ಕ್ಯಾರಿ ಓವರ್ ಪದ್ಧತಿ ಜಾರಿಗೆ ತರಲು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

Tuesday, July 16th, 2013
Polytechnic students protest

ಮಂಗಳೂರು : ಪಾಲಿಟೆಕ್ನಿಕ್ ಸರ್ವಕಾಲೇಜು ಸಂಘದ ವತಿಯಿಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಯಾದ (ಕ್ಯಾರಿ ಓವರ್ ನಿಯಮ)ದ ಶೀಘ್ರ ಪರಿಹಾರಕ್ಕಾಗಿ ಜುಲೈ 16 ಮಂಗಳವಾರ ಬೆಳಿಗ್ಗೆ ಮಂಗಳೂರು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯ ನೇತೃತ್ವವನ್ನುವಹಿಸಿದ ಅಧ್ಯಕ್ಷರಾದ ರಮಿತ್ ಕುಮಾರ್  ವಿದ್ಯಾರ್ಥಿಗಳ ಪರ ಮಾತಾಡುತ್ತಾ ಹಿಂದಿನ ಸರಕಾರ ಹೊರಡಿಸಿದ ಆದೇಶದಲ್ಲಿ 2013-14ನ ಸಾಲಿನಿಂದ ಕಡ್ಡಾಯವಾಗಿ ಡಿಪ್ಲೋಮಾ ವಿದ್ಯಾರ್ಥಿಗಳು ಮೂರನೇ ಹಾಗೂ ಐದನೇ ಸೆಮಿಸ್ಟರ್  ಗಳಿಗೆ ಪ್ರವೇಶ ಪಡೆಯಲು 2009-10ನೇ ಸಾಲಿನಂತೆಯೇ ನಾಲ್ಕು […]

ನಾಳೆ ಮಂಗಳೂರಿನಲ್ಲಿ ಬಸ್ ಬಂದ್ ಇಲ್ಲ : ಬಸ್ಸು ಮಾಲಕರ ಸಂಘ

Tuesday, July 16th, 2013
No Bus Bandh

ಮಂಗಳೂರು : ನಾಳೆ ಎರಡು ಜಿಲ್ಲೆಗಳಲ್ಲಿ ಬಸ್ ಬಂದ್ ಇಲ್ಲ ಎಂದು ದ.ಕ ಜಿಲ್ಲಾ ಬಸ್ಸು ಮಾಲಕರು ತಿಳಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸ್ ಕಮಿಷನರಿಗೆ ಮನವಿ ಮಾಡಿದ ಬಸ್ಸು ಮಾಲಕರು ಬಂದ್ ಇಲ್ಲ ಎಂದು ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ(ಜು.17) ಬಸ್ ಬಂದ್ ನಡೆಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ […]

ಅವರಿಬ್ಬರ ನಡುವಿನ ಸಂಶಯ ಕೊಲೆ ಮಾಡುವ ವರೆಗೆ ಮುಟ್ಟಿತು !

Tuesday, July 16th, 2013
Gangadhar Padubidre

ಮಂಗಳೂರು : ದೂರದರ್ಶನದ (ಡಿ.ಡಿ-1) ವರದಿಗಾರ ಗಂಗಾಧರ್ ಪಡುಬಿದ್ರೆ ತನ್ನ ಪತ್ನಿಯನ್ನು ಹತೈಗೈದ ಘಟನೆ ಸೋಮವಾರ ಸಂಜೆ ಕೋಡಿಕಲ್‌ನ ಜೆ.ಬಿ.ರಸ್ತೆಯ ಮನೆಯೊಂದರಲ್ಲಿ ನಡೆದಿದೆ. ಅರೋಪಿ ಗಂಗಾಧರ್ ಪಡುಬಿದ್ರೆ ದೂರದರ್ಶನದ (ಡಿ.ಡಿ-1) ವರದಿಗಾರರಾಗಿದ್ದರು. ಮತ್ತು ಆಕೆಸ್ಟ್ರಾ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮಮತಾ ಶೆಟ್ಟಿ ( 32) ನಗರದ ಎಸ್.ಡಿ.ಎಮ್ ಕಾಲೇಜಿನ ಶಿಕ್ಷಕಿ ಯಾಗಿದ್ದರು. ಕೊಲೆಯಾದ ಮಮತಾ ಎಳವೆಯಲ್ಲಿಯೇ  ಹೆತ್ತವರನ್ನು ಕಳೆದುಕೊಂಡು  ಹಾಸ್ಟೆಲ್‌ನಲ್ಲಿದ್ದಳು. ಅಲ್ಲಿಂದ ಮಮತಾಳನ್ನು ಕರೆತಂದ ಗಂಗಾಧರ ಪಡುಬಿದ್ರಿ ಆಕೆಗೆ ಶಿಕ್ಷಣ ಕೊಡಿಸಿದ್ದ, ಆಕೆ ಕಾನೂನು […]

ಪಾವಂಜೆ ಯಲ್ಲಿ ತುಳುನಾಡ ಕೃಷಿ ಜನಪದೋತ್ಸವ

Monday, July 15th, 2013
tulunad krishi

ಮಂಗಳೂರು : ಪಾವಂಜೆ ಶ್ರೀ ಜನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಅಯೋಜಿಸಲಾದ  ತುಳುನಾಡ ಕೃಷಿ ಜನಪದೋತ್ಸವದ ಉದ್ಘಾಟನೆಯನ್ನು ಶನಿವಾರ ಉದ್ಯಮಿ ರಘುನಾಥ ಸೋಮಯಾಜಿ ಅವರು ನೆರವೇರಿಸಿದರು. ಪಾವಂಜೆ ಯಲ್ಲಿ ಎರಡು ದಿನಗಳ ಕಾಲ ನಡೆಯುವ  4ನೇ ವರ್ಷದ ಜನಪದೋತ್ಸವದ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮಣ್ಣಿನ ಹಾಗೂ ಕೆಸರಿನ ಬಗ್ಗೆ ಯುವಜನರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಸಮಾಜ ಕಟ್ಟಲು ಕೆಸರುಗದ್ದೆ ಪ್ರೇರಣೆಕೊಡುತ್ತದೆ ಎಂದು ಸೋಮಯಾಜಿ ತಿಳಿಸಿದರು. ಕೊಯ್‌ಕುಡೆ ಹರಿಪಾದೆಯ […]

ಮಣಿಪಾಲ ರಿಕ್ಷಾದಲ್ಲಿ ಗ್ಯಾಂಗ್ ರೇಪ್ ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Monday, July 15th, 2013
Gang Rapist

ಉಡುಪಿ: ಜೂನ್ 20ರ ರಾತ್ರಿ ನಡೆದ ಮಣಿಪಾಲ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಾದ ಯೋಗೀಶ, ಹರಿಪ್ರಸಾದ್ ಮತ್ತು ಆನಂದ ನನ್ನು ಶಿವಮೊಗ್ಗ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸೋಮವಾರ ಬೆಳಗ್ಗೆ ಆರೋಪಿಗಳನ್ನು  ಉಡುಪಿಯ ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 29ರ ತನಕ ವಿಸ್ತರಿಸಿದರು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದೆಯೆಂದು ತನಿಖಾಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಯೋಗೀಶ ಮತ್ತು ಹರಿಪ್ರಸಾದ್ ನ ಸೋದರರಾದ ಹರೀಂದ್ರ […]

ಬಟ್ಟೆ ಅಂಗಡಿ ನೌಕರ ಸಾಬಿತ್ ಕೊಲೆ ಪ್ರಕರಣ ಐವರು ಆರೋಪಿಗಳ ಸೆರೆ

Sunday, July 14th, 2013
Sabith Murder

ಕಾಸರಗೋಡು:  ಬೆನಜ್ಹೀರ್ ಬಟ್ಟೆ ಮಳಿಗೆಯ ನೌಕರ ಮೀಪುಗುರಿಯ ಟಿ.ಎ. ಸಾಬಿತ್ ನನ್ನು ಜುಲೈ 7 ರಂದು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಹಿತ ಐವರನ್ನು ಸರ್ಕಲ್ ಇನ್ಸ್ ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಪ್ರಮುಖ ಆರೋಪಿಗಳಾದ ಅಣಂಗೂರು ಜೆ.ಪಿ. ಕಾಲನಿಯ ಕೆ. ಅಕ್ಷಯ್(21), ಕಾಳ್ಯಂಗಾಡಿನ ಕೆ.ಎನ್. ವೈಶಾಖ್(19) ಹಾಗೂ ಜೆ.ಪಿ. ಕಾಲನಿಯ ಆರ್. ಬಿಜೇಶ್(20), ಕೆ. ಸಚಿನ್ ಕುಮಾರ್(19) ಮತ್ತು 17ರ ಹರೆಯದ ಜುವೆನೈಲ್ ಬಂಧನಕ್ಕೊಳಗಾಗಿದ್ದಾರೆ. ಅಕ್ಷಯ್ ಮತ್ತು ವೈಶಾಖ್ […]

ಹಳ್ಳಿ ಹುಡುಗನ ಸಾಧನೆಗೆ ಎಸ್.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೂ. 50 ಸಾವಿರ ಸಹಾಯ ಧನ

Sunday, July 14th, 2013
Journey towards IIT

ಮಂಗಳೂರು :  ಸುಳ್ಯ ತಾಲೂಕಿನ ಯೇನೆಕಲ್ ಗ್ರಾಮದ ಮಂಜುನಾಥ್ ಅವರ ಪರಿಶ್ರಮದ ಹೆಜ್ಜೆಗಳ ಸಾಕ್ಷ್ಯ ಚಿತ್ರದ ಬಿಡುಗಡೆ ಸಮಾರಂಭವು ಶನಿವಾರ ನಗರದ ಎಸ್‌ಡಿಸಿಸಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನೆರವೇರಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರು ಮಂಜುನಾಥನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೂ. 50 ಸಾವಿರ ಸಹಾಯ ಧನವನ್ನು ನೀಡಿದರು. ಯಾವೂದೇ ಸೌಲತ್ತುಗಳಿಲ್ಲದ ಒಂದು ಹಳ್ಳಿಯಲ್ಲಿ ಹುಟ್ಟಿ, ತನ್ನ ಕಡು […]

ಸಿದ್ದರಾಮಯ್ಯರು ಗುರಿ ಇಲ್ಲದ ಕೊರತೆಯ ಬಜೆಟ್ ಮಂಡಿಸಿದ್ದಾರೆ ; ಸಿಪಿಐಎಂ

Saturday, July 13th, 2013
cpim opposed Budget

ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿರುವ ಜನವಿರೋಧಿ ಬಜೆಟ್ ನ್ನು ವಿರೋಧಿಸಿ ಶನಿವಾರ ಜಿಲ್ಲಾಧಿಕಾರಿ ಗೇಟಿನ ಎದುರು ಸಿಪಿಐಎಂ ಪ್ರತಿಭಟನೆ ನಡೆಸಿತು. ಸಿದ್ದರಾಮಯ್ಯ ರವರು ಮಂಡಿಸಿರುವ ಬಜೆಟ್ ನಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಮತ್ತಷ್ಟು ತೀವ್ರಗತಿಯಲ್ಲಿ ಏರಿಕೆಯಾಗುವಂತೆ ಪರಿಣಾಮ ಬೀರುತ್ತದೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಮತ್ತು ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡದೆ ಅಭಿವೃದ್ಧಿ ಶೂನ್ಯತೆಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದು ಜನವಿರೋಧಿ ಬಜೆಟ್ ಆಗಿದೆ ಎಂದು ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಹೇಳಿದರು. ರಾಜ್ಯ ಅಬಕಾರಿ ತೆರಿಗೆ ಮತ್ತು […]

ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

Saturday, July 13th, 2013
ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

ಮಂಗಳೂರು: ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಮಾಧ್ಯಮ ಪ್ರತಿನಿದಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್  ಭಾಗವಹಿಸಿದರು. ಜಿಲ್ಲೆಯ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲು ಸರ್ಕಾರ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ಉಚಿತ ತಪಾಸಣಾ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಡೆಂಗ್ಯೂ ಮುಂತಾದ ರೋಗಗಳ ಬಗ್ಗೆ ಮುಂದಿನ ವರ್ಷ ಜನವರಿ ತಿಂಗಳಿಂದಲೇ ಎಲ್ಲಾ ಜಿಲ್ಲೆಗಳಲ್ಲಿ […]

ಮೂಡಬಿದ್ರೆಯ ಗುರು ಬಸದಿ ಪಂಚಲೋಹದ ವಿಗ್ರಹಕಳ್ಳರ ಬಂಧನ

Saturday, July 13th, 2013
Guru Basadi Idol Theft

ಮೂಡಬಿದ್ರೆ: ಜೂನ್ 17ರಂದು ರಾತ್ರಿ ಮೂಡಬಿದ್ರೆಯ ಗುರು ಬಸದಿಯಲ್ಲಿ ಬೆಲೆಬಾಳುವ ವಿಗ್ರಹಗಳನ್ನು ಕಳವು ಮಾಡಿದ್ದ ಇಬ್ಬರು ವಿಗ್ರಹಕಳ್ಳರನ್ನು ಕೋಲಾರ ಪೊಲೀಸರು ಶುಕ್ರವಾರ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಬಂಧಿಸಿದ್ದಾರೆ. ಕರ್ನಾಟಕ  ಗಡಿಪ್ರದೇಶವಾದ ಕರ್ನೂಲ್ ನಲ್ಲಿ ಒರಿಸ್ಸಾ ಮೂಲದ ದಾಸ್ ಮತ್ತು ಪ್ರಮೋದ್ ಎಂಬವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಶ್ರೀ ಆದಿನಾಥ ಸ್ವಾಮಿ ಪಂಚಲೋಹದ ವಿಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪಂಚಲೋಹದ ವಿಗ್ರಹದ ಮೌಲ್ಯ ಸುಮಾರು ಒಂದು ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.  ಕಳ್ಳತನವಾಗಿರುವ ಇತರ ವಿಗ್ರಹಗಳನ್ನು ಇನ್ನಷ್ಟೇ ಪತ್ತೆ […]