ಆಳಸಮುದ್ರ ಮೀನುಗಾರರಿಗೆ ಅಪಾರ ಪ್ರಮಾಣದಲ್ಲಿ ಸಿಗುತ್ತಿರುವ ಒಡನಸ್‌ ನಿಗರ್ ಮೀನುಗಳು

Thursday, October 1st, 2020
Kargilfish

ಮಲ್ಪೆ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳಿಗೆ ಅಪಾರ ಪ್ರಮಾಣದಲ್ಲಿ ಕಾರ್ಗಿಲ್‌ ಮೀನು ಗಳು ಬಲೆಗೆ ಬೀಳುತ್ತಿವೆ. ಕಳೆದ ವರ್ಷ ಭಾರೀ ಸುದ್ದಿ ಮಾಡಿದ ಕಾರ್ಗಿಲ್‌ ಮೀನುಗಳು ಈ ಸಲವೂ ಭಾರೀ ಪ್ರಮಾಣದಲ್ಲಿ ಮೀನುಗಾರರ ಬಲೆಗೆ ಬಿದ್ದಿವೆ. ಕಾರ್ಗಿಲ್‌ ತಿನ್ನಲು ಯೋಗ್ಯವಿಲ್ಲದ್ದರಿಂದ ಫಿಶ್‌ಮೀಲ್‌ಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಪ್ರಸ್ತುತ ಮಲ್ಪೆ ಬಂದರಿನಲ್ಲಿ ಇದು ಕೆ.ಜಿ.ಗೆ 15 ರೂ.ಗೆ ಮಾರಾಟವಾಗುತ್ತಿವೆ. ಬೋಟುಗಳಿಗೆ 10ರಿಂದ 40 ಟನ್‌ಗಳಷ್ಟು ಮೀನುಗಳು ದೊರೆಯುತ್ತಿವೆ. ಒಂದೆರಡು ಬೋಟಿಗೆ 70 ಟನ್‌ ದೊರೆತಿದ್ದೂ ಇದೆ. ವಿಪರೀತ ವಾಸನೆ […]

ನೆಲಸಮ ಮಾಡಿದ ದೇವಸ್ಥಾನಗಳನ್ನು ಪುನರ್‌ಸ್ಥಾಪಿಸಬೇಕು ! :ರಮೇಶ ಶಿಂದೆ

Wednesday, September 30th, 2020
bangla-temple

ಮಂಗಳೂರು  : ಕೇಂದ್ರೀಯ ಅಪರಾಧ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸದ ಖಟ್ಲೆಯ ಎಲ್ಲ ಆರೋಪಿಗಳು ನಿರ್ದೋಷಿಯೆಂದು ತೀರ್ಪು ನೀಡಿತು. ಇದನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ ‘ಸತ್ಯಮೇವ ಜಯತೆ’ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಇದೆ ಎಂದು ತೀರ್ಪನ್ನು ನೀಡಿ ಶ್ರೀರಾಮ ಮಂದಿರವನ್ನು ಕಟ್ಟಲು ಆದೇಶ ನೀಡಿತ್ತು. ಅದೇ ಸಮಯದಲ್ಲಿ ಬಾಬರಿ ಮಸೀದಿಯು ಒಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ಎಂದು ಸಾಬೀತಾಗಿತ್ತು, ಎಂದು […]

ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿದ್ದಾಗಿ ಬಾಯಿಬಿಟ್ಟ ಡ್ರಗ್ ಸಪ್ಲಾಯರ್ ನೈಜೀರಿಯನ್ ಪ್ರಜೆ

Wednesday, September 30th, 2020
Anushree

ಮಂಗಳೂರು :  ಬೆಂಗಳೂರಿನಲ್ಲಿ  ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗ ಡ್ರಗ್ ಸರಬರಾಜುದಾರ ನೈಜೀರಿಯನ್ ಪ್ರಜೆ ಪಾರ್ಟಿಗಳಲ್ಲಿ ನಿರೂಪಕಿ ಅನುಶ್ರೀಯನ್ನು ನೋಡಿದ್ದಾಗಿ ಮಾಹಿತಿ ನೀಡಿದ್ದಾನೆ. ಕಿಶೋರ್ ಶೆಟ್ಟಿ ಮತ್ತು ತರುಣ್ ರಾಜ್ ಯುವತಿಯರನ್ನು ಸೇರಿಸಿ ಡ್ರಗ್ ಪಾರ್ಟಿ ಮಾಡುತ್ತಿದ್ದರು ಎಂಬ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಬಹಿರಂಗವಾಗಿದೆ. ಮಹಮ್ಮದ್ ಶಾಕೀರ್ ಗೆ ಬಾಂಬೆಯಿಂದ ಶಾನ್ ತಂದುಕೊಡುತ್ತಿದ್ದ. ಶಾಕೀರ್ ನಿಂದ ಕಿಶೋರ್ ಶೆಟ್ಟಿ, ತರುಣ್ ರಾಜ್ ಪಡೆಯುತ್ತಿದ್ದರು. ಶಾನ್ ನವಾಜ್ ಗೆ ನೈಜೀರಿಯಾ ಪ್ರಜೆ ಡ್ರಗ್  ಸರಬರಾಜು ಮಾಡುತ್ತಿದ್ದ.  ಮಂಗಳೂರಿಗೂ  ಆತನೇ  ಡ್ರಗ್  ಸರಬರಾಜು ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಬಯಲಾಗಿದೆ.

ಮುಸ್ಲಿಂ ಲೀಗ್ ಕಾರ್ಯಕರ್ತನ ಕೊಲೆ ಯತ್ನ ಆರೋಪಿ ಕೋವಿಡ್ ನಿಗಾ ಕೇಂದ್ರದಿಂದ ಪರಾರಿ

Wednesday, September 30th, 2020
Adam Khan

ಕಾಸರಗೋಡು : ಮುಸ್ಲಿಂ ಲೀಗ್ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಸೆ.29ರಂದು ರಾತ್ರಿ ನಡೆದಿದೆ. ಉಪ್ಪಳ ಕೈಕಂಬದ ಆದಂ ಖಾನ್ ( 24) ಪರಾರಿಯಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪಡನ್ನಕ್ಕಾಡ್ ನಲ್ಲಿರುವ ಕೋವಿಡ್ ನಿಗಾ ಕೇಂದ್ರದಿಂದ ತಪ್ಪಿಸಿ ಪರಾರಿಯಾಗಿದ್ದಾನೆ. ಕೇಂದ್ರದ ಕಿಟಿಕಿ ಮುರಿದು ಈತ ಪರಾರಿಯಾಗಿದ್ದಾನೆ. ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿ ಎಂದು ಪೊಲೀಸರು ಮಾಹಿತಿ […]

ಬಲ್ಮಠ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಬೆಂಕಿ ಅವಘಡ

Wednesday, September 30th, 2020
Bankof Baroda

ಮಂಗಳೂರು : ನಗರದ ಬಲ್ಮಠದಲ್ಲಿರುವ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ  ಬೆಂಕಿ‌ ಅನಾಹುತದಲ್ಲಿ ಐದು ಹವಾನಿಯಂತ್ರಣ ಯಂತ್ರ, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ. ಮುಂಜಾನೆ ‌5:30ರಿಂದ 6 ಗಂಟೆಯ‌ ಮಧ್ಯೆ‌ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಕೂಡಲೇ  ಅಗ್ನಿಶಾಮಕ ದಳ ಸ್ಥಳಕ್ಕೆಆಗಮಿಸಿ ಬೆಂಕಿಯನ್ನು ನಂದಿಸಲು ಸಫಲವಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ‌ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ. ದುರಂತದ ಬಗ್ಗೆ ‌ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ‌ […]

ಕೊರೋನ ಸೋಂಕು ಸೆ. 29 : ದಕ್ಷಿಣ ಕನ್ನಡ -362, ಒಂಬತ್ತು ಸಾವು, ಉಡುಪಿ – 319, ಎರಡು ಸಾವು

Tuesday, September 29th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 362 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನ ಸೋಂಕಿನಿಂದಾಗಿ ಮತ್ತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 232 ಮಂದಿ ಗುಣಮುಖರಾಗಿದ್ದಾರೆ.  ಕೊರೋನದಿಂದ 9 ಮಂದಿ ಮೃತಪಟ್ಟಿದ್ದು, 190 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಸಿಬ್ಬಂದಿಯು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ಒಂದು ವಾರ ಪೂರೈಸಿದೆ. ಇದರಿಂದ ಮಂಗಳವಾರವೂ ದ.ಕ. ಜಿಲ್ಲೆಯ ಕೋವಿಡ್ ಬುಲೆಟಿನ್ ಪ್ರಕಟವಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ […]

ತುಳುನಾಡ ರಕ್ಷಣಾ ವೇದಿಕೆಯ ಅಬ್ದುಲ್ ರಶೀದ್ ಸ್ಮರಣಾರ್ಥ ರಕ್ತದಾನ ಶಿಬಿರ

Tuesday, September 29th, 2020
trv Blood camp

ಮಂಗಳೂರು  : ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕೋಶಾಧಿಕಾರಿಯಾಗಿ ಜಪ್ಪು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಅಬ್ದುಲ್ ರಶೀದ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಜೆಪ್ಪು ರೈಲ್ವೇ ಗೇಟ್ ಬಳಿಯಿರುವ ಸಂಕಪ್ಪ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರವನ್ನು ಉದ್ಘಾಟಿಸಿದರು. ತುಳುನಾಡ ರಕ್ಷಣಾ […]

ಸಲಹೆ, ಸೂಚನೆ ಹಾಗೂ ಚಿಕಿತ್ಸೆಗೆ ಇ-ಸಂಜೀವಿನಿ ಆ್ಯಪ್ ಬಳಸಿ ಜಿಲ್ಲಾ ಉಸ್ತುವಾರಿ ಸಚಿವ – ಕೋಟಾ ಶ್ರೀನಿವಾಸ ಪೂಜಾರಿ

Tuesday, September 29th, 2020
esanjeevini

ಮಂಗಳೂರು :  ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ವೈದ್ಯರಿಂದ ಸಲಹೆ ಪಡೆಯಲು ಸರ್ಕಾರ ಇ-ಸಂಜೀವಿನಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಂಗಳೂರು ಜಿಲ್ಲೆಯಲ್ಲಿ 24 ತಜ್ಞ ವೈದ್ಯರು ಈಗಾಗಲೇ ಆ್ಯಪ್ ನಲ್ಲಿ ಸೇವೆ ನೀಡುತ್ತಿದ್ದಾರೆ. ಹೊರೆ ಜಿಲ್ಲೆಯ 100ಕ್ಕೂ ಅಧಿಕ ರೋಗಿಗಳಿಗೆ ವಿಡೀಯೊ ಮೂಲಕ ಸಂಪರ್ಕಿಸಿ ಚಿಕಿತ್ಸೆ ನೀಡಲಾಗಿದೆ. ಈ ಆ್ಯಪ್‍ನಲ್ಲಿ ಕರ್ನಾಟಕದಲ್ಲಿ ಇರುವ ಉತ್ತಮ ವೈದ್ಯ ತಂಡವು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಯಾವುದೇ […]

ಪಿಲಿಕುಳ ನಿಸರ್ಗದಾಮದಲ್ಲಿ ಮತ್ತೆ ಬೋಟಿಂಗ್ ಆರಂಭ

Tuesday, September 29th, 2020
Pilikula boating

ಮಂಗಳೂರು : ನಗರದಿಂದ ಹೊರವಲಯದಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮದಲ್ಲಿ ಕೊರೋನಾ ವಿರಾಮದ ಬಳಿಕ ಮತ್ತೆ ಬೋಟಿಂಗ್ ಆರಂಭವಾಗಿದೆ. ಈ ಬಾರಿ ಸರಕಾರದ ಕೋವಿಡ್ ನಿಯಮಗಳ ಸೂಚನೆಯಂತೆ ಬೋಟ್ ಗಳನ್ನು ಪ್ರತಿ ದಿನ ಸ್ಯಾನಿಟೈಸಷನ್ ಮಾಡಲಾಗುತ್ತದೆ. ಬೋಟ್ ಗಳಲ್ಲಿ ಸಂಚರಿಸುವ ಮುನ್ನ ಪ್ರತಿಯೊಬ್ಬರನ್ನು ಸ್ಯಾನಿಟೈಸಷನ್ ಮಾಡಿ, ಸ್ಕ್ಯಾನಿಂಗ್ ಮಾಡಲಾಗುವುದು ಎಂದು ದೋಣಿ ವಿಹಾರ ಕೇಂದ್ರದ ಮೇಲ್ವಿಚಾರಕರಾದ ಸಂದೀಪ್ ಬಿ.ಕೆ ತಿಳಿಸಿದ್ದಾರೆ. ದೋಣಿವಿಹಾರಿಗಳಿಗೆ ವಾರದ ಏಳು ದಿನಗಳು ದೋಣಿ ವಿಹಾರ ಕೇಂದ್ರ ತೆರೆದಿರುತ್ತದೆ, ಪೆಡಲ್ ಬೋಟ್, ಫ್ಯಾಮಿಲಿ ಬೋಟ್ […]

ಯಡಿಯೂರಪ್ಪ ಹಸಿರು ಶಾಲು ಹೊದ್ದು ಅಧಿಕಾರಕ್ಕೇರಿ ಇದೀಗ ರೈತರಿಗೆ ಮೋಸ ಮಾಡಿದ್ದಾರೆ : ಐವನ್

Monday, September 28th, 2020
farmers Protest

ಮಂಗಳೂರು :  ಕರ್ನಾಟಕ ಬಂದ್ ಪ್ರಯುಕ್ತ ನಗರದ ಮಿನಿ ವಿಧಾನ ಸೌಧದ ಎದುರು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಜಿಲ್ಲಾ ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟ  ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿತು. ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಅಂಬಾನಿ- ಅದಾನಿಗೆ ನೆರವಾಗುವ ನಿಟ್ಟಿನಲ್ಲಿ ಮಾಡಲಾದ ಕಾನೂನು ತಿದ್ದುಪಡಿಯಾಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ, ವ್ಯಾಪಾರ ವರ್ಗದ ಅನುಮತಿ, […]