ಮಕ್ಕಳಿಬ್ಬರಿಗೆ ವಿಷ ಕುಡಿಸಿದ ತಾಯಿ, 8 ವರ್ಷದ ಮಗಳು ಸಾವು

Sunday, September 20th, 2020
poision

ಪುತ್ತೂರು : ಮಕ್ಕಳಿಬ್ಬರಿಗೆ  ವಿಷ ಕುಡಿಸಿ  ಮಹಿಳೆಯೊಬ್ಬರು ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿ ನಡೆದಿದ್ದು, 8 ವರ್ಷದ ಮಗಳು ಘಟನೆಯಲ್ಲಿ ಮೃತಪಟ್ಟಿದ್ದಾಳೆ. ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬಾತನ ಪತ್ನಿ ದಿವ್ಯಶ್ರೀ (29) ತನ್ನ ಇಬ್ಬರು ಮಕ್ಕಳಾದ ಅಜಯ್ (10) ಮತ್ತು ಅನ್ವಿತಾ (8) ಅವರಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ ಬಳಿಕ ತಾನೂ ಸೇವಿಸಿದ್ದಾರೆ ಎನ್ನಲಾಗಿದೆ. ರಘುನಾಥನಿಗೆ ಅನ್ಯ ಸ್ತ್ರೀಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದ ದಿವ್ಯಶ್ರೀ, ಕೊರೋನ ಲಾಕ್‌ಡೌನ್ […]

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ಸಂಪರ್ಕ ರಸ್ತೆ, ಮನೆಗಳು ಕುಸಿತ, ಹಲವೆಡೆ ಜಲಾವೃತ

Sunday, September 20th, 2020
neerumarga

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ  ನಗರ ಹೊರವಲಯದ ನೀರುಮಾರ್ಗ ಮತ್ತು ಬಜ್ಪೆ ಸಮೀಪದ ಆದ್ಯಪಾಡಿ ಎಂಬಲ್ಲಿ ಭೂ ಕುಸಿದ ಪರಿಣಾಮ ಸಂಪರ್ಕ ರಸ್ತೆ ಕಡಿದು ಹೋಗಿದೆ.‌ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ . ಅದಲ್ಲದೆ ಸರಿಪಳ್ಳ ಎಂಬಲ್ಲಿ ಮನೆ ಯೊಂದು ಕುಸಿದ ಪರಿಣಾಮ ಇಬ್ಬರಿಗೆ‌ ಗಾಯವಾಗಿದ್ದು, ಅವರನ್ನು‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಜಪ್ಪಿನಮೊಗರು, ಕುದ್ರೋಳಿ ಮತ್ತಿತರ ಕಡೆ ನೀರು ನಿಲುಗಡೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ನಗರದ ಫಳ್ನೀರ್ ರಸ್ತೆಯ […]

ಉಕ್ಕಿ ಹರಿದ ಸ್ವರ್ಣ ನದಿ, ಉಡುಪಿಯ ಹಲವು ಪ್ರದೇಶಗಳು ಜಲಾವೃತ

Sunday, September 20th, 2020
Udupi Rain

ಉಡುಪಿ: ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಸ್ವರ್ಣ ನದಿಯು ಉಕ್ಕಿ ಹರಿಯುತ್ತಿದ್ದು, ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿ ಹಾಗೂ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಶನಿವಾರ ಸಂಜೆ ಆರಂಭವಾದ ಮಳೆ ಬಿರುಸುಗೊಂಡಿತ್ತು. ರಾತ್ರಿ ಮೂರು ಘಂಟೆ ಸುಮಾರಿಗೆ ಸ್ವರ್ಣ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು, ಇಂದು ಬೆಳಿಗ್ಗೆಯೂ ಮುಂದುವರಿದ ಕಾರಣ ಅನಿರೀಕ್ಷಿತ ಪರಿಸ್ಥಿತಿ ಸಂಭವಿಸಿದೆ. ಉಪ್ಪೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ತಮ್ಮನ್ನು ರಕ್ಷಿಸಲು ದೋಣಿ ಕಳುಹಿಸುವಂತೆ ಕೇಳಿಕೊಂಡರೂ ಯಾರೂ ಬಂದಿಲ್ಲ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. […]

ಬಂಟ್ವಾಳ ತಾಲೂಕು ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಕೆ. ನಿಧನ

Saturday, September 19th, 2020
Radhakrishna

ಬಂಟ್ವಾಳ: ಇಲ್ಲಿನ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಕೆ.(50) ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ಬಿ.ಸಿ.ರೋಡಿನಲ್ಲಿ ನಿಧನ ಹೊಂದಿದರು. ಕಳೆದ ಒಂದೂವರೆ ವರ್ಷಗಳಿಂದ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಮೂಲತಃ ಶಿರ್ತಾಡಿಯವರಾಗಿದ್ದು,ಕಂದಾಯ ಇಲಾಖೆಯಲ್ಲಿ ಸಕಲೇಶಪುರ, ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ಸಿ, ತಹಶೀಲ್ದಾರ್ ರಶ್ಮಿ ಎಸ್.ಆರ್. ಮೊದಲಾದವರು  ಸಂತಾಪ ಸೂಚಿಸಿದ್ದಾರೆ.

ನಳಿನ್’ ಒಬ್ಬ ಹಾಸ್ಯಗಾರ, ಡಾಲರ್ ಬೆಲೆ 15 ರೂ.ಗೆ ಬರಲಿದೆ ಎಂದಿದ್ದ ಅವರು ಇದೀಗ ಎರಡು ಸಾವಿರಕ್ಕೆ ಮರಳು ಕೊಡಿಸುತ್ತೇವೆ ಎಂದಿದ್ದಾರೆ

Saturday, September 19th, 2020
Ramanatha-Rai

ಮಂಗಳೂರು : ಈ ಹಿಂದೆ ಡಾಲರ್ ಬೆಲೆ 15 ರೂ.ಗೆ ಬರಲಿದೆ ಎಂದಿದ್ದ ನಳಿನ್ ಕುಮಾರ್ ಕಟೀಲು, ಇದೀಗ ಎರಡು ಸಾವಿರಕ್ಕೆ ಮರಳು ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಇವರ ಹೇಳಿಕೆಗಳು ನರೇಂದ್ರ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದಂತಿದೆ ಎಂದು ಮಾಜಿ ಸಚಿವ ರಮಾನಾಥ ರೈ  ವ್ಯಂಗ್ಯ ಮಾಡಿದರು. ಜಿಲ್ಲಾ  ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಹಾಗೆ, ಈ ‘ಡಾಲರ್ ನಳಿನ್’ ಒಬ್ಬ ಹಾಸ್ಯಗಾರ. ಅವರು ಮೊದಲು ಈ ರೀತಿಯ […]

ಕೂಳೂರು ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

Saturday, September 19th, 2020
kulooru Compound

ಮಂಗಳೂರು : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿವರುವ ಮಳೆಯ ನಡುವೆ ಮುಂಜಾಗ್ರತೆಯಿಲ್ಲದೆ ಕೆಲಸ ಕೈ ಗೊಂಡ ಪರಿಣಾಮ ಕೂಳೂರಿನ ಸೈಂಟ್ ಆ್ಯಂಟನಿ ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ  ಬೆಳಗ್ಗೆ ನಡೆದಿದೆ. ಮೃತರನ್ನು ನೀರುಮಾರ್ಗ ನಿವಾಸಿ ಉಮೇಶ್(37) ಎಂದು ಗುರುತಿಸಲಾಗಿದೆ. ತಡೆಗೋಡೆ ಕುಸಿದ ಸ್ಥಳದಲ್ಲೇ ಉಮೇಶ ಕೆಲಸ ಮಾಡುತ್ತಿದ್ದರೆನ್ನ ಲಾಗಿದೆ. ಉಳಿದ ಇಬ್ಬರು ಕಾರ್ಮಿಕರಾದ ಬಸವರಾಜ್ ಹಾಗೂ ನಾರಾಯಣ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಣ್ಣಿನಡಿಗೆ ಸಿಲುಕಿದ್ದ ಉಮೇಶ್ […]

ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಮತ್ತು ಸಹಚರನನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು

Saturday, September 19th, 2020
kishor Shetty

ಮಂಗಳೂರು: ಖ್ಯಾತ ಡ್ಯಾನ್ಸರ್, ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಮಂಗಳೂರಿನ ಕಿಶೋರ್ ಶೆಟ್ಟಿಯನ್ನು ಡ್ರಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್,  ಮಂಗಳೂರು ಸಿಸಿಬಿ ಪೊಲೀಸರಿಂದ ಶನಿವಾರ ಬೆಳಿಗ್ಗೆ ಡ್ರಗ್ಸ್ ಸಾಗಿಸುತ್ತಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ  ನೀಡಿದರು. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಕಿಶೋರ್ ಶೆಟ್ಟಿ, ನಂತರ ಹಿಂದಿ ಭಾಷೆಯ ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ. ಪ್ರಕರಣದಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದ್ದು, ಅಕೀಲ್ ನೌಶೀಲ್ ಎಂದು […]

ದುಬೈ : ಕಾರ್ ರೇಸಲ್ಲಿ ಪ್ರಶಸ್ತಿ ಗೆದ್ದ ಸುಹೈಬ್ ಅಲಿ ಮತ್ತು ಭಾರತದ ತಂಡ

Saturday, September 19th, 2020
suhaib

ವಿಟ್ಲ : ಗುರುವಾರದಂದು ದುಬೈನಲ್ಲಿ ನಡೆದ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸಲ್ಲಿ ಮೂಡಬಿದಿರೆಯ ಯುವಕನಿದ್ದ ಭಾರತದ ಟೀಮ್ ತೃತೀಯ ಸ್ಥಾನ ಪಡೆದು ದುಬೈನಲ್ಲಿ ಕೀರ್ತಿ ಪತಾಕೆ ಹಾರಿಸಿದೆ. ದುಬೈನಲ್ಲಿ ಗುರುವಾರದಂದು 6ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020 ಕಾರ್ ರೇಸಲ್ಲಿ ಭಾರತ ದೇಶದ ಐವರು ಚಾಲಕರನ್ನೊಳಗೊಂಡ ಟೀಮ್ ಭಾಗವಹಿತ್ತು. ಕೊಲ್ಕಾತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಂಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಮೂಡಬಿದಿರೆಯ ಎಂ.ಕೆ.ಅಬೂಬಕ್ಕರ್ ಪುತ್ರ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದರು. […]

ಕೊರೊನಾ ಸೋಂಕು : ದಕ್ಷಿಣ ಕನ್ನಡ – 456, ಸಾವು 1, ಉಡುಪಿ ನಾಲ್ಕು ದಿನಗಳಲ್ಲಿ 845

Friday, September 18th, 2020
corona

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿತರ ಸಂಖ್ಯೆ 456 ಕ್ಕೆ ಏರಿಕೆಯಾಗಿದೆ. 11 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಕೊರೊನಾದಿಂದ ಸಾವನ್ನಪ್ಪಿದ 11 ಮಂದಿಯಲ್ಲಿ 6 ಮಂದಿ ಮಂಗಳೂರು ತಾಲೂಕಿನವರಾದರೆ, ತಲಾ ಒಬ್ಬರು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 472 ಕ್ಕೆ ಏರಿಕೆಯಾಗಿದೆ. 456 ಮಂದಿ ಕೊರೊನಾ ಸೋಂಕಿತರಲ್ಲಿ 242 ಮಂದಿ ಮಂಗಳೂರು ತಾಲೂಕು, 86 ಬಂಟ್ವಾಳ ತಾಲೂಕು, 27 ಪುತ್ತೂರು ತಾಲೂಕು, 26 ಸುಳ್ಯ ತಾಲೂಕು, 40 ಬೆಳ್ತಂಗಡಿ ತಾಲೂಕು […]

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Friday, September 18th, 2020
Kasaragod Protest

ಕಾಸರಗೋಡು : ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಹಾಗೂ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಪ್ರತಿಭಟನಾ ಜಾಥಾ ಹಿಂಸೆಗೆ ತಿರುಗಿತು. ವಿದ್ಯಾನಗರ ಬಿ.ಸಿ. ರೋಡ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ದೂಡಿ ಹಾಕಿ ಮುನ್ನುಗ್ಗಲು ಯತ್ನಿಸಿದ್ದು, ಕೆಲ ಕಾರ್ಯಕರ್ತರು ಬ್ಯಾರಿಕೇಡ್ ಮೂಲಕ ಜಿಲ್ಲಾಧಿಕಾರಿ ಕಚೇರಿ […]