15 ಅಡಿ ಆಳದಲ್ಲಿರುವ ಮನೆ ಮೇಲೆ ಬಿದ್ದ ಪಿಕ್ ಅಪ್ ವಾಹನ, ಆರು ಮಂದಿಗೆ ಗಾಯ

Monday, December 28th, 2020
pickup

ಮಂಗಳೂರು :  ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದಲ್ಲಿರುವ ಮನೆ ಮೇಲೆ ಬಿದ್ದು ಮನೆಯಲ್ಲಿದ್ದ ಮೂವರು ಗಾಯಗೊಂಡಿರುವ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ. ವಾಹನದಲ್ಲಿದ್ದ ಮೂವರು ಕಾರ್ಮಿಕರಿಗೂ ಗಾಯಗಳಾಗಿವೆ. ಚಂದ್ರಯ್ಯ ಆಚಾರ್ಯ ಎಂಬುವರ ಮನೆಯ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಪಿಕ್ ಅಪ್ ವಾಹನ ಹಾಗೂ ಮನೆಗೆ ಹಾನಿಯಾಗಿದೆ. ಮರೋಳಿಯಲ್ಲಿರುವ ಭಾರತ್ ಪ್ರಿಂಟರ್ ಬಳಿಯ ಚಂದ್ರಯ್ಯ ಆಚಾರ್ಯರ ಮನೆ […]

ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

Sunday, December 27th, 2020
Jagadeesha

ಉಡುಪಿ : ಸಾರ್ವಜನಿಕವಾಗಿ  ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದಂದು ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು […]

ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

Sunday, December 27th, 2020
Dharmapala

ಉಡುಪಿ : ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ, ಉದ್ಯಮಿ  ಧರ್ಮಪಾಲ್ ಪಿ (74) ಇವರು ಡಿ. 27 ರಂದು ಮುಂಜಾನೆ ಹೃದಯಘಾತದಿಂದಾಗಿ ಪಡುಬಿದ್ರೆಯ ಕಡಿಪಟ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲ್ಲಿದ್ದಾರೆ. ಮೂಲತಃ ಪಡುಬಿದ್ರೆ ಕಾಡಿಪಟ್ನದವರಾದ ಇವರು ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರ , ಮೊಗವೀರ ಯುವಕ ಸಂಘ ಮುಂಬಯಿ ಇದರ  ಉಪಾಧ್ಯಕ್ಷರಾಗಿದ್ದರು. ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ಇವರ ನಿಕಟವರ್ತಿಯಾಗಿದ್ದ ಧರ್ಮಪಾಲ್ ಪಿ  […]

ವಿದ್ಯುತ್ ಕಂಬದಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ, ಸಾವು

Sunday, December 27th, 2020
Padmanabha

ಮಂಗಳೂರು: ಖಾಸಗಿ ಸಂಸ್ಥೆಯೊಂದರ  ಉದ್ಯೋಗಿ  ವಿದ್ಯುತ್ ಕಂಬದಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ  ಓರ್ವ ವ್ಯಕ್ತಿ  ಮೃತಪಟ್ಟಿರುವ ದುರ್ಘಟನೆ ಪುತ್ತೂರು ಕೋರ್ಟ್ ರೋಡಿನ ಮಾರ್ಕೆಟ್ ಬಳಿ ನಡೆದಿದೆ. ಅರ್ಲಪದವಿನ ಬೆಟ್ಟಂಪಾಡಿ ನಿವಾಸಿ ಪದ್ಮನಾಭ ಮೃತಪಟ್ಟ ದುರ್ದೈವಿ. ಪುತ್ತೂರು ಮೀನು‌ ಮಾರುಕಟ್ಟೆಯ ಬಳಿ ಇಂಟರ್ನೆಟ್ ಕೇಬಲ್ ಅಳವಡಿಸುವ ಕಾರ್ಯ‌ ನಡೆಸಲಾಗುತ್ತಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಬೆಟ್ಟಂಪಾಡಿ ನಿವಾಸಿ  ಪದ್ಮನಾಭ ಮೃತಪಟ್ಟಿದ್ದಾರೆ. ಅವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ […]

ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ 52.64 ಮತದಾನ

Sunday, December 27th, 2020
vote

ಮಂಗಳೂರು : ದ.ಕ. ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬೆಳ್ತಂಗಡಿ.  53.35 , ಪುತ್ತೂರು. 52.85, ಸುಳ್ಯ.51.37 ,ಕಡಬ  52.07  ಮತದಾನವಾಗಿದ್ದು  ಜಿಲ್ಲೆಯಲ್ಲಿ  ಒಟ್ಟು.52.64 ಮತದಾನವಾಗಿದೆ. ಬೆಳಗ್ಗೆ 9 ಗಂಟೆಯ ಬಳಿಕ ಮತಗಟ್ಟೆಗಳಿಗೆ ಮತದಾರರು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು ಮತದಾನ ಬಿರುಸಿನಿಂದ ಸಾಗಿದೆ. ಎರಡನೇ ಹಂತದಲ್ಲಿ ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 11,541 ಸ್ಥಾನಗಳಿಗೆ ಚುನಾವಣೆ […]

‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹ

Saturday, December 26th, 2020
HJJ

ಮಂಗಳೂರು  : ಪ್ರೇಮದ ಹೆಸರಿನಲ್ಲಿ ಮುಸ್ಲಿಂಮೇತರ ಮಹಿಳೆಯರನ್ನು ಮತಾಂತರಿಸಿ ಚಿತ್ರಹಿಂಸೆ ನೀಡುವ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸ ಬೇಕೆಂದು ಬಂಟ್ವಾಳ ತಾಲೂಕಿನ ತಹಶೀಲ್ದಾರರಾದ ಕು.ಅನಿತಾ ಲಕ್ಷ್ಮೀ ಇವರಿಗೆ ಮನವಿಯನ್ನು ನೀಡಲಾಯಿತು. ಇತ್ತಿಚಿಗೆ ಮುಸ್ಲಿಂಮೇತರ ಮಹಿಳೆಯರೊಂದಿಗೆ ಪ್ರೀತಿಯ ನಾಟಕವಾಡಿ, ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ, ಮೋಸದಿಂದ ಮದುವೆ ಮಾಡಿ, ತದನಂತರ ಅವರನ್ನು ಬೀದಿ ಪಾಲು ಮಾಡುವ ಅನೇಕ ಘಟನೆಗಳು ಅನೇಕ ರಾಜ್ಯಗಳು ಸೇರಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಇಂತಹ ಲವ್ […]

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕು ಗಳಲ್ಲಿ ರವಿವಾರ ಎರಡನೇ ಹಂತದ ಚುನಾವಣೆ

Saturday, December 26th, 2020
vote

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ರವಿವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮತದಾನ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಹೇರಲಾಗಿದೆ. ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 1541 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ ರವಿವಾರ 1,500 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂತಿಮವಾಗಿ ಕಣದಲ್ಲಿರುವ […]

ಡಿವೈಎಫ್ಐ ಕಾರ್ಯಕರ್ತನ ಕೊಲೆ ಕ್ರತ್ಯ ಖಂಡಿಸಿ ಪ್ರತಿಭಟನೆ

Saturday, December 26th, 2020
dyfi

ಮಂಜೇಶ್ವರ : ಕಾಞಂಗಾಡ್ ನ ಡಿವೈಎಫ್ಐ  ಕಾರ್ಯಕರ್ತ ಕಾಂ. ಅಬ್ದುಲ್ ರೆಹಮಾನ್ ರವರನ್ನು ಕೊಲೆ ಮಾಡಿದ ಮುಸ್ಲಿಂ ಲೀಗ್ ಗೂಂಡಾಗಳ ದುಷ್ಕ್ರತ್ಯವನ್ನು ಖಂಡಿಸಿ ಡಿವೈಎಫ್ಐ  ಕೊಡ್ಲಮೊಗರು ವಿಲ್ಲೇಜ್ ಸಮಿತಿಯ ನೇತ್ರತ್ವದಲ್ಲಿ ಬಾಕ್ರಬೈಲ್ ಜಂಕ್ಷನ್ ನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಮುಸ್ಲಿಂ ಲೀಗ್ ನ ಕೊಲೆ ರಾಜಕೀಯದ ವಿರುದ್ದ ಆವೇಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೇರಳದ ಜನತೆ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರೂ,CPIM ನಾಯಕರಾದ ಮೊಯಿದಿನ್ ಕುಂಞ […]

ದ.ಕ.ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ‌ ಮುತ್ತಿಗೆ ಯತ್ನ, ಹಲವರ ಬಂಧನ

Saturday, December 26th, 2020
pfi

ಮಂಗಳೂರು : ಸಿಎಫ್ಐ ಕಾರ್ಯಕರ್ತರು‌ ದ.ಕ.ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ‌ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ. ಡಿಸಿ‌ ಕಚೇರಿಯ ‌ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ‌ಘೋಷಣೆ‌ ಕೂಗಿದರು.‌ ಅಲ್ಲದೆ ಡಿಸಿ ಕಚೇರಿ ದಾಟಿ ಸಂಸದರ ಕಚೇರಿಗೆ ಮುತ್ತಿಗೆ‌ ಹಾಕಲು ಯತ್ನಿಸಿದರು. ಈ ವೇಳೆ‌ ಪೊಲೀಸರು ಪ್ರತಿಭಟನಾಕಾರರ ಪೈಕಿ‌ ನಾಯಕರು‌ ಹಾಗೂ ಹಲವು ಕಾರ್ಯಕರ್ತರನ್ನು‌ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ […]

ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ಅಗತ್ಯವಿದೆ: ಡಾ.ಜೋಷಿ

Friday, December 25th, 2020
Nirpaje Bhim Bhat

ಬಂಟ್ವಾಳ:  ಕಾರ್ಪೊರೆಟ್ ಮತ್ತು ಎಲೆಕ್ಟ್ರಾನಿಕ್ ಯುಗದಲ್ಲಿ ಯಕ್ಷಗಾನ ಕಲೆಗೆ ಹಿರಿಯ ಕವಿ ಡಾ.ಶಿವರಾಮ ಕಾರಂತರ ಕನಸಿನಂತೆ ‘ಜಾಗತಿಕ ಮನ್ನಣೆ’ ಸಿಗಲು ಪ್ರಯತ್ನ ಮುಂದುವರಿಬೇಕು ಎಂದು ಹಿರಿಯ ವಿದ್ವಾಂಸ, ಅರ್ಥಧಾರಿ, ಸಂಶೋಧಕ ಡಾ. ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಶುಕ್ರವಾರ ಸಂಜೆ ‘ಕನ್ನಡ ಕಲ್ಲಣ ನೀರ್ಪಾಜೆ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಶಾಲೆ ಉಳಿಯದೆ ಯಕ್ಷಗಾನಕ್ಕೆ […]