ವೆನ್ಲಾಕ್ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣವಿರಲಿ: ಯು.ಟಿ.ಖಾದರ್

Saturday, June 15th, 2013
UT Khader Visits Lady Ghosen Hospital

ಮಂಗಳೂರು  : ಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ  ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ […]

ಕೈಕೊ ಮತ್ತು ಸುಭಾಷ್ನಗರದಲ್ಲಿ ಕಡಲ್ಕೊರೆತ ತಡೆಗೆ ಸೋಮವಾರ ಕೆಲಸ ಆರಂಭಿಸಿ: ಯು ಟಿ ಖಾದರ್

Saturday, June 15th, 2013
Ut khader

ಮಂಗಳೂರು : ಕಡಲ್ಕೊರೆತದಿಂದ ತೀವ್ರವಾಗಿ ಹಾನಿಗೊಂಡಿರುವ ಕೈಕೋ ಸುಭಾಷ್ ನಗರದಲ್ಲಿ ಸೋಮವಾರದಿಂದಲೇ ತಾತ್ಕಾಲಿಕ ಕಾಮಗಾರಿ ಆರಂಭಿಸುವಂತೆ ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಅವರು ಬಂದರು ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಸಂಬಂಧ ಇಂದು ಸರ್ಕ್ಯುಟ್  ಹೌಸ್ ನಲ್ಲಿ ನಡೆಸಿದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಭಾಷ್ ನಗರ ಹಾಗೂ ಹಿಲರಿ ನಗರದ ತೀವ್ರ ಕೊರತೆವಿರುವ ಪ್ರದೇಶಗಳಲ್ಲಿ ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ತಾತ್ಕಾಲಿಕ ತಡೆ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಸೂಚಿಸಿದ ಅವರು, ನಿಯಮಗಳನ್ನು ಜನರಿಗೋಸ್ಕರ ಸಡಿಲಗೊಳಿಸಿ […]

ಡಿ.ಕೆ. ಶಿವಕುಮಾರ್ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

Thursday, June 13th, 2013
DK Shivakumar

ಬೆಂಗಳೂರು:  ಇಂದು ಸ್ಪೀಕರ್ ಕಚೇರಿಯಲ್ಲಿ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಶಿವಕುಮಾರ್ ಅವರಿಗೆ ಬೆಳಗ್ಗೆ 10ಗಂಟೆಯ ಸುಮಾರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ತಮಗೆ ಸಚಿವ ಸ್ಥಾನ ತಪ್ಪಿಸಲು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು ಹಾಗು ಮಾಧ್ಯಮಗಳು ಸಂಚು ರೂಪಿಸಿದ್ದವು ಎಂದು ಆರೋಪಿಸಿದರು. ಅಲ್ಲದೆ ಮೊದಲ ಹಂತದಲ್ಲಿ ಸಚಿವ ಸ್ಥಾನ ತಪ್ಪಿಸುವುದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ ಎಂದರು. ಇನ್ನು ಡಿಕೆಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ […]

ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

Thursday, June 13th, 2013
ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

ಮಂಗಳೂರು : ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರನ್ನು ಇಂದು ಜಿಲ್ಲಾಧಿಕಾರಿ ಶ್ರೀ ಎನ್. ಪ್ರಕಾಶ್ ಅವರು ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಜ್ವರ ಪೀಡಿತರ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಶುಶ್ರೂಸೆ ನೀಡಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚನೆ ನೀಡಿದರು. ನಗರದ ಅತ್ತಾವರದಲ್ಲಿ ಒಟ್ಟು ಏಳು ಜನರು  ಡೆಂಗ್ಯೂ ಪೀಡಿತರಾಗಿದ್ದಾರೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಅವರನ್ನು ವೀಕ್ಷಿಸಲು ತೆರಳಿದ ಜಿಲ್ಲಾಧಿಕಾರಿ ರೋಗ ಪೀಡಿತರಿಗೆ ನೀಡಿರುವ  ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದರು.  ಇಬ್ಬರನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಪುತ್ತೂರಿನ […]

ಬಾಲಕಾರ್ಮಿಕರ ಪುನರ್ವಸತಿಯು ಮುಖ್ಯ ಚೌಡಪುರ್ಕರ್ ಅರುಣ್

Wednesday, June 12th, 2013
Bala Karmika

ಮಂಗಳೂರು : ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಎಲ್ಲರೂ ಅಸ್ಥೆ ವಹಿಸಬೇಕು.  ಬಾಲಕಾರ್ಮಿಕರ ಪುನರ್ವಸತಿಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸಬೇಕೆಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀ ಚೌಡಪುರ್ಕರ್ ಅರುಣ್ ಅವರು ಹೇಳಿದರು. ಅವರು ಇಂದು ನಗರದ ಪುರಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು […]

ಬೋಲ ಚಿತ್ತರಂಜನದಾಸ್ ಶೆಟ್ಟಿಯವರ “ಅತಿಥಿ ನಮ್ಮಮ್ಮ” ಕೃತಿ ಬಿಡುಗಡೆ

Tuesday, June 11th, 2013
Athithi Nammamma Book

ಮಂಗಳೂರು : ಬೋಲ ಚಿತ್ತರಂಜನದಾಸ್ ಶೆಟ್ಟಿಯವರು ಬರೆದ “ಅತಿಥಿ ನಮ್ಮಮ್ಮ” ಕೃತಿ ಯನ್ನು ಮಾಜಿ ಸಂಸದ ಎಸ್ ಬಾಲರಾಜ್ ಅವರು ಇಂದು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು. ತುಳುವರ ನಂಬಿಕೆಗಳು ಅದರ ಮೂಲವನ್ನು ಪಾಡ್ದನಗಳ ಮೂಲಕ ಮುದ್ರಿಸಿ ಒಂದು ಉತ್ತಮ ಕೃತಿ ಅನಾವರಣಗೊಳಿಸಿರುವುದು ತುಳುನಾಡಿನ ಸಂಸ್ಕ್ರುತಿಯನ್ನು ಇನ್ನಷ್ಟು ಬಲಿಷ್ಟಗೊಳಿಸಿದೆ. ಅದರ  ಮೂಲಕ ತುಳುನಾಡಿನ ಹಲವು ವಿಚಾರಗಳನ್ನು ತುಳುವರಿಗೆ  ವಿನಿಮಯಗೊಳಿಸಿದಂತಾಗಿದೆ. ಇದು ಜನಪರ ಚಿಂತನೆಗಳ ಉಳಿವಿಗೆ ಸಹಕಾರಿ ಎಂದು ಕೃತಿ ಬಿಡುಗಡೆಗೊಳಿಸಿದ ಮಾಜಿ ಸಂಸದ ಎಸ್ ಬಾಲರಾಜ್ ಹೇಳಿದರು. ಈ […]

ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಡ್ವಾಣಿ

Monday, June 10th, 2013
lk advani

ನವದೆಹಲಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಗೈರು ಆಗಿದ್ದ ಆಡ್ವಾಣಿ,  ಸೋಮವಾರ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತನ್ನ ಆಪ್ತರಲ್ಲಿ ರವಾನಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ಹಿರಿಯ ನಾಯಕ […]

ಹೋಮ್ ಸ್ಟೇ ದಾಳಿ : ಪತ್ರಕರ್ತರ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ಮನವಿ

Saturday, June 8th, 2013
Journalist Appeal

ಮಂಗಳೂರು : ಹೋಮ್ ಸ್ಟೇ ದಾಳಿ ಪ್ರಕರಣದಲ್ಲಿ ಪತ್ರಕರ್ತರ ಮೇಲೆ ದಾಖಲಾದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಖಜಾಂಜಿ ಯೋಗೀಶ್ ಹೊಳ್ಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ.ಆರ್., ಪ್ರಧಾನ ಕಾರ್ಯದರ್ಶಿ ಕಿರಣ್ ಸಿರ್ಸೀಕರ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು. ದಾಳಿಯಲ್ಲಿ ಭಾಗವಹಿಸದೆ ಕೇವಲ ಕರ್ತವ್ಯ […]

ಮಂಗಳೂರು ರಥಬೀದಿಯಲ್ಲಿ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಬಲಿ

Friday, June 7th, 2013
Auto Driver Died

ಮಂಗಳೂರು : ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಬಳಿ ರಿಕ್ಷಾ  ಚಾಲಕರೊಬ್ಬರು ದಾರಿ ಮಧ್ಯದಲ್ಲಿ ರಿಕ್ಷಾವನ್ನು ನಿಲ್ಲಿಸಿ  ಹೃದಯಾಘಾತದಿಂದ  ಸ್ಥಳದಲ್ಲೇ  ಬಿದ್ದು  ಮೃತಪಟ್ಟ ಘಟನೆ  ಇಂದು ನಡೆದಿದೆ. ಆಟೊ ರಿಕ್ಷಾದ ಚಾಲಕ ಸುರೇಶ್(43) ಮೃತಪಟ್ಟವರಾಗಿದ್ದು  ಅವರು ಮಂಗಳಾದೇವಿ ಬೋಳಾರದ ನಿವಾಸಿಯಾಗಿದ್ದಾರೆ.  ನಗರದ ವಿಶ್ವಭವನದ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಕೆ.ಎ.19ಸಿ 2373 ನೋಂದಣಿ ಸಂಖ್ಯೆಯ ಆಟೋವನ್ನು ಪಾರ್ಕ್ ಮಾಡುತ್ತಿದ್ದರು. ಇಂದು ರಥಬೀದಿಗೆ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಸಂದರ್ಭದಲ್ಲಿ  ತೀವ್ರ ತೆರನಾದ ಎದೆನೋವು ಕಾಣಿಸಿಕೊಂಡು ದಾರಿಮಧ್ಯೆಯೇ ರಿಕ್ಷಾವನ್ನು […]

ವಾಹನಗಳಿಗೆ ಕೆಂಪು ದೀಪ ಬಳಕೆಗೆ ಕಡಿವಾಣ, ಸಾರಿಗೆ ಇಲಾಖೆ ಹೊಸ ಆದೇಶ

Friday, June 7th, 2013
Red light car

ಬೆಂಗಳೂರು : ಸಾರಿಗೆ ಇಲಾಖೆ ವಾಹನಗಳಿಗೆ ಕೆಂಪು ದೀಪ ಅಳವಡಿಸಿಕೊಳ್ಳಲು ಹೊಸ  ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ  ಕೇವಲ ಕೆಂಪು ದೀಪ ಅಳವಡಿಸಲು ಅವಕಾಶವಿರುವುದು ಅತಿಗಣ್ಯರಿಗೆ ಮಾತ್ರ. ಸುಪ್ರೀಂ ಕೋರ್ಟ್ 2010ರಲ್ಲೇ ಈ ಕುರಿತು ಆದೇಶ ಹೊರಡಿಸಿದ್ದರೂ ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಮೇಲ್ನೋಟಕ್ಕೆ ಆದೇಶ ಹೊರಡಿಸಿ ಸುಮ್ಮನಾಗಿತ್ತು. ಆ ಆದೇಶಗಳಲ್ಲೇ ಕೆಲವು ಲೋಪಗಳಿದ್ದುದರಿಂದ ಬೇಕಾಬಿಟ್ಟಿ ಕೆಂಪು ದೀಪ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಸಾರಿಗೆ ಇಲಾಖೆ ಇದೀಗ ಕೆಂಪು ದೀಪ ಅಳವಡಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು […]