ಗ್ಯಾರಂಟಿ ಯೋಜನೆಗಳ ಕಲಾಜಾಥಾ ಸಂಚಾರಿ ವಾಹನಕ್ಕೆ ಚಾಲನೆ

Thursday, March 7th, 2024
Guarantee

ಮಂಗಳೂರು : ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ “ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಹಾಗೂ ಇತರ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಮತ್ತಷ್ಟು ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಕಲಾಜಾಥ” ಸಂಚಾರಿ ಪ್ರದರ್ಶನ ನೀಡುವ ಸಂಚಾರಿ ವಾಹನಕ್ಕೆ ಮಾ.7ರ ಗುರುವಾರ ನಗರದ ಕರಾವಳಿ ಮೈದಾನದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಡಾ. ಮಂಜುನಾಥ್ ಭಂಡಾರಿ ಅವರು ಚಾಲನೆ ನೀಡಿದರು. ಈ ಕಲಾಜಾಥಾ ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಮುಂದಿನ […]

ಗ್ರಾಮೀಣ ಪ್ರದೇಶದಲ್ಲಿ ತಾಯಿ- ಮಗಳ ‘ಕ್ಷೀರ ಕ್ರಾಂತಿ’

Wednesday, March 6th, 2024
ಗ್ರಾಮೀಣ ಪ್ರದೇಶದಲ್ಲಿ ತಾಯಿ- ಮಗಳ ‘ಕ್ಷೀರ ಕ್ರಾಂತಿ’

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಕೈಗೊಂಡು ಕ್ಷೀರಕ್ರಾಂತಿಯನ್ನುಂಟು ಮಾಡಿರುವ ಅಪೂರ್ವ ಸಾಧಕಿಯರಾಗಿರುವ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ‘ತಾಯಿ- ಮಗಳು ಮೈಮೂನ- ಮರ್ಝಿನಾ ರಾಜ್ಕಮಾಲ್ ಪ್ರತಿಷ್ಠಿತ ಮಂಗಳೂರು ಪೆ್ರಸ್ ಕ್ಲಬ್ನ 2023-24ನೇ ಸಾಲಿನ ವರ್ಷದ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ .ಕೆ ನೇತೃತ್ವದ ಆಯ್ಕೆ ಸಮಿತಿಯು ಮಂಗಳೂರು ಪ್ರೆಸ್ ಕ್ಲಬ್ ನ ಪ್ರತಿಷ್ಠಿತ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ. ಮಾರ್ಚ್ 10ರಂದು ನಡೆಯಲಿರುವ […]

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

Wednesday, March 6th, 2024
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಮಂಗಳಾದೇವಿಯ ಐತಾಳ ಮನೆತನದ ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀ ಮಂಗಳಾದೇವಿ ದೇವಸ್ಥಾನವು ನಾಲ್ವರು ಅನುವಂಶಿಕ ಮೊಕ್ತೇಸರರಿಂದ ಆಡಳಿತ ನಿರ್ವಹಣೆಯಾಗುತ್ತಿದ್ದು, ಖಾಲಿ ಇದ್ದ ಅನುವಂಶಿಕ ಮೊಕ್ತೇಸರ ಹುದ್ದೆಗೆ ಐತಾಳ ಮನೆತನದ ಹರೀಶ್ ಕುಮಾರ್ ಐತಾಳ್ ಹಾಗೂ ಅರುಣ್ ಕುಮಾರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ದೇವಳದಲ್ಲಿ ಈಗಾಗಲೇ ರಘುರಾಮ ಉಪಾಧ್ಯಾಯ ಅವರು ಅನುವಂಶಿಕ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಳದ ಅನುವಂಶಿಕ ಮೊಕ್ತೇಸರರ […]

ಮಂಗಳೂರು ವಿವಿ: ಬೋಧಕರ ಪುನಶ್ಚೇತನಾ ಕಾರ್ಯಾಗಾರ ಮುಕ್ತಾಯ

Wednesday, March 6th, 2024
university

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ. – ಎ.ಟಿ.ಎ.ಎಲ್ ಸಹಯೋಗದೊಂದಿಗೆ ಆಯೋಜಿಸಲಾದ, ಒಂದು ವಾರದ “ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ಲರ್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್” ಎಂಬ ಬೋಧಕರ ಪುನಶ್ಚಾತನ ಕಾರ್ಯಾಗಾರದ ಸಮಾರೋಪ ಸಮಾರಂಭ ಐ.ಬಿ.ಎಂ. ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿ ಡಾ. ದಿನೇಶ್ ಆರ್ (ಸ್ಯಾಮ್ ಸಂಗ್, ಬೆಂಗಳೂರು) ಮಾತನಾಡಿ, ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆ […]

ಗಾಂಜಾ ನಶೆಯಲ್ಲಿ ಜೀಪು ಚಲಾಯಿಸಿ ಕಾರು ಮತ್ತು ಬೈಕ್‌ಗೆ ಡಿಕ್ಕಿ, ಕೊಲ್ಯ ನಿವಾಸಿ ಮೃತ್ಯು

Tuesday, March 5th, 2024
santhosh-belchada

ಮಂಗಳೂರು: ಕೊಲ್ಯ ಬ್ರಹ್ಮರ್ಷಿ ಮಂದಿರದ ಮುಂಭಾಗದಲ್ಲಿ ಥಾರ್ ಜೀಪ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಟೈರ್‌ ಒಡೆದು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸ್ಥಳೀಯರ ಪ್ರಕಾರ, ಜೀಪ್ ಚಲಾಯಿಸುತ್ತಿದ್ದ ಯುವಕರು ಗಾಂಜಾ ನಶೆಯಲ್ಲಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ಕೊಲ್ಯ ನಿವಾಸಿ ಸಂತೋಷ ಬೆಳ್ಚಡ (45) ಎಂದು ಗುರುತಿಸಲಾಗಿದೆ. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ […]

ಕಡಬ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ 4 ಲಕ್ಷ ರೂ ಪರಿಹಾರ

Tuesday, March 5th, 2024
Nagalakshimi

ಮಂಗಳೂರು : ಮೂವರು ಕಾಲೇಜು ಎಂಬಿಎ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್(23) ಆಸಿಡ್ ಎರಚಿದ ಪ್ರಕರಣದ ಸಂತ್ರಸ್ತ ಬಾಲಕಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಇಂದು ಭೇಟಿ ಮಾಡಿದ್ದಾರೆ. ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ. ಆ್ಯಸಿಡ್ ದಾಳಿಯಿಂದ ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರ ಪ್ರಾಥಮಿಕ […]

ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ, ಆರೋಪಿ ಶಾರೂಖ್ ಪೊಲೀಸ್ ವಶಕ್ಕೆ

Saturday, March 2nd, 2024
ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ, ಆರೋಪಿ ಶಾರೂಖ್ ಪೊಲೀಸ್ ವಶಕ್ಕೆ

ಮಂಗಳೂರು : ನಾಪತ್ತೆಯಾಗಿದ್ದ ಪಿಎಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಕತಾರ್ ನಾಪತ್ತೆ ಪ್ರಕರಣ ಸಂಬಂಧ ಪುತ್ತೂರಿನ ಶಾರೂಖ್​ನನ್ನು ಉಳ್ಳಾಲ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಇದ್ದ ಪ್ರೀತಿ ವಿಚಾರ ತಿಳಿದುಬಂದಿದೆ. ಆರೋಪಿಯನ್ನು ವಿಚಾರಣೆ ಮಾಡಿದಾಗ, ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ತೆರಳಿರುವುದು ತಿಳಿದುಬಂದಿದೆ. ಕತಾರ್ ದೇಶದಿಂದ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ ಚೈತ್ರಾ, ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ. ವಿಸಿಟಿಂಗ್ ವೀಸಾದ ಮೂಲಕ […]

ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ನಿಗೂಢ ಬಾಂಬ್ ಸ್ಫೋಟ – NIA ತನಿಖೆಗೆ ಬಜರಂಗದಳ ಆಗ್ರಹ

Saturday, March 2nd, 2024
Rameshwara-Cafe

ಮಂಗಳೂರು : ಶುಕ್ರವಾರ ಮಧ್ಯಾಹ್ನ 12.55ರ ಆಸುಪಾಸಿನ ವೇಳೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಎರಡು ಬಾರಿ ನಿಗೂಢ ಬಾಂಬ್ ಸ್ಫೋಟವಾಗಿದ್ದು,ಕಳೆದ ವರ್ಷ ಹಲವು ಬಾರಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳ ಬಂದಿದ್ದರೂ. ಆದರೆ ಇವರೆಗೂ ಹುಸಿ ಕರೆ ಸಂಬಂಧ ಯಾರ ಬಂಧನವೂ ಆಗಿಲ್ಲ. ಇದರ ಹಿಂದೆ ನಿಷೇಧಿತ ಭಯೋದ್ಫಾದಕ ಸಂಘಟನೆ PFI ಕೈವಾಡವಿರುವ ಶಂಕೆ ಇದ್ದು, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು […]

ವಿಟ್ಲದಲ್ಲಿ ಚರ್ಚ್‍ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ

Saturday, March 2nd, 2024
Fr. Nelson

ವಿಟ್ಲ : ಚರ್ಚ್ ನ ಪಾದ್ರಿಯೊಬ್ಬರು ಹಿರಿಯ ದಂಪತಿಯನ್ನು ಅಮಾನುಷವಾಗಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಟ್ಲ ಸಮೀಪದ, ಅಡ್ಯನಡ್ಕ ಮನೆಲಾ ಚರ್ಚ್‌ ವ್ಯಾಪ್ತಿಯಲ್ಲಿ ನಡೆದಿದೆ. ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಅರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ […]

ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಅಗಲಿದ ಪತ್ರಕರ್ತ ಮನೋಹರ ಪ್ರಸಾದ್ ಗೆ ಶ್ರದ್ಧಾಂಜಲಿ

Saturday, March 2nd, 2024
journalist

ಮಂಗಳೂರು : ಬಹುಮುಖ ಪ್ರತಿಭೆಯ ಪತ್ರಕರ್ತ ಮನೋಹರ ಪ್ರಸಾದ್ ಜಿಲ್ಲಾಡಳಿತ ಹಾಗೂ ಪತ್ರಕರ್ತರ ನಡುವಿನ ಕೊಂಡಿಯಾಗಿದ್ದರು ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ತಿಳಿಸಿದ್ದಾರೆ. ಅವರು ಅಗಲಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ರವರಿಗೆ ನಗರದ ಪತ್ರಿಕಾಭವನದಲ್ಲಿಂದು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ ಕ್ಲಬ್,ಪತ್ರಿಕಾ ಭವನಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನದ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮನೋಹರ ಪ್ರಸಾದ್ ಪತ್ರ ಕರ್ತರು ಮಾತ್ರವಲ್ಲದೆ ಓರ್ವ ಉತ್ತಮ ನಿರೂಪಕರಾಗಿದ್ದರು.ಅವರು ತಮ್ಮ ನಿರೂಪಣೆಯ […]