60 ವರ್ಷಗಳ ಎಡ, ಬಲ ರಂಗಗಳ ಆಡಳಿತದಿಂದ ರಾಜ್ಯ ಕಂಗೆಟ್ಟಿದೆ : ಸುರೇಶ್ ಗೋಪಿ

Monday, April 18th, 2016
Kerala Bjp

ಕುಂಬಳೆ: ರಾಜ್ಯದಲ್ಲಿ ಅನಿವಾರ್ಯ ರಾಜಕೀಯ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅನುಕೂಲಕರ ವಾತಾವರಣ ಹಿಂದಿಗಿಂತ ಇಂದು ಅತಿ ಹೆಚ್ಚಿದೆಯೆಂದು ಮಲೆಯಾಳಂ ಚಲನಚಿತ್ರ ತಾರೆ, ಭರತ್ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಬೃಹತ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಕಳೆದ 60 ವರ್ಷಗಳ ಎಡ,ಬಲ ರಂಗಗಳ ಸ್ವಾರ್ಥ ಲಾಲಸೆಯ […]

ಯಕ್ಷಗಾನ ಕಲಾವಿದರು ನಿವೃತ್ತರಾದ ಬಳಿಕ ಗಂಭೀರವಾಗಿ ಚಿಂತಿಸಬೇಕಿದೆ : ಪಟ್ಲ ಸತೀಶ ಶೆಟ್ಟಿ

Monday, April 18th, 2016
Patla Satish

ಕುಂಬಳೆ: ವೃತ್ತಿ ಕಲಾವಿದರಾಗಿ ದುಡಿಯುತ್ತಿರುವ ಅಸಂಖ್ಯಾತ ಯಕ್ಷಗಾನ ಕಲಾವಿದರು ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಬದುಕಿಗೆ ಏನಿದೆಯೆಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯಕ್ಷಗಾನ ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮೆರೆದು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ ಕಲಾವಿದರಿಗೆ ರಂಗದಿಂದ ಹೊರತುಪಡಿಸಿ ಅಗತ್ಯ ಸ್ಪಂಧನೆಗಳು ಲಭಿಸದಿರುವುದು ದುರಂತ ಎಂದು ಖ್ಯಾತ ಭಾಗವತ,ಯಕ್ಷಧ್ರುವ ಪಟ್ಲ ಪೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬಳೆ ಸಮೀಪದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶೇಡಿಕಾವು ಪಾರ್ತಿಸುಬ್ಬ ಸಭಾ […]

ಏ.29-30: ನೀರೊಳಿಕೆ ಸೇವಾಶ್ರಮ ಪ್ರವೇಶೋತ್ಸವ

Monday, April 18th, 2016
Sri Matha

ಮಂಜೇಶ್ವರ: ವರ್ಕಾಡಿ ಗ್ರಾಮದ ದೇವಂದಪಡ್ಪು ನೀರೊಳಿಕೆ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಪ್ರವೇಶೋತ್ಸವ ಸಮಾರಂಭವು ಏ.೨೯ ಮತ್ತು ೩೦ರಂದು ವಿವಿಧ ಕಾರ್ಯಕ್ರಮಗೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್ ಬಗ್ಗೆ…. ಕೇರಳ ರಾಜ್ಯದ ಉತ್ತರ ಭಾಗದ ತಲಪ್ಪಾಡಿ ಗಡಿ ಪ್ರದೇಶದ ಸನಿಹದಲ್ಲಿ ಇತಿಹಾಸ ಪ್ರಸಿದ್ಧ ದೇವಂದಪಡ್ಪು ಎಂಬಲ್ಲಿ ಪುರಾತನ ದೇವಿ ಕ್ಷೇತ್ರವೊಂದು ಇತ್ತೆಂದು ಹಾಗೂ ಮಧ್ವಾಚಾರ್ಯರು ತೀರ್ಥಯಾತ್ರೆ ಮಾಡುತ್ತಾ ಈ ದೇವಾಲಯದ ಪರಿಸರದಲ್ಲಿ ಧ್ಯಾನಾಸಕ್ತರಾದರೆಂದು ಅಲ್ಲದೆ ಮುಂದೆ ಇಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನವನ್ನು ನಿರ್ಮಿಸಲಾಯಿತೆಂದು ಐತಿಹ್ಯವಿದೆ. […]

ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳು ಸಿನೆಮಾಗಳು ನಡೆಯುತ್ತಿಲ್ಲ : ‘ನಮ್ಮ ಕುಡ್ಲ’ ಸಿನೆಮಾ ತಂಡ

Saturday, April 16th, 2016
Namma Kudla

ಮಂಗಳೂರು : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ. ‘ನಮ್ಮ ಕುಡ್ಲ’ ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವುಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ ಚಿತ್ರಗಳ ಜೊತೆ ತುಳು ಭಾಷೆಯ ಚಿತ್ರಗಳಿಗೆ ಕನಿಷ್ಟ ಒಂದು ಪ್ರದರ್ಶನಕ್ಕಾದರೂ ಅವಕಾಶ ನೀಡಲಿ ಎಂದು ಚಲನಚಿತ್ರ ನಿರ್ದೇಶಕ ಮತ್ತು ನಮ್ಮ ಕುಡ್ಲ ತುಳು ಸಿನೆಮಾ ಸಂಕಲನಕಾರ ಹರೀಶ್ ನಾಯಕ್ ಹೇಳಿದರು. ನಗರದ ವುಡ್‌ಲ್ಯಾಂಡ್ಸ್ ಹೊಟೇಲಿನಲ್ಲಿ […]

ಶಾಂತಿ ಸಮೃದ್ಧಿಯ ವಿಷು ಹಬ್ಬದ ಸಂಭ್ರಮದ ಆಚರಣೆ

Thursday, April 14th, 2016
Vishu

ಉಪ್ಪಳ: ಸೌರಮಾನ ಯುಗಾದಿಯ ಹೊಸ ವರುಷದ ಹೊಸ್ತಿಲಲ್ಲ್ಲಿ ನಿಂತುಕೊಂಡು, ಹೊಸ ಫಸಲುಗಳನ್ನು ದೇವರಿಗೆ ಅರ್ಪಿಸುವುದರ ಮೂಲಕ ಸುಖ,ಶಾಂತಿ ಮತ್ತು ಸಮೃದ್ಧಿಗಾಗಿ ದೇವರನ್ನು ಆರಾಧಿಸಿ ಹೊಸ ವರುಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವ ತುಳು ನಾಡು ಹಾಗೂ ಮಲೆಯಾಳ ನಾಡಲ್ಲಿ ಖ್ಯಾತಿ ಪಡೆದಿರುವ ವಿಷು ಅಥವಾ ಬಿಸು ಹಬ್ಬವನ್ನು ಗುರುವಾರ ಅತ್ಯಂತ ಸಂತೋಷ ಸಡಗರದಿಂದ ಆಚರಿಸಲಾಯಿತು. ಕಣಿಕಾಣುವ ಹಬ್ಬವೆಂದೇ ಪ್ರಸಿದ್ಧಿ ಪಡೆದ ಈ ಹಬ್ಬದ ಅಂಗವಾಗಿ ನಸುಕಿನಲ್ಲಿ ಎದ್ದು,ಮುಚ್ಚಿದ ಕಣ್ಣು ತೆರೆಯದೇ ಹಿಂದಿನ ತಡರಾತ್ರಿ ಮನೆಯ ಯಜಮಾನ ದೇವರ ಕೋಣೆಯಲ್ಲಿ […]

ಬಹುಮುಖ ಪ್ರತಿಭಾನ್ವಿತ ಪೆರ್ಲದ ಸನ್ನಿಧಿ ಟಿ.ರೈಗೆ ಪ್ರಧಾನಿಯಿಂದ ಶುಭಾಶಯ ಪತ್ರ

Thursday, April 14th, 2016
Sannidi Rai

ಪೆರ್ಲ : ಲಲಿತ ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆದು ಬರುತ್ತಿರುವ ಪೆರ್ಲದ ಸನ್ನಿಧಿ ಟಿ.ರೈ ಎಂಬ ಹನ್ನೊಂದರ ಹರೆಯದ ಪುಟಾಣಿಗೆ ಭಾರತದ ಶ್ರೇಷ್ಠ ಪ್ರಧಾನಿಗಳಲ್ಲಿ ಒರ್ವರಾದ ನರೇಂದ್ರ ಮೋದಿ ನೇರಾ ಶುಭಾಶಯಪತ್ರ ಕಳುಹಿಸುವ ಮೂಲಕ ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಎಳೆಯ ಪ್ರತಿಭೆಗಳತ್ತಲೂ ತನ್ನ ಪ್ರೀತಿ,ಕಾಳಜಿಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಎಣ್ಮಕಜೆ ಗ್ರಾ.ಪಂ.ನ ಹಳ್ಳಿ ಪ್ರದೇಶವಾದ ಪೆರ್ಲಕ್ಕೂ ಪ್ರಧಾನ ಮಂತ್ರಿ ಕಾರ್ಯಲಯದ ಡೆಲ್ಲಿಗೂ ಪತ್ರ ಮುಖೇನ ಅವಿನಭಾವ ಸಂಬಂಧವೇರ್ಪಡಿಸುವಲ್ಲಿ ಬದಿಯಡ್ಕ ಚಿನ್ಮಯ ಶಾಲೆಯ ೬ನೇ […]

ಕುಂಬಳೆ : ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಪ್ರಚಾರ ಆಂದೋಲನ

Tuesday, April 12th, 2016
omman Chandi

ಕುಂಬಳೆ: ಕೇರಳದಲ್ಲಿ ಅಭಿವೃದ್ದಿಯ ನೂತನ ಶಖೆಯನ್ನಾರಂಭಿಸಿದ ಯುಡಿಎಫ್ ಸರಕಾರವನ್ನು ಜನತೆ ಇನ್ನೊಂದು ಅವಧಿಗೆ ಆರಿಸುವ ಅಗತ್ಯವಿದೆ. ಇಲ್ಲದಿದ್ದರೆ ಯುಡಿಎಫ್ ಸರಕಾರ ಆರಂಭಿಸಿರುವ ಜನಪ್ರೀಯ ಯೋಜನೆಗಳು ಮೂಲೆಗುಂಪುಗೊಂಡು ಅಭಿವೃದ್ದಿಗೆ ಹಿನ್ನಡೆಯಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಪ್ರಚಾರ ಆಂದೋಲನದ ಅಂಗವಾಗಿ ಸೋಮವಾರ ಸಂಜೆ ಕುಂಬಳೆಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪರ್ಯಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮದ್ಯ ನಿಷೇಧದಂತಹ ಸವಾಲಿನ ಯೋಜನೆಯನ್ನು ಜ್ಯಾರಿಗೊಳಿಸಿರುವ ಯುಡಿಎಫ್ ಸರಕಾರ ಲಕ್ಷಾಂತರ […]

ಈಸ್ಟ್ ಎಳರಿ ಹಾಗೂ ಮಂಜೇಶ್ವರ ಕಾಂಗ್ರೆಸ್ ಬಂಡುಕೋರರ ಸಭೆ

Tuesday, April 12th, 2016
East Elari

ಮಂಜೇಶ್ವರ: ಜಿಲ್ಲಾ ಕಾಂಗ್ರೆಸ್ (ಡಿ ಸಿ ಸಿ) ಗೆ ತಲೆನೋವನ್ನು ಸೃಷ್ಟಿಸಿದ ಈಸ್ಟ್ ಎಳರಿ ಕಾಂಗ್ರೆಸ್ ಬಂಡುಕೋರರ ನೇತೃತ್ವ ಹೊಸ ರಾಜಕೀಯ ಪಕ್ಷವನ್ನು ರೂಪೀಕರಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ನಿಂದ ಶಿಶ್ತು ಕ್ರಮದ ಹೆಸರಲ್ಲಿ ಹೊರ ಹಾಕಲ್ಪಟ್ಟ ಸಮಾನ ಮನಸ್ಕರನ್ನು ಭೇಟಿಯಾಗಿ ಅವರೊಡನೆ ಚರ್ಚೆಗೆ ಚಾಲನೆ ನೀಡಿರುವುದಾಗಿ ಕಾಂಗ್ರೆಸ್ ಬಂಡುಕೋರ ನೇತಾರರು ತಿಳಿಸಿದ್ದಾರೆ. ಈಸ್ಟ್ ಎಳರಿಯ ಕಾಂಗ್ರೆಸ್ ಬಂಡುಕೋರ ನೇತಾರ ಜೇಮ್ಸ್ ಪದ್ಮಾಂಗನ್ ಹೊಸ ರಾಜಕೀಯ ಬೆಳವಣಿಗೆಗೆ ರೂಪು ನೀಡುತಿದ್ದಾರೆ. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ […]

ತೂಮಿನಾಡು: ಲೀಗ್ ನಿಂದ ಸುಮಾರು 40 ರಷ್ಟು ಯುವಕರು ಸಿಪಿಎಂ ಗೆ ಸೇರ್ಪಡೆ

Tuesday, April 12th, 2016
Muslim Leeg

ಮಂಜೇಶ್ವರ : ಮುಸ್ಲಿಂ ಲೀಗ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ತೂಮಿನಾಡು ಹಾಗೂ ಕುಂಜತ್ತೂರು ಪರಿಸರದ ಸುಮಾರು 40 ರಷ್ಟು ಯುವಕರು ಲೀಗ್ ನಲ್ಲಿ ಬೇಸೆತ್ತು ಸಿಪಿಎಂ ಗೆ ಸೇರ್ಪಡೆಗೊಂಡ ಘಟನೆ ನಡೆದಿದೆ. ಸಕ್ರಿಯವಾಗಿ ಕಾರ್ಯಕರ್ತರಾಗಿದ್ದ ನಮ್ಮ ಯಾವೊಂದು ಬೇಡಿಕೆಯನ್ನು ಕೂಡಾ ಮುಸ್ಲಿಂ ಲೀಗ್ ನೇತಾರರು ನೆರವೇರಿಸಿಲ್ಲವೆಂಬುದಾಗಿ ಸಿಪಿಎಂ ಗೆ ಸೇರ್ಪಡೆಗೊಂಡ ಯುವಕರ ಮುಖಂಡ ತೂಮಿನಾಡು ನಿವಾಸಿ ಮುನೀರ್ ಕೆ ಎ ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಎಡರಂಗದ ಅಭ್ಯರ್ಥಿ ಸಿ […]

ಸತ್ಕರ್ಮಗಳ ಮೂಲಕ ಭಗವಂತನ ಕೃಷೆಗೆ ಪಾತ್ರರಾಗಬೇಕು-ಆನೆಗೊಂದಿ ಶ್ರೀ.

Tuesday, April 12th, 2016
Anegundi

ಉಪ್ಪಳ: ಕ್ಷೇತ್ರಗಳಲ್ಲಿ ಭಗವಂತನ ಸಾನ್ನಿಧ್ಯ ನಿರಂತರವಾಗಿರಬೇಕಾದರೆ ನಿಷ್ಠೆಯ ಪೂಜೆ,ಅರ್ಚನೆಗಳು,ವೇದ ಪಾರಾಯಣಗಳು ಸದಾ ನಡೆಯುತ್ತರಬೇಕು.ಶುದ್ದ ಹೃದಯದ ಆರಾಧನೆಗೆ ಭಗವಂತ ಒಲಿದು ಅನುಗ್ರಹಿಸುತ್ತಾನೆಯೆಂದು ಕಟಪಾಡಿ ಆನೆಗೊಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನವಿತ್ತರು. ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ಜೀವನದ ಸುಖವೆಂದರೆ ತ್ಯಾಗ ಮತ್ತು ಕರ್ಮಗಳ ಅನುಸಂಧಾನವಾಗಿದೆ.ಐಶಾರಾಮಿ ಬೇಕುಗಳನ್ನು ತ್ಯಜಿಸಿ ಸತ್ಕರ್ಮಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವುದು ನೈಜ ಸುಖವೆಂದು ನಾವು […]