ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಕ್ರಿಸ್ಮಸ್ ಸಂದೇಶ

Wednesday, December 23rd, 2020
Bhisop

ಮಂಗಳೂರು   : ಕ್ರಿಸ್ಮಸ್ ಒಂದು ಮಹತ್ತರ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ. ದೇವರು ಮಾನವ ಮಗುವಾಗಲು ಇಚ್ಛಿಸಿದ್ದಾರೆ. ಇದು ಬೈಬಲ್‌ನಲ್ಲಿ ಯೆಶಾಯಾ ಪ್ರವಾದಿ ಮುಂದಾಗಿ ತಿಳಿಸಿದಂತೆ ನೆರವೇರಿದೆ: “ಇಗೊ ಒಂದು ಮಗುವು ನಮಗೆ ಜನಿಸಿದೆ, ಒಬ್ಬ ವರಪುತ್ರನನ್ನು ನಮಗೆ ಕೊಡಲಾಗಿದೆ (ಯೆಶಾಚಿಯಾ  ೯:೬). ಮಗುವಿನ ಇರುವಿಕೆ ನಮ್ಮನ್ನು ತನ್ನತ್ತ ಸೆಳೆಯುತ್ತದೆ. ಮಗು ನಮ್ಮತ್ತ ಬರಲಿಚ್ಚಿಸುವಾಗ, ನಮ್ಮೊಡನೆ ಆಟವಾಡುವಾಗ ನಾವು ಹರ್ಷಭರಿತರಾಗುತ್ತೇವೆ. ದೇವರೆಂದರೆ ಒಂದು ವಿಚಿತ್ರ ವಿಸ್ಮಯ, ಭಯಂಕರ ವಾಸ್ತವ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಈಗ ಯೇಸುವು ದೇವರು […]

ಕ್ರಿಸ್ಮಸ್ ಹಾಗೂ ಹೊಸ ವರ್ಷ ಸರಳ ಸಂಭ್ರಮಾಚರಣೆ – ಜಿಲ್ಲಾಧಿಕಾರಿ ಆದೇಶ

Tuesday, December 22nd, 2020
chritsmas

ಮಂಗಳೂರು : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ಸರಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೋವಿಡ್-19 ಸೋಂಕಿನ ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸಲು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುವ ಹಿನ್ನೆಲೆ ಕ್ರಿಸ್ಮಸ್ ಹಾಗೂ 2021ರ ಹೊಸ ವರ್ಷ ಸಂಭ್ರಮಾಚರಣೆಯನ್ನು ಸರಳವಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಆಚರಿಸಬೇಕು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 26(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ […]

ಮೆಸ್ಕಾಂ ಉದ್ಯೋಗಿಯಿಂದ ಪಿಯುಸಿ ಬಾಲಕಿಗೆ ಲವ್‌ಜೆಹಾದ್ ಯತ್ನ, ಆರೋಪಿಯ ಬಂಧನ

Tuesday, December 22nd, 2020
soyab

ಸವಣೂರು : ಸವಣೂರಿನ ಪೆರಿಯಡ್ಕ ಸಮೀಪದ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಆರೋಪದ ಮೇರೆಗೆ ಸವಣೂರಿನ‌ ಮೆಸ್ಕಾಂ ಸಿಬ್ಬಂದಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ. ಈ ವಿಚಾರ ಸವಣೂರಿನ ಹಿಂದೂ […]

ಕರ್ನಾಟಕ ಯಕ್ಷಗಾನ ಅಕಾಡಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ

Tuesday, December 22nd, 2020
timmappa Gujaran

ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡಮಿಯ 2020ನೆ ಸಾಲಿನ ಗೌರವ ಪ್ರಶಸ್ತಿ  ಪ್ರಶಸ್ತಿ ಘೋಷಣೆಯಾಗಿದ್ದು, ಪ್ರದಾನ ಕಾರ್ಯಕ್ರಮವು 2021ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಅಕಾಡಮಿಯ ಅಧ್ಯಕ್ಷ ಎಂ.ಎ.ಹೆಗಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಗೌರವ ಪ್ರಶಸ್ತಿಗೆ ಕೆ.ತಿಮ್ಮಪ್ಪಗುಜರನ್, ಬಿ.ಸಂಜೀವ ಸುವರ್ಣ,  ಡಾ. ವಿಜಯ ನಳಿನಿ ರಮೇಶ್, ಡಾ. ಚಕ್ಕೆರೆ ಶಿವಶಂಕರ್, ಬಿ.ಪರಶುರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 50,000 ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರವನ್ನು ಒಳಗೊಂಡಿದೆ. ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ […]

ಗ್ರಾಮ ಪಂಚಾಯತ್ ಗಳಿಗೆ ಮೊದಲ ಹಂತದ ಮತದಾನ ಬಿರುಸಿನಿಂದ ಆರಂಭ

Tuesday, December 22nd, 2020
GP vote

ಮಂಗಳೂರು :  ಗ್ರಾಮ ಪಂಚಾಯತ್ ಗಳಿಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 10 ಗಂಟೆ ವೇಳೆಗೆ ಮಂಗಳೂರು ತಾಲೂಕಿನಲ್ಲಿ 14.6 ಶೆ., ಮೂಡುಬಿದರೆ15.64 ಶೇ. ಹಾಗೂ ಬಂಟ್ಟಾಳ ತಾಲೂಕಿನಲ್ಲಿ 13.75 ಶೇ. ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 14.48 ಶೇ. ಮತದಾನವಾಗಿರುವುದು ವರದಿಯಾಗಿದೆ. ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ಥರ್ಮಾಮೀಟರ್ ನಲ್ಲಿ ದೇಹದ […]

ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಕರ್ನಾಟಕ ಮೀನುಗಾರರ ಬೋಟ್

Tuesday, December 22nd, 2020
Karnataka Boat

ಕಾಸರಗೋಡು :  ಕರ್ನಾಟಕ ನೋಂದಣಿಯ ಬೋಟ್ ಕೇರಳ ಸರಹದ್ದಿನ ಮಂಜೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಕ್ಕೆ ಕೇರಳ ಪೊಲೀಸರು ಬೋಟನ್ನು ವಶಪಡಿಸಿದ್ದರು ಆದರೆ  ಮೀನುಗಾರರ ತಂಡ ಇಬ್ಬರು ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಘಟನೆ ಸೋಮವಾರ ನಡೆದಿದೆ. ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ಕುಂಬಳೆ ಶಿರಿಯದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದೆ. ಈ ವೇಳೆ ಅದರ ದಾಖಲೆ ಗಳನ್ನು ಪರಿಶೀಲಿಸಿದಾಗ ಕೆಲ ಸಂಶಯ ಉಂಟಾದ […]

ಗ್ರಾಮ ಪಂಚಾಯತ್ ಚುನಾವಣೆಗೆ ಸಿಬ್ಬಂದಿಗಳ ಸಿದ್ಧತೆ

Monday, December 21st, 2020
GP vote

ಬಂಟ್ವಾಳ : ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ  ಡಿ.22ರಂದು ನಡೆಯಲಿದ್ದು, ಚುನಾವಣಾ ಸಾಮಗ್ರಿಗಳನ್ನುಆಯಾಯ ಮತಗಟ್ಟೆಗಳಿಗೆ  ಇಂದು ಕೊಂಡೊಯ್ಯಲಾಗಿದೆ. ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ 57 ಗ್ರಾಮ ಪಂಚಾಯತ್ಗಳ 822 ಸ್ಥಾನಗಳಿಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಟ್ಟು 2,75,097 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡ್ ನ ಮೊಡಂಕಾಪುವಿನಿಂದ 155 ವಾಹನಗಳಲ್ಲಿ ಪ್ರತಿಯೊಂದು ಬೂತ್ ಗೆ ತಲಾ 6ರಂತೆ ಒಟ್ಟು 2,376 ಮಂದಿ ನಿಗದಿಪಡಿಸಲಾಗಿರುವ ಬೂತ್ ಗಳಿಗೆ ಇಂದು ತೆರಳಿದ್ದಾರೆ. ಮಂಗಳೂರು ತಾಲೂಕಿನ 57 ಗ್ರಾಪಂಗಳ 837 […]

ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವನ ಸಂಬಂಧಿಕನ ಪ್ರತಿಕಾರ, ಪೋಲೀಸರ ಮೇಲೆ ತಲವಾರಿನಿಂದ ಹಲ್ಲೆ

Monday, December 21st, 2020
Noushin

ಮಂಗಳೂರು : ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಂಬಂಧಿಕನೊಬ್ಬ ಅದಕ್ಕೆ  ಪ್ರತಿಕಾರವಾಗಿ ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರ ಫರ್ನಿಚರ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್‌‌ ನವಾಝ್‌ (30) ಹಾಗೂ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ. ನವಾಝ್‌ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. 2019ರ ಡಿ.19ರಂದು […]

ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

Monday, December 21st, 2020
Rasia

ಬ್ರಹ್ಮಾವರ :  ತನ್ನ ಮೂರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಹಾರಾಡಿ ಗ್ರಾಮದ ಹೊನ್ನಾಳ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಹೊನ್ನಾಳ ಬಕ್ಕಪಟ್ಟಣ ನಿವಾಸಿ ಮುಹಮ್ಮದ್ ಖಲೀಲ್ ಎಂಬವರ ಪತ್ನಿ ರಾಸಿಯಾ (32), ಮಕ್ಕಳಾದ ಪಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7), ಆಯಿಷಾ ಝಿಫ್ರಾ (3) ಎಂದು ಗುರುತಿಸಲಾಗಿದೆ. ರಾಸಿಯಾ ಡಿ.18ರಂದು ಬೆಳಗ್ಗೆ ತನ್ನ ಮೂರು ಮಕ್ಕಳೊಂದಿಗೆ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾ.ಪಂ. ಚುನಾವಣೆಯ ಪಕ್ಷೇತರ ಅಭ್ಯರ್ಥಿ, ಆರ್‌ಟಿಐ ಕಾರ್ಯಕರ್ತ ನಾಪತ್ತೆ

Sunday, December 20th, 2020
missing

ಕುಂದಾಪುರ : ಆರ್‌ಟಿಐ ಕಾರ್ಯಕರ್ತ ತನ್ನ ಕುಟುಂಬದ ಸದಸ್ಯರಾದ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಅವರು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆಯಿಂದ  ಡಿ. 15ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್‌ ಶೆಟ್ಟಿಗಾರ್‌ ಅವರು ಗ್ರಾ.ಪಂ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯ ಒತ್ತಡದಿಂದ ಚುನಾವಣೆ ಮುಗಿಯುವವರೆಗೆ ಬೇರೆಡೆ ಇರೋಣವೆಂದು […]