್ಯಾಯಾಲಯದ ಅನುಮತಿ

Monday, July 1st, 2013
Hariprasad and Anand,

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರದ ಆರೋಪಿಗಳಾದ  ಹರಿಪ್ರಸಾದ್ ಮತ್ತು ಆನಂದನನ್ನು ಸೋಮವಾರ ಉಡುಪಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ಐದು ದಿನ ನ್ಯಾಯಾಂಗ ಬಂಧನ  ವಿಧಿಸಿದೆ ಹಾಗೂ ಇಬ್ಬರ ಡಿಎನ್ ಎ ಪರೀಕ್ಷೆಗೆ ಅನುಮತಿ ನೀಡಿದೆ. ಅತ್ಯಾಚಾರದ ಆರೋಪಿ ಆನಂದ ಬಂಧನಕ್ಕೆ ಮೊದಲು ಆತ್ಮಹತ್ಯಗೆ ಯತ್ನಿಸಿದ್ದರಿಂದ ಮಣಿಪಾಲದ ಕೆ.ಎಂಸಿ ಆಸ್ಪತ್ರೆಗೆ ದಾಖಲು ಪಡಿಸಲಾಗಿತ್ತು.  ಆತ ನಿನ್ನೆ ಬಿಡುಗಡೆಗೊಂಡಿದ್ದರಿಂದ, ಪೊಲೀಸರು ಅಧಿಕೃತವಾಗಿ ಮತ್ತೊಮ್ಮೆ ಬಂಧಿಸಿದರು. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಸೆಂಟ್ರಲ್ ಮಾರ್ಕೇಟ್ ನಲ್ಲಿ ಬೀದಿ ವ್ಯಾಪಾರಿಗಳಿಂದ ರಸ್ತೆ ಅಕ್ರಮಣ ವಿರುದ್ಧ ಪೊಲೀಸ್ ಕಾರ್ಯಚರಣೆ

Monday, July 1st, 2013
Central Market

ಮಂಗಳೂರು :  ಬಾನುವಾರ ಬಂತೆಂದರೆ ಸಾಕು ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ( ಸೆಂಟ್ರಲ್ ಟಾಕೀಸ್ ಸಮೀಪದ ಮೈದಾನ ಅಡ್ಡ ರಸ್ತೆ, ಪುರಭವನದ ಮುಖ್ಯ ರಸ್ತೆ )  ರಸ್ತೆಗಳೆಲ್ಲಾ ಮಾರುಕಟ್ಟೆಗಳಾಗಿ ಬದಲಾಗುತ್ತದೆ. ರಸ್ತೆಗಳಲ್ಲಿ ಪಾದಚಾರಿಗಳಿಗೆ ನಡೆದಾಡಲು ಹಾಗೂ ವಾಹನ ಚಾಲಕರಿಗೆ ವಾಹನ ಚಲಾಯಿಸಲು ಸಾದ್ಯವಾಗದಷ್ಟು ರಸ್ತೆಯನ್ನು ಈ ವ್ಯಾಪಾರಿಗಳು ಅಕ್ರಮಿಸಿರುತ್ತಾರೆ. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ವ್ಯಾಪಾರ ನಡೆಸುವ ವ್ಯಾಪಾರಿಗಳನ್ನು ಅಲ್ಲಿಂದ ತೆರವುಗೊಳಿಸಿ ಪಕ್ಕಕ್ಕೆ ಸರಿಸುವ ಕಾರ್ಯವನ್ನು ಬಂದರು […]

ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ ರೋಸಾ ಕುಟ್ಟಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಭೇಟಿ

Saturday, June 29th, 2013
Rosa Kutti

ಉಡುಪಿ:  ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ ರೋಸಾ ಕುಟ್ಟಿ, ಸದಸ್ಯರಾದ ಡಾ. ಕೆ. ವಿ. ತುಳಸಿ ಮತ್ತು ರುಬೀನಾ ರಶೀದ್‌ ಶನಿವಾರ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಭೇಟಿ ನೀಡಿದರು. ಅತ್ಯಾಚಾರಕ್ಕೊಳಗಾಗಿರುವ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿದರು.  ನೇರವಾಗಿ ಯುವತಿಯನ್ನು ಬೇಟಿ ಮಾಡಲು ಆಯೋಗದ ಸದಸ್ಯರಿಗೆ ಸಾಧ್ಯವಾಗಿಲ್ಲ. ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಸಾ ಕುಟ್ಟಿ ಯುವತಿ ಕುಟುಂಬದ ಜೊತೆ ಮಾತನಾಡಲು ಸಾಧ್ಯವಾಗಿಲ್ಲ  ಎಂದು ಅವರು ತಿಳಿಸಿದರು. ವಿದ್ಯಾರ್ಥಿನಿ ಮುಂದಿನ […]