ಡ್ರಗ್ ಪ್ರಕರಣ- ಡಿಸಿಪಿ ವಿನಯ್ ಗಾಂವ್ಕರ್ ತಂಡದಿಂದ ನಿರೂಪಕಿ ಅನುಶ್ರೀ ವಿಚಾರಣೆ

Saturday, September 26th, 2020
Anushree

ಮಂಗಳೂರು:  ನಟಿ ನಿರೂಪಕಿ ಅನುಶ್ರೀ, ಶನಿವಾರ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಮಂಗಳೂರು ಪೊಲೀಸರ ಎದುರು ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಪಣಂಬೂರು ಠಾಣೆಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್,  ಸಿಐ ಶಿವಪ್ರಕಾಶ್  ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ  ಅನುಶ್ರೀ ವಿಚಾರಣೆ ನಡೆಯಿತು. ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ, “ಪೊಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದೆಯೂ ಸಹಕಾರ ಕೊಡುತ್ತೇನೆ. ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು. ತರುಣ್ ರಾಜ್ […]

ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ದೊಂದಿ ಬೆಳಕಿನ ಪ್ರತಿಭಟನೆ

Friday, September 25th, 2020
YouthCongress

ಮಂಗಳೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರಲ್ಲಿ ದೊಂದಿ ಬೆಳಕಿನ ಪ್ರತಿಭಟನೆ ಶುಕ್ರವಾರ ಸಂಜೆ  ನಡೆಯಿತು. ಪ್ರತಿಭಟನೆಗೆ ಅನುಮತಿವಿಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಕಾರಣ ಕಾಂಗ್ರೆಸ್ ಮುಖಂಡರು ಹಾಗೂ ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್‌ಲೈನ್ ಮೂಲಕ ಆರಂಭ

Friday, September 25th, 2020
vikashkumar

ಮಂಗಳೂರು : ಕೇಂದ್ರ ಮಂತ್ರಾಲಯ ಭಾರತ ಸರಕಾರ ಹಾಗೂ ಒಳಾಡಳಿತ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಅವರ ನಿರ್ದೇಶನದಂತೆ  ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು www.mha.gov.inಗೆ ಲಾಗಿನ್ ಆಗಿ SERVICES > ARMS LICENCEONLINE PORTALಗೆ ಹೋಗಿ ಕಡ್ಡಾಯವಾಗಿ UIN ಸಂಖ್ಯೆಯನ್ನು ಹಾಕಿ ಆಯುಧಗಳ ಪರವಾನಿಗೆ ಸೇವೆ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2220603ಗೆ ಕರೆ ಮಾಡಬಹುದು ಎಂದು […]

ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ, ಓರ್ವ ಮಹಿಳೆ ಸಹಿತ ನಾಲ್ವರು ಆರೋಪಿಗಳ ಬಂಧನ

Thursday, September 24th, 2020
Vitla Accuced

ಬಂಟ್ವಾಳ: ಮಹಿಳೆಯ ಚಿನ್ನದ ಸರ ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಸವಣೂರು ನಿವಾಸಿಗಳಾದ ಮಹಮ್ಮದ್ ಶಾಕೀರ್ (23), ಮಹಮ್ಮದ್ ಇಕ್ಬಾಲ್ (24), ಕೆ.ಎ. ಮಹಮ್ಮದ್ ಯಾನೆ ಐಟಿ ಮಮ್ಮು (41) ಆರೋಪಿಗಳಿಗೆ ಸಹಕರಿಸಿದ ತಿಂಗಳಾಡಿ ನಿವಾಸಿ ಹಾಜೀರಾ (44)  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬ್ರದ ಬ್ಯಾಂಕ್ ನಲ್ಲಿ ಅಡವಿಟ್ಟ ಕಳವು ಮಾಡಿದ ಚಿನ್ನ, ಆಕ್ಟೀವ್ […]

ಡ್ರಗ್ಸ್‌ ಪ್ರಕರಣ ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್‌

Thursday, September 24th, 2020
Anushree

ಮಂಗಳೂರು : ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ಡ್ಯಾನ್ಸರ್‌ ಕಿಶೋರ್ ಶೆಟ್ಟಿಯನ್ನು  ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಿರೂಪಕಿ, ನಟಿ ಅನುಶ್ರೀ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ತನಿಖೆಗಾಗಿ ಮಂಗಳೂರು 4- 5 ಸಿಸಿಬಿ ಪೊಲೀಸರ ತಂಡ ಗುರುವಾರ ಬೆಂಗಳೂರಿಗೆ ತೆರಳಿತ್ತು. ವಿಚಾರಣೆಯ ಸಂದರ್ಭ ಕಿಶೋರ್‌ ಅಮನ್‌ ಶೆಟ್ಟಿ ಅವರ ಆಪ್ತ ಸ್ನೇಹಿತ ತರುಣ್‌ ಅನುಶ್ರೀ ಅವರೊಂದಿಗೆ ಪಾರ್ಟಿ ಮಾಡಿದ್ದ ಎನ್ನುವ ವಿಚಾರವನ್ನು ತಿಳಿಸಿದ್ದು, ಅನುಶ್ರೀ ಅವರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. “ಪ್ರತೀಕ್ ಶೆಟ್ಟಿ, ಕಿಶೋರ್ […]

ಹಿರಿಯಡ್ಕ ಪೇಟೆಯಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ

Thursday, September 24th, 2020
kishan Hegde

ಉಡುಪಿ: ಎರಡು ಇನ್ನೋವಾ ಕಾರುಗಳಲ್ಲಿ ಬಂದ ತಂಡವೊಂದು ಹಿರಿಯಡ್ಕ ಪೇಟೆಯಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಅಟ್ಟಾಡಿಸಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಪಡುಬಿದ್ರಿ ಇನ್ನಾದ  ಕಿಶನ್ ಹೆಗ್ಡೆ (42) ಕೊಲೆಯಾದ ವ್ಯಕ್ತಿ. ಈತ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಈತನ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣಗಳಿವೆ, ರೌಡಿ-ಶೀಟರ್ ಎಂದು ಹೇಳಲಾಗಿದೆ. ಮಂಗಳೂರು ಮೂಲದ ಗ್ಯಾಂಗ್ ಒಂದು ಈ ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. ಗುರುವಾರ ಮಧ್ಯಾಹ್ನ ಹಿರಿಯಡ್ಕ ಪೇಟೆಯ ನಡುರಸ್ತೆಯಲ್ಲಿ ತಲೆಗೆ […]

ಅಕ್ರಮವಾಗಿ ಕರುಗಳನ್ನು ಸಾಗಾಟ : ಆರೋಪಿಗಳಿಬ್ಬರು ಪರಾರಿ

Thursday, September 24th, 2020
calf

ಮಂಗಳೂರು  : ಅಕ್ರಮವಾಗಿ  ಕರುಗಳನ್ನು ಸಾಗಾಟ ನಡೆಸುತ್ತಿದ್ದ ಕಾರನ್ನು ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡ ಗಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ವೇಳೆ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡಗಟ್ಟಿದ್ದರು. ಈ ಸಂದರ್ಭ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ‌. ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ ದಂಡ : ಜಿಲ್ಲಾಧಿಕಾರಿ

Thursday, September 24th, 2020
Rajendra KV

ಮಂಗಳೂರು: ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ. ಮತ್ತು ಇನ್ನುಳಿದ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಅಂಗಡಿಗಳಲ್ಲಿ ಕಾರ್ಯನಿರ್ವಹಿ ಸುವ ಎಲ್ಲ ಸಿಬಂದಿ ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ. ಪ್ರತಿ […]

ಎಲ್ಲರ ಸಮ್ಮತಿ ಪಡೆದು ನಾಮಕರಣ ಮಾಡಬೇಕೆಂದು ಕೋರ್ಟ್ ಆದೇಶವಿದ್ದರೂ, ಅದನ್ನು ಉಲ್ಲಂಘಿಸಿರುವುದು ಹೇಡಿತನ

Wednesday, September 23rd, 2020
Aloysius Rector

ಮಂಗಳೂರು : ಮುಲ್ಕಿ ಸುಂದರ ರಾಮ ಶೆಟ್ಟರ ಹೆಸರನ್ನು ಯಾವುದೇ ರಸ್ತೆಗೆ ಇಡಬಹುದಿತ್ತು. 140 ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್ ರಸ್ತೆಯೆಂದು ಇರುವ ರಸ್ತೆಗೆ ದ.ಕ.ಜಿಲ್ಲಾಡಳಿತ ಮುಲ್ಕಿ ಸುಂದರ ರಾಮ ಶೆಟ್ಟಿ ಎಂದು ನಾಮಕರಣ ಮಾಡಿರುವುದರ ಹಿಂದೆ ಯಾವ ಉದ್ದೇಶ ಇದೆ ಎಂದು ತಿಳಿಸಬೇಕು ಎಂದು ಅಲೋಶಿಯಸ್ ಶಿಕ್ಷಣ ಸಂಸ್ಥೆಯ ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಒತ್ತಾಯಿಸಿದ್ದಾರೆ. ಸಂತ ಅಲೋಶಿಯಸ್ ಶಿಕ್ಷಣ  ಸಂಸ್ಥೆಯ ಸೇವೆಯನ್ನು ನಿರ್ನಾಮಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು  ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ […]

ರಾಜಮನೆತನದ ಆರಾಧ್ಯದೈವನ ಕತೆ

Wednesday, September 23rd, 2020
southadka

ಬಯಲ ಆಲಯದ ಗಣಪ ಎಂದೇ ಪ್ರಸಿದ್ದಿ ಪಡೆದಿರುವ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕ ಶ್ರೀ ಮಹಾಗಣಪತಿ. ವಿಶಾಲ ಮೈದಾನದಲ್ಲಿ ಮಡಿ ಮೈಲಿಗೆ ಮುಂತಾದ ಯಾವುದೇ ಭವ ಬಂದನಗಳಿಂದ ಮುಕ್ತವಾಗಿ ಭಕ್ತರಿಗೆ ಇಲ್ಲಿ ಸರ್ವಕಾಲದಲ್ಲೂ ದರ್ಶನ ನೀಡುತ್ತಿದ್ದಾನೆ. ಸೌತೆಕಾಯಿಗಳಿಂದ ಪೂ ಜಿಸಲ್ಪಡುವುದರಿಂದ ದೇವನ ತಾಣ ಸೌತಡ್ಕ ಎಂಬ ಹೆಸರು ಹೊಂದುವಂತಾಯಿತು. ಇಲ್ಲಿನ ಮುಖ್ಯ ದೇವರು ಎಂದರೆ ಗಣಪತಿ. ಹಾಗೆಯೇ ಗಣಪತಿಯ ಕಪ್ಪು ಶಿಲೆಯ ಮೂರ್ತಿಯ ಪಕ್ಕದಲ್ಲೇ ಸಿದ್ಧಿ ಬುದ್ಧಿಯ ಮೂರ್ತಿಗಳೂ ಇವೆ.ಇಲ್ಲಿ ಬರುವ ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು […]