ಖೋಟಾ ರಶೀದಿ ನೀಡಿ ರೂ.28 ಸಾವಿರ ಹಣ ವಸೂಲಿ: ಮುಖ್ಯ ಶಿಕ್ಷಕ ಕೆ.ಜಿ.ಲಕ್ಷ್ಮಣ ಶೆಟ್ಟಿ ಅಮಾನತು

Friday, July 8th, 2011
head master suspended

ಮಂಗಳೂರು: ಬೆಳ್ತಂಗಡಿ ತಾಲೂಕು ಬಂಗಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಕೆ.ಜಿ.ಲಕ್ಷ್ಮಣ ಶೆಟ್ಟಿ ಮತ್ತು ಅದೇ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ಬಿ.ರಾಜು ಇವರು ಶಾಲೆಯಲ್ಲಿ ಸರಕಾರ ನಿಗಧಿಪಡಿಸಿರುವ ಶುಲ್ಕಗಿಂತ ಹೆಚ್ಚುವರಿಯಾಗಿ ಶುಲ್ಕ ರೂ.28,071 ಗಳನ್ನು ಖೋಟಾ ರಶೀದಿ ನೀಡಿ ವಸೂಲಿ ಮಾಡಿದ ಕಾರಣ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಬೆಳ್ತಂಗಡಿಗೆ ಭೇಟಿ ನೀಡಿದಾಗ, ಪತ್ರಕರ್ತರು ಮೌಖಿಕ ದೂರು ನೀಡಿದ ಮೇರೆಗೆ, ಜಿಲ್ಲಾಧಿಕಾರಿ   ಡಾ.ಎನ್.ಎಸ್.ಚೆನ್ನಪ್ಪ ಗೌಡ ಅವರು  ತನಿಖೆ ಕೈಗೊಳ್ಳುವಂತೆ, ಸಾರ್ವಜನಿಕ […]

ಆಧಾರ್ ಗುರುತಿನ ಚೀಟಿಗೆ ಮಂಗಳೂರು ನಗರ ಪ್ರಧಾನ ಅಂಚೆ ಕಚೇರಿಯಲ್ಲಿ ಚಾಲನೆ

Thursday, July 7th, 2011
Adhar card/ಆಧಾರ್ ಗುರುತಿನ ಚೀಟಿ

ಮಂಗಳೂರು: ಮಂಗಳೂರು ನಗರ ಪ್ರಧಾನ ಅಂಚೆ ಕಚೇರಿಯಲ್ಲಿ ದ.ಕ.ಜಿಲ್ಲಾ ವ್ಯಾಪ್ತಿಯ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ನೋಂದಣಿ ಪ್ರಕ್ರಿಯೆಗೆ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಬುಧವಾರ ಚಾಲನೆ ನೀಡಿದರು.ಅವರು ಲಯನ್ಸ್ ಜಿಲ್ಲಾ ಗವರ್ನರ್ ಜಿ.ಕೆ.ರಾವ್‌ರಿಗೆ ಮೊದಲ ಆಧಾರ್ ನೋಂದಣಿ ಅರ್ಜಿ ನೀಡುವ ಮೂಲಕ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶರ್ಮಾ ನೋಂದಣಿ ಅರ್ಜಿ ತುಂಬಲು ಅನಕ್ಷರಸ್ಥರು ಹಾಗೂ ಹಳ್ಳಿಯ ಜನರು ಏಜೆಂಟರ ಮೊರೆ ಹೋಗುವುದನ್ನು ತಪ್ಪಿಸಬೇಕು, ಅದಕ್ಕಾಗಿ ಅನುಭವಿ ಏಜೆನ್ಸಿಯ ಮೂಲಕ […]

ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೀಲಂ ಅಚ್ಯುತರಾವ್ ಆಧಿಕಾರ ಸ್ವೀಕಾರ

Thursday, July 7th, 2011
Neelam achuta rao/ನೀಲಂ ಅಚ್ಯುತರಾವ್

ಬೆಂಗಳೂರು: `ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೀಲಂ ಅಚ್ಯುತರಾವ್  (ಡಿಜಿಪಿ- ಐಜಿಪಿ)ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ಡಿಜಿಪಿ ಡಾ.ಎಸ್.ಟಿ.ರಮೇಶ್ ಅವರಿಂದ ಬೇಟನ್ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಅವರು ರಾಜ್ಯದಲ್ಲಿ `ಶಾಂತಿ ಕಾಪಾಡುವ ಮೂಲಕ ಜನರು ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡುವುದು ಮೊದಲ ಆದ್ಯತೆಯಾಗಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ`ಎಂದು ಹೇಳಿದರು. ಈ ಮೊದಲು ಈ ಹುದ್ದೆಯನ್ನು ನಿರ್ವಹಿಸಿದ ಅನೇಕ ಅಧಿಕಾರಿಗಳು ಉತ್ತಮ […]

ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಪ್ರತ್ಯೇಕ ರಾಜ್ಯ ಸಿಗಲಿ : ಹರಿಕೃಷ್ಣ ಪುನರೂರು

Wednesday, July 6th, 2011
Harikrishana punaroor/ಹರಿಕೃಷ್ಣ ಪುನರೂರು

ಮಂಗಳೂರು : ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಮತ್ತು ತುಳುವರಿಗೆ ಅನ್ಯಾಯವಾಗಿದೆ. 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ನಮ್ಮ ನಾಯಕರು ತುಳು ರಾಜ್ಯದ ಬೇಡಿಕೆಯನ್ನು ಇರಿಸದೆ ತುಳುವರಿಗೆ ಅನ್ಯಾಯವೆಸಗಿದ್ದಾರೆ.ದೇಶದ ಉದ್ಧಾರದ ಹೆಸರಿನಿಂದ ಹೊಸ ಹೊಸ ಕೈಗಾರಿಕೆಗಳು ಬಂದು ತುಳುನಾಡು, ಸಂಸ್ಕೃತಿ ಇದರಿಂದಾಗಿ ನಾಶವಾಗುತ್ತಿದೆ. ತುಳುವರು ಅನಾಥರಾಗಿದ್ದಾರೆ ಈಗ ತೆಲುಗರು ಅವರ ರಾಜ್ಯ ವನ್ನು ಒಡೆದು ಪ್ರತ್ಯೇಕ ತೆಲುಂಗಾಣ ರಾಜ್ಯದ ಬೇಡಿಕೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ತೆಲಂಗಾಣ ರಾಜ್ಯವನ್ನು ರಚಿಸಲು ಕೇಂದ್ರ ಸರಕಾರ ಮುಂದೆ ಬಂದರೆ,ತುಳುವರು ನ್ಯಾಯ […]

ಕಡ್ಡಾಯ ಶಿಕ್ಷಣ ಕಾಯಿದೆಯಿಂದ ಎಲ್ಲ ಮಕ್ಕಳಿಗೂ ಶಿಕ್ಷಣ: ಜಿಲ್ಲಾಧಿಕಾರಿ

Tuesday, July 5th, 2011
Kaddaya Shikshana Kayide

ಮಂಗಳೂರು: ಸರ್ಕಾರ ರೂಪಿಸಿರುವ ಕಡ್ಡಾಯ ಶಿಕ್ಷಣ ಕಾಯಿದೆಯಿಂದಾಗಿ ಎಲ್ಲ ಮಕ್ಕಳಿಗೂ ಶಿಕ್ಷಣ ಲಭ್ಯ. ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಕಾಯಿದೆ ರೂಪುಗೊಂಡಿದ್ದು ಸೌಲಭ್ಯದ ಸದ್ಬಳಕೆಯಾಗಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು. ಅವರಿಂದು ನಗರದ ಮಣ್ಣಗುಡ್ಡೆಯ ಗಾಂಧೀನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಎಂಬ ಘೋಷವಾಕ್ಯದಡಿ ಶ್ವೇತಪತ್ರ ಹಾಗೂ ಕೈಪಿಡಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಾತೃಭಾಷೆಯಲ್ಲಿ ಕಲಿಕೆಯಿಂದ […]

ಮಂಗಳೂರು ಮಹಾನಗರಪಾಲಿಕೆಗೆ ವಾಮಾಚಾರ ಮಂತ್ರಿಸಿದ ತಗಡು, ನಿಂಬೆಹಣ್ಣು, ಕುಂಬಳಕಾಯಿ ಪತ್ತೆ

Tuesday, July 5th, 2011
Vamachara/ವಾಮಾಚಾರ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಚೇರಿಯೆದುರು ಇಂದು ಮುಂಜಾನೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿದೆ. ಮೇಯರ್ ಪ್ರವೀಣ್ ಕುಮಾರ್ ಅವರ ಕಾರು ನಿಲ್ಲುವ ಜಾಗದಲ್ಲಿ ಮಂತ್ರಿಸಿದ ತಗಡು,ನಿಂಬೆಹಣ್ಣು,  ಕುಂಬಳಕಾಯಿಯನ್ನು ಕಡಿದು ಅದಕ್ಕೆ ಕುಂಕುಮ ಸುರಿಯಲಾಗಿದೆ.ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಮುಂಜಾನೆ ಕಾವಲು ಕಾಯುವ ವಾಚ್‌ಮೆನ್‌ಗೆ ವಾಮಾಚಾರದ ಕುರುಹು ಪತ್ತೆಯಾಗಿವೆ.ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪಾಲಿಕೆಗೆ ವಾಚ್‌ಮೆನ್‌ ಇದ್ದರೂ,ರಾತ್ರಿಯ ವೇಳೆ ಯಾರೋ ವಾಚ್‌ಮೆನ್ ಕಣ್ಣು ತಪ್ಪಿಸಿ ವಾಮಾಚಾರ ಮಾಡಿರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹು ಕೂಡಾ […]

ಅಶ್ವಿನಿ ಅಮಾಯಕಿ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ :ಚಿಂದಾನಂದ್ ಶೆಟ್ಟಿ

Tuesday, July 5th, 2011
Ashwini Akkunje/ಅಶ್ವಿನಿ ಅಕ್ಕುಂಜಿ

ಮಂಗಳೂರು: ನನ್ನ ಮಗಳಿಗೆ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ  ಡೋಪಿಂಗ್ ವಿವಾದದಲ್ಲಿ ಸಿಲುಕಿದ ಅಶ್ವಿನಿ ಅಕ್ಕುಂಜಿ ಅಮಾಯಕಳಾಗಿದ್ದಾಳೆ ಎಂದು ಅಶ್ವಿನಿ ತಂದೆ ಚಿಂದಾನಂದ್ ಶೆಟ್ಟಿ ಹೇಳಿದ್ದಾರೆ. ಅಶ್ವಿನಿ ತನ್ನ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಶೀಘ್ರದಲ್ಲಿ ಆರೋಪ ಮುಕ್ತಳಾಗುವ ವಿಶ್ವಾಸವಿದೆ ಎಂದು ಶೆಟ್ಟಿ ತಿಳಿಸಿದ್ದಾರೆ. ಡೋಪಿಂಗ್ ವಿವಾದದಿಂದಾಗಿ ಅಶ್ವಿನಿ ಕ್ರೀಡಜೀವನದ ಮೇಲೆ ಪರಿಣಾಮ ಬೀರದಿರಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.ಇಂತಹ ವಿವಾದಗಳಿಂದ ದೂರವಿರುವಂತೆ ಎಚ್ಚರಿಸಿದ್ದೆ. ಆದರೆ ಸುದ್ದಿ ತಿಳಿದು ಆಘಾತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಮತ್ತು […]

ಗೋ ಶಾಲೆ ಸಹಾಯಾರ್ಥ ಯಕ್ಷಗಾನ

Monday, July 4th, 2011
havyaka go shale

ವೇಣೂರು: ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ,ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ವೇಣೂರು ಸಮೀಪದ ಗುಂಡೂರಿಯಲ್ಲಿರುವ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜುಲೈ 21ರಂದು ಸಂಜೆ 6ಗಂಟೆಗೆ ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ  ಶ್ರೀ ಧರ್ಮಸ್ಥಳ ಮತ್ತು ಶ್ರೀ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ “ವಿಷಮರ್ಧನ – ಕುಶಲವ” ಎಂಬ ಪುರಾಣ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿತೋರಿಸಲಿದ್ದಾರೆ. ಯಸ್.ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಪೆರುವೋಡಿ […]

ದೇಶದಲ್ಲಿ ದುಷ್ಕೃತ್ಯವೆಸಗುವ ಕೆ.ಎಫ್.ಡಿ. ಮತ್ತು ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Saturday, June 25th, 2011
ABVP protest

ಮಂಗಳೂರು: ಭಯೋತ್ಪಾದಕ ಕೃತ್ಯ ಮತ್ತು ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿರುವ ಕರ್ನಾಟಕ ಫೋರಂ ಫಾರ್  ಡಿಗ್ನಿಟಿ (ಕೆ.ಎಫ್.ಡಿ)  ಸಂಘಟನೆಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ನಗರದ ಬೆಸೆಂಟ್ ವೃತ್ತದ ಬಳಿ  ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ. ಹರ್ಷ ಮಾತನಾಡಿ ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ 5. ಕೋಟಿ ಹಣ ನೀಡಬೇಕೆಂದು ತಂದೆ-ತಾಯಿಗಳಿಗೆ ಬೆದರಿಕೆ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಕೆ.ಎಫ್.ಡಿ […]

ರೋಗಗಳ ಹತೋಟಿಗೆ ಅಯೋಡಿನ್ ಯುಕ್ತ ಉಪ್ಪು ಅತೀ ಅಗತ್ಯ

Tuesday, May 31st, 2011
iodin

ಮಂಗಳೂರು:2005 ರಿಂದ ಪೌಷ್ಟಿಕ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನುಬಳಸುವ ಬಗ್ಗೆ ಗ್ರಾಮಾಂತರಪ್ರದೇಶದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದು,ಈಗಾಗಲೇ ಶೇಕಡಾ 47 ರಷ್ಟು ಪ್ರಗತಿಯಾಗಿದೆ. ಅಯೋಡಿನ್ ಇಲ್ಲದ ಉಪ್ಪನ್ನು ಈಗಲೂ ಕೆಲವು ಗ್ರಾಮಾಂತರ ಜನರು ಬಳಸುತ್ತಿದ್ದಾರೆ. ಅಯೋಡಿನ್ ಯುಕ್ತ ಉಪ್ಪನ್ನು ಎಲ್ಲರೂ ಬಳಸುವ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ. ಉಪ್ಪುತಯಾರಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಅಯೋಡಿನ್ಯುಕ್ತ ಉಪ್ಪು ಹಲವಾರು ರೋಗಗಳನ್ನು ಹತೋಟಿಯಲ್ಲಿಡಬಲ್ಲದು ಎಂದು ಮಂಗಳೂರು ತಾಲೂಕಿನ ಸಹಾಯಕ ಕಮೀಷನರ್ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅಭಿಪ್ರಾಯ ಪಟ್ಟರು. ಅವರು ಇಂದು (31-5-11)ಫಾದರ್ […]