ಕನ್ನಡ ಪರ ಸಂಘಟನೆಗಳು ನೀಡಿದ ರಾಜ್ಯವ್ಯಾಪ್ತಿ ಬಂದ್‌‌ ಕರೆಗೆ, ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Saturday, December 5th, 2020
Mangalore

ಮಂಗಳೂರು : ಕನ್ನಡ ಪರ ಸಂಘಟನೆಗಳು ನೀಡಿದ ರಾಜ್ಯವ್ಯಾಪ್ತಿ ಬಂದ್‌‌ ಕರೆಗೆ ಡಿ.5ರ ಶನಿವಾರದಂದು ದ.ಕ ಜಿಲ್ಲೆ ಯಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ಇತ್ತು, ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಬಂದ್‌‌ಗೆ ಕರೆ ನೀಡಿದ್ದವು. ನಗರದಲ್ಲಿ ಮಾತ್ರವಲ್ಲದೇ ಜಿಲ್ಲೆಯಲ್ಲೂ ಕೂಡಾ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ಸೇವೆಗಳು ನಿರಾತಂಕವಾಗಿ ಮುಂದುವರೆದಿದೆ. ಆಟೋ ರಿಕ್ಷಾ, ಕ್ಯಾಬ್‌ಗಳು, ಹೋಟೆಲ್‌ಗಳು ಹಾಗೂ ಇತರ ಅಗತ್ಯ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಎಂದಿನಂತೆ […]

ಕುಂಪಲ ಬೈಪಾಸ್ ಅಫಘಾತ : ಬಾಲಕ ಸಾವು

Saturday, December 5th, 2020
Ayan

ಮಂಗಳೂರು :  ಕುಂಪಲ ಬೈಪಾಸ್‌ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬಾಲಕ ಡಿ.5ರ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತಪಟ್ಟ ಬಾಲಕನನ್ನು ಬಶೀರ್‌‌‌‌‌ ಅಹ್ಮದ್‌ ಹಾಗೂ ರಿಯಾನ್‌ ದಂಪತಿಗಳ ಹಿರಿಯ ಪುತ್ರ ಐಯಾನ್‌ (16) ಎಂದು ಗುರುತಿಸಲಾಗಿದೆ. ಇವರು ಕುಂಪಲ ಬೈಪಾಸ್‌ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಡಿ..4ರ ಶುಕ್ರವಾರದಂದು ಸಂಜೆ ಐಯಾನ್‌‌ ತನ್ನ ಮನೆಯ ಮುಂದಿನ ರಸ್ತೆ ದಾಟುತ್ತಿದ್ದ ಸಂದರ್ಭ ತಲಪಾಡಿಯಿಂದ ಮಂಗಳೂರು ಕಡೆ  ಹೋಗುತ್ತಿದ್ದ ರಿಟ್ಜ್‌‌ ಕಾರು […]

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ರಾಜಕೀಯ ಪ್ರೇರಿತ ಪ್ರೇಮಾನಂದ ಶೆಟ್ಟಿ

Friday, December 4th, 2020
Premananda Shetty

ಮಂಗಳೂರು:  ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವುದನ್ನು ತಡೆಯಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಇದು ರಾಜಕಾರಣ ಪ್ರೇರಿತ ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 2003 ರಲ್ಲಿ ಅಂದಿನ ಮೇಯರ್ ಆಗಿದ್ದ ದಿವಾಕರ್ ಲೇಡಿಹಿಲ್ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಮನಪಾದಲ್ಲಿ ನಿರ್ಣಯ ಮಂಡಿಸಿದ್ದರು. […]

ಸದ್ಯದಲ್ಲೇ ಸೆಟ್ ಏರಲಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಕಥೆಯ ಸಿನಿಮಾ

Friday, December 4th, 2020
Muttappa Rai

ಪುತ್ತೂರು : ಡೆಡ್ಲಿ ಸೋಮ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಆರಂಭಿಸಿದ್ದಾರೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನದ ಕಥೆಗಳನ್ನು ಒಳಗೊಂಡ ಬಯೋ ಪಿಕ್ ‘ಎಂ ಆರ್” ಸಿನಿಮಾ ಸದ್ಯದಲ್ಲೇ ಸೆಟ್ ಏರಲಿದೆ. ಡೆಡ್ಲಿ  ಸಿನಿಮಾ ಚಿತ್ರಿಕರಣ ಆರಂಭಕ್ಕೆ ಪೂರ್ವಭಾವಿಯಾಗಿ ಸಿನಿಮಾದ ಯಶಸ್ಸಿಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಿತ್ರ ನಿರ್ಮಾಣದ ಬಳಿಕ ಶ್ರೀ ದೇವಾಲಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ಸಲ್ಲಿಸುವ ಸಂಕಲ್ಪವನ್ನು ಚಿತ್ರ […]

ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ ನಿಧನ

Friday, December 4th, 2020
Krishnappa mendon

ಮಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ, ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ (88) ಅವರು ಶುಕ್ರವಾರ  ನಿಧನರಾಗಿದ್ದಾರೆ. ಅವರು ತನ್ನ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಂಕನಾಡಿ ವಾರ್ಡಿನ ಪಂಚಾಯತ್ ಸದಸ್ಯರಾಗಿ ಆರಂಭಿಸಿದ್ದರು. 1983 ರಿಂದ ಮಂಗಳೂರು ಮಹಾನಗರಪಾಲಿಕೆ ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ನಾಲ್ಕು ಬಾರಿ ಅವರು ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿಸಲ್ಪಟ್ಟಿದ್ದಾರೆ. 1993 ರಲ್ಲಿ ಅವರು ಮಂಗಳೂರಿನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ, ದ. ಕ. […]

ನಾಲ್ಕನೇ ದಿನವೂ ಪತ್ತೆಯಾಗದ ಓರ್ವ ಮೀನುಗಾರನ ಮೃತದೇಹ

Friday, December 4th, 2020
Boat Tragedy

ಮಂಗಳೂರು: ಪರ್ಸಿನ್ ಬೋಟ್ ದುರಂತದಲ್ಲಿ ಸಾವಿಗೀಡಾದ ಆರು ಜನರ ಪೈಕಿ ಇನ್ನೋರ್ವನ  ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನ ಕೂಡಾ ಹುಡುಕಾಟ ಮುಂದುವರೆದಿದೆ. ಶ್ರೀರಕ್ಷಾ ಎಂಬ ಬೋಟ್ ಮೀನುಗಳನ್ನು ತುಂಬಿಸಿಕೊಂಡು ವಾಪಸ್ ಬರುವ ವೇಳೆ ಇತ್ತೀಚೆಗೆ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ, ಆರು ಮಂದಿ ಮೀನುಗಾರರು ಮೃತಪಟ್ಟಿದ್ದರು. ಈ ಪೈಕಿ ಐವರ ಮೃತದೇಹ ಪತ್ತೆಯಾಗಿತ್ತು. ಅನ್ಸಾರ್ ಮೃತದೇಹ ಸಿಕ್ಕಿತಾದರೂ ಸಮುದ್ರದಾಳದಿಂದ ಮೇಲಕ್ಕೆ ತರುವಾಗ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಇದಾಗಿ ಎರಡು ದಿನವಾದರೂ ಮೃತದೇಹ ಸಿಕ್ಕಿರಲಿಲ್ಲ. […]

ನಿಶ್ಚಿತಾರ್ಥ ಗೊಂಡ ಯುವತಿ ಬೈಕ್ ಸ್ಕಿಡ್ ಆಗಿ ಮೃತ್ಯು

Thursday, December 3rd, 2020
Amitha Shetty

ಕಾಸರಗೋಡು  : ನಿಶ್ಚಿತಾರ್ಥ ಗೊಂಡ ಯುವತಿಯೊಬ್ಬಳು ತನ್ನ ಭಾವಿ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಮಗುಚಿ ಗಂಭೀರ ಗಾಯಗೊಂಡು  ಮೃತಪಟ್ಟ ಘಟನೆ ನಡೆದಿದೆ. ಬಾಡೂರು ಮಂಟಪಾಡಿಯ ಅಮಿತಾ ಶೆಟ್ಟಿ (22) ಮೃತಪಟ್ಟವರು. ಇವರಿಗೆ ಜನವರಿಯಲ್ಲಿ ವಿವಾಹ ನಿಶ್ಚಯವಾಗಿತ್ತು. ನವಂಬರ್ 30 ರಂದು ಅಪಘಾತ ನಡೆದಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಬೈಕ್‌ನಲ್ಲಿ ಕಾಸರಗೋಡಿಗೆ ತೆರಳಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಅಮಿತಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉಡುಪಿ ಶ್ರೀಕೃಷ್ಣ ಮಠದ ಮುಖ್ಯದ್ವಾರದಲ್ಲಿ ಕನ್ನಡ ನಾವು ಫಲಕ ಪ್ರತ್ಯಕ್ಷ

Thursday, December 3rd, 2020
Krishna Matt

ಉಡುಪಿ :  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪಣೆಯ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಮುಖದ್ವಾರದ ಗುರುವಾರ ಮಠದ ಎದುರು ಕನ್ನಡ ನಾವು ಫಲಕವನ್ನು ಮತ್ತೆ ಆಳವಡಿಸಲಾಗಿದೆ. ಈ ಹಿಂದೆ ಮುಖದ್ವಾರದಲ್ಲಿದ್ದ ಶ್ರೀಕೃಷ್ಣ ಮಠ ಎಂಬುದಾಗಿ ಬರೆಯಲಾದ ಕನ್ನಡ ನಾಮ ಫಲಕವನ್ನು ತೆಗೆದು, ‘ಶ್ರೀಕೃಷ್ಣ ಮಠ ರಜತಪೀಠ ಪುರ’ ಎಂದು ತುಳು ಹಾಗೂ ಸಂಸ್ಕೃತ ಭಾಷೆಯ ನಾಮಫಲಕವನ್ನು ಮಾತ್ರ ಹಾಕಲಾಗಿತ್ತು. ಇದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಸಾಕಷ್ಟು ಪರ […]

ಪರ್ಸಿನ್ ಬೋಟ್ ದುರಂತ – ಮೃತಪಟ್ಟವರ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ

Thursday, December 3rd, 2020
boat-tragedy

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಪರ್ಸಿನ್ ಬೋಟ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಹಸ್ತಾಂತರಿಸಿದರು. ಬಳಿಕ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಇಂದು ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಲಾಗಿದೆ. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ, ಕರಾವಳಿ ಕಾವಲುಪಡೆಯನ್ನು ಬಲಪಡಿಸಬೇಕೆಂದು ಗೃಹ ಸಚಿವರಿಗೆ ಮನವಿ […]

ಮೊಬೈಲ್ ದಾಖಲೆ ಆಧಾರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಶಂಕಿತ ಆರೋಪಿ ವಶಕ್ಕೆ

Thursday, December 3rd, 2020
Terorist

ಮಂಗಳೂರು : ಮೊಬೈಲ್ ದಾಖಲೆ ಆಧಾರದಲ್ಲಿ ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಕದ್ರಿ ಪೊಲೀಸರು ಆತನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ನ.27ರಂದು ಕದ್ರಿ‌ […]