ನಂದಿನಿ ಗ್ರಾಹಕರಿಗೆ ಸಿಹಿ ಸುದ್ಧಿ : ನಂದಿನಿ ಸಿಹಿ ಉತ್ಸವ ಅವಧಿ ವಿಸ್ತರಣೆ

Saturday, January 9th, 2021
Nandini Utsava

ಮಂಗಳೂರು  : ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ ಸಿಹಿ ಉತ್ಸವ ಯೋಜನೆಯನ್ನು ಕರ್ನಾಟಕ ರಾಜ್ಯಾದ್ಯಂತ ದಿನಾಂಕ 24-12-2020 ರಿಂದ 07-01-2021 ರವರೆಗೆ ಆಚರಿಸಲಾಗಿದೆ. ಸಂಕ್ರಾತಿ ಹಬ್ಬದ ನಿಮಿತ್ತ ಗ್ರಾಹಕರ ಆಪೇಕ್ಷೆ ಮೇರೆಗೆ ನಂದಿನಿ ಸಿಹಿ ಉತ್ಸವವನ್ನು ದಿನಾಂಕ 14-04-2021 ರವರೆಗೆ ವಿಸ್ತರಿಸಲಾಗಿರುವುದನ್ನು ತಿಳಿಸಲು ಹರ್ಷಿಸುತ್ತೇವೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿರುತ್ತದೆ. ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ […]

40 ಪಾರಿವಾಳಗಳನ್ನು ಕದ್ದ ಕಳ್ಳರು, 24 ಗಂಟೆಯಲ್ಲಿ ಆರೋಪಿಗಳ ಬಂಧನ

Thursday, January 7th, 2021
pigeon

ಬಂಟ್ವಾಳ : ವಿಟ್ಲ ಸಮೀಪದ ಒಕ್ಕೆತ್ತೂರು ಮೂಲೆ ಎಂಬಲ್ಲಿ  ಸುಮಾರು 29 ಸಾವಿರ ರೂ. ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ. ಪಾರಿವಾಳ ಸಾಕಿದ ಸುಲೈಮಾನ್  ಎಂಬವರು  ದೂರು ನೀಡಿ 24 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಕರಡಿ ನಾಸಿರ್ (24), ಕಾವಲಕಟ್ಟೆ ಮೂಲದ ವಿಟ್ಲ ಸಮೀಪದ ಪಾತ್ರತೋಟ ನಿವಾಸಿ ರಿಝ್ವಾನ್ (19), ಬೋಳಂತೂರು ಮೂಲದ ಅಮ್ಟೂರು ನಿವಾಸಿ ಅಫೀಝ್ (18) ಬಂಧಿತ […]

ದಾರಿಯಲ್ಲಿ ಹೋಗಬೇಕಾದ ಪೊಲೀಸ್ ಜೀಪು ಅಂಗಡಿ ನುಗ್ಗಿ ಚೆಲ್ಲಾಪಿಲ್ಲಿ

Thursday, January 7th, 2021
Police Jeep

ಬೆಳ್ತಂಗಡಿ:  ಮಡಿಕೇರಿಯತ್ತ ತೆರಳ ಬೇಕಾದ  ಪೊಲೀಸ್ ಜೀಪ್ವೊಂದು ಗುರುವಾರ  ಬೆಳಗ್ಗೆ ಅಂಗಡಿಗೆ ನುಗ್ಗಿದ ಘಟನೆ ನಾರಾವಿ ಸಮೀಪದ ಈದು ಕ್ರಾಸ್ ಬಳಿ ನಡೆದಿದೆ. ಕಾರ್ಕಳದಿಂದ ಮಡಿಕೇರಿಯತ್ತ ಇನ್ಸ್ ಪೆಕ್ಷನ್ ಗಾಗಿ ತೆರಳುತ್ತಿದ್ದ ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಜೀಪ್ನಲ್ಲಿದ್ದ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗಡಿ ಶೋಕೇಸ್ ಸೇರಿ ಇನ್ನಿತರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ತಲೆಗೆ ಸ್ವಲ್ಪ ಗಾಯವಾಗಿದ್ದು, ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಡಿಲು ಬಡಿದು ಹೋಟೆಲ್ ಬೆಂಕಿಗಾಹುತಿ

Thursday, January 7th, 2021
Hotel

ಉಡುಪಿ : ಅನಿರೀಕ್ಷಿತವಾಗಿ ಸುರಿದ ಗುಡುಗು ಸಹಿತ‌ ಭಾರೀ ಮಳೆಯ ಹಿನ್ನಲೆಯಲ್ಲಿ ಸಿಡಿಲು ಬಡಿದು ಹೋಟೆಲೊಂದು ಬೆಂಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲಿಗೆ ಸಿಡಿಲು ಬಡಿದ ಪರಿಣಾಮ ಹೋಟೆಲು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿ ‌ಶಾಮಕ ದಳ  ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.

ಮುಡಿಪು ಅಕ್ರಮ ಗಣಿಗಾರಿಕಾ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ್ ಭೇಟಿ

Thursday, January 7th, 2021
CC Pateel

ಕೊಣಾಜೆ : ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ. ಪಾಟೀಲ್ ರವರು ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಡಿಕಟ್ಟ ಗಣಿಗಾರಿಕೆ ಚಟುವಟಿಕೆ ಪ್ರದೇಶಕ್ಕೆ  ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ಗ್ರಾಮೀಣ ಪ್ರದೇಶವಾಗಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ. ನೆಲಸಮತಟ್ಟು ಮಾಡಲು ಪರವಾನಿಗೆ ಪಡೆದುಕೊಂಡು ಅದಕ್ಕಿಂತ ವಿಸ್ತಾರವಾದ ಜಾಗದಲ್ಲಿ ಸಮತಟ್ಟು ಮಾಡಿ, ಮಣ್ಣು ಸಾಗಾಟ ಮಾಡಿದ ಆರೋಪ‌ ಕೇಳಿ ಬಂದಿದೆ. ಅದಕ್ಕಾಗಿ ಕಾನೂನು ಕ್ರಮ ತೆಗೆದುಕೊಂಡು […]

ಅಕ್ರಮವಾಗಿ 67 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ, ಇಬ್ಬರ ಬಂಧನ

Thursday, January 7th, 2021
Gold

ಮಂಗಳೂರು:  ಅಕ್ರಮವಾಗಿ 67 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ನಡೆಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು (ಡಿಆರ್ಐ) ಪತ್ತೆ ಹಚ್ಚಿದ್ದಾರೆ. ದುಬೈನಿಂದ ಮಂಗಳೂರಿಗೆ ನಿನ್ನೆ ಮಧ್ಯರಾತ್ರಿ 12.30ಕ್ಕೆ ಸ್ಪೈಸ್ ಜೆಟ್ ಎಸ್ಜಿ ‌146 ವಿಮಾನದಲ್ಲಿ ಆಗಮಿಸಿ, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಟ್ಕಳ ಮೂಲದ ವ್ಯಕ್ತಿಯೋರ್ವನನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈತ ಅಂಟುವ ಗುಳಿಗೆಯ ಒಳಗೆ ಚಿನ್ನವನ್ನು ಮರೆಮಾಚಿ ಅದನ್ನು ತನ್ನ ಗುಪ್ತಾಂಗದಲ್ಲಿರಿಸಿ […]

ಮಂಜನಾಡಿ : ಒಂದೇ ಕಡೆ ಹಲವು ಕಾಗೆಗಳ ಸಾವು, ಸ್ಥಳೀಯರಲ್ಲಿ ಆತಂಕ

Wednesday, January 6th, 2021
crow death

ಮಂಗಳೂರು: ಮಂಜನಾಡಿ ಗ್ರಾಮದ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಕಾಗೆಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ. ಹಕ್ಕಿಜ್ವರದ ಎಚ್ಚರಿಕೆ ಹಿನ್ನೆಲೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪಶು ರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ತಿಳಿಸಿದ್ದಾರೆ. ಮಂಜನಾಡಿಯ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಒಂದೇ ಕಡೆ ಆರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದು ಮಂಗಳವಾರ ಪತ್ತೆಯಾಗಿತ್ತು. ಇದು  ವಿಷಾಹಾರದಿಂದ ಸತ್ತಿದೆಯೇ ಅಥವಾ ವಿದ್ಯುತ್ ಆಘಾತಕ್ಕೊಳಗಾಗಿ ಸತ್ತಿದೆಯೇ ಎಂದು ಸ್ಥಳೀಯರು ಸಂಶಯ […]

ಪೈಪ್ ಲೈನ್ ನಲ್ಲಿ ಯಾವುದೇ ತುರ್ತು – ಜಂಟಿ ಆಫ್ ಸೈಟ್ – ಅಣುಕು ಪ್ರದರ್ಶನ  

Wednesday, January 6th, 2021
mockdril

ಮಂಗಳೂರು : ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನ ಎಲ್.ಪಿ.ಜಿ. ಪೈಪ್ ಲೈನ್ ಮತ್ತು ಪೆಟ್ರೋನೆಟ್ ಎಂ.ಹೆಚ್.ಬಿ. ಪೈಪ್ ಲೈನ್ ಸಂಯುಕ್ತಾಶ್ರಯದಲ್ಲಿ ಜಂಟಿ ಆಫ್ ಸೈಟ್ ಎಂಬ ಅಣುಕು ಪ್ರದರ್ಶನವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನ ಡೆಪ್ಯೂಟಿ ಜೆನರಲ್ ಮ್ಯಾನೇಜರ್ ಜಿ. ವಿನೋದ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಎಲ್.ಪಿ.ಜಿ. ಸೋರಿಕೆ ಸಂಬಂಧಿತ ತುರ್ತು ಸ್ಥಿತಿಗಳನ್ನು ನಿಭಾಯಿಸಲು ಹೆಚ್.ಪಿ.ಸಿ.ಎಲ್. ನೊಂದಿಗೆ ಎಲ್.ಪಿ.ಜಿ. ಪೈಪ್ […]

ಚಲನಚಿತ್ರ ನಟಿ ತಾರಾ ಕುಟುಂಬ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ

Tuesday, January 5th, 2021
Tara

ಬಂಟ್ವಾಳ  : ಚಲನಚಿತ್ರ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಕುಟುಂಬ ಸೋಮವಾರ  ಪ್ರಸಿದ್ಧ ಕಾರಣಿಕದ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರದ ಕಾರಣಿಕ ಶಕ್ತಿಯನ್ನು ನಂಬಿ ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ತಾಯಿ ದರ್ಶನ ಪಡೆಯುವುದಕ್ಕೆ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ. ತಾರ ಅವರ ತಾಯಿ ಪುಷ್ಪಮ್ಮ, ಉದ್ಯಮಿ ವೆಂಕಟೇಶ್, ಶ್ರೀ ಆದಿಮಾಯೆ ಮಹಾಲಕ್ಮೀ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, […]

ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಕ್ಲಾರ್ಕ್ ಎಸಿಬಿ ಬಲೆಗೆ

Tuesday, January 5th, 2021
Mohammed-Rafeeq

ಮಂಗಳೂರು: ನಗರದ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಸ್‌ಡಿಎ ಕ್ಲಾರ್ಕ್ ಒಬ್ಬರನ್ನು  ರೆಡ್ ‌ಹ್ಯಾಂಡ್‌ ಆಗಿ ಮಂಗಳವಾರ  ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್  (42) ಬಂಧಿತ ಆರೋಪಿಯಾಗಿದ್ದು, ಕಚೇರಿಯ ಕೆಲಸ‌‌ವೊಂದನ್ನು ಮಾಡಿಕೊಡಲು ಹಿರಿಯ ನಾಗರೀಕರೊಬ್ಬರಿಂದ 40 ಸಾವಿರ ರೂ. ಲಂಚದ‌ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಸಂತ್ರಸ್ತರು ದೂರು ದಾಖಲಿಸಿರುವ ಹಿನ್ನೆಲೆ ಆರೋಪಿಗೆ ನಗದು ನೀಡುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಿ, ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು […]