ಶುದ್ಧೀಕರಿಸದೇ ನಗರಕ್ಕೆ ನೀರನ್ನು ಪೂರೈಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಆಯುಕ್ತರು

Tuesday, September 22nd, 2020
Palike sabhe

ಮಂಗಳೂರು:  ಚರ್ಚೆ ಗದ್ದಲಗಳ ನಡುವೆ ಮಂಗಳೂರು ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ  ಇಂದು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿವ ನೀರು ಸಂಸ್ಕರಣಾ ಘಟಕದ ನೀರಿನ ಗುಣಮಟ್ಟ 36.4 ಇದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ  ನೀರಿಗೆ ಅಗತ್ಯ ರಾಸಾಯನಿಕ ಬಳಸಿ ಶುದ್ಧೀಕರಿಸದೇ ನೀರನ್ನು ಪೂರೈಸಿರುವ ಕಾರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಸ್ತಾಪಿಸಿದರು. ಈ ಬಗ್ಗೆ ಹಿರಿಯ ಆರೋಗ್ಯಾಧಿಕಾರಿಗಳು ಈ ನೀರು ಸೇವನೆಯಿಂದ […]

ಸುರತ್ಕಲ್ ಅಪಾರ್ಟ್‌ಮೆಂಟ್‌ನಲ್ಲಿ ದರೋಡೆ, ನಾಲ್ವರು ಆರೋಪಿಗಳ ಬಂಧನ

Tuesday, September 22nd, 2020
VikasKumar

ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ  ಯಾರು ಇಲ್ಲದೆ ಇರುವುದನ್ನು ಗಮನಿಸಿ ಸುರತ್ಕಲ್ ಇಡ್ಯಾದಲ್ಲಿ  ಆಗಸ್ಟ್‌ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನದ ಪ್ರಮುಖ ಸೂತ್ರಧಾರ ಆರೋಪಿ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ನಿವೃತ್ತ ಸೈನಿಕನಾಗಿದ್ದು, ಪ್ರಕರಣದ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಅವರು, ಆಗಸ್ಟ್ 17ರಂದು ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ […]

ಸಮುದ್ರ ತೀರಕ್ಕೆ ತೇಲಿ ಬಂದ ಕ್ಷಿಪಣಿ ಮಾದರಿಯ ವಸ್ತು

Tuesday, September 22nd, 2020
misile

ಬೈಂದೂರು: ಶಿರೂರು ಕರಾವಳಿ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ವಸ್ತುವೊಂದು ಮಂಗಳವಾರ ಮುಂಜಾನೆ ತೇಲಿ ಬಂದಿದೆ. ಸುಮಾರು 10ರಿಂದ 15 ಅಡಿ ಉದ್ದದ ಕೆಂಪು ಬಣ್ಣದ ವಸ್ತು ಇದಾಗಿದ್ದು, ಕಬ್ಬಿಣದಿಂದ ತಯಾರಿಸಲಾಗಿದೆ. ಸ್ಥಳೀಯರಿಗೆ ಈ ಕ್ಷಿಪಣಿ ಮಾದರಿಯ ವಸ್ತು ಕುತೂಹಲಕ್ಕೆ ಕಾರಣವಾಗಿದೆ. ಕರಾವಳಿ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಆರೆಂಜ್‌‌ ಅಲರ್ಟ್, ಜಲಾವೃತ್ತ ಪ್ರದೇಶಗಳಲ್ಲಿ ಕೊಂಚ ನೀರು ಇಳಿಕೆ

Tuesday, September 22nd, 2020
Rain

ಮಂಗಳೂರು : ಜಿಲ್ಲೆಯಲ್ಲಿ ನೈರುತ್ಯ ಮಾರುತ ಮಳೆ ನಿರಂತರವಾಗಿ ಸುರಿಯುತ್ತಿದೆ. ಆದರೆ, ಮಂಗಳವಾರ ಮಳೆಯ ತೀವ್ರತೆ ಮಾತ್ರ ಕಡಿಮೆಯಾಗಿದ್ದು ಜಲಾವೃತ್ತ ಪ್ರದೇಶಗಳಲ್ಲಿ ನೀರು ಇಳಿಕೆಯಾಗಿದೆ. ಬೆಳ್ತಂಗಡಿ ಸೇರಿದಂತೆ ಕಡಬ ಹಾಗೂ ಸುಳ್ಯ ತಾಲೂಕಿನಲ್ಲಿ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು ಹಾಗೂ ವಿಟ್ಲದಲ್ಲಿ ಮಳೆ ಮುಂದುವರೆದಿದೆ. ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಈ ನಡುವೆ ಭಾರಿ ಮಳೆಯಾಗುತ್ತಿದೆ. ಮುಂಜಾನೆ ವೇಳೆ ಸ್ವಲ್ಪ ಹಾಗೂ ಸಾಧಾರಣ ಮಳೆಯಾಗಿದ್ದು, ಜಿಲ್ಲೆಯಲ್ಲಿ ಆರೆಂಜ್‌‌ ಅಲರ್ಟ್‌ ಘೋಷಿಸಲಾಗಿದೆ. ಫಾಲ್ಗುಣಿ, ನಂದಿನಿ […]

ಸಿಂಡಿಕೇಟ್ ಸರ್ಕಲ್ ಬಳಿ ಎಂಟು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿ

Monday, September 21st, 2020
Manipal Building

ಉಡುಪಿ  : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಹಂತದಲ್ಲಿದೆ. ಎಸಿ, ಪೌರಾಯುಕ್ತ, ತಹಶಿಲ್ದಾರ್, ಜಿ.ಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಕಟ್ಟಡದ ತಡೆಗೋಡೆ ಕುಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕಟ್ಟದಲ್ಲಿರುವ ಜನರನ್ನು ಸ್ಥಳಾಂತರಿಸುವ ಕೆಲಸ ನೆಡೆಯುತ್ತಿದೆ ಸದ್ಯ ಕಟ್ಟಡದ ತಳಭಾಗದಲ್ಲಿ ಮೂರು ಅಂಗಡಿಗಳಿದ್ದು ಅವುಗಳನ್ನು ಮುಚ್ಚಲಾಗಿದೆ. ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು […]

ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ : ರಾಧಾಕೃಷ್ಣ

Monday, September 21st, 2020
Radhakrishana

ಮಂಗಳೂರು: ಮಾಜಿ ಸಚಿವ ರಮಾನಾಥ ರೈಯವರು ಎರಡು ಸಾವಿರಕ್ಕೆ ಮರಳು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದನ್ನು ಟೀಕಿಸಿದ್ದರು ಆದರೆ ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣ ಹೇಳಿದ್ದಾರೆ. ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಮರಳು ಮಾಫಿಯಾ ನಡೆಯುತ್ತಿತ್ತು ನಾವು 2 ಸಾವಿರ ರೂ.ಗೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು  ಹೇಳಿದ್ದರು. ಇದಕ್ಕೆ ಪರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ […]

ಪೆರ್ಲರ ‘ಅಮೃತ ಹಂಚುವ ಕೆಲಸ’ ಕೃತಿ ಬಿಡುಗಡೆ

Monday, September 21st, 2020
Perla

ಮಂಗಳೂರು :  ಸಾಹಿತಿ ಡಾ.ವಸಂತಕುಮಾರ್ ಪೆರ್ಲ ‘ಅಮೃತ ಹಂಚುವ ಕೆಲಸ’ ಚಿಂತನ ಮತ್ತು ಸಂಸ್ಕೃತಿ ಸಂಕಥನಗಳನ್ನೊಳಗೊಂಡ ಕೃತಿ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು. ಭೂಮಿಗೀತ ಸಾಹಿತ್ಯಿಕ-ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ, ಸಾಹಿತ್ಯಾಸಕ್ತರು ಕೃತಿಗಳನ್ನು ಖರೀದಿಸಿ ಓದಿದಾಗ, ಲೇಖಕನಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಕೃತಿ ಪರಿಚಯ ಮಾಡಿದ ಡಾ.ವಸಂತಕುಮಾರ್ ಪೆರ್ಲ, ಇಂದಿನ ತಲೆಮಾರಿನಲ್ಲಿ ಮರೆಯಾಗುತ್ತಿರುವ ಭಾಷೆ, ಆಚರಣೆ ಮತ್ತು ಜೀವನ ಕ್ರಮಗಳ ಕುರಿತಾದ ಹಲವು […]

ಕಾಸರಗೋಡು : ಮಳೆಯ ಅಬ್ಬರಕ್ಕೆ ಇಬ್ಬರು ಬಲಿ, 25ಕ್ಕೂ ಅಧಿಕ ಮನೆಗಳು ಹಾನಿ

Monday, September 21st, 2020
Kasaragod Rain

ಕಾಸರಗೋಡು : ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. 25ಕ್ಕೂ ಅಧಿಕ ಮನೆಗಳು ಹಾನಿಗೊಂಡಿವೆ. 20ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಗೆ ಆರ್ಭಟಕ್ಕೆ  ಮಧೂರು ಚೇನಕ್ಕೋಡು ಎಂಬಲ್ಲಿ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಚೆಂದ್ರಶೇಖರ(37) ಹಾಗೂ ಚೆರ್ವತ್ತೂರು ಮಯ್ಯಚ್ಚಿ ಎಂಬಲ್ಲಿ ಸುಧಾಕರ(50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅಡ್ಕತ್ತಬೈಲ್ ಬೀಚ್ ಪರಿಸರದಲ್ಲಿ ಇಂದು ಬೆಳಗ್ಗೆ ಬೀಸಿದ ಸುಂಟರಗಾಳಿಗೆ 12ರಷ್ಟು ಮನೆಗಳು ಭಾಗಶಃ ಹಾನಿಗೀಡಾಗಿದೆ.  ಮಧೂರು ಪಟ್ಲದಿಂದ ಮೂರು ಹಾಗೂ ಮೊಗರು ಪರಿಸರದಿಂದ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಂಜೇಶ್ವರ ತಾಲೂಕಿನಲ್ಲಿ […]

ಕೊರೋನಾ ಸೋಂಕು : ದಕ್ಷಿಣ ಕನ್ನಡ – 380, ಉಡುಪಿ – 293, ಕಾಸರಗೋಡು – 208

Sunday, September 20th, 2020
Corona

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ರವಿವಾರದಂದು 380 ಏರಿಕೆಯಾಗಿದೆ . ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರ ದಾಟಿದೆ. ರವಿವಾರದಂದು ದ.ಕ. ಜಿಲ್ಲೆಯಲ್ಲಿ 127 ಮಂದಿಯಲ್ಲಿ ಪ್ರಾಥಮಿಕ  ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 139 ಮಂದಿಯಲ್ಲಿ ಐಎಲ್ ಐ ಕೇಸ್ ದೃಢಪಟ್ಟಿದೆ. 8 ಮಂದಿಯಲ್ಲಿ ಸಾರಿ ಕೇಸ್ ಪತ್ತೆಯಾಗಿದ್ದು, 106 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ರವಿವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 293 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ […]

ಯುವತಿಯರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಗಳು

Sunday, September 20th, 2020
kishor Shetty

ಮಂಗಳೂರು : ನಗರ ಅಪರಾಧ ಪತ್ತೆ ದಳ ಮತ್ತು ನಾರ್ಕೊಟಿಕ್ಸ್ ಪೊಲೀಸರು ಡ್ರಗ್ಸ್ ಸೇವನೆ ಹಾಗೂ ಸಾಗಾಟ ಆರೋಪದಲ್ಲಿ ಮಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಬಂಧಿತರಾಗಿದ್ದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಕೀಲ್ ನೌಶೀಲ್ (28) ಮತ್ತು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ (30) ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು  ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಕೋವಿಡ್ ತಪಾಸಣೆಗೊಳಪಡಿಸಿದ ಬಳಿಕ […]