ಬಜ್ಪೆ ವಿಮಾನ ನಿಲ್ದಾಣದಲ್ಲಿ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

Thursday, December 17th, 2020
Tajudin

ಮಂಗಳೂರು :  ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ. ಕೇರಳದ ಚಿತ್ತಾರಿ ಬಾರಿಕ್ಕಾಡ್ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿ. ಈತ ಗುರುವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಸಂಜೆ 4:30ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದು, ತಪಾಸಣೆ ವೇಳೆ ಯೂರೊ ಹಾಗು ಯುಎಇ ದಿರ್ಹಾಮ್ ಪತ್ತೆಯಾಗಿದೆ. ಧರಿಸಿದ್ದ ಒಳ ಬಟ್ಟೆಯ ಒಳಗಡೆ ಇಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. […]

ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಂಡ ಶಾಲಾ ಕಟ್ಟಡ ಉದ್ಘಾಟನೆ

Thursday, December 17th, 2020
school

  ಕಾವೂರು : ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಾವು ಶ್ರಮ ವಹಿಸುತ್ತೇವೆ.ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗೀ ಶಾಲೆ ಗಳಿಗಿಂತ ಸರಕಾರಿ ಶಾಲೆ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ. ಮರಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ಕಟ್ಟಡವನ್ನು ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಳಿಸಿದ್ದು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯಲ್ಲಿ ಇಂದು 260 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ನಗರ ಪ್ರದೇಶದಲ್ಲಿ ಇದು […]

ಛಾಯಾಗ್ರಾಹಕ ಧರಣೇಶ್ ಕೊಣಾಜೆ ನಿಧನ

Thursday, December 17th, 2020
dharanesh konaje

ಕೊಣಾಜೆ : ಕೊಣಾಜೆ ನಿವಾಸಿ ಛಾಯಾಗ್ರಾಹಕ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಧರಣೇಶ್ ಅವರು ದೇರಳಕಟ್ಟೆಯಲ್ಲಿ ಫೋಟೋಸ್ಪಾಟ್ ಎಂಬ  ಸ್ಟುಡಿಯೋ ಹೊಂದಿದ್ದರು. ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್‌ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಗಂಜಿಮಠದಲ್ಲಿನ ಎಸ್‌ಟಿಡಿ ಬೂತ್‌‌ವೊಂದರಲ್ಲಿ ಕೆಲಸ ಮಾಡುತ್ತಿದ್ದ  ಧರಣೇಶ್ ಪಕ್ಕದಲ್ಲಿ ಸ್ಟುಡಿಯೋ ದಲ್ಲಿ ಛಾಯಾಗ್ರಹಣ ಕಲಿತರು. ಸಂಬಂಧಿಯೋರ್ವರು ಸಹಕಾರದಿಂದ   ದೇರಳಕಟ್ಟೆಯಲ್ಲಿ ಸ್ಟುಡಿಯೋವನ್ನು ತೆರೆದಿದ್ದರು.  ಧರಣೇಶ್‌  ಉತ್ತಮ  ಛಾಯಾಗ್ರಹಣ […]

ಕಾಸರಗೋಡು ನಗರಸಭೆ : ಎಲ್‌ಡಿಎಫ್ 21, ಬಿಜೆಪಿ 14 ಸ್ಥಾನಗಳಲ್ಲಿ ಜಯ

Thursday, December 17th, 2020
Kasaragod Election

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಸರಗೋಡು, ಕಾಂಞಂ ಗಾಡ್‌, ನೀಲೇಶ್ವರ ನಗರಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದಿದೆ. ಕಾಸರಗೋಡು ನಗರಸಭೆಯು ಐಕ್ಯರಂಗದ ಪಾಲಾದರೆ, ಕಾಂಞಂಗಾಡ್‌, ನೀಲೇಶ್ವರ ನಗರ ಸಭೆಯಲ್ಲಿ ಮತ್ತೆ ಎಲ್‌ಡಿಎಫ್‌ ಅಧಿಕಾರಕ್ಕೇರಿದೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ನ 15 ಸ್ಥಾನಗಳ ಪೈಕಿ  ಬಿಜೆಪಿ 6, ಯುಡಿಫ್ 6, ಎಲ್ ಡಿ ಎಫ್ 2 ಮತ್ತು ಎಲ್ ಡಿ ಎಫ್ ಬೆಂಬಲಿತ 1 ಅಭ್ಯರ್ಥಿ ಜಯಗಳಿಸಿದ್ದಾರೆ. ಮಂಜೇಶ್ವರ ಬ್ಲಾಕ್  ಸಂಭಂದಿಸಿದಂತೆ  ಜಿಲ್ಲಾ ಪಂಚಾಯತ್ ನ  4 ಸ್ಥಾನಗಳ ಪೈಕಿ, ಬಿಜೆಪಿ 1, ಯುಡಿಎಫ್ 3 ಅಭ್ಯರ್ಥಿಗಳು […]

ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆಗೆ ಶರಣು

Wednesday, December 16th, 2020
gretta

ಮಂಗಳೂರು : ಖಾಸಗಿ ಶಾಲೆಯೊಂದರ ಶಿಕ್ಷಕಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಡಿ.16ರ ಬುಧವಾರದಂದು ನಡೆದಿದೆ. ಮೃತರನ್ನು ಗ್ರೆಟಾ ಡಿಸೋಜಾ(40) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಗ್ರೆಟಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ನಿದ್ರೆಯ ಸಮಸ್ಯೆಯ ಬಗ್ಗೆ ಅವರು ತಮ್ಮ ಕೆಲ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಂಟ್ವಾಳ : ಕೈರಂಗಳದ ನಾಟಿ ವೈದ್ಯ ಎಸ್. ಎಸ್ ರಾಮ್ ಇನ್ನಿಲ್ಲ

Wednesday, December 16th, 2020
ss Ram

ಬಂಟ್ವಾಳ : ಪ್ರಸಿದ್ಧ ನಾಟಿ ವೈದ್ಯ ಡಾ. ಸೀತಾರಾಮ್ ಸುಟ್ಟ, (ಎಸ್. ಎಸ್ ರಾಮ್) ಕೈರಂಗಳ 64.  ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾದರು. ಕಳೆದ ಒಂದೂವರೆ ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ತಕ್ಕ ಮಟ್ಟಿಗೆ ಗುಣಮುಖರಾಗಿದ್ದ ಅವರನ್ನು ಕೊನೆಗೆ ನಿಮೋನಿಯ ತೀವ್ರವಾಗಿ ಕಾಡಿತ್ತು. ಬುಧವಾರ ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ತಂದೆ ರಾಮ ಪಂಡಿತರಿಂದ ನಾಟಿ ವೈದ್ಯಕೀಯ ಮತ್ತು ಆಯುರ್ವೇದ ಕಲಿತ ಡಾ. ಸೀತಾರಾಮ್ 1974ರಲ್ಲಿ ಬೆಂಗಳೂರಿನಲ್ಲಿ ಹೋಮಿಯೋಪತಿಕ್ ಮತ್ತು ಆಯುರ್ವೇದ, 1976ರಲ್ಲಿ ಚೆನ್ನೈನಲ್ಲಿ ಡಿಎಂಪಿ (ಎ) […]

ರಾಯಿ ಶ್ರೀ ಕ್ಷೇತ್ರ ಬದನಡಿ: 20ರಂದು ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ

Wednesday, December 16th, 2020
badinade

ಬಂಟ್ವಾಳ:  ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಇದೇ ೨೦ರಂದು ಸಂಭ್ರಮ ಸಡಗರದಿಂದ ನಡೆಯಲಿದೆ. ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ತಂತ್ರಿ ಮಾರ್ಗದರ್ಶನದಲ್ಲಿ ಇದೇ 18ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಆರಂಭಗೊಳ್ಳಲಿದೆ. ಡಿ. 19ರಂದು ಳಿಗ್ಗೆ 9ಗಂಟೆಗೆ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 7ರಿಂದ ರಂಗಪೂಜೆ ಮತ್ತು ಪಂಚಮಿ ಉತ್ಸವ ನಡೆಯಲಿದೆ. ಡಿ.20ರಂದು ಬೆಳಿಗ್ಗೆ 7ಗಂಟೆಗೆ […]

ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಲವಾರು ದಾಳಿ

Wednesday, December 16th, 2020
Tajuddin

ಮಂಗಳೂರು: ಮೂವರು ದುಷ್ಕರ್ಮಿಗಳ ತಂಡ ಯುವಕನೋರ್ವನ‌ ಮೇಲೆ ಅಡ್ಡೂರಿನಲ್ಲಿ ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (30) ತಲವಾರು ದಾಳಿಯಿಂದ‌ ಗಾಯಗೊಂಡವರು ಎಂದು ತಿಳಿದುಬಂದಿದೆ. ತಾಜುದ್ದೀನ್ ಮಂಗಳವಾರ ತಡರಾತ್ರಿ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದು, ಈ ವೇಳೆ‌ ಮೂವರಿದ್ದ ದುಷ್ಕರ್ಮಿಗಳ ತಂಡ ಯುವಕನ‌ ಮೇಲೆ ತಲವಾರು ಬೀಸಿದ್ದಾರೆ. ಪರಿಣಾಮ ಯುವಕನ ತೊಡೆ ಭಾಗ, ಕೈ ಸಹಿತ ವಿವಿಧೆಡೆ ಗಾಯಗಳಾಗಿವೆ. ಹಳೆ‌ ವೈಷಮ್ಯದಿಂದಲೇ ದಾಳಿ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಗಾಯಾಳುವನ್ನು […]

ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸುಹೈಬ್ ಅಲಿ

Wednesday, December 16th, 2020
SUHAIB-ALI

ವಿಟ್ಲ : ದುಬೈನಲ್ಲಿ ನಡೆದ 24ಗಂಟೆಗಳ ಕಾಂಟ್ರೋಮೆಂಟ್ 2020,ಕಾರ್ ರೇಸಲ್ಲಿ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಮತ್ತೆ ಪ್ರಶಸ್ತಿಗಳನ್ನು ಪಡೆದು ಭಾರತದ ಗೌರವ ಹೆಚ್ಚಿಸಿದೆ. ದುಬೈನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್೨೦೨೦ ಕಾರ್ ರೇಸಿಗೆ ಆಯ್ಕೆಯಾಗಿದ್ದ ೭೨ದೇಶಗಳ ಪೈಕಿ ೪೨ದೇಶಗಳು ಭಾಗವಹಿಸಿವೆ. ೪೨ತಂಡವನ್ನೂ ಹಿಂದಿಕ್ಕಿದ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಎರಡು ಪ್ರಶಸ್ತಿಗಳನ್ನು ಪಡೆದು ಮತ್ತೆ ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ನಮ್ಮ ದೇಶದ ಕಂಪನಿಗಳು ಮತ್ತು ದಾನಿಗಳು ನಮಗೆ ಇನ್ನಷ್ಟು […]

ರಾಯಿ: ಶ್ರೀ ಕೊರಗಜ್ಜ ಕ್ಷೇತ್ರ ಚಂಡಿಕಾಯಾಗ ಪೂರ್ಣಾಹುತಿ, ದೇವಿ ಆರಾಧನೆಯಿಂದ ಸಮೃದ್ಧಿ ಸಾಧ್ಯ: ಆನಂದ ಗುರೂಜಿ

Tuesday, December 15th, 2020
kaitrody

ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಝೀ ಕನ್ನಡ ಮಹರ್ಷಿ ವಾಣಿ ಖ್ಯಾತಿಯ ಆನಂದ ಗುರೂಜಿ ಹೇಳಿದ್ದಾರೆ. ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ರ್ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ (ಡಿ.15 ರಂದು) ಮಂಗಳವಾರ ನಡೆದ ಚಂಡಿಕಾಯಾಗಕ್ಕೆ ಪೂರ್ಣಾಹುತಿ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು. ಕೊರಗಜ್ಜ ದೈವ ಭಕ್ತರ ಸಂಕಷ್ಟ ಕಳೆಯಲು ಭಕ್ತಿಗೆ ತ್ವರಿತವಾಗಿ ಒಲಿಯುತ್ತಾನೆ ಎಂದರು. ಕಟೀಲು ಕ್ಷೇತ್ರದ […]