ಪರವಾನಗಿ ಇಲ್ಲದೆ ವ್ಯಾಪಾರ ಮನಪಾ ಮೇಯರ್ ದಿಢೀರ್ ದಾಳಿ

Sunday, November 8th, 2020
mcc raid

ಮಂಗಳೂರು: ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಗಿ ಇಲ್ಲದೆ ಹಾಗೂ ಉದ್ದಿಮೆ ಪರವಾನಗಿ ನವೀಕರಿಸದೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಮಳಿಗೆಗೆ ದಿಢೀರ್ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಮೇಯರ್ ದಿವಾಕರ ಪಾಂಡೇಶ್ವರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಾಲಿಕೆ ಆಯುಕ್ತರು, ಮೇಯರ್ ಹಾಗೂ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ನಗರದ ಹಲವು ಅಂಗಡಿಗಳ ಮೇಳೆ ದಿಢೀರ್ ದಾಳಿ ನಡೆಸಿದ್ದು, ಹಲವಾರು ಮಂದಿ ಉದ್ದಿಮೆ ಪರವಾನಗಿ ಇಲ್ಲದೆ ವ್ಯಾಪಾರ ವಹಿವಾಟು […]

ಚೆನ್ನ ಫಾರೂಕ್ ಹತ್ಯೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಬಂಧನ

Saturday, November 7th, 2020
Chenne Farooq

ಬಂಟ್ವಾಳ :  ಚೆನ್ನ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್ ಐ ಅವಿನಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೊಕ್ಕೊಟ್ಟು ಸಮೀಪದಿಂದ ಬಂಧಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ವಾಸವಾಗಿರುವ ಹಫೀಸ್ ಯಾನೆ ಅಪ್ಪಿ ಹಾಗೂ ಅಕ್ಕರಂಗಡಿ ನಿವಾಸಿ ಇರ್ಶಾದ್ ಬಂಧಿತ ಆರೋಪಿಗಳು. ಮೆಲ್ಕಾರ್ ಸಮೀಪ ಫಾರೂಕ್ ಯಾನೆ ಚೆನ್ನ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್.ಐ ಅವಿನಾಶ್ ನೇತೃತ್ವದ ತಂಡ ಗುರುವಾರ ಸಂಜೆ ಬಂಧಿಸಿದೆ. ಮೂಲತಃ ನಂದಾವರ ನಿವಾಸಿ […]

ಯಕ್ಷಗಾನ ರಂಗದಲ್ಲಿ ‘ಸಾಮಗೆರ್‌’ ಎಂದು ಪ್ರಸಿದ್ಧಿ ಪಡೆದಿದ್ದ ವಾಸುದೇವ ಸಾಮಗ ವಿಧಿವಶ

Saturday, November 7th, 2020
Vasudeva Samaga

ಉಡುಪಿ: ಯಕ್ಷಗಾನ ರಂಗದಲ್ಲಿ ‘ಸಾಮಗೆರ್‌’ ಎಂದು ಪ್ರಸಿದ್ಧಿ ಪಡೆದಿದ್ದ ಯಕ್ಷಗಾನ ರಂಗದ ಹಿರಿಯ ಕಲಾವಿದ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ವಾಸುದೇವ ಸಾಮಗ ಕೋಟೇಶ್ವರ ನಿವಾಸಿಯಾಗಿದ್ದು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನ ಮನ ಸೆಳೆದಿದ್ದರು. ಸಂಯಮ ಸಂಸ್ಥೆ ಮೂಲಕ ತಾಳಮದ್ದಳೆಗೆ ಹೊಸ ಆಯಾಮ, ಹೊಸ ಶಿಸ್ತು ನೀಡಿದ್ದ ಇವರು ತಾಳಮದ್ದಲೆಯಲ್ಲಿ ಇದ್ದಾರೆಂದರೆ ಜನರು ಹುಡುಕಿಕೊಂಡು ಕಾರ್ಯಕ್ರಮ ನೋಡಲು ಬರುತ್ತಿದ್ದರು. ಯಕ್ಷಗಾನದ ಅಪೂರ್ವ ಕಲಾವಿದರಾಗಿದ್ದ ಮಲ್ಪೆ ರಾಮದಾಸ […]

ಬಸ್ ಮಾಲಕನ ಹತ್ಯೆಗೆ ವಿಫಲ ಯತ್ನ, ಒಂಭತ್ತು ಮಂದಿ ಆರೋಪಿಗಳ ಬಂಧನ

Friday, November 6th, 2020
saifuddin

ಉಡುಪಿ : ಎಕೆಎಂಎಸ್ ಬಸ್ ಮಾಲಕನ  ಹತ್ಯೆಗೆ ವಿಫಲ ಯತ್ನ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಒಂಭತ್ತು ಮಂದಿ ಆರೋಪಿ ಗಳನ್ನು ಪೊಲೀಸರು ಕಾರ್ಕಳದ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ. ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ, ಆತನ ಪತ್ನಿ ಸೌಭಾಗ್ಯ, ಮೂಡಬಿದ್ರೆ ಮಾರ್ನಾಡುವಿನ ಸಂತೋಷ್ ಪೂಜಾರಿ, ಗೋಪಾಲ, ಸೋಮವಾರಪೇಟೆಯ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಬೆಳ್ತಂಗಡಿ ಟಿ.ಬಿ.ಕ್ರಾಸ್‌ನ ಮೋಹನ, ಕೆ.ಆರ್. ನಗರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ ಆರೋಪಿಗಳು. ಮಲ್ಪೆ ಕೊಡವೂರಿನ […]

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಪೂಜೆ ಸಲ್ಲಿಸಿದ ಅಮೇರಿಕದ ಸೆನೆಟ್ ಸದಸ್ಯ

Friday, November 6th, 2020
Raja Moorti

ಸುಬ್ರಮಣ್ಯ : ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೆನೆಟ್ ಸದಸ್ಯರಾಗಿ ಚುನಾಯಿತರಾದ ಅಮೆರಿಕದಲ್ಲಿ ವಕೀಲರಾಗಿರುವ ನವದೆಹಲಿಯ ರಾಜಾ ಕೃಷ್ಣಮೂರ್ತಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ ಸುಬ್ರಹ್ಮಣ್ಯ ದೇವರಿಗೆ ಹರಕೆ ಪೂಜೆ ಸಲ್ಲಿಸಿದ್ದಾರೆ. ನವದೆಹಲಿಯ ರಾಜಾ ಕೃಷ್ಣಮೂರ್ತಿ, 2016 ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ನ ಜನಪ್ರತಿನಿಧಿಯಾಗಿದ್ದರು. ಬಳಿಕ ಕಳೆದ ವರ್ಷ ತಮ್ಮ ತಾಯಿ ವಿಜಯಕೃಷ್ಣ ಮೂರ್ತಿ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗಪ್ರತಿಷ್ಠೆ ಹಾಗೂ ಪಂಚಾಮಾಭೀಷೇಕ ಸೇವೆ ಪೂರೈಸಿದ್ದರು. ಈ ಬಾರಿಯ ಸೆನೆಟ್ […]

ಶಬರಿಮಲೈಗೆ ತೆರಳುವ ಯಾತ್ರಾರ್ಥಿಗಳಿಗೆ ಕೇರಳ ಸರ್ಕಾರದಿಂದ ಮಾರ್ಗಸೂಚಿ

Friday, November 6th, 2020
ayyappa

ಬೆಂಗಳೂರು: ಕೇರಳ ರಾಜ್ಯದ ಶಬರಿಮಲೈನಲ್ಲಿ ಜರುಗುವ 2020-21 ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮದಲ್ಲಿ ತೆರಳುವ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಹಾಗೂ ಸಾರ್ವಜಿನಕರ ಗಮನಕ್ಕೆ ಕೇರಳ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದೆ. ಎಲ್ಲಾ ಯತ್ರಾರ್ಥಿಗಳು https://sabarimalaonline.org/ವೆಬ್ಸೈಟ್ನ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಥಮವಾಗಿ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಇರುತ್ತದೆ. ಭೇಟಿ ನೀಡುವ 48 ಗಂಟೆ […]

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

Friday, November 6th, 2020
sooryanarayana Poovala

ಬಂಟ್ವಾಳ : ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಬೆಳಗಿನ ಜಾವ ತನ್ನ ಮನೆಯಲ್ಲಿ ನಿಧನ ಹೊಂದಿದರು. ಕೊರೊನಾದಿಂದ ಗುಣಮುಖರಾದ ಬಳಿಕ ಕಿಡ್ನಿ ವೈಫಲ್ಯದಿಂದ ಕಳೆದೆರಡು ತಿಂಗಳಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ತೀವ್ರ ಶುಗರ್ ಸಮಸ್ಯೆಯು ಅವರನ್ನು ಕಾಡಿತ್ತು. ಅವರು ನಿನ್ನೆಯಷ್ಟೇ ಡಿಸ್ಚಾರ್ಜ್ ಆಗಿದ್ದರು. ಮುಂಗಾರು ಪತ್ರಿಕೆ ಸಹಿತ […]

ನಟಿ ಖುಷ್ಬೂ ಬಿಜೆಪಿ ರಾಜ್ಯಸಭಾ ಉಪ ಚುನಾವಣಾ ಸ್ಪರ್ಧೆಯ ಆಯ್ಕೆ ಪಟ್ಟಿಯಲ್ಲಿ

Thursday, November 5th, 2020
Kushboo

ಮಂಗಳೂರು  : ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪ ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತು ವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ ಇದಕ್ಕೆ ನಿದರ್ಶನವಾಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಗೂ ಬಿಜೆಪಿ ಗಾಳ ಹಾಕಿರುವುದು ಗುಟ್ಟಾಗೇನು ಉಳಿದಿಲ್ಲ. ಈ ನಡುವೆ ಈ […]

ಮೂರು ವರ್ಷ 7 ತಿಂಗಳ ಮಗುವಿನ ಶ್ರವಣದೋಷದ ಚಿಕಿತ್ಸೆಗೆ 5ಲಕ್ಷ ರೂಪಾಯಿ ನೀಡಿದ ಬಿ.ಎಸ್.ಯಡಿಯೂರಪ್ಪ

Thursday, November 5th, 2020
Aradhya

ಮಂಗಳೂರು : ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ  ಕುಟುಂಬವೊಂದರ ಮೂರು ವರ್ಷ 7 ತಿಂಗಳು ವಯಸ್ಸಿನ ಮಗಳಿಗೆ  ಶ್ರವಣದೋಷದ ಚಿಕಿತ್ಸೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದು ಚಿಕಿತ್ಸೆಗಾಗಿ 5ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ನೀಡಿದ್ದಾರೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ದೇಸಿನ್ ಕೊಡಿ ರವಿ ಪೂಜಾರಿ ಅವರ ಮೂರು ವರ್ಷ 7 ತಿಂಗಳು ವಯಸ್ಸಿನ ಮಗಳಾದ ಕುಮಾರಿ ಆರಾಧ್ಯ,  ಶ್ರವಣ ದೋಷದ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಯ ಶ್ರವಣ ದೋಷದ ಪರೀಕ್ಷೆಗಾಗಿ ಮಾನಸ ಇ.ಎನ್.ಟಿ ಕೇಂದ್ರದ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ನಡೆಸಿದ ವೈದ್ಯರು ಸೂಕ್ತ […]

ಮುಖ್ಯಮಂತ್ರಿ ಗಳಿಂದ ಸೇವಾಂಜಲಿ ಆರೋಗ್ಯ ಕಾರ್ಡ್ ಬಿಡುಗಡೆ

Thursday, November 5th, 2020
Sevanjali Health Card

ಮಂಗಳೂರು :  ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕೊಡುಗೆ ಸೇವಾಂಜಲಿ ಆರೋಗ್ಯ ಕಾರ್ಡ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಗಳೂರಿನ ಓಶಿಯನ್ ಪರ್ಲ್ ಹೋಟೇಲಿನಲ್ಲಿ ಬಿಡುಗಡೆಗೊಳಿಸಿದರು. ಸೇವಾಂಜಲಿ ಟ್ರಸ್ಟ್ ಕಾರ್ಯಗಳು ಹೀಗೆ ನಿರಂತರವಾಗಿ ನಡೆದು ಸಮಾಜದ ದುರ್ಬಲ, ಅಶಕ್ತರಿಗೆ ಸಹಾಯವಾಗಲಿ, ಈ ಟ್ರಸ್ಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪ್ರಮುಖರಿಗೆ, ಕಾರ್ಯಕರ್ತರಿಗೆ ಶುಭವಾಗಲಿ ಎಂದು ಸಿಎಂ ಯಡಿಯೂರಪ್ಪ ಅವರು ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, […]