ಬಹುನಿರೀಕ್ಷಿತ “ಆರಾಟ” ಕನ್ನಡ ಚಿತ್ರ ಜೂನ್ 21ರಂದು ತೆರೆಗೆ!

Wednesday, June 19th, 2024
Arata

ಮಂಗಳೂರು: “ಪಿ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ “ಆರಾಟ” ಕನ್ನಡ ಸಿನಿಮಾ ಜೂನ್ 21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ್ ರೈ ಮಲಾರಬೀಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು ಚಿತ್ರದ […]

ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅರೋಗ್ಯ ಅಧಿಕಾರಿ ಶವ ಪತ್ತೆ

Wednesday, June 19th, 2024
ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅರೋಗ್ಯ ಅಧಿಕಾರಿ ಶವ ಪತ್ತೆ

ಮಂಜೇಶ್ವರ : ಎರಡು ತಿಂಗಳ ಹಿಂದೆ ಮಂಜೇಶ್ವರದಲ್ಲಿ ಕರ್ತವ್ಯ ವಹಿಸಿಕೊಂಡಿದ್ದ ಅರೋಗ್ಯ ಅಧಿಕಾರಿಯೋರ್ವರು ತಮ್ಮ ವಾಸಸ್ಥಳದ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಮೃತಪಟ್ಟವರು ಪತ್ತನಂತ್ತಿಟ್ಟದ ಮನೋಜ್ (45). ಅವರು ಮಂಜೇಶ್ವರ ಬ್ಲಾಕ್ ಪಂಚಾಯತ್ ಕುಟುಂಬ ಕಲ್ಯಾಣ ಕೇಂದ್ರದ ಆರೋಗ್ಯಾಧಿಕಾರಿ ಆಗಿದ್ದರು. ಮಂಜೇಶ್ವರ ಎಸ್ ಐ ಟಿ ಶಾಲಾ ಸಮೀಪದ ವಸತಿ ಗೃಹ ದಲ್ಲಿ ವಾಸವಾಗಿದ್ದರು ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಒಬ್ಬರು […]

ಭಾರತದ ಅಮೃತ ಕಾಲಕ್ಕೆ ಬೇಕಾದ ವ್ಯಕ್ತಿಗಳು ರಾಮಕೃಷ್ಣ ವಿದ್ಯಾದೇಗುಲದಿಂದ ಮೂಡಿಬರಲಿ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

Tuesday, June 18th, 2024
Cpt-Brijesh

ಮಂಗಳೂರು : ಗುರುಕುಲ ಮಾದರಿಯಲ್ಲಿ ಹಾಗೂ ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಈ ಮಹತ್ತರವಾದ ಪ್ರಯತ್ನವು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಪೂರಕವಾಗಿದೆ ಎಂದು‌ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಪಲ್ಲಿಪಾಡಿಯಲ್ಲಿ ನಿರ್ಮಾಣಗೊಳ್ಳಲಿರುವ “ರಾಮಕೃಷ್ಣ ವಿದ್ಯಾದೇಗುಲ” ನೂತನ ಶಿಕ್ಷಣ ಸಂಸ್ಥೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ರಾಮಕೃಷ್ಣ ಮಠದ ಅನುಯಾಯಿಯಾದ ನಾನು ಮುಂದಿನ ಕಾರ್ಯಯೋಜನೆಗೆ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. […]

“ಸಮಾಜಮುಖಿ ಕಾರ್ಯಗಳಿಗೆ ದಾನಿಗಳ ತುಂಬು ಮನಸ್ಸಿನ ಸಹಕಾರ ಬೇಕು” -ಕೆ.ಎಂ. ಶೆಟ್ಟಿ

Tuesday, June 18th, 2024
KM-Shetty

ಮಂಗಳೂರು: ಕೆ.ಎಂ. ಶೆಟ್ಟಿ ಒಡೆತನದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಂಬೈ ಪ್ರಾಯೋಜಕತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ವತಿಯಿಂದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಶೆಟ್ಟಿ ಮದ್ಯಗುತ್ತು ಅವರು, “ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅವಿರತವಾಗಿ ನಡೆಯಲಿ. ಇದಕ್ಕೆ ನಾವೆಲ್ಲರೂ ತುಂಬು ಮನಸ್ಸಿನಿಂದ ಸಹಕಾರ ನೀಡಬೇಕಿದೆ. ದಕ್ಷಿಣ ಕನ್ನಡ, ಉಡುಪಿ […]

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ

Sunday, June 16th, 2024
Petrol-Rate

ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಬೆಲೆ 3.02 ರೂಪಾಯಿ ಹಾಗೂ ಪ್ರತಿ ಲೀಟರ್‌ ಡೀಸೆಲ್ ಬೆಲೆ 3 ರೂ. ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಶನಿವಾರ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ 25.92 ರಿಂದ ಶೇ 29.84 ಕ್ಕೆ ಏರಿಕೆ ಮಾಡಿದೆ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ. 14.34 ರಿಂದ ಶೇ. 18.44 […]

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ, ಶಾಸಕ ರಾಜೇಶ್ ನಾಯ್ಕ್ ಖಂಡನೆ

Saturday, June 15th, 2024
Rajesh-Naik-Ulepady

ಬಂಟ್ವಾಳ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸಿದ ರಾಜ್ಯ ಸರಕಾರದ ನೀತಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಜನವಿರೋಧಿ ನೀತಿ ಕಾಂಗ್ರೆಸ್ ಸರ್ಕಾರ ತನ್ನ ಅಸಲಿ ಬುದ್ದಿಯನ್ಬು , ಜನವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ ಎಂದು ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯ ಮೂಲಕ ಜನರಿಗೆ ಮೋಸ ಮಾಡಿ ಅಧಿಕಾರ ಪಡೆದ ಕಾಂಗ್ರೆಸ್ ಸರಕಾರದ ಬೊಕ್ಕಸ ಖಾಲಿಯಾಗಿದ್ದು ಈಗ ತೆರಿಗೆ ಹೆಚ್ಳಳ ಮಾಡುವ ಮೂಲಕ […]

ಖಜಾನೆ ಖಾಲಿಯಾಗಿರುವ ಸಂಕೇತವೇ ಪೆಟ್ರೋಲ್ ದರ ಏರಿಕೆ

Saturday, June 15th, 2024
Bharath-Shetty-Y

ಕಾವೂರು: ಪೆಟ್ರೋಲ್ ಬೆಲೆ ಕಳೆದ ಎರಡು ವರೆ ತಿಂಗಳಿನಿಂದ ಲೀಟರ್ 99 ರೂಪಾಯಿ ಸಿಗುತ್ತಿದ್ದರೆ ಶನಿವಾರ ರಾಜ್ಯ ಸರಕಾರ ಏಕಾಏಕಿ 3.20 ರೂ.ದರ ಏರಿಕೆ ಮಾಡಿದ್ದು 102 ದಾಟಿದೆ.ಇದು ರಾಜ್ಯದ ಖಜಾನೆ ಖಾಲಿಯಾಗಿರುವ ಸಂಕೇತ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ. ಬಡ ಜನರಿಗೆ ಉಚಿತ ಗ್ಯಾರಂಟಿಯೊಂದಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯ ಗ್ಯಾರಂಟಿ ಸಿಗಲಿದೆ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೇ ಬೆಲೆ ಏರಿಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ ಜನ […]

ಗ್ಯಾರೆಂಟಿ ಯೋಜನೆಗಳಿಗೆ ಸರಿದೂಗಿಸಲು ರಾಜ್ಯದಲ್ಲಿ ಪೆಟ್ರೋಲ್ ಮತ್ತು‌ ಡೀಸೆಲ್‌ ದರ ಮೂರು ರೂ ಏರಿಸಿದ ಕಾಂಗ್ರೆಸ್‌ ಸರ್ಕಾರ : ಬ್ರಿಜೇಶ್ ಚೌಟ

Saturday, June 15th, 2024
Brijesh-Chowta

ಮಂಗಳೂರು : ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಮಾನ್ಯರ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಸರಿದೂಗಿಸಲು ಹೆಣಗಾಡುತ್ತಿದೆ ಎಂದರು. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ಮೂರು ರೂ ಹೆಚ್ಚಳ ಮಾಡಲಾಗಿದ್ದು, ಒಮ್ಮೆಲೇ ಅತೀ […]

ಬಡವರಿಗೆ ಶಕ್ತಿ ತುಂಬುವ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Friday, June 14th, 2024
CM-mysuru

ಮೈಸೂರು : ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಗ್ಯಾರಂಟಿಗಳನ್ನು ಮರುಪರಿಶೀಲಿಸಲಾಗುವುದೇ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುವುದಿಲ್ಲಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯದ ಆದೇಶದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನ್ಯಾಯಾಲಯದ ಆದೇಶದ ಮೇಲೆ ನಾನು ಪ್ರತಿಕ್ರಿಯೆ ಎಂದರು. […]

ಭಾರತ್ ಮಾತಾಕಿ ಜೈ ಎಂದರೆ ಯಾರೂ ಆಕ್ಷೇಪ ಮಾಡುವುದಿಲ್ಲ : ಸ್ಪೀಕರ್ ಯು.ಟಿ.ಖಾದರ್

Friday, June 14th, 2024
UT-Khader

ಮಂಗಳೂರು : ಭಾರತ್ ಮಾತಾಕಿ ಜೈ ಎಂದು ಯಾರೂ ಹೇಳಬಹುದು. ಅದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಅಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದ್ದು, ಬೋಳಿಯಾರ್ ನಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ ಎಂದು ಖಾದರ್ ಹೇಳಿದ್ದಾರೆ. ನಗರದ […]