ಪದವಿನಂಗಡಿಯಲ್ಲಿ ಶಿವಾಜಿ ಮೂರ್ತಿ ಸ್ಥಾಪಿಸಲು ಕಟ್ಟಲಾಗಿದ್ದ ಕಟ್ಟೆ ತೆರವುಗೊಳಿಸಿದ ಪೊಲೀಸರು

Monday, December 7th, 2020
Shivaji

ಮಂಗಳೂರು :  ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಹೊರವಲಯದ ಪದವಿನಂಗಡಿ ಬಳಿ ಅಶ್ವತ್ಥಮರದ ಕಟ್ಟೆ ಎದುರುಗಡೆ ಶಿವಾಜಿ ಮೂರ್ತಿ ಇರಿಸಲು ಸಿದ್ಧತೆಗಳನ್ನು ನಡೆಸಿದ್ದರು, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಮೂರ್ತಿ ಸ್ಥಾಪಿಸಲು ಕಟ್ಟಲಾಗಿದ್ದ ಕಟ್ಟೆಯನ್ನು ತೆರವುಗೊಳಿಸಿದ್ದಾರೆ. ಪದವಿನಂಗಡಿ ಅಶ್ವತ್ಥಕಟ್ಟೆಯ ಎದುರಿನ ಜಾಗದಲ್ಲಿ ಶಿವಾಜಿ ಮೂರ್ತಿ ಇರಿಸಲು ಹಿಂಜಾವೇ ಕಾರ್ಯಕರ್ತರು ಶನಿವಾರ ರಾತ್ರಿ ಕಟ್ಟೆಯೊಂದನ್ನು ಕಟ್ಟಿ ಕೆಲಸ ಆರಂಭಿಸಲು ಮುಂದಾದಾಗ ಇನ್ನೊಂದು ಗುಂಪಿನಿಂದ ವಿರೋಧ ವ್ಯಕ್ತವಾಯಿತು. ಈ ವಿಚಾರ ಪೊಲೀಸರಿಗೆ ಗೊತ್ತಾಯಿತು. ರವಿವಾರ ಸ್ಥಳಕ್ಕೆ ಆಗಮಿಸಿದ […]

ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ, ಬಂಟ್ವಾಳದಲ್ಲಿ ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Monday, December 7th, 2020
Bantwala BJP

ಬಂಟ್ವಾಳ  : ಕಾಂಗ್ರೆಸ್ ನಾಯಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಅಸಮಾಧಾನಗೊಂಡು ಪಕ್ಷದ ಕೆಲವು ಕಾರ್ಯಕರ್ತರು  ಬಿಜೆಪಿಗೆ  ಸೇರ್ಪಡೆ ಗೊಂಡಿದ್ದಾರೆ. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಮ್ಮುಖದಲ್ಲಿ ತಾಪಂ ಮಾಜಿ ಸದಸ್ಯ ಹಂಝ ಮಂಚಿ, ಜಗದೀಶ್ ಶೆಟ್ಟಿ ಮವಂತೂರು, ಚಂದ್ರಹಾಸ ಕರ್ಕೆರ ಅರಳ, ಮುಸ್ತಫ ಮೂಲರಪಟ್ಣ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶಕ್ಕಾಗಿ ಕೆಲಸ ಮಾಡುವ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಎಲ್ಲರಿಗೂ ಸ್ವಾಗತ. ಕೇಂದ್ರದಿಂದ ತೊಡಗಿ ಗ್ರಾಮ ಪಂಚಾಯತ್ […]

‘ಬಣ್ಣದ ಕುಷ್ಟ’ ಖ್ಯಾತಿಯ ಕೃಷ್ಣ ಮಂಜಯ್ಯ ಶೆಟ್ಟಿ ಇನ್ನಿಲ್ಲ

Monday, December 7th, 2020
Krishnaiya Manjayya

ಕಾರವಾರ : ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಮಂಜಯ್ಯ ಶೆಟ್ಟಿ(85) ಜಲವಳ್ಳಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹಾರಾಡಿ ರಾಮ ಗಾಣಿಗ ಪ್ರಶಸ್ತಿಗೆ ಪಾತ್ರರಾದ ಇವರು ಸುದೀರ್ಘ ಕಾಲ ಕೆರೆಮನೆ ಸೇರಿದಂತೆ ವಿವಿಧ ಮೇಳಗಳಲ್ಲಿ ಯಶಸ್ವಿಯಾಗಿ ಪಾತ್ರ ನಿರ್ವಹಿಸಿದ್ದರು. ರಾಕ್ಷಸ, ದೈತ್ಯ ಹೀಗೆ ಬಣ್ಣದ ವೇಷಗಳಲ್ಲಿ ವಿಜೃಂಭಿಸುತ್ತಿದ್ದ ಇವರು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ವಿವಿಧ ಮೇಳಗಳಲ್ಲಿ ತಮ್ಮದೆ ಆದ ಛಾಪು ಒತ್ತುವ ಮೂಲಕ ಬಣ್ಣದ ಕುಷ್ಟಎಂದೆ ಜನಜನಿತರಾಗಿದ್ದರು. ಬಣ್ಣದ ವೇಷವಲ್ಲದೆ, ಕಿರಾತ ಮತ್ತಿತರ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. […]

ಆಶ್ಲೇಷ ಪೂಜೆಗಾಗಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಜನಜಂಗುಳಿ

Sunday, December 6th, 2020
Kukke Subrahmanya4

ಸುಬ್ರಹ್ಮಣ್ಯ :  ಆಶ್ಲೇಷ ನಕ್ಷತ್ರ ದಿನವಾದ ರವಿವಾರದಂದು ಆಶ್ಲೇಷ ಪೂಜೆ ನೆರವೇರಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ದೇವಾಲಯದ ಸುತ್ತಮುತ್ತ ಭಾರಿ ಜನಸಂದಣಿ ಕಂಡುಬಂದಿದೆ. ದೇವಾಲಯದ ರಥ ಬೀದಿ, ಹೊರಾಂಗಣದಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದು, ರಶೀದಿಗಾಗಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಈ ನಡುವೆ ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುವ ಕಾರಣ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೇ ಸೇವಾ ಕೌಂಟರ್‌‌‌ ಸಿಬ್ಬಂದಿಗಳ ಜೊತೆ ವಾಗ್ವಾದವಾದ ಘಟನೆಯೂ ನಡೆದಿದೆ. […]

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 75 ಮಂದಿಗೆ ಕೊರೊನಾ ಪಾಸಿಟಿವ್

Sunday, December 6th, 2020
CORONA

ಕಾಸರಗೋಡು : ಜಿಲ್ಲೆಯಲ್ಲಿ ರವಿವಾರ 75 ಮಂದಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ರವಿವಾರ ಕೊರೊನಾ ದೃಢಪಟ್ಟ 75 ಮಂದಿಯ ಪೈಕಿ 72 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ರವಿವಾರ 110 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 1,086 ಮಂದಿ ಗುಣಮುಖರಾಗಿದ್ದಾರೆ.

ಗೆಳೆಯರೊಂದಿಗೆ ಹೋದ ಗ್ರಾಮ ಲೆಕ್ಕಾಧಿಕಾರಿ ನಾಪತ್ತೆ

Sunday, December 6th, 2020
Shekar Jyotiba

ಭಟ್ಕಳ :  ಪತ್ನಿಗೆ ಕರೆ ಮಾಡಿ ಹೊನ್ನಾವರದಲ್ಲಿ ಇದ್ದೇನೆ. ಮನೆಗೆ ಬರುವುದು ರಾತ್ರಿ 9.30 ಆಗಬಹುದು ಎಂದು ಹೇಳಿದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೆಳೆಯರೊಂದಿಗೆ ಹೊನ್ನಾವರಕೆ ಹೋಗಿ ಬರುವುದಾಗಿ ಹೇಳಿ ಕಾಣೆಯಾಗಿರುವ ಗ್ರಾಮ ಲೆಕ್ಕಾಧಿಕಾರಿ ಶೇಖರ ಜ್ಯೋತಿಬಾ ಕಾಲೇಕರ್ ಮನೆಯಿಂದ ಹೋಗಿದ್ದರು ಎಂದು ತಿಳಿದುಬಂದಿದೆ. ಕಳೆದ ಇರಡು ವರ್ಷದಿಂದ ಬೈಲೂರು ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಲೇಕರ್. ಕಿಡ್ನಿ ಸಮಸ್ಯೆ ಇರುವುರಿಂದ ಕಳೆದ 2 ವರ್ಷದ ಹಿಂದೆ ಶಿವಮೊಗ್ಗದ […]

ಕಂಟೈನರ್‌ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

Sunday, December 6th, 2020
Manvith

ಮಂಗಳೂರು : ಬೈಕ್ ಸವಾರ ಕಂಟೈನರ್‌ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಗರದ ಪಡೀಲ್‌ನಲ್ಲಿ ನಡೆದಿದೆ. ನೀರುಮಾರ್ಗದ ಮನ್ವಿತ್(22) ಮೃತ ಬೈಕ್‌ ಸವಾರ ಎಂದು ತಿಳಿದುಬಂದಿದೆ. ಕಂಟೈನರ್ ನಂತೂರು ಕಡೆಯಿಂದ ಪಡೀಲ್‌ನತ್ತ ಸಂಚರಿಸುತ್ತಿತ್ತು. ಈ ವೇಳೆ ಎದುರುಗಡೆಯಿಂದ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕಂಟೈನರ್ ಅಡಿಗೆ ಬಿದ್ದಿದೆ ಎನ್ನಲಾಗಿದೆ. ಕಂಟೈನರ್ ಬೈಕ್ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 12 ಗಂಟೆ […]

ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ರೂ.850.27 ಕೋಟಿ ವಹಿವಾಟು ಮಾಡಿ ರೂ.707.16ಲಕ್ಷ ನಿವ್ವಳ ಲಾಭ

Saturday, December 5th, 2020
Raviraja Hegde

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ನಿ, ಕುಲಶೇಖರ, ಮಂಗಳೂರು  ಒಕ್ಕೂಟದ ಸರ್ವ ಸದಸ್ಯರ (ವರ್ಚುವಲ್ ಕಾನ್ಫ್ಪರೆನ್ಸ್) ವಾರ್ಷಿಕ ಸಾಮಾನ್ಯ ಸಭೆ ದಿನಾಂಕ 05-12-20220 ರಂದು ನಡೆಯಿತು . ಒಕ್ಕೂಟದ ಅಧ್ಯಕರಾದ ಶ್ರೀ ರವಿರಾಜ ಹೆಗ್ಡೆಯವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿ ಮಾತಾನಾಡುತ್ತಾ, ವರದಿ ಸಾಲಿನಲ್ಲಿ ಒಕ್ಕೂಟವು ಅಭಿವೃದ್ಧಿ ಪಥದತ್ತ ಸಾಗುವ ಬಗ್ಗೆ ವಿವರಿಸುತ್ತಾ, 2019-20 ನೇ ಸಾಲಿನಲ್ಲಿ ಸರಾಸರಿ 602 ಕೆ.ಜಿ.ಯಂತೆ 726  ಸಂಘಗಳಿಂದ ದಿನಂಪ್ರತಿ 436936 ಕೆ.ಜಿ. ಹಾಲಿನ ಸಂಗ್ರಹಣೆ ಮಾಡಲಾಗಿದೆ. ಒಟ್ಟಾರೆ ಶೇ. 4.25 ರ ಪ್ರಗತಿಯೊಂದಿಗೆ […]

ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು -ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ

Saturday, December 5th, 2020
vikachethanara

ಮಂಗಳೂರು : ಸರ್ಕಾರ ವಿಕಲಚೇತನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದ್ಭಳಕೆಯನ್ನು ಮಾಡಿಕೊಳ್ಳುವುದರೊಂದಿಗೆ ಸ್ವಾವಲಂಭಿಗಳಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿನಗರ ಹಾಗೂ ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯನ್ನು […]

ಉಗ್ರರ ಪರ ಗೋಡೆ ಬರಹ ಬರೆದ ಇಬ್ಬರು ಆರೋಪಿಗಳ ಬಂಧನ

Saturday, December 5th, 2020
vikasa kumar

ಮಂಗಳೂರು: ಬಿಜೈ ಮತ್ತು  ಕೋರ್ಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ  ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಬಂಧಿತ ಆರೋಪಿಗಳು. ಪ್ರಚಾರ ಪಡೆಯುವ ಉದ್ದೇಶದಿಂದ ವಿವಾದಿತ ಪ್ರಚೋದನಕಾರಿ ಗೋಡೆ ಬರಹವನ್ನು ಬರೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ವಶಕ್ಕೆ ನೀಡಲಾಗುತ್ತದೆ. ಆ ಬಳಿಕ […]